‘ಮಯೂರ' ಹಾಸ್ಯ - ಭಾಗ ೯೦
1 day 19 hours ago - Ashwin Rao K Pಶಾಂತಿಯ ಜೊತೆಗೆ…
ರಾಜೇಶ ಕೇಳಿದ ‘ಯಾಕೋ ನಿನ್ನೆ ಬೆಳಿಗ್ಗೆ ವಾಕಿಂಗ್ ಬರಲಿಲ್ಲ?’ ಎಂದು. ಪರಮೇಶಿ ಹೇಳಿದ ‘ರಾಜೇಶ, ನಿನ್ನೆ ಶಾಂತಿಗಾಗಿ ದೇವಸ್ಥಾನಕ್ಕೆ ಹೋಗಿದ್ದೆ. ಕಣೋ..' ಎಂದು. ‘ಶಾಂತಿ ಸಿಕ್ತೇನೋ?’ ಎಂದ ರಾಜೇಶ. ಪರಮೇಶಿ ‘ಇನ್ನೇನು ಶಾಂತಿ ಬರುವ ಸಮಯವಾಗಿತ್ತು. ಅಷ್ಟರಲ್ಲಿ ಕವಿತಾ, ನಿವೇದಿತಾನೂ ಬಂದು ಬಿಟ್ರು ಕಣೋ. ಗಾಬರಿಯಾಗಿ ತಕ್ಷಣವೇ ಅಲ್ಲಿಂದ ಹೊರಟು ಬಂದೆ' ಎಂದ.
-ಮಹಾಂತೇಶ ಬಾಗೇವಾಡಿ
***
ನಾಚಿಕೆ ಯಾಕೆ?
ತಿಮ್ಮ ಹೆಂಡತಿಯೊಂದಿಗೆ ಔತಣಕೂಟಕ್ಕೆ ಹೋಗಿದ್ದ. ಐದಾರು ಸಲ ಅವನು ಐಸ್ ಕ್ರೀಂ ತಂದು ತಿನ್ನುತ್ತಿರುವುದನ್ನು ನೋಡಿ ‘ಪದೇ ಪದೇ ಐಸ್ ಕ್ರೀಂ ಕೇಳಿ ತಂದು ತಿನ್ನುತ್ತಿರುವಿರಲ್ಲ, ನಿಮಗೆ ನಾಚಿಕೆಯೇ ಆಗುವುದಿಲ್ಲವೇ?’ ಎಂದಳು ಪಿಸುದನಿಯಲ್ಲಿ. ತಿಮ್ಮ ಹೇಳಿದ ‘ನಾಚಿಕೆ ನನಗೆ ಯಾಕಾಗಬೇಕು? ನಿನಗೇ ಆಗಬೇಕು. ನಾನು ಪ್ರತಿ ಸಲ ಐಸ್ ಕ್ರೀಂ ತರುವಾಗಲೂ ನಿನ್ನ ಕಡೆಗೇ ಕೈತೋರಿಸಿ ‘ನನಗಲ್ಲ, ಅವಳಿಗೆ ಅಂತ ಹೇಳಿಯೇ ತಂದಿದ್ದೇನೆ.' ಎಂದ.
-ಪ. ರಾಮಕೃಷ್ಣ ಶಾಸ್ತ್ರಿ
***
ಆರೋಗ್ಯ ಸಲಹೆ
‘ದಿನಾ ಇಲ್ಲೇ ಬಂದು ಸಾಯ್ತಿಯಲ್ಲಾ. ಇದೊಂದೇ ಮನೆ ಹಿಡಿದಿದ್ದೀಯಾ? ಈ ಓಣೀಲಿ ಬೇರೆ ಯಾವ ಮನೆಗಳೂ ಇಲ್ವೇ? ಎಂದು ಭಿಕ್ಷೆ ನೀಡುತ್ತಾ ಗೊಣಗುತ್ತಿದ್ದ ಪಾರ್ವತಮ್ಮನಿಗೆ ಭಿಕ್ಷುಕ ಹೇಳಿದ ‘ಹಾಗೇನಿಲ್ಲಮ್ಮ, ಸಾಕಷ್ಟು ಮನೆಗಳಿವೆ. ಆದ್ರೆ, ಮೊನ್ನೆ ಡಾಕ್ಟರ್ ಹತ್ತಿರ ಚೆಕಪ್ ಗೆ ಹೋಗಿದ್ದೆ. ವಯಸ್ಸಾಯ್ತಲ್ಲಾ? ದಿನಕ್ಕೊಂದು ಕಡೆ ತಿಂದು ಆರೋಗ್ಯ ಕೆಡಿಸ್ಕೋಬೇಡ ಅಂತ ಹೇಳಿದ್ದಾರಮ್ಮಾ. ಅದಕ್ಕೇ ಒಂದೇ ಮನೆ ಹಿಡಿದಿದ್ದೇನೆ.’ ಎಂದು ಹೇಳಿ ಹೊರಟು ಹೋದ.
-ಪ ನಾ ಹಳ್ಳಿ ಹರೀಶ್ ಕುಮಾರ್
***
ಟ್ಯಾಕ್ಸಿ ಓಡಿಸಿದ್ದು ಇದೇ ಮೊದಲು
ಗಾಳಿಯನ್ನು ಸೀಳಿಕೊಂಡು ಟ್ಯಾಕ್ಸಿ ಓಡುತ್ತಿತ್ತು. ಹಿಂದಿನ ಸೀಟಿನಲ್ಲಿ ಕುಳಿತಿದ್ದ… ಮುಂದೆ ಓದಿ...