ದಿನನಿತ್ಯದ ಬದುಕಿನಲ್ಲಿ ಒಂದಷ್ಟು ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವು ಆಹಾರದ ಕ್ರಮಗಳನ್ನು ಅನುಸರಿಸುವ ಅಗತ್ಯವಿದೆ. ಈಗಾಗಲೇ ಇದರಲ್ಲಿ ಸಾಕಷ್ಟು ಪ್ರಯೋಗಗಳು ಆಗಿವೆ. ಮಾಹಿತಿಯೂ ಲಭ್ಯವಿದೆ. ಆದರೂ ವೈಯಕ್ತಿಕವಾಗಿ ನನ್ನ ಕೆಲವು ಅನುಭವದ ಸಲಹೆಗಳು. ನಿಮ್ಮ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಉತ್ತಮವಾಗಿದ್ದರೆ ದಯವಿಟ್ಟು ಸಾಧ್ಯವಾದಷ್ಟು ನಿಮ್ಮ ಆಹಾರ ಕ್ರಮದಲ್ಲಿ ಇದನ್ನು ದಿನನಿತ್ಯ ಅಳವಡಿಸಿಕೊಳ್ಳಿ.
೧) ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಒಂದು ಲೋಟ Green/Red/ White/Black Tea ಯಾವುದಾದರೂ ಒಂದನ್ನು Alternative day ಕುಡಿಯಿರಿ. ( ನಿಮ್ಮ ಹತ್ತಿರದ Organic shop ಗಳಲ್ಲಿ ಅಥವಾ ದೊಡ್ಡ ಅಂಗಡಿಗಳಲ್ಲಿ ದೊರೆಯುತ್ತದೆ.) ಅಥವಾ ಇದಕ್ಕೆ ಪರ್ಯಾಯವಾಗಿ ರಾಗಿ ಗಂಜಿ - ಸಿರಿ ಧಾನ್ಯಗಳ ಗಂಜಿ ಆದರೂ ಸೇವಿಸಬಹುದು.....
೨) ದಿನದ ಯಾವುದಾದರೂ ಸಮಯದಲ್ಲಿ ಹಸಿಯಾಗಿ ತಿನ್ನಬಹುದಾದ ಕ್ಯಾರೆಟ್, ಸೌತೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ನವಿಲುಕೋಸು, ಎಲೆ ಕೋಸು, ಬೀನ್ಸ್, ಟೊಮ್ಯಾಟೊ, ಬೀಟ್ ರೋಟ್, ಮೂಲಂಗಿ ಮುಂತಾದ ತರಕಾರಿ ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ ಅಥವಾ ಇತರೇ ತರಕಾರಿಗಳನ್ನು ಅರ್ಧ ಬೇಯಿಸಿ ಸಹ ತಿನ್ನಬಹುದು.
೩) ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯಾ ಕಾಲದಲ್ಲಿ ಸಿಗುವ ಹಣ್ಣುಗಳನ್ನು ಮರೆಯದೆ ಸೇವಿಸಿ. ಕನಿಷ್ಠ ದಿನಕ್ಕೆ ಯಾವುದಾದರೂ ಒಂದು ಹಣ್ಣನ್ನಾದರೂ ಸೇವಿಸುವುದು ಕಡ್ಡಾಯ ಎಂದು ಭಾವಿಸಿ ಸಂಕಲ್ಪ ಮಾಡಿಕೊಳ್ಳಿ.
೪) ಎಷ್ಟೇ ಕಷ್ಟವಾದರೂ ಹೆಸರು ಕಾಳು, ಕಡಲೆ ಕಾಳು ಮುಂತಾದ ಸೇವಿಸಬಹುದಾದ ಮೊಳಕೆ ಕಾಳುಗಳನ್ನು ವಾರಕ್ಕೆ ಕನಿಷ್ಠ ಐದು ದಿನ ಸ್ವಲ್ಪವಾದರೂ ಸೇವಿಸಲು ರೂಡಿಸಿಕೊಳ್ಳಿ.
೫) ಬಾದಾಮಿ, ಗೋಡಂಬಿ, ಒಣ ದ್ರಾಕ್ಷಿ, ಖರ್ಜೂರ, ಅಂಜೂರ, ವಾಲ್ ನಟ್, ಪಿಸ್ತಾ ಮುಂತ…
ಮುಂದೆ ಓದಿ...