ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಡೊನಾಲ್ಡ್ ಟ್ರಂಪ್‌ ಬಾಲಿಶ ಹೇಳಿಕೆಗಳು ಇನ್ನಾದರೂ ನಿಲ್ಲಲಿ

ಜಮ್ಮು-ಕಾಶ್ಮೀರದ ಪಹಲ್ಗಾಂ ಭಯೋತ್ಪಾದಕ ದಾಳಿಯ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಆರಂಭವಾಗಿದ್ದ ಯುದ್ಧವನ್ನು ಅಂತ್ಯಗೊಳಿಸಿದ್ದೇ ನಾನು ಎಂದು ಒಂದಲ್ಲ, ಎರಡಲ್ಲ ಬರೋಬ್ಬರಿ ೧೫ ಬಾರಿ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈಗ ಏಕಾಏಕಿ ಉಲ್ಟಾ ಹೊಡೆದಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಎರಡೂ ದೇಶಗಳೇ ಈ ಸಂಘರ್ಷವನ್ನು ಬಗೆಹರಿಸಿಕೊಂಡಿವೆ ಎಂಬುದು ಅವರ ಹೊಸ ಹೇಳಿಕೆ.

Image

ಪರ ಭಾಷೆಗಳ ಗೀತೆಗಳ ಅರ್ಧಂಬರ್ಧ ಅನುವಾದ / ಭಾವಾನುವಾದ - ಭಾಗ 29

255) ಮೂಲ ಹಾಡು : ಟಿಪ ಟಿಪ ಬರಸಾ ಪಾನೀ

ನನ್ನ ಅನುವಾದ : 
ಟಪ ಟಪ ಬೀಳಲು ಹನಿ ತಾನು
ನೀರಿಗೂ ಬಿದ್ದಿತು ಬೆಂಕಿ
ಹೃದಯಕೆ ಬಿದ್ದಿತು ಬೆಂಕಿಯು ನೋಡು
ಕಾಡಿತು ನಿನ್ನಯ ನೆನಪು

256) ಮೂಲ ಹಾಡು : ಮುಹಬ್ಬತ್ ಕೀ ನಹೀ

ನನ್ನ ಅನುವಾದ : 
ನಾ ಪ್ರೀತಿ ಮಾಡಲಿಲ್ಲ
ಪ್ರೀತಿ ಆಗೇ ಬಿಡ್ತು

257) ಮೂಲ ಹಾಡು : ತುಮ ಬಿನ್ ಜೀವನ್ ಕೈಸೇ ಬೀತಾ

ನನ್ನ ಅನುವಾದ :
ನಿನ್ನ ವಿನಾ ಕಳೆಯಿತು ಹೇಗೆನ್ನ  ಬಾಳು
ಎನ್ನ ಹೃದಯವ ನೀ ಕೇಳು

258) ಮೂಲ ಹಾಡು : ಆಸಮಾಂ ಪೆ ಹೈ ಖುದಾ

ನನ್ನ ಅನುವಾದ : 
ಬಾನಿನಲ್ಲಿ ದೇವನು
ಭೂಮಿ ಮೇಲೆ ನಾವ್ಗಳು
ಆತ ಇತ್ತೀಚೆಗೆ ಈ ಕಡೆ
ಕಡಿಮೆ ನೋಡುವ

ಸ್ಟೇಟಸ್ ಕತೆಗಳು (ಭಾಗ ೧೩೫೯) - ಕೇಳಿ

ಅಪ್ಪ‌ ಅಮ್ಮ ನೀವಿಬ್ಬರೂ ಯಾಕೆ ನನ್ನನ್ನ ಇನ್ನೊಬ್ಬರ ಹಾಗೆ ಇರೋದ್ದಕ್ಕೆ ಬಯಸ್ತೀರಾ? ನಾನು‌ ನಾನಾಗಿರೋದು ಯಾವಾಗ? ಅಂಕ ತೆಗೆಯುವುದಕ್ಕೆ ವೇದಿಕೆಯ ಮೇಲೆ ನಿಂತು ಮಿಂಚುವುದಕ್ಕೆ ಹೆಚ್ಚು ಹೆಚ್ಚು ಪ್ರಶಸ್ತಿಗಳನ್ನ ಮನೆಗೆ ತರುವುದಕ್ಕೆ ಹೀಗೆ ನಿಮ್ಮ ಪಟ್ಟಿಗಳು ಬೆಳೀತಾನೆ ಹೋಗ್ತಾ ಇವೆ. ಎಲ್ಲವನ್ನು ನನ್ನೊಬ್ಬನಿಂದ ಮಾಡಿಸುವುದಕ್ಕೆ ಪ್ರಯತ್ನ ಯಾಕೆ?

Image

ಶಿರಾ ತಾಲೂಕಿನ ಸುಂದರ ತಾಣಗಳು

‘ಶಿರಾ' ತುಮಕೂರಿನಿಂದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ 50 ಕಿ.ಮೀ. ದೂರದಲ್ಲಿ ಪಶ್ಚಿಮದಲ್ಲಿದೆ. ಇದು ತಾಲ್ಲೂಕು ಕೇಂದ್ರವಾಗಿದೆ. ರತ್ನಗಿರಿಯ ರಂಗಪ್ಪನಾಯಕನಿಂದ ಈ ಊರು ಹಾಗೂ ಕೋಟೆಗಳು ಕಟ್ಟಲ್ಪಟ್ಟವೆಂದು ತಿಳಿದು ಬರುತ್ತದೆ. 1686ರಲ್ಲಿ ಮೊಗಲರ ವಶವಾದಾಗ ಮೊಗಲರ ಸೈನ್ಯದ ಕೇಂದ್ರವಾಗಿದ್ದಿತ್ತು.

Image

ಪ್ಯಾರಾನಾರ್ಮಲ್

ಪುಸ್ತಕದ ಲೇಖಕ/ಕವಿಯ ಹೆಸರು
ಗುರುರಾಜ ಕೋಡ್ಕಣಿ, ಯಲ್ಲಾಪುರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೧೭೫.೦೦, ಮುದ್ರಣ : ೨೦೨೫

ಕಥೆಗಾರ ಗುರುರಾಜ ಕೋಡ್ಕಣಿ ಬರೆದ ‘ಪ್ಯಾರಾನಾರ್ಮಲ್’ ಎನ್ನುವ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ತುಂಬ ಹಿಂದಿನಿಂದಲೂ ಅತಿಮಾನುಷತೆಯ ಬಗ್ಗೆ ಕತೆಗಳು ಇದ್ದವಾದರೂ ಆಗ ಸರಿಯಾದ ಸಾಕ್ಷಿಗಳಿಲ್ಲದೇ ಅವೆಲ್ಲವೂ ಕೇವಲ ಕತೆಗಳಾಗಿ ಉಳಿದು ಹೋಗಿದ್ದವು. ಆದರೆ ಈಗ ಹಾಗಲ್ಲ, ಪ್ಯಾರಾನಾರ್ಮಲ್ ಕ್ಷೇತ್ರವೆನ್ನುವುದು ಸಾಕಷ್ಟು ಬೆಳವಣಿಗೆ ಕಂಡಿದೆ.

ಹುಚ್ಚು ಯೋಚನೆ ಮತ್ತು ಯೋಜನೆ

ಕಾವೇರಿ ಆರತಿ ಮತ್ತು ಕೆಆರ್‌ಎಸ್ ಜಲಾಶಯದ ಬಳಿ ಬೃಹತ್ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಿಸುವ ಸರ್ಕಾರದ ತೀರ್ಮಾನ. ಯಾಕ್ರೀ ಸ್ವಾಮಿ, ನದಿಯನ್ನು ಇಟ್ಕೊಂಡು ರಾಜಕೀಯನೋ, ದುಡ್ಡು ಮಾಡಲಿಕ್ಕೋ, ಪ್ರಚಾರ ಪಡೆಯಲಿಕ್ಕೋ ಪ್ರಯತ್ನ ಪಡ್ತೀರಿ. ಅದೊಂದು ಜೀವ ಜಲ. ಅದನ್ನು ಅದರ ಪಾಡಿಗೆ ಬಿಟ್ಟು ಬಿಡಿ.

Image