ಮಹಾ ಕುಂಭಮೇಳ ಎಂಬ ಆಧ್ಯಾತ್ಮಿಕ ಬೆರಗು !
1 day 18 hours ago - Ashwin Rao K Pಭಾರತದ ಆಧ್ಯಾತ್ಮಿಕ ಪರಂಪರೆಯ ಮುಕುಟಪ್ರಾಯವಾಗಿರುವ ಮಹಾ ಕುಂಭಮೇಳಕ್ಕೆ ಜನವರಿ ೧೩, ೨೦೨೫ರಂದು ಚಾಲನೆ ಸಿಕ್ಕಿದೆ. ಪುಷ್ಯ ಪೂರ್ಣಿಮೆಯಂದು ಪ್ರಾರಂಭವಾದ ಈ ‘ಮಹಾಭಕುತಿಯ ಮಜ್ಜನ’ ಸಮಾರಂಭವು ಇನ್ನೂ ೪೫ ದಿನಗಳ ಕಾಲ ನಡೆಯಲಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ಗಂಗಾ, ಯಮುನಾ, ಸರಸ್ವತಿ ಎಂಬ ಮೂರು ನದಿಗಳ ಸಂಗಮ ಸ್ಥಳದಲ್ಲಿ ಆಯೋಜಿತವಾಗಿದೆ. ದೇಶ ಮಾತ್ರವಲ್ಲ, ವಿದೇಶಗಳಿಂದಲೂ ಕೋಟ್ಯಾಂತರ ಭಕ್ತಾದಿಗಳು ಈ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಉತ್ತರ ಪ್ರದೇಶ ಸರಕಾರ ೨೦೨೨ರಿಂದಲೂ ತಯಾರಿಯನ್ನು ಮಾಡಿಕೊಳ್ಳುತ್ತಾ ಬಂದಿದೆ. ಇಡೀ ದೇಶವೇ ಈ ಮಹಾಕುಂಭ ಮೇಳದಲ್ಲಿ ಮಿಂದೇಳಲಿದೆ ಎಂದರೆ ತಪ್ಪಾಗಲಾರದು.
ಪ್ರತೀ ೧೨ ವರ್ಷಕ್ಕೆ ಒಮ್ಮೆ ಪೂರ್ಣ ಕುಂಭಮೇಳದ ೧೨ ಆವರ್ತನಗಳು ಪೂರ್ಣಗೊಂಡಿರುವುದರಿಂದ ಅಂದರೆ ೧೪೪ ವರ್ಷಗಳ ಬಳಿಕ ಈ ಮಹಾ ಕುಂಭಮೇಳವು ನಡೆಯುತ್ತಿದೆ. ಇದೇ ಈ ವರ್ಷದ ಕುಂಭಮೇಳದ ವಿಶೇಷತೆ. ಕುಂಭಮೇಳಕ್ಕೆ ಸುಮಾರು ೭೦೦ ವರ್ಷಗಳ ಇತಿಹಾಸವಿದೆ ಎಂದು ಹೇಳಲಾಗುತ್ತಿದೆ. ೧೨ ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳ, ೬ ವರ್ಷಕ್ಕೊಮ್ಮೆ ಅರ್ಧ ಕುಂಭ ಮೇಳ ಮತ್ತು ೧೪೪ ವರ್ಷಗಳಿಗೊಮ್ಮೆ ಮಹಾ ಕುಂಭ ಮೇಳ ಆಯೋಜಿಸಲಾಗುತ್ತದೆ. ಇದೊಂದು ವ್ಯಕ್ತಿಯೊಬ್ಬನ ಜೀವಮಾನದಲ್ಲಿ ಒಮ್ಮೆ ಮಾತ್ರ ಸಿಗುವ ಪುಣ್ಯ ಸ್ನಾನದ ಯೋಗ. ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಪಾಪಗಳಿಗೆ ಮುಕ್ತಿ, ಆತ್ಮ ಮತ್ತು ದೇಹ ಶುದ್ಧೀಕರಣಕ್ಕಿರುವ ರಾಜ ಮಾರ್ಗ ಎಂದು ನಂಬಲಾಗಿದೆ. ಈ ಕುಂಭಮೇಳದಲ್ಲಿ ಪಾಲ್ಗೊಳ್ಳಲು ದೇಶ -ವಿದೇಶಗಳಿಂದ ಭಕ್ತಾದಿಗಳು ಬರುತ್ತಾರೆ. ಇವರ ಜೊತೆಗೆ ಸಂತರು, ನಾಗಾ ಸಾಧುಗಳು, ಹಠ ಯೋಗಿಗಳು, ಅಘೋರಿಗಳು ಬರುತ್ತಾರೆ. ಈ ಪುಣ್ಯಸ್ನಾನದಲ್ಲಿ ಪಾಲ್ಗೊಂಡ ಬಳಿಕ ಭಕ್ತಾದಿಗಳು ಪವಿತ್ರ ನದಿಗಳ ದಡದಲ್ಲಿ ಪೂಜೆ ಮಾಡಿ ಸಾಧು,… ಮುಂದೆ ಓದಿ...