ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ಟೇಟಸ್ ಕತೆಗಳು (ಭಾಗ ೧೦೨೫)- ಮೌನ

ಆ ಮಗುವಿಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ಇಷ್ಟು ಹೊತ್ತಿನವರೆಗೆ ಅಮ್ಮ ತುಂಬಾ ಕಷ್ಟಪಟ್ಟರು. ಎಲ್ಲರ ಬಳಿ ಹೋಗಿ ಕೈಯೊಡ್ಡಿ ಬೇಡಿದರೂ ಯಾರೂ ಏನೂ ನೀಡ್ತಾ ಇಲ್ಲ. ಅಮ್ಮನಿಗೆ ಮಾಡುವುದಕ್ಕೆ ಇದೇ ಕೆಲಸ ಅಂತಲ್ಲ. ಆದರೆ ಇದ್ದ ಕೆಲಸದ ಕಡೆಗಳಿಂದ ಏನು ಪ್ರತಿಫಲ ಸಿಗದೇ ಇದ್ದಾಗ ಅಮ್ಮ ಈ ದಾರಿಯನ್ನ ಆಯ್ದುಕೊಂಡಿದ್ದರು.

Image

ಗುರು ಪೂರ್ಣಿಮೆ

ಧೋ ಎಂದು ಭೋರ್ಗರೆದು ಸುರಿಯುತ್ತಿರುವ ಮಳೆಯ ನಿಮಿತ್ತ ಪಾಠ ಪ್ರವಚನಗಳು ಸ್ವಲ್ಪ ಮಟ್ಟಿನ ವಿರಾಮ ಪಡೆದಿವೆ. ಹಿಂದಿನ ಕಾಲದಲ್ಲಿ ಆಷಾಢ ಮಾಸದಲ್ಲಿ ಇಂತಹ ಮಳೆಗಳು ಸಹಜವಾದರೂ ಪರಿಸರ ವಿನಾಶದಿಂದ ಇತ್ತೀಚೆಗಂತೂ ಮಳೆ ತುಂಬಾ ಕಡಿಮೆ. ಇಂತಹ ಆಷಾಢ ಮಳೆಯ ಸಂದರ್ಭದಲ್ಲಿ ಆಷಾಢ ಹುಣ್ಣಿಮೆಯಂದು ಆಚರಿಸಲ್ಪಡುವ ಗುರುಪೂರ್ಣಿಮ ಉತ್ಸವದ ಕುರಿತಾಗಿ ಕೆಲವೊಂದು ವಿಚಾರಗಳನ್ನು ತಿಳಿಯೋಣ.

Image

ಹಾಗೆ ಸುಮ್ಮನೆ .. ಇದನ್ನ ಓದಿ ಸ್ವಲ್ಪ ನಕ್ಕು ಬಿಡಿ…

ಮದುವೆಯ ಮಾತುಕತೆಗೆ ಬಂದ ಮಂದಿ.... ತರಕಾರಿಗಳ  ಹೆಸರು ಬಳಸಿ ಬಹಳ ಚೆನ್ನಾಗಿ ಸಂಬಾಷಣೆ ಮಾಡಿದ್ದಾರೆ. 

Image

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 3: ಭ್ರಮೆ ನಾಶವಾಗುವ ತನಕ

ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, “ಈ ಪ್ರಪಂಚ ಒಂದು ಭ್ರಮೆ, ನನ್ನ ಜೊತೆ ಬಂದು ಬಿಡು” ಎಂದು. “ಆದರೆ ಸ್ವಾಮಿ, ನನ್ನ ಮನೆಯವರು, ತಂದೆ, ತಾಯಿ, ಹೆಂಡತಿ ಇವರೆಲ್ಲ ನನ್ನನ್ನು ಅಷ್ಟು ಪ್ರೀತಿಸುತ್ತಾರೆ. ನಾನು ಅವರನ್ನು ಬಿಟ್ಟು ಬರುವುದು ಹೇಗೆ?” ಎಂದು ಶಿಷ್ಯ ಉತ್ತರಿಸಿದ.

Image

ಬಟಾಟೆ ತಾಲಿಪಟ್ಟು

Image

ಬೇಯಿಸಿದ ಬಟಾಟೆಯನ್ನು ಗಂಟುಗಳಿರದ ಹಾಗೆ ಚೆನ್ನಾಗಿ ಹುಡಿ ಮಾಡಿ. ಅದಕ್ಕೆ ಹಸಿಮೆಣಸಿನ ಕಾಯಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಜೀರಿಗೆ, ಇಂಗು, ಶುಂಠಿ, ಉಪ್ಪನ್ನು ಹಾಕಿ ಕಲಸಿ ಮಿಶ್ರಣ ತಯಾರಿಸಿರಿ. ನಂತರ ಗೋಧಿ ಹಿಟ್ಟಿಗೆ ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ ಇಡಿ.

ಬೇಕಿರುವ ಸಾಮಗ್ರಿ

ಬೇಯಿಸಿ ಸಿಪ್ಪೆ ತೆಗೆದ ಬಟಾಟೆ (ಆಲೂಗೆಡ್ಡೆ) - ೪, ಗೋಧಿ ಹಿಟ್ಟು - ೨ ಕಪ್, ಹಸಿ ಶುಂಠಿ - ಸಣ್ಣ ತುಂಡು, ಇಂಗು - ಚಿಟಿಕೆ, ಜೀರಿಗೆ ೧ ಚಮಚ, ಹಸಿಮೆಣಸಿನ ಕಾಯಿ ಪೇಸ್ಟ್ - ಬೇಕಾಗುವಷ್ಟು, ಕತ್ತರಿಸಿದ ಕೊತ್ತಂಬರಿ ಸೊಪ್ಪು- ೩ ಚಮಚ, ಎಣ್ಣೆ - ಅರ್ಧ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ಸ್ಟೇಟಸ್ ಕತೆಗಳು (ಭಾಗ ೧೦೨೪)- ಕಾಡಿತು

ಅವನು ಒಬ್ಬ ದಾರಿಯಲ್ಲಿ ಸಿಕ್ತಾನೆ, ಅವನಿಗೆ ಅನ್ನಿಸಿದನ್ನು ಮಾತನಾಡುತ್ತಾನೆ. ಎಲ್ಲದಕ್ಕೂ ಅರ್ಥಗಳನ್ನು ಹುಡುಕೋಕೆ ಆಗೋದಿಲ್ಲ. ಕೆಲವೊಂದು ಅರ್ಥಗಳನ್ನು ಹುಡುಕಿದರೆ ಬದುಕು ಅದ್ಭುತವಾಗಿರುತ್ತೆ. ಹಾಗೆ ಅವನನ್ನ ಕಾಡಿಸಬೇಕು ಅಂತ ಅನ್ನಿಸ್ತು. ಆ ಮತ್ತೆ ಈಗ ಹೇಗಿದ್ದೀರಿ? ಅಂತ ಕೇಳಿದೆ.

Image

ಇಂತವರ ಇತಿಹಾಸ ನಮಗೆಲ್ಲೂ ಸಿಗಲೇ ಇಲ್ಲವಲ್ಲ....!

“ನಾನು ಕಲ್ಕತ್ತಾ ಜೈಲಿನಿಂದ ಅಂಡಮಾನ್ ತಲುಪಿದಾಗ ನಮ್ಮನ್ನು ಉಳಿದ ರಾಜಕೀಯ  ಕೈದಿಗಳೊಂದಿಗೆ ಕತ್ತಲ ಕೋಣೆಯೊಳಗೆ ತಳ್ಳಲಾಯಿತು. ಅಲ್ಲಿ ಚಾಪೆ ಕಂಬಳಿಗಳಂತಹ ಯಾವುದೇ ವಸ್ತುಗಳು ಕಾಣುತ್ತಿರಲಿಲ್ಲ. ಇಲ್ಲಿ ನೀರಿನ ನಡುವೆ  ಅಜ್ಞಾತ ದ್ವೀಪದಲ್ಲಿ ಕೊಳೆಯುತ್ತಿದ್ದರೆ ದೇಶಕ್ಕೆ ಸ್ವಾತಂತ್ರ್ಯ ಹೇಗೆ ದೊರಕೀತು..? ಎಂಬ ಚಿಂತೆ ಕಂಬಳಿ ಚಾಪೆಯ ಚಿಂತೆಯನ್ನು  ದೂರ ಮಾಡಿತ್ತು.

Image