ಮಲ್ಲಮ್ಮ ವಿಧವೆ. ಪತಿ ಸರ್ಕಾರಿ ಸೇವೆಯಲ್ಲಿ ಮೃತನಾಗಿದ್ದರಿಂದ ಪಿಂಚಣಿ ಬರುತ್ತಿತ್ತು. ಆಕೆಗೆ ಎರಡು ಗಂಡು ಒಂದು ಹೆಣ್ಣು ಮಗಳು. ಅವರಿಗೆಲ್ಲ ಮದುವೆಯಾಗಿ ಮಕ್ಕಳಿದ್ದರು. ಅಳಿಯ ಸರ್ಕಾರಿ ಸೇವೆಯಲ್ಲಿದ್ದನು.
ಮಲ್ಲಮ್ಮನಿಗೆ ತಮ್ಮ ಮೂರು ಮಕ್ಕಳೇ…
ಮನೆಯೆಂದರೆ ಮುದವಿರಬೇಕು
ಹಸಿರು ಪೈರ ಬನವಿರಬೇಕು
ಬೆಳಕಿಗೆ ಬಾಗಿಲು ತೆರೆದಿರಬೇಕು
ಕತ್ತಲ ಅಳಿಸುವ ನಗುವಿರಬೇಕು
ಕಿಟಕಿಯ ಅಂಚಲಿ ನೆನಪಿರಬೇಕು
ಎಳೆಯ ಮಕ್ಕಳ ತುಂಟತನವಿರಬೇಕು
ಅಪ್ಪನ ಗದರು ದನಿಯಿರಬೇಕು
ಅಮ್ಮನ ಅಕ್ಕರೆಯ ಓಲೈಕೆಯಿರಬೇಕು
…
ಕೆಸು (Colocasia or Taro) ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಕೆಸುವಿನಲ್ಲಿ ನೂರಾರು ವಿಧಗಳಿದ್ದು, ಕೆಲವೇ ಕೆಲವು ಅಡುಗೆ ಉದ್ದೇಶಕ್ಕೆ ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳಂತೆ ಒಮ್ಮೆ ಹೊಲದಲ್ಲಿ…
೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ನಂತರದ ೬೩೫ ದಿನಗಳು ಭಾರತದ ಇತಿಹಾಸದ ಕರಾಳದಿನಗಳಾಗಿ ದಾಖಲಾಗಿವೆ. ಭಾರತದ ಪ್ರಜಾಪ್ರಭುತ್ವವನ್ನೂ, ಸ್ವಾತಂತ್ರ್ಯವನ್ನೂ ಅತಿಕ್ರಮಿಸಿ ನುಂಗಿದ ಸರ್ವಾಧಿಕಾರಿಯ ಆಜ್ಞೆಯಂತೆ…
15 ನೇ ಸೆಪ್ಟೆಂಬರ್ 2023, ಕರ್ನಾಟಕದ ಹೆಬ್ಬಾಗಿಲು ವಿಧಾನಸೌದದ ಮುಂದೆ ಸರ್ಕಾರ ಮತ್ತು ನೊಂದಾಯಿತ ಸಾರ್ವಜನಿಕರಿಂದ ಭಾರತದ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮವಿದೆ. ಸಂವಿಧಾನದ ಆಶಯಗಳ ಬಗ್ಗೆ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಜಾಗೃತಿ…
ನನ್ನ ಕೆಲಸ ಈ ನೆಲಕ್ಕೆ ಬಿದ್ದಿದ್ದನ್ನು ಮರವಾಗಿ ಬೆಳೆಸುವುದು. ನನ್ನ ನೆಲದಿಂದ ಒಳಿತನ್ನೇ ನೀಡುತ್ತೇನೆ ಹೊರತು ಹಾನಿಯನ್ನು ಮಾಡಿದವನಲ್ಲ. ಹಾನಿಯನ್ನು ಬಯಸಿದವನಲ್ಲ. ಆದರೆ ಇತ್ತೀಚಿಗೆ ಹಲವರು ಹಲವು ರೀತಿ ಮಾತನಾಡುತ್ತಿದ್ದಾರೆ." ಆ ಸ್ಥಳದಲ್ಲಿ…
ಹಳ್ಳಿಯಲ್ಲಿ ನೀರು ಮಾವಿನಕಾಯಿ ಎಂದು ಹೇಳುವುದಿದೆ. ಮೂರು ಮಧ್ಯಮಗಾತ್ರದ ಮಾವಿನಕಾಯಿಗಳನ್ನು ತೊಳೆದು ಸ್ವಲ್ಪ ಬೇಯಿಸಿಕೊಳ್ಳಬೇಕು. ಗಟ್ಟಿಯಾಗಿದ್ದರೆ ಕುಕ್ಕರಲ್ಲಿಯೂ ಬೇಯಿಸಬಹುದು. ತಣ್ಣಗಾದ ಮೇಲೆ ಬೇಯಿಸಿದ ಕಾಯಿಗಳನ್ನು ಹಿಚುಕಿಟ್ಟುಕೊಳ್ಳಬೇಕು…
ಆತ 6ನೇ ತರಗತಿಯ ವಿದ್ಯಾರ್ಥಿ. ಆತನಿಗೆ ಶಾಲೆಗೆ ಬರುವುದೆಂದರೆ ಅದೇಕೋ ಹಿಂಸೆ. ಪ್ರತಿ ಬಾರಿ ಹಾಜರಿ ಹಾಕುವಾಗಲು "ಅವನು ಶಾಲೆಗೆ ಬರುವುದಿಲ್ಲ ಸಾರ್" ಎಂದು ಮಕ್ಕಳೆಲ್ಲ ಹೇಳುವಂತೆ ಆಗಿ ಹೋಗಿತ್ತು ಆ ತರಗತಿಯ ಪರಿಸ್ಥಿತಿ. ಬಹುಶಃ ಇದು ನಮ್ಮ…
ಸೂರಿ ಆ ದಿನ ಆಫೀಸು ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ. ದಾರಿ ಮಧ್ಯದಲ್ಲಿ ಆತನಿಗೆ “ಅಪ್ಪಾ, ಸಂಜೆ ಬರುವಾಗ ಡೇರಿ ಮಿಲ್ಕ್ ಚಾಕಲೇಟ್ ತನ್ನಿ “ ಎಂದು ಹೇಳಿದ ತನ್ನ ಮಗನ ಮಾತು ನೆನಪಾಯಿತು. ಹಾಗೇ ಅಂಗಡಿಯಲ್ಲಿ ಚಾಕಲೇಟು ತೆಗೆದುಕೊಂಡು ಜೇಬಿಗೆ…
ಮುಂಗಾರು ಮಳೆ ವೈಫಲ್ಯದ ಬಿಸಿ ತಾಗತೊಡಗಿದೆ. ಕಳೆದ ಎರಡು ವರ್ಷ ಅತಿವೃಷ್ಟಿ. ಈ ವರ್ಷ ಅನಾವೃಷ್ಟಿಯಿಂದ ಕೃಷಿ ಉತ್ಪನ್ನಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ಎರಡು ವರ್ಷ ಪ್ರವಾಹ, ಅತಿವೃಷ್ಟಿಯಿಂದ ಬೆಳೆ ನಾಶವಾದರೆ ಈ ಬಾರಿ ಮಳೆ…
ಐತಿಹಾಸಿಕ - ಪೌರಾಣಿಕ ಪಾತ್ರಗಳ ಘರ್ಷಣೆ. ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳ ಅನೇಕ ವಿವಾದಗಳು ಇನ್ನು ಮುಂದೆ ನಿರಂತರ. ಸತ್ಯಗಳು ಸಮಾಧಿಯಾಗುತ್ತಾ ಇತಿಹಾಸ ಧ್ವಂಸವಾಗುತ್ತಿರುವ ಕಾಲಘಟ್ಟದಲ್ಲಿ ನಾವುಗಳು..
ಭಾರತ ಇತಿಹಾಸದ ಈ ಸಂಘರ್ಷಗಳಿಂದ…
ಕೆಲವೊಂದು ಸಲ ನಮಗಿರವಿಲ್ಲದೆ ಒಂದಷ್ಟು ವಿಚಾರಗಳು ಕಳೆದು ಹೋಗುತ್ತವೆ. ಕಳೆದುಕೊಂಡದ್ದೆಲ್ಲವೂ ನಮ್ಮ ಜೊತೆಗಿದ್ದು ನಮ್ಮ ಕಣ್ಣಿಗೆ ಕಾಣುತ್ತಲೇ ಇರಬೇಕು ಅಂದೇನೂ ಇಲ್ಲ. ಕಣ್ಣಿಗೆ ಕಾಣುವಂತಾದರೆ ಹುಡುಕಿ ಹುಡುಕಿ ಆದರೂ ಪಡೆದುಕೊಳ್ಳಬಹುದು, ಆದರೆ…
ಸುಮಾರು ಐದು ವರ್ಷಗಳ ಹಿಂದಿನ ನೆನಪುಗಳು ಇವು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಐದನೇ ತರಗತಿಗೆ ಶಶಾಂಕ್ ಅನ್ನುವ ಹುಡುಗ ಹೊಸದಾಗಿ ಸೇರ್ಪಡೆಗೊಂಡಿದ್ದ. (ಹೆಸರು ಬದಲಿಸಲಾಗಿದೆ) ಖಾಸಗಿ ಶಾಲೆಯಿಂದ ಬಿಡಿಸಿ ಆತನ ಪೋಷಕರು ನಮ್ಮ…
ಅನುಭವವೇ ಜೀವನ ಎನ್ನುವಂತೆ ಯಶಸ್ಸಿನ ಹಾದಿಯಲ್ಲಿ ನಡೆದು ಯಶಸ್ಸು ಪಡೆದವರ ಅನುಭವದ ಯಶೋಗಾಥೆ ನಮ್ಮನ್ನೂ ಸಹ ಆ ಯಶಸ್ವಿ ಮಾರ್ಗದತ್ತ ಕರೆದೊಯ್ಯುತ್ತದೆ. ಯಶಸ್ಸು ಎನ್ನುವುದಕ್ಕೆ ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಚಾರಗಳು ಇವೆ. ಯಶಸ್ಸು ಎಂಬುದು…
ಅವನಿಗೆ ತಿಳಿಯುತ್ತಿಲ್ಲ. ತಾನು ಮೌನವಾಗಬೇಕೋ, ಇದ್ದು ಸಾಧಿಸಬೇಕೋ, ಎಲ್ಲವ ತೊರೆದು ಹರಡಬೇಕೋ, ಗೊತ್ತಾಗುತ್ತಿಲ್ಲ. ವೇದಿಕೆಯ ಮೇಲೆ ಸರ್ವರನ್ನ ನಗೆಗಡಲಿನಲ್ಲಿ ತೇಲಿಸಿ ಚಪ್ಪಾಳೆಯನ್ನು ಗಿಟ್ಟಿಸಿ ಅದ್ಭುತ ಅಭಿನಯ ಎಂದು ಬೆನ್ನು ತಟ್ಟಿಸಿಕೊಳ್ಳುವ…
ಅಸೂಯೆಯಿಂದ ಬಡವನೊಬ್ಬನ ಬಡಬಡಿಕೆ ಎಂದು ಭಾವಿಸಲು ಅಡ್ಡಿಯಿಲ್ಲ. ಜಿ 20 ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ಭಾರತದ ನೆಲದಲ್ಲಿ ನಡೆಯುತ್ತಿದೆ. ಅದನ್ನು ಶ್ರೀ ನರೇಂದ್ರ ಮೋದಿ ಅವರ ನೇತ್ರತ್ವದ ಸರ್ಕಾರ ಯಶಸ್ವಿಯಾಗಿ ನಿರ್ವಹಿಸುತ್ತಿದೆ.…
ಖರ್ಜೂರದಲ್ಲಿರುವ ಬೀಜವನ್ನು ಮೊದಲಿಗೆ ಬಿಡಿಸಿ. ನಂತರ ಖರ್ಜೂರ, ಶುಂಠಿ, ಚಕ್ಕೆ, ಬೆಳ್ಳುಳ್ಳಿ, ಮೆಣಸಿನ ಹುಡಿ, ಏಲಕ್ಕಿ, ವಿನೆಗಾರ್, ಸಕ್ಕರೆ, ಉಪ್ಪು ಮೊದಲಾದುವುಗಳನ್ನು ಒಂದು ಪಾತ್ರೆಗೆ ಹಾಕಿ ಖರ್ಜೂರ ಗಟ್ಟಿಯಾಗುವವರೆಗೆ ಕುದಿಸಬೇಕು. ನಂತರ ಈ…
ಅಮ್ಮುಗೆಯ ರಾಯಮ್ಮ ನೇಯ್ಗೆಯ ಕೆಲಸ ಮಾಡಿಕೊಂಡಿದ್ದಳು. ಜೀವನ ಹೇಗಿರಬೇಕು ಎಂಬುದರ ಬಗ್ಗೆ ನಾಲ್ಕು ಸಾಲಿನ ವಚನದಲ್ಲಿ ಸುಂದರವಾಗಿ ಹೇಳುತ್ತಾರೆ. ಅವರ ವಚನ ಅತ್ಯದ್ಭುತ.....!
ಹರಿಯ ಬಲ್ಲಡೆ ವಿರಕ್ತ
ಸದಾಚಾರದಲ್ಲಿ ಇರಬಲ್ಲಡೆ…