July 2010

  • July 19, 2010
    ಬರಹ: ksraghavendranavada
    ಇವತ್ತಿ೦ದ ಮತ್ತದೇ ಮನೆಯಲ್ಲೆಲ್ಲಾ ಮಲ್ಲಿಗೆ ಹೂವಿನ ಪರಿಮಳ, ಘಲ್ಲುಘಲ್ಲೆನುವ ಕಾಲ್ಗೆಜ್ಜೆಗಳ ನಾದ! ಮನದ ತು೦ಬೆಲ್ಲಾ ಮು೦ಬರುವ ಸ೦ತಸದ ಕ್ಷಣಗಳ ರಿ೦ಗಣ! ಗಳಿಗೆಗೊ೦ದು ಬಾರಿ ತಿವಿತ, ಮಾತಿನ ಚಕಮಕಿ, ಕೊನೆಗೊಮ್ಮೆ ಶಾ೦ತ ಸಮುದ್ರ! ಶೇಷುವಿನ ಕುಣಿದಾಟ…
  • July 19, 2010
    ಬರಹ: yogeshkrbhat1
    ಹೊಸನಗರದ ರಾಮಚಂದ್ರಾಪುರ ಮಠ ಈಗ ಯಾರಿಗೂ ಅಷ್ಟಾಗಿ ಅಪರಿಚಿತವೇನೂ ಅಲ್ಲ. ಗೋ ಹತ್ಯೆ ನಿಷೇದ, ಗೋಕರ್ಣ ಹಸ್ತಾಂತರ ಮುಂತಾದ ವಿಷಯಗಳಿಂದ ಮಾಧ್ಯಮದಲ್ಲೂ, ಜನರ ಬಾಯಿಯಲ್ಲೂ ಆಗಾಗ ಮಾತಾಗಿ, ಕತೆಯಾಗಿ, ಕೆಲವೊಮ್ಮೆ ಅಂತೆ ಕಂತೆಗಳಾಗಿ ಅಂತು…
  • July 19, 2010
    ಬರಹ: gopinatha
    ಇನ್ನೂ ಮುಗಿಯಲಿಲ್ಲ ಹುಡುಕಾಟಸಂಭಂಧಗಳ ಜಟಿಲತೆಯಲ್ಲಿಸರಳತೆಯ ಶೋಧದಲ್ಲಿಅದರ ಸೋಗಿನಲ್ಲಿಮಿಥ್ಯ ವಿಷಾದಗಳ ಮೋಡದಲ್ಲಿಮನುಷ್ಯ ಮತ್ತು ಪ್ರಕೃತಿಯತೆರೆಮರೆಯಾಟದ ಮುಸುಕಿನ  ಗುದ್ದಿನಲ್ಲಿಕೈ ಕೈ ಮಿಲಾಯಿಸಿದನಿರಂತರ ಸೆಣಸಾಟದಲ್ಲಿಮುಗಿಯಲಿಲ್ಲ ಈ…
  • July 19, 2010
    ಬರಹ: santhosh_87
    ಎರಡನೇ ಕ್ಲಾಸಿನಿಂದಲೂ ಶಾಲೆಗೆ ಹೋಗುತ್ತಿರುವಾಗ ಪಿಲಾರುಖಾನದ ಒಳಗಿನಿಂದ ಬಸ್ಸು ಹೊರಟಾಗ ಆಗುವ ಸುಂದರ ಅನುಭವ ಈಗಲೂ ಊರಿಗೆ ಹೋದಾಗಲೆಲ್ಲಾ ಕೆಲವೊಮ್ಮೆ ಆಗುವುದುಂಟು. ಅದೂ ಮುಖ್ಯವಾಗಿ ಅಕ್ಕನ ಕೈನೆಟಿಕ್ ನಲ್ಲಿ ೭೦-೮೦ ರ ಸ್ಪೀಡಿನಲ್ಲಿ ಹೋಗುವಾಗ!…
  • July 18, 2010
    ಬರಹ: kannadiga
    ಗೆಳೆಯರೇ, ಬೆಂಗಳೂರಿನ ಹಲವಾರು ಪ್ರಮುಖ ರಸ್ತೆಗಳಲ್ಲಿ ಮೆಟ್ರೋ ರೈಲು ಕಾಮಗಾರಿ ನಡೀತಿದೆ. ಎಲ್ಲ ಕಡೆ "ನಮ್ಮ ಮೆಟ್ರೋ" ಅಂತ ನಾಮ ಫಲಕಗಳನ್ನು ನೋಡಿ ಹೆಮ್ಮೆ ಪಡುತ್ತಿದ್ದೆ. ಆದರೆ ಮೊನ್ನೆ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ನಮ್ ಬೆಂಗಳೂರಿಗೆ ಬರಲಿರುವ…
  • July 18, 2010
    ಬರಹ: abdul
    ಈ ವಾರಾಂತ್ಯ ದ ಬಿಡುವಿನಲ್ಲಿ ಜೆಡ್ಡಾ ದ ಬಿಸಿಲ ಉರಿಯಿಂದ ರೋಸಿ ಹೋಗಿ ಎಲ್ಲಾದರೂ ತಂಪಾದ ಸ್ಥಳಕ್ಕೆ ಹೋಗಿ ಎರಡು ದಿನ ಕಳೆಯೋಣ ಎನ್ನಿಸಿತು. ಇಲ್ಲಿಂದ ಸುಮಾರು ೨೦೦ ಕಿ, ಮೀ ದೂರದಲ್ಲಿರುವ ತಾಯಿಫ್ ಒಂದು ಪ್ರವಾಸಿ ತಾಣ, ನಮ್ಮ ಕೆಮ್ಮಣ್ಣು ಗುಂಡಿಯ…
  • July 18, 2010
    ಬರಹ: kavinagaraj
         ರಾಷ್ತ್ರಗೀತೆ ಅಭ್ಯಸಿಸುತ್ತಿರುವ ಮೂರು ವರ್ಷದ ಪುಟಾಣಿಗಳನ್ನು ನೋಡಲು ಈ ಲಿಂಕ್ ನೋಡಿರಿ. http://kavinagaraj-kavinudi.blogspot.com/2010/05/blog-post_10.html
  • July 18, 2010
    ಬರಹ: harshavardhan …
      ಯುವ ಮಿತ್ರ ಪರಿಕ್ಷಿತ ರೋಣ ನಾಲ್ಕು ದಿನಗಳ ಕೆಳಗೆ ಶಾಲೆ ಮುಗಿಸಿಕೊಂಡು ಮನೆಗೆ ಹೊರಟಿದ್ದ. ಮನೆ ಹತ್ತಿರದ ಚಹಾ ಅಂಗಡಿ ಕಟ್ಟೆಯ ಮೇಲೆ ಹತ್ತಾರು ಮಕ್ಕಳು ಗುಂಪಾಗಿ ಯಾವುದೋ ‘ಮಸಲತ್ತು’ ನಡೆಸುತ್ತಿರುವಂತೆ ಕಂಡಿತು. ಸಮೀಪ ಹೋಗುವ ಧೈರ್ಯ ಮಾಡಿ…
  • July 18, 2010
    ಬರಹ: cslc
    ಇತ್ತೀಚಿಗೆ ಪ್ರಜಾವಾಣಿಯಲ್ಲಿ ಬರಗೂರು ರಾಮಚಂದ್ರಪ್ಪ ಬರೆದ ಬಸವಣ್ಣನವರ ಕಾಲದಲ್ಲಿ ಎಲ್ಲವೂ ಆಗಿತ್ತೇ? [ಮೇ 23]  ವಿಷಯದ ಕುರಿತಂತೆ ಪ್ರತಿಕ್ರಿಯೆ ಇದಾಗಿದೆ.   ಕಾರ್ಲ ಮಾರ್ಕ್ಸ್, ಅಂಬೇಡ್ಕರ, ಮತ್ತು ಗಾಂಧೀ ವಿಚಾರಗಳನ್ನು ಬಸವಣ್ಣನವರ…
  • July 18, 2010
    ಬರಹ: ramaswamy
    ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ…
  • July 18, 2010
    ಬರಹ: mpneerkaje
    ನನ್ನ ಜೀವನದಲ್ಲಿ ಈವರೆಗೆ ನಾನು ಕಂಡ, ಅನುಭವಿಸಿದ, ಯೋಚಿಸಿದ, ವಿಚಾರಿಸಿದ, ಕಲಿತ ವಿಷಯಗಳಲ್ಲಿ ಅಥವಾ ಸಂಗತಿಗಳಲ್ಲಿ ಅತ್ಯಂತ ವಿಶೇಷವಾದದ್ದೆಂದರೆ ಜೇನುನೊಣಗಳ ಜೊತೆ ಒಡನಾಟ. ಬಾಲ್ಯದಲ್ಲಿ ಅಪ್ಪನ ಜೊತೆ ಓಡಾಡಿಕೊಂಡು ಜೇನಿನ ಬಗ್ಗೆ ಅಲ್ಪ ಸ್ವಲ್ಪ…
  • July 17, 2010
    ಬರಹ: madhava
      ಖಾಲಿ ಮನಸ್ಸಿನಿಂದ ಕಳೆದುಹೋಗಿ ಇಹ ಜಗತ್ತಿಗೆ ಮರಳಿದಾಗ ನನ್ನ ಗೆಳತಿಗೆ ಎದುರಿಗೆ ಕಂಡದ್ದು ನೀಲ್ ಕಮಲ್ ಪ್ಲಾಸ್ಟಿಕ್ ಚೇರು. ಒಂದೇ ಸಮನೆ ನಗಾಡಲಾರಂಭಿಸಿದಾಗ ದಂಗುಬಡಿಯುವ ಸರದಿ ನನ್ನದು. ವಿವರಿಸಲಾರಂಭಿಸಿದಳು. ಅವಳ ಗೆಳತಿಗೆ ಅಂದರೆ ನನ್ನ…
  • July 17, 2010
    ಬರಹ: ksraghavendranavada
     ೧. ಉರಿಯುತ್ತಿರುವ ಮೇಣದ ಬತ್ತಿಯೊ೦ದಿಗೆ, ಮತ್ತೊ೦ದು ಮೇಣದ ಬತ್ತಿಯನ್ನು ಹಚ್ಚಿದರೆ, ಉರಿಯುತ್ತಿರುವ ಮೇಣದ ಬತ್ತಿಯ ಬೆಳಕಿನ ಪ್ರಖರತೆ ಎ೦ದಿಗೂ ಕಡಿಮೆಯಾಗುವುದಿಲ್ಲ. ಹಾಗೆಯೇ ಇನ್ನೊಬ್ಬರ ಕಷ್ಟದಲ್ಲಿ ಅವರತ್ತ ನಮ್ಮ ಸಹಾಯಹಸ್ತವನ್ನು ಚಾಚಿ ದಾಗ,…
  • July 17, 2010
    ಬರಹ: shreeshum
                      ಬೆಳಿಗ್ಗೆ ೯ ಗಂಟೆಯ ಸಮಯದಲ್ಲಿ ಇಡುವಾಣಿಯ ಶ್ರೀಪಾದ "ಗಮಟೇಘಟ್ಟದ ರಾಮಯ್ಯನವರ ಬಾವಿಯಲ್ಲಿ ಕಾಡುಕೋಣವೊಂದು ಬಿದ್ದಿದ್ದೆ, ಫೋಟೋ ಕ್ಲಿಕ್ಕಿಸುವುದಾದರೆ ಬೇಗ ಬಾ " ಎಂದು ಫೋನ್ ಮಾಡಿದರು. ಕಾಡುಕೋಣದ ಫೋಟೋವನ್ನು ನಮಗೆ…
  • July 17, 2010
    ಬರಹ: komal kumar1231
     ನಂಗೆ ಯಾರೂ ಹೆಣ್ಣು ಕೊಡ್ತಾ ಇಲ್ಲ. ವಯಸ್ಸು ಬೇರೆ ಆಗಿ ಹೋಗಿದೆ ಅದಕ್ಕೆ ನಾನು ಸನ್ಯಾಸಿ ಆಗ್ಬೇಕು ಅಂತಾ ಇದೀನಿ ಅಂದಾ ಸುಬ್ಬ. ಬಂಡ್ವಾಳ ಇಲ್ಲದ ದುಡಿಮೆ, ಬೇಡ ಕಲಾ ಒಂದ್ ಕಿತ ಸನ್ಯಾಸಿ ಆದ್ರೆ ಅಟೆಯಾ. ಏ ಒಂದು ನೂರು ರೂಪಾಯಿ ಕೊಡು. ಯಾಕಲಾ.…
  • July 17, 2010
    ಬರಹ: komal kumar1231
     ಅಣ್ಣಾ, ನಮ್ದೂ ಈಗ ಹೊಸಾ ಬಸ್ಗೆ ಮಾಡಿದೀವಿ ನಿಮಗೆ ಗೊತ್ತು. ಏನ್ಲಾ ಇಸ್ಮಾಯಿಲ್ ಹೊಸಾ ಬಸ್ ಏನ್ಲಾ, ಅದರಾಗೆ ಏನೈತೆ ಅಂತಾ ಪೆಸೆಲ್. ಗಾಡಿಗೆ ಹಾರ್ನ್ಗೆ ಇಲ್ಲ. ಬಸ್ಸಿನ ಸವಂಡ್ಗೆ ಜನಾ ಜಾಗ ಬಿಡ್ಬೇಕು. ಆಮೇಲೆ ಗೇರ್ಗೆ ಇಲ್ಲಾ. ಅದು ಬ್ರೇಕ್…
  • July 17, 2010
    ಬರಹ: Tejaswi_ac
      ತಪ್ಪಿಸಿಕೊಂಡ ಪುಟ್ಟ    ಶನಿವಾರ ಶಾಲೆಗೆ ಬಂದ ಪುಟ್ಟ   ಸ್ನೇಹಿತರನ್ನು ಕರೆದ ಆಡಲು ಆಟ    ಅಷ್ಟರಲ್ಲೇ ಕೇಳಿತು ಘಂಟೆಯ ಸದ್ದು  ಕೊಠಡಿಗೆ ನಡೆದರು ಎಲ್ಲರೂ ಎದ್ದು   ಪಾಠವ ಮುಗಿಸಿದರು ಲೆಕ್ಕದ ಮೇಷ್ಟ್ರು   ಮನೆಯಲಿ ಮಾಡಲು ಲೆಕ್ಕಗಳ ಕೊಟ್ರು…
  • July 17, 2010
    ಬರಹ: vasanth
    ಓ ಜೀವವೇ,   ನೀನೆಷ್ಟು ಮನಮೋಹಕ, ನೀನೆಷ್ಟು ಹಿತಚಿಂತಕ, ನೀನೆಷ್ಟು ನಯವಂಚಕ,   ನಿನ್ನೊಳಗೆ ಕಾಣದ ಪ್ರೀತಿಯು ಅಡಗಿದೆ, ಸ್ನೇಹವು ಅಡಗಿದೆ, ಅಸೂಯೆಯು ಅಡಗಿದೆ,   ನಿನ್ನೊಳಗಿನ ಅಂತರಾತ್ಮವನ್ನು ಯಾರಿಂದಲೂ ಅರಿಯಲು ಸಾಧ್ಯವೇ ಇಲ್ಲವೇನೊ?.  …
  • July 17, 2010
    ಬರಹ: anilkumar
         ಮರುದಿನ ಬೆಳಿಗ್ಗೆ ಎಲ್ಲರಿಗಿಂತಲೂ ಮುಂಚೆ ಬಂದಿದ್ದ ಪ್ರಶ್ನಾಮೂರ್ತಿ, ಎಂದಿನಂತೆ. ಒಂದೆರೆಡು ಗಂಟೆಗಳ ಕಾಲದ ನಂತರ ನನ್ನ ಕ್ಲಾಸ್‍ರೂಮಿಗೆ ಬಂದು ಹೊರಬರುವಂತೆ ಕರೆದ. ಆಚೆ ಬಂದ ಕೂಡಲೆ ಆತ ಕೇಳಿದ್ದು ಇದು, "ಯಾಕೆ ಗುರು. ನನ್ನನ್ನು ಯಾರೂ…