ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?
22 hours ago - ಬರಹಗಾರರ ಬಳಗ
ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ. ಏಕೆಂದರೆ ನಮ್ಮ ಕಣ್ಣುಗಳ ಗರಿಷ್ಠ ದೃಷ್ಟಿ ವ್ಯಾಪ್ತಿ (visual angle) ಗರಿಷ್ಠ 60°. ಇದಕ್ಕಿಂತ ಹೆಚ್ಚಾದರೆ ನೀವು ನಿಮ್ಮ ಕುತ್ತಿಗೆಯನ್ನು ತಿರುಗಿಸಬೇಕಾಗುತ್ತದೆ. ಆದ್ದರಿಂದ ಅಲ್ಲವಾ ಶಿಕ್ಷಕರು ಬರೆಯಲು ಬೋರ್ಡ್ ಕಡೆಗೆ ತಿರುಗಿದ ಕೂಡಲೇ ನಾವು ನಮ್ಮ ಚಟುವಟಿಕೆಗಳನ್ನು ಆರಂಭಿಸಿ ಬಿಡುತ್ತೇವೆ. ಕಾಗದದ ಚೆಂಡುಗಳು ಹಾರಾಡುತ್ತವೆ. ಆದರೆ ಶಿಕ್ಷಕರು ಹಿಂದಕ್ಕೆ ತಿರುಗಿದರೋ ಮುಗಿಯಿತು. ಸುರೇಶ ಏನದು ಎನ್ನುವುದು ಮಾತ್ರವಲ್ಲ ಗುರಿಯಾಗಿ ಚಾಕ್ ಪೀಸ್ ಎಸೆದರೆಂದರೆ ಗುರಿ ತಪ್ಪದು. ಇಲ್ಲಿ ಎರಡು ಅಂಶಗಳಿವೆ. ಒಂದು ತನ್ನೆದುರಿರುವ ವಸ್ತುಗಳನ್ನು ಗುರುತಿಸುವುದು ಎರಡನೆಯದು ಸುರೇಶ ಎಷ್ಟು ದೂರ (depth) ಇದ್ದಾನೆ ಎಂದು ನಿಖರವಾಗಿ ಗುರುತಿಸುವುದು. ಈ ದೂರವನ್ನು ನಿಖರವಾಗಿ ಹೇಳಬೇಕಾದರೆ ಒಂದೇ ಕಣ್ಣಿನಿಂದ (monocular) ನೋಡಿದರೆ ಸಾಕಾಗುವುದಿಲ್ಲ. ಬದಲಾಗಿ ಎರಡೂ ಕಣ್ಣುಗಳನ್ನು (binocular) ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಒಂದೇ ಕಣ್ಣಿನಿಂದ ನೋಡುವಾಗ ಸ್ಪಷ್ಟ ಚಿತ್ರ ಮೂಡುತ್ತದೆ. ಆದರೆ ದೂರದ ಅರಿವಾಗುವುದಿಲ್ಲ. ಎರಡೂ ಕಣ್ಣಿನಿಂದ ನೋಡುವಾಗ ಚಿತ್ರ ನಿಖರತೆ ಕಡಿಮೆ ಬದಲಾಗಿ ಆಳ ನಿಖರವಾಗಿ ತಿಳಿಯುತ್ತದೆ. ಆದ್ದರಿಂದ ನೀವು ಎತ್ತರದಲ್ಲಿರುವ ಮಾವಿನಕಾಯಿಗೆ ಕಲ್ಲು ಹೊಡೆದು ಉದುರಿಸುವುದು ಸಾಧ್ಯವಾಗಿದೆ. ಮಾನವನ ಕಣ್ಣುಗಳು ಮುಖದ ಎದುರು ಭಾಗದಲ್ಲಿರುವುದರಿಂದ ಯಾವಾಗಲೂ ದ್ವಿನೇತ್ರ ದೃಷ್ಟಿ (binocular vision) ಲಭ್ಯ.
ವಾಹನಗಳಲ್ಲಿ ಹೆಡ್ ಲ್ಯಾಂಪ… ಮುಂದೆ ಓದಿ...