ಕವನಗಳು

ಲೇಖಕರು: sowjanyahp
ವಿಧ: ಕವನ
June 03, 2020
ನಿಸಾರ್ ಸತ್ತ ಸುದ್ದಿ,  ಮೀಡಿಯಾಗಳಲ್ಲಿ  ಬ್ರೇಕಿಂಗ್ ನ್ಯೂಸ್ ಆಗಿ  ತೇಲಿ ಬಂದಾಗ,  ವಿಶ್ವದೆಲ್ಲೆಡೆ ಪಾಂಡೆಮಿಕ್ ಭೀತಿ, ದೇಶದೆಲ್ಲೆಡೆ ಲಾಕ್ಡೌನ್ ನೀತಿ!.   ಮೀಡಿಯಾಗಳ ಕರೋನಾ ಸುದ್ದಿಯ  ‘ನಿತ್ಯೋತ್ಸವ’ದಲ್ಲಿ, 'ರಾಮನ್ ಸತ್ತ ಸುದ್ದಿ'ಯನ್ನು  ಕವಿತೆಯಾಗಿಸಿದ ಕವಿಯ ಸಾವು,   ಒಂದು ಬ್ರೇಕಿಂಗ್ ನ್ಯೂಸ್ ಬೈಟ್!   ಎಷ್ಟೋ ವಾರ್ತಾ ವಾಚಕರಿಗೆ  ಅವರ ಬಗ್ಗೆ ಅರಿವಿಲ್ಲ, ವಾಹಿನಿಗಳ ಮುಖ್ಯಸ್ಥರಿಗೆ  ಅವರ ಸಾಹಿತ್ಯ ಕೃಷಿಯ ತಿಳಿವಿಲ್ಲ, ಒಂದು ವಿಶೇಷ ಕಾರ್ಯಕ್ರಮ ಇಲ್ಲ.  ಅವರ ಸಾಹಿತ್ಯದ ಮಹತ್ವ …
ಲೇಖಕರು: karunakaranid54
ವಿಧ: ಕವನ
May 16, 2020
ಬುದ್ಧಿವಂತಿಕೆಯೆ ನಮ್ಮೀ ಜಗಕೆ ಎಂದಿಗು ದೊಡ್ಡ ತೊಂದರೆ ದಡ್ಡರೆ ಉಳಿದರು ಲೋಕದಿ ನೆಮ್ಮದಿ ಬುದ್ಧಿಯೆ ಮನುಜಗೆ ಬೆನ್ನ ಬರೆ   ಯಾಕೆ ಬೇಕಿತ್ತು ಐನ್ ಸ್ಟೈನನಿಗೆ  ಕಾಣದ ಅಣುಗಳ ಸಹವಾಸ? ಕಲಾಶ್ನಿಕೋವ್ ರೈಫಲು ಮಾಡಿದ ಕೊಡಬೇಕಿತ್ತವನಿಗೆ ಸೆರೆವಾಸ   ಕರೆಂಟು ಇಲ್ಲದ ಲೋಕದ ನೆಮ್ಮದಿ  ಫೆರಡೇ ಬಂದು ಕೆಡಿಸಿದನು ಹಗಲು ದುಡಿದು ಕತ್ತಲೆಗೊಂದಾಗುವ ದಂಪತಿಗಳನು ಬಿಡಿಸಿದನು   ರೈಲುಗಾಡಿ ಅಂದು ಓಡದೆ ಇದ್ದರು ಬದುಕಿನ ಬಂಡಿ ಓಡಿತ್ತು ಅದಕೂ ಮಿಗಿಲಾದುದೆ ಬೇಕೆಂದರೆ ಎತ್ತಿನ ಗಾಡಿಯೆ ಸಾಕಿತ್ತು   ಬಸ್ಸು…
ವಿಧ: ಕವನ
May 15, 2020
ನನ್ನ ಒಲವಿನ ಇನಿಯನೆ  ನಿನ್ನ ಸಭ್ಯತೆ, ಸದ್ಗುಣಗಳ  ಎಷ್ಟು ವರ್ಣಿಸಿದರೂ ಸಾಲದು  ನನ್ನ ಪದಗಳ ಅಕ್ಷರ ಮಾಲೆ. 😊 ರಾತ್ರಿಯಲ್ಲಿ ಸಾವಿರ ಚುಕ್ಕಿಗಳ ನಡುವೆ  ಚಂದ್ರನೇ ಅತೀಯಾಗಿ ಪ್ರಕಾಶಿಸಿದಂತೆ  ನೂರಾರು ಸ್ನೇಹಿತರ ನಡುವೆ  ನೀನೆ ಅತಿಯಾಗಿ ಆಕರ್ಷಿಸಿದೆ. 😍 ನಿನ್ನ  ಹೃದಯದ ಸರೋವರದ ಜೊತೆ  ನನ್ನ ಭಾವನೆಗಳ ಚಿನುಮೆ  ಹರಿಸಲು  ಬಂದಾಗ  ಶಾಂತಸಾಗರದಷ್ಟೇ ನಿಮ್ಮ ಮನ ಮೌನವಾಗಿರುದೇಕೆ !?  😌     
ಲೇಖಕರು: Nagendra Kumar K S
ವಿಧ: ಕವನ
April 18, 2020
ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹಂಬಲದಿ|| ಮೈಮರೆಯಿತು ಮಥುರೆ ಕತ್ತಲ ಇರುಳಿನಲಿ ಬಂದಿಳಿಯಿತು ದೇವ ಕುಂಜರ ಸದ್ದಿಲ್ಲದೇ ಮಾಯೆ ಹೊರಡಿಸಿತು ಗೋಕುಲಕೆ ವಸುದೇವನ ನಂದನನ ಭೋರ್ಗರೆಯುವ ಯಮುನೆಯ ಹೊರಳಿನಲಿ ಹೊರಟಿತು ಗೋಕುಲಕೆ ಮಮತಾಮಯಿ ಯಶೋಧೆಯ ತಾಯ ಮಡಿಲು ತುಂಬಿತು ವಸುದೇವನ ಕಂದನು…
ಲೇಖಕರು: GVK SHEKAR
ವಿಧ: ಕವನ
April 17, 2020
ನಿನ್ನ ಎಲ್ಲಾ ಓಲವೂ ಮಳೆಯಾಗಿ ಸುರಿದು, ನನ್ನ ಎದೆಯ ಮರಳು ಗಾಡಿನಲ್ಲಿ ಒಂದೇ ಒಂದು ಮಲ್ಲಿಗೆಯ ಹೂವನ್ನು ಅರಳಿಸಲಿ. ನನ್ನ ಹೃದಯವನ್ನು ಅಡವಿಟ್ಟುಕೊಂಡು ಸ್ವಲ್ಪ. ಪ್ರೀತಿಯನ್ನು ಕಡ ಕೊಡುವೆಯಾ.. ನನ್ನ ಎದೆಯ ಗೂಡಿನಲ್ಲಿ ನಡೆದಾಡುತ್ತಿವೆ ನಿನ್ನ ನೆನಪುಗಳು ಸ್ವಲ್ಪ ಮೆಲ್ಲನೆ ನಡೆ ನೆನಪುಗಳ ಒಟ್ಟಿಗೆ ನಾನು ಇದ್ದೇನೆ. ✍️ (ಜಿ.ವಿ.ಕೆ) ಶೇಖರ ಎಸ್.ಎಸ್.ಎಲ್.ಸಿ
ಲೇಖಕರು: Shashikant P Desai
ವಿಧ: ಕವನ
April 17, 2020
ಕನಸುಗಳ ಕಾಣುತ್ತ ತೆರೆದ ಕಣ್ಣುಗಳಿಂದ ಛಾವಣಿಯ ದಿಟ್ಟಿಸುತ್ತ ಮಲಗಿದವನಿಗೆ ಬೆಳಕು ಹರಿದದ್ದು ಗೊತ್ತಾಗಲಿಲ್ಲ, ಕೆಂಗಣ್ಣಿನಿಂದ ಕೆಲಸಕ್ಕೆ ಹೋದವನಿಗೆ ನನಸಿಲ್ಲನುಭವಿಸುವನೇಕ ಅನುಭವಗಳೇ ಮುದ ನೀಡಿದವು, ಮಾಯಾ ಲೋಕದ ಈಡೇರದ ಕನಸುಗಳಿಗಿಂತ.
ಲೇಖಕರು: Nagendra Kumar K S
ವಿಧ: ಕವನ
April 12, 2020
ಇಂದೇಕೆ ಹೂವೇ ನಿನ್ನ ನಗುವು ಉಮ್ಮಳಿಸಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಗಾಳಿಯಲಿಂದೇಕೆ ಸುಗಂಧ ಪಸರಿಸಿದೆ ಹೆಚ್ಚಾಗಿ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ಇಂದೇಕೆ ಮನವರಳಿದೆ ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ ರಾಮ ಬರುವೆನೆಂದೇ? ರಾಮ ಬರುವೆನೆಂದೇ? ವರುಷಗಳು ಕಾದಿಹೆನು ಅವನ ಕಾಣ್ವ ಭರವಸೆಯು ಹೆಚ್ಚಾಗಿದೆ ರಾಮ ಬರುವೆನೆಂದು! ರಾಮ ಬರುವೆನೆಂದು! ಕಾದಿಹೆನು ಪೂಜೆಗೆ ಅನವರತ ಕಾತರವಿದೆ ಅವನ ಬರುವಿಕೆಗೆ ರಾಮ ಬರುವನಿಂದು! ರಾಮ ಬರುವನಿಂದು!
ಲೇಖಕರು: Nagendra Kumar K S
ವಿಧ: ಕವನ
April 12, 2020
ಎಂದು ಕಾಂಬೆನೋ! ಲಕ್ಷ್ಮಣಾ ಆ ಮಾತೃ ಹೃದಯಿಯಾ! ಎಂದು ಕಾಂಬೆನೋ!।। ಅವಳ ಹೆಸರು ಶಬರಿಯಂತೆ ಮಾತಂಗ ಮುನಿಯ ಶಿಷ್ಯಳಂತೆ ಈ ರಾಮನ ಕಾಣ್ವ ತವಕವಂತೆ ।। ಆಶ್ರಮದಿ ಅವಳು ತಾಪಸಿಯಂತೆ ಮಮತೆಯಲಿ ಅವಳು ತಾಯಿಯಂತೆ ರಾಮನಾಮವೇ ಅವಳ ಉಸಿರಂತೆ ।। ಹಲವು ಬಗೆಯ ಹೂಗಳ ಕೊಯ್ವಳಂತೆ ಕಚ್ಚಿ ರುಚಿ ರುಚಿ ಹಣ್ಣುಗಳ ಇಟ್ಟಿಹಳಂತೆ ಈ ರಾಮನ ದಾರಿಯನೇ ನೋಡ್ವಳಂತೆ ।। ಈ ರಾಮನ ನೋಡಲು ಕಾತುರವಂತೆ ಈ ರಾಮನ ಪೂಜಿಸಲು ಕಾದಿಹಳಂತೆ ಹನುಮನ ಕಡೆ ದಾರಿ ತೋರ್ವಳಂತೆ ।।
ಲೇಖಕರು: karunakaranid54
ವಿಧ: ಕವನ
April 09, 2020
ಗುಬ್ಬಿ ಗುಬ್ಬಿ ಕಾಡು ಗುಬ್ಬಿ ಗೂಡು ಕಟ್ಟಿತು ಕಾಡು ನಾಡು ಬೆಸೆದ ಪಾಡು ಹಾಡು ಹುಟ್ಟಿತು ದೊಡ್ಡ ಸಣ್ಣ ಮರವ ಸುತ್ತಿ ಶಾಲೆ ನಡೆಯಿತು ಜನುಮ ಕೊಟ್ಟ ಕಾಡೆ ಅದಕೆ ಗುರುವು ಆಯಿತು ಪುರ್ರ ಪುರ್ರ ರೆಕ್ಕೆಬಡಿದು ದಾರಿ ನಡೆಯಿತು ಚೀಂವ್ ಚೀಂವ್ ಕೂಗಿ ಕೂಗಿ ಹರಟೆಹೊಡೆಯಿತು. ನೂರು ಬಾರಿ ಇಟ್ಟು ಅಳಿಸಿ ಬರಹ ತಿದ್ದಿತು ಕಾಡು ಕಲಿಸಿಕೊಟ್ಟ ಕಲಿಕೆ ಮಂತ್ರವಾಯಿತು. ಬದುಕ ಬರಹ ಕಲಿತ ಗುಬ್ಬಿ ಗೂಡು ಕಟ್ಟಿತು ಗೂಡಿನೊಳಗೆ ಅಂದದೆರಡು ಕವಿತೆ ಬರೆಯಿತು ಕಾಲ ಬೆಳೆದು ದೇವನೊಲಿದು ಜೀವ ಬಳೆಯಿತು ಪ್ರಾಸ ಛಂದ…
ಲೇಖಕರು: karunakaranid54
ವಿಧ: ಕವನ
April 08, 2020
ಹುಡುಗಿಯರೇ ನಗುವ ಹುಡುಗರ ನೋಡಿ ನಂಬಬೇಡಿ ನಗುನಗುತ್ತಲೆ ಕಟ್ಟುವರಿವರು ತಾಳಿ ಬೇಡಿ ಬೇಡಿ.