January 2024

 • January 25, 2024
  ಬರಹ: ಬರಹಗಾರರ ಬಳಗ
  ನೀವು ನಿಮ್ಮ ಸುತ್ತಮುತ್ತಲಿರುವ ಗಿಡ, ಮರ, ಬಳ್ಳಿಗಳನ್ನು ಗಮನಿಸುತ್ತಿರುವಿರಾ? ಸಸ್ಯವರ್ಗ ಚಿಗುರು, ಹೂ ಹಣ್ಣುಗಳಿಂದ ನಳನಳಿಸುತ್ತಿರುವುದನ್ನು ನೋಡಿದರೇನೆ ವಸಂತ ಋತುವಿನ ಆಗಮನವಾಗಿದೆ ಎಂದು ತಿಳಿದುಕೊಳ್ಳಬಹುದು ಅಲ್ಲವೇ...? ಹೌದು.... ಮಕರ…
 • January 25, 2024
  ಬರಹ: ಬರಹಗಾರರ ಬಳಗ
  ಗಿಳಿಗಳ ಹಿಂಡಿದು ಸಭೆಯನು ಸೇರಿದೆ ಒಣಗಿದ ವೃಕ್ಷದ ಕೊಂಬೆಯಲಿ ಬಳಗದ ಹಿತವನು ಕಾಯುವ ಚಿಂತನೆ ಬಿಸಿ ಬಿಸಿ ಚರ್ಚೆಯು ನಡುವಿನಲಿ   ಬತ್ತಿದೆ ಕೆರೆ ತೊರೆ,ನೀರಿನ ಕ್ಷಾಮವು ಕಾಡಿದೆ ನಾಡನು ಬರಗಾಲ ಬಾನಲಿ ಮೋಡವು ಮಳೆಯನು ಸುರಿಸದೆ ಮುಗಿದಿದೆ ಈ ಸಲ…
 • January 25, 2024
  ಬರಹ: ಬರಹಗಾರರ ಬಳಗ
  ಬರವಣಿಗೆ, ಬಾಯಿಮಾತಿನಲಿ ಮಾತ್ರವೇ, ಅಲ್ಲ ನಿಜವಾಗಿಯೂ ಹೌದೇ ಎಂಬ ಸಂಶಯವೊಂದು ಸುಳಿದಾಡುತ್ತದೆ. ರಣಹದ್ದುಗಳಾಗಿ, ಕಿತ್ತು ತಿನ್ನುವ, ರಕ್ತವನ್ನು ಬಸಿದು, ಹೃದಯಹೀನರಾಗಿ, ಕಣ್ಣಲ್ಲಿ ರಕ್ತವಿಲ್ಲದವರಂತೆ ಶವವಾಗಿಸುವುದು ಎಷ್ಟು ಸರಿ? ಒಂದು…
 • January 24, 2024
  ಬರಹ: Ashwin Rao K P
  ‘ಮೈಸೂರ ಮಲ್ಲಿಗೆ’ಯ ಕವಿಯೆಂದು ಪ್ರಖ್ಯಾತರಾಗಿ ಮನೆಮಾತಾದ ಕೆ.ಎಸ್. ನರಸಿಂಹಸ್ವಾಮಿ ಅವರು (ಕಿಕ್ಕೇರಿ ಸುಬ್ಬರಾಯ ನರಸಿಂಹಸ್ವಾಮಿ) ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ೧೯೧೫ರ ಜನವರಿ ೨೬ರಂದು ಜನಿಸಿದರು. ತಂದೆ ಸುಬ್ಬರಾಯ, ತಾಯಿ ನಾಗಮ್ಮ. ಮೈಸೂರಿನ…
 • January 24, 2024
  ಬರಹ: addoor
  ರೈತರ ಆತ್ಮಹತ್ಯಾ ಸರಣಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. “ಇದ್ಯಾಕೆ ಇಷ್ಟೊಂದು ಅನ್ನದಾತರು ತಮ್ಮ ಜೀವ ಬಲಿಗೊಡುತ್ತಿದ್ದಾರೆ?” ಎಂಬ ಪ್ರಶ್ನೆಗೆ ಯಾರಲ್ಲಿಯೂ ಸರಿಯಾದ ಉತ್ತರವಿಲ್ಲ. ರಾಜ್ಯಗಳ ವಿಧಾನಮಂಡಲಗಳಲ್ಲಿ ಮತ್ತು ಸಂಸತ್ತಿನಲ್ಲಿ ರೈತರ…
 • January 24, 2024
  ಬರಹ: ಬರಹಗಾರರ ಬಳಗ
  'ಅಬಲೆಯರಲ್ಲ ಮೃದು ಮನಸ್ಸಿನವರು ನಭದಲಿ ವಿಹರಿಸಿದ ಧೀರೆಯರು ಸಭೆಯಲಿ ಮಿನುಗುವ ತಾರೆಯರು ಶುಭದೊಸಗೆ ಹೇಳುತ ಹಾರೈಸುವರು ಸೊಬಗಿನಲಿ ಮಕ್ಕಳ ಪೋಷಿಸುವರು ಕಬಳಿಸುವ ಬುದ್ಧಿಗೆ ಛೀಮಾರಿ ಹಾಕುವರು ಸಬಲರಾಗಿ ಮಹಿಳಾ ಶಕ್ತಿಯಲಿ ಮೆರೆವರು ಶುಭ ಸಮಾರಂಭದಿ…
 • January 24, 2024
  ಬರಹ: Ashwin Rao K P
  ಉದಯೋನ್ಮುಖ ಕತೆಗಾರ್ತಿ ಮೇಘನಾ ಕಾನೇಟ್ಕರ್ ಅವರ ನೂತನ ಕಥಾ ಸಂಕಲನ ‘ಲೈಫ್ ನಲ್ಲೊಂದು ಯೂ ಟರ್ನ್'. ಈ ಕಥಾ ಸಂಕಲನಕ್ಕೆ ಬೆನ್ನುಡಿಯನ್ನು ಬರೆದು ಪ್ರೋತ್ಸಾಹಿಸಿದ್ದಾರೆ ಖ್ಯಾತ ಕಾದಂಬರಿಕಾರ, ಅಂಕಣಕಾರರಾದ ಸಂತೋಷಕುಮಾರ್ ಮೆಹೆಂದಳೆ ಇವರು. ಇವರು…
 • January 24, 2024
  ಬರಹ: Shreerama Diwana
  " ನಗಲಾರದೇ ಅಳಲಾರದೇ ತೊಳಲಾಡಿದೆ ಜೀವ, ಬರಿ ಮಾತಲಿ ಹೇಳಲಾಗದೆ ಮನದಾಳದ ನೋವಾ......." ಕನ್ನಡ ಚಲನಚಿತ್ರದ ಹಾಡಿನ ಪಲ್ಲವಿಯಿದು. ಬಹುಶಃ ಇಂದಿನ ಒಟ್ಟು ವ್ಯವಸ್ಥೆಯನ್ನು ನೋಡಿದರೆ ಇದು ಕೇವಲ ಪ್ರೀತಿ ಪ್ರೇಮ ವಿರಹ ಅಥವಾ ಕೌಟುಂಬಿಕ ಸಮಸ್ಯೆಯ…
 • January 24, 2024
  ಬರಹ: ಬರಹಗಾರರ ಬಳಗ
  ಶತ ಶತಮಾನಗಳ ಹಿಂದಿನಿಂದಲೂ ಕಾಲ ಗರ್ಭದ ಒಳಗೆ ಹುದುಗಿ ಹೋಗಿದ್ದ ಆ ಕಲ್ಲಿಗೆ ಮನಸ್ಸಿನೊಳಗೆ ಸಣ್ಣ ತಲ್ಲಣ. ತನ್ನ ಬದುಕಿನ ಅರ್ಥವೇನು ಈ ಭೂಮಿಯಲ್ಲಿ ನೆಲವನ್ನ ಗಟ್ಟಿಯಾಗಿ ಹಿಡಿದಿಡುವುದಕ್ಕೆ ಬಂದಿದ್ದೇನೆಯೇ? ನೆಲವನ್ನ ಇನ್ನಷ್ಟು…
 • January 24, 2024
  ಬರಹ: ಬರಹಗಾರರ ಬಳಗ
  ದೇಶದ ಅಭಿವೃದ್ಧಿ ಎಂದೊಡನೆ ನಮ್ಮ ದೃಷ್ಟಿಯು ದೇಶದ ಸರ್ವಾಂಗೀಣ ವಿಕಾಸದ ಚಿಂತನೆಯತ್ತ ಸಾಗುತ್ತದೆ. ದೇಶದ ಅಭಿವೃದ್ಧಿಗೆ ಶಿಕ್ಷಣ, ಆರೋಗ್ಯ, ವ್ಯವಸಾಯ, ಗೃಹ ಮತ್ತು ಬೃಹತ್ ಉದ್ದಿಮೆಗಳು, ವಿಜ್ಞಾನ, ಸಂಚಾರ, ವಿದ್ಯುತ್ ಉತ್ಪಾದನೆ, ನದಿ ಮತ್ತು…
 • January 24, 2024
  ಬರಹ: ಬರಹಗಾರರ ಬಳಗ
  ಯುವಕರಿಗೆ ಆದರ್ಶಪ್ರಾಯರಾದವರು ಬತ್ತದ ತೊರೆಯಂತೆ ಝರಿಯಾಗಿ ಹರಿದವರು// ಭಾರತ ದೇಶದ ಅಪ್ರತಿಮ ಸಾಹಸಿಗರು ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು//   ಸೈನಿಕ ಶಕ್ತಿಯ ಹುಟ್ಟು ಹಾಕಿದರು ಸಂಘಟಕ  ಶಕ್ತಿಯ ದಂಡ ನಾಯಕರು/ ಗುರಿಯೇ ಸಾಧನೆ ಹೋರಾಡಿ ಎಂದರು…
 • January 23, 2024
  ಬರಹ: Ashwin Rao K P
  ವೈಜ್ಞಾನಿಕವಾಗಿ ನೈಜೆಲ್ಲಾ ಸಟೈವ (Nigella Sativa) ಎಂದೇ ಕರೆಯುವ ಕರಿಜೀರಿಗೆಯು ರನಾಂಕುಲೇಸಿ (Ranunculaceae) ಕುಟುಂಬಕ್ಕೆ ಸೇರಿದ್ದು, ಸಂಬಾರ ಮತ್ತು ಔಷಧಿಯ ಗುಣಗಳನ್ನು ಹೆಚ್ಚು ಒಳಗೊಂಡಿರುತ್ತದೆ. ಇದನ್ನು ಅನೇಕ ಸಾಮಾನ್ಯ ಹೆಸರುಗಳಿಂದ…
 • January 23, 2024
  ಬರಹ: Ashwin Rao K P
  ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪ್ರಾಣಪ್ರತಿಷ್ಟಾಪನೆ ಅದ್ದೂರಿ ಹಾಗೂ ಸಾಂಗೋಪಾಂಗವಾಗಿ ಸಂಪನ್ನಗೊಂಡಿತು. ಗಣ್ಯಾತಿಗಣ್ಯರು ಪಾಲ್ಗೊಂಡಿದ್ದಂಥ ರಾಮ ಮಂದಿರ ಆವರಣದಲ್ಲಿ ವಿಜೃಂಭಣೆಗೇನೂ ಕೊರತೆಯೇ ಇದ್ದಿರಲಿಲ್ಲ. ಇಂಥದ್ದೊಂದು…
 • January 23, 2024
  ಬರಹ: Shreerama Diwana
  ಎಂ.‌ ಬಿ. ಮುತ್ತಣ್ಣ ಅವರ ಮಾಸಪತ್ರಿಕೆ "ಸತ್ಯಾರ್ಥಿ" ಕೊಡಗು ಜಿಲ್ಲೆಯ ಪೊನ್ನಂಪೇಟೆಯಿಂದ ಪ್ರಕಟವಾಗುತ್ತಿದ್ದ ಮಾಸಪತ್ರಿಕೆ "ಸತ್ಯಾರ್ಥಿ". ಎಂ. ಬಿ. ಮುತ್ತಣ್ಣ ಅವರು ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರಾಗಿದ್ದ " ಸತ್ಯಾರ್ಥಿ",…
 • January 23, 2024
  ಬರಹ: Shreerama Diwana
  ಬಹುತ್ವ ಭಾರತ್ ಬಲಿಷ್ಠ ಭಾರತ್, ಗಣರಾಜ್ಯಗಳ ಒಕ್ಕೂಟ ಈ ನಮ್ಮ ಭಾರತ. ದೇಶದ ವಿವಿಧ ರಾಜ್ಯಗಳ ಪ್ರಾತಿನಿಧಿಕ ಜೀವನಶೈಲಿಯನ್ನು ಸರಳವಾಗಿ ನನ್ನ ಅನುಭವದ ಮಿತಿಯಲ್ಲಿ ವಿವರಿಸುವ ಒಂದು ಸಣ್ಣ ಪ್ರಯತ್ನ. ಸುರಿವ ಬೆವರು ಟವಲಿನಲ್ಲಿ ಒರೆಸಿಕೊಂಡು ಪಂಚೆ…
 • January 23, 2024
  ಬರಹ: ಬರಹಗಾರರ ಬಳಗ
  ಅವಳು ತುಂಬಾ ರೋಸಿ ಹೋಗಿದ್ದಾಳೆ. ಕುದ್ದು ಹೋಗಿದ್ದಾಳೆ ನೋವನ್ನ ಅನುಭವಿಸಿ ಅನುಭವಿಸಿ ಜಡ್ಡು ಕಟ್ಟಿದ್ದಾಳೆ. ವಯಸ್ಸು ತುಂಬಾ ಸಣ್ಣದು. ಆ ಸಮಯದಲ್ಲಿ ಮನೆಗೆ ಬರುವ ಪಕ್ಕದ ಮನೆಯ ಅಂಕಲ್ ವಿಪರೀತವಾಗಿ ಆಕೆಯನ್ನು ಮುದ್ದಿಸುತ್ತಿದ್ದರು. ಆಕೆ…
 • January 23, 2024
  ಬರಹ: Ashwin Rao K P
  ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಮಾರ್ಗವಿಲ್ಲದ ಮಾರ್ಗ' ಈ ಪುಸ್ತಕ ಮಾಲೆಯ ಪ್ರಧಾನ ಸಂಪಾದಕರು ಡಾ. ಪ್ರಧಾನ್ ಗುರುದತ್ತ ಹಾಗೂ…
 • January 23, 2024
  ಬರಹ: ಬರಹಗಾರರ ಬಳಗ
  ಸೈನಿಕ ಶಕ್ತಿಯ ಹುಟ್ಟು ಹಾಕಿದವರು, ಸಂಘಟಕ  ಶಕ್ತಿಯ ದಂಡ ನಾಯಕರಿವರು, ಗುರಿಯೇ ಸಾಧನೆ ಹೋರಾಡಿ ಎಂದವರು, ದೇಶ ಸೇವೆಯೇ ಈಶ ಸೇವೆ ಎಂದರಿವರು.. ಹೀಗೆ ಹೇಳಿದವರು, ನೋವನುಂಡವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಷ್ಟ್ರನಾಯಕರೇ ಅಮರ…
 • January 23, 2024
  ಬರಹ: ಬರಹಗಾರರ ಬಳಗ
  ದೇವ ರಘಪತಿ ರಾಮಚಂದ್ರನೆ ನೋವು ಕಳೆಯಿತು ಕಂಡು ನಿನ್ನನು ಭಾವವುಕ್ಕಿದೆ ತಾಳಲಾರದೆ ಬಂದ ಕಣ್ಣೀರು ಕಾವ ದೇವನೆ ನಿನ್ನ ಜನ್ಮದ ತಾವಲೀದಿನ ಕಾಣಲೆನ್ನುತ ಜಾವದಲ್ಲಿಯೆ ಬಂದು ಕುಳಿತೆನು ಬಿಗಿದು ನನ್ನುಸಿರು   ಕನ್ನ ಕೊರೆಯಲು ಬಂದರನ್ಯರು ತನ್ನದಲ್ಲದ…
 • January 23, 2024
  ಬರಹ: ಬರಹಗಾರರ ಬಳಗ
  ಇದು ವಿದೇಶದಲ್ಲಿ ನಡೆದ ಘಟನೆ. ಒಬ್ಬ ಭಿಕ್ಷುಕನಿದ್ದನು. ವಯಸ್ಸು 20 ರಿಂದ 25. ತಂದೆ ತಾಯಿ ಇರಲಿಲ್ಲ. ಅನಾಥನಾಗಿದ್ದನು. ಭಿಕ್ಷೆ ಬೇಡುತ್ತಿದ್ದನು. ಸಿಕ್ಕಿದ್ದನ್ನು ಉಂಡು, ದೇವಾಲಯದಲ್ಲಿ ಮಲಗುತ್ತಿದ್ದನು. ಒಂದು ದಿನ ಮಧ್ಯಾಹ್ನದವರೆಗೂ ಭಿಕ್ಷೆ…