ಕಪ್ಪು ನೆಲದ ಮೈಯ ಬೆವರಲ್ಲಿ
ಅರಳಿದ ಫಸಲೆಲ್ಲಾ ಹಸಿರು..!
ನನ್ನ ಭವಿಶತ್ತಿನ ಕನಸುಗಳು...
ಹಗಲು-ರಾತ್ರಿ ನಿದ್ದೆ ಕಾಣದೆ
ಉರಿದಿದ್ದಿದೆ ಮೇಣದ ಬದುಕಲ್ಲಿ!!
ನಿನ್ನ ತೇಪೆ ಹಚ್ಚಿದ ಅಂಗಿಯಲ್ಲಿ
ನನ್ನ ಕನಸುಗಳು ಮುಗಳ್ನಕ್ಕು
ಈಗ ಬಿಕ್ಕಿವೆ.......…
ಇತ್ತೀಚೆಗೆ ಸುವರ್ಣ ನ್ಯೂಸ್ ಚಾನಲ್ಲಿನಲ್ಲಿ ಕಾರ್ಯಕ್ರಮವೊ೦ದು ಪ್ರಸಾರವಾಗುತ್ತಿತ್ತು.’ನಿಬಿರು ಪ್ರಳಯ’ಎ೦ಬುದು ಅದರ ಹೆಸರು.ಕಾರ್ಯಕ್ರಮದಲ್ಲಿ ಚಾನೆಲ್ಲಿನ ಮುಖ್ಯ ನೀರೂಪಕರಾದ ರ೦ಗನಾಥ ಭಾರದ್ವಾಜ್ ಮತ್ತು ’ಬೄಹತ್ ಬ್ರಹ್ಮಾ೦ಡ’ (ಕು)ಖ್ಯಾತಿಯ…
ಅನುಮಾನ ನನಗೆ
ಈ ನೆರಳು ನನ್ನದೋ
ಇಲ್ಲಾ
ಆ ನೆರಳೇ ನಾನೋ?
ಮಾತಾಡುತ್ತೇನೆ ನಾನು
ಮಾತಾಡುವುದಿಲ್ಲ ನೆರಳು
ನರಳುವುದು ನನ್ನಾತ್ಮ
ಮಾತಾಡಿದಾಗೆಲ್ಲ ನೆರಳು
ಅನಿವಾರ್ಯ ನನಗೆ
ನೆರಳ ಇರುವಿಕೆ
ಅದು ಉಳಿದಿರಬಹುದಾದ ನನ್ನ
ಆತ್ಮಸಾಕ್ಷಿಯ ಪ್ರತೀಕ
…
ಎದುರಿಗೆ ಸಿಕ್ಕರೂ
ಕಣ್ಣುಗಳು ನಕ್ಕರೂ
ತುಟಿಗಳು ಬಿರಿದರೂ
ನಾವು ತೆರೆದುಕೊಳ್ಳುವುದಿಲ್ಲ
ಒಳಗೆ ಕರೆದುಕೊಳ್ಳುವುದಿಲ್ಲ .
ಹೃದಯ ಬಿಚ್ಚಿ
ನೋವು ನಲಿವು ಹಂಚಿ
ಹಾಡುವುದಿಲ್ಲ
ಅದಕೇ ನಾವು ಅಪರಿಚಿತರು
ಸದಾ
ಜೊತೆಯಲಿದ್ದರೂ…
ಈಗ್ಗೆ ಒಂದು ವರ್ಷದ ಹಿಂದೆ ದಿ ಆರ್ಟಿಸ್ಟ್ ಎನುವ ಕಪ್ಪು-ಬಿಳುಪು ಮೂಕಿ ಚಿತ್ರ ಬಂತಲ್ಲ.......! -ನೋಡಿದ್ದೀರಾ???ಕೆಲ ತಿಂಗಳುಗಳ /ವರ್ಷದ ಹಿಂದೆ ಬಹುಶ ಸುಪ್ರೀತ್ ಅವರು ದಿ ಆರ್ಟಿಸ್ಟ್ ಚಿತ್ರದ ಬಗ್ಗೆ ಬರೆದ ಹಾಗೆ ನೆನಪು...(…
\ಗಡಿಯಾರ ಟನ್..ಟನ್...ಎಂದು ಐದು ಬಾರಿ ಹೊಡೆದುಕೊಂಡಿತು. ಅದರ ಜೊತೆ ಜೊತೆಗೆ ಕ್ರೀ....ಕ್ರೀ...ಎನ್ನುವ ಕಾಲಿಂಗ್ ಬೆಲ್ ಸದ್ದು ಸಹ ಕೇಳಿತು. ರಾತ್ರಿಯಿಂದ ನಿದ್ರೆ ಸಹ ಮಾಡದೆ ಪ್ರತಿಯೊಮ್ಮೆ ಗಡಿಯಾರ ಟನ್ ಟನ್...ಎಂದು ಸದ್ದು ಮಾಡಿದಾಗ ಅದರ ಕಡೆ…
ಸ್ಥಳಿಯರ ಎಲ್ಲ ಪ್ರತಿರೋಧಗಳ ನಡುವೆಯೂ ಸರಕಾರ ತಮಿಳುನಾಡಿನ ಕಂದುಂಕುಲಂನಲ್ಲಿ ಅಣುಸ್ಥಾವರ ಸ್ಥಾಪನೆಗೆ ಮುಂದಾಗಿದೆ.ಅಮೇರಿಕಾದ ಹಿತಾಸಕ್ತಿಗಳಿಗೆ ಮಣಿದಿರುವ ಸರಕಾರ ನಮಗೆ ಅಣುಶಕ್ತಿ ಅನಿವಾರ್ಯವೆಂದು ಸಾರ್ವಜನಿಕರನ್ನು ನಂಬಿಸಲು ಹರಸಾಹಸ…
ಅಪ್ಪ
(ಇದ್ದವರಿಗೆ)
ಅಪ್ಪ ಅಂದರೆ
ಅಂಬೆಗಾಲಿಟ್ಟು ಅಂಬಾರಿ ಮಾಡಿಸಿದವನು
ಇಟ್ಟ ಮೊದಲ ಹೆಜ್ಜೆಗೆ ಸಾಕ್ಷಿಯಾದವನು
ಕೈಯ ಕಿರುಬೆರಳ ಹಿಡಿದು
ಜಗದ ಬಯಲಿಗೆ ಎಳೆ ತಂದವನು
ಶಾಲೆಯ ಮೊದಲ ದಿನ ಗೇಟಿನವರೆಗೂ ಬಂದು
ಆತ್ಮ ವಿಶ್ವಾಸ ತುಂಬಿದವನು
ಬೆಳೆಯುತ್ತ…
ಅರಿವು ಇರುವ ಕಡೆ
ಶಬುದಗಳಿರವು
ದೀಪದೊಲು ಮೌನ
ಬೆಳಗುವುದು
ಗದ್ದಲ ಇರುವ ಕಡೆ
ಧ್ಯಾನವಿರದು
ಬಚ್ಚಲು ನೀರಂತೆ ಅಜ್ಞಾನ
ನಿಲ್ಲುವುದು
ಎಲ್ಲಿ ನೀನಿರುವೆಯೊ
ಅಲ್ಲಿ
ನಾನು ಇರುವುದಿಲ್ಲ
ಎಲ್ಲಿ ನಾನು ಇರುವುದಿಲ್ಲವೊ
ಅಲ್ಲಿ
ನೀನು
ಮಾತ್ರವಿರಬಲ್ಲೆ…