ಕವನಗಳು

ವಿಧ: ಕವನ
March 21, 2024
ನೋಡಿದಿರೇನು ನದಿಯ ಒಡಲು ಬರಿದಾಗಿ ಹೋಗಿದೆ ಮಡಿಲು ಭೋರ್ಗರೆಯಬೇಕಿತ್ತು ಹಾಲ್ಗಡಲು ಮುಂದೆ ಸಾಗಿ ಸೇರಲು ಕಡಲು   ಸ್ನಾನ ಪಾನಾದಿಗಳಿಗೆ ಬೇಕು ನೀರು ವನ್ಯಜೀವಿಗಳಿಗಂತೂ ಉಳಿಸಲಿಲ್ಲ ಚೂರು ಸುತ್ತ ಮಾನವನದ್ದೇ ಕಾರುಬಾರು ಹೀಗೆ ಸಾಗಿದರೆ ಬಿಡಬೇಕಾದೀತು ಊರು   ದೈವವನು ನೀವು ಜರಿಯುತ ಮೌಲ್ಯಗಳ ಸದಾ ಮರೆಯುತ ಕುಡಿದು ಕುಣಿದು ನಲಿಯುತ ಸೋದರತೆಯ ತೊರೆದು ಬಡಿದಾಡುತ   ಆತ್ಮಸಾಕ್ಷಿ ಯನ್ನು ತೊರೆದು ಕ್ರೂರ ಕೃತ್ಯಗಳಲ್ಲಿ ಮೆರೆದು ಪ್ರಾಣಿ ಪಕ್ಷಿಗಳನ್ನು ಇರಿದು ಸತ್ಯ ಅಸತ್ಯಗಳ ಜರಿದು   ಸಾಗಿದರಾಯಿತೆ…
ವಿಧ: ಕವನ
March 20, 2024
ಮುನಿದಳೇಕೆ ಅರಿಯದಾದೆ ನಲ್ಲೆ ಇಂದು ಈತರ ದಟ್ಟ ಮುಗಿಲ ಪರದೆಯೊಳಗೆ ಉಳಿದ ಹಾಗೆ ಚಂದಿರ   ಏನು ಮರೆತೆ ಮೊಗವ ತಿರುವೆ ನೆನಪು ಮನಕೆ ಬಾರದೆ ರಮಿಸಲೆಂತು ಕಾಂತೆ ಇವಳ ಹಾದಿ ಈಗ ತೋಚದೇ   ಮೊನ್ನೆ ತಾನೆ ಜನ್ಮ ದಿನಕೆ ಬೆರಳಿಗಿಟ್ಟೆ ಉಂಗುರ ಮದುವೆ ದಿನವು ದೂರವಿಹುದೆ ಮತ್ತೆ ಏಕೆ ನಿಷ್ಟುರ   ಮಲ್ಲೆ ಹೂವ ಮಾಲೆ ತರಲು ನಡೆದೆ ನಾನು ಕ್ಷಣದಲಿ ಹೋಗಿ ತಂದು ತುರುಬಲಿಡಲು ಬಿರಿದ ಕಮಲ ಮೊಗದಲಿ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 19, 2024
ಮನದೊಳಗೆ ತುಂಬಿಸಿರುವೆ ಹರೇ ರಾಮ ನಾಮ ತನುವೊಳಗೆ ಹರಡಿಸಿರುವೆ ಹರೇ  ರಾಮ ನಾಮ   ನೆಲದೊಳಗೆ ಹಬ್ಬಿಸಿರುವೆ ಹರೇ ರಾಮ ನಾಮ ಗಿಡದೊಳಗೆ ಉಳಿಸಿರುವೆ ಹರೇ ರಾಮ ನಾಮ   ನಡೆಯೊಳಗೆ ಸೇರಿಸಿರುವೆ ಹರೇ ರಾಮ ನಾಮ ನುಡಿಯೊಳಗೆ ಬೆರೆಸಿರುವೆ ಹರೇ ರಾಮ ನಾಮ   ಜ್ಞಾನದೊಳಗೆ ಇರಿಸಿರುವೆ ಹರೇ ರಾಮ ನಾಮ ಪ್ರಾಣದೊಳಗೆ ಕೂರಿಸಿರುವೆ ಹರೇ ರಾಮ ನಾಮ *** ಬಾರೆಲೆ ಹಕ್ಕಿಯೆ ಹಾರುತ ಹಾರುತ ಬಾರೆಲೆ ಹಕ್ಕಿಯೆ ಬಣ್ಣದ ಹಕ್ಕಿಯೆ ಚೆಂದದ ಹಕ್ಕಿಯೆ ಬಾನೊಳು ರೆಕ್ಕೆಯ ಬಿಚ್ಚುತ ಹಾರುವೆ ಸೂರ್ಯನ ಕಡೆಗೋ ಹಾರುತ ಹೋಗುವೆ  …
ವಿಧ: ಕವನ
March 18, 2024
ದೇವ ಕೊಟ್ಟ ನಿನ್ನ ನಗುವ ಹಂಚಿ ಹೋದೆ ಎಲ್ಲೆಡೆ ಕೊನೆಗೆ ಬಿಟ್ಟು ನೀನು ಅಳುವ ಉಳಿಸಿ ಹೋದೆ ನಮ್ಮೆಡೆ   ಗಾಢ ನಿದ್ರೆಯಲ್ಲಿ ಜಾರಿ ಮಲಗಿದ್ದೆ ಕೆ ಸುಮ್ಮನೆ ಕೂಗಿ ಅತ್ತ ರೂನು ಬಾರಿ ಏಳದಾದೆ ಏಕೆ ಗಮ್ಮನೆ   ಬಿಟ್ಟು ಹೋಗುವಂತ ಕೆಲಸ ಅಂತದೇನು ಉಳಿದಿತ್ತು ಬೆಟ್ಟು ಮಾಡಿ ತಿಳಿಸಿದ್ರೆ ಅರಸ ಕ್ಷಣದಲ್ಲೇನೇ ಮುಗಿತಿತ್ತು   ಅಪ್ಪಿಕೊಂಡು ಜನಕೆ ನೀನು ಹಂಚಿ ಹೋದೆ ಪ್ರೀತಿಯ ತಪ್ಪಿ ಕೂಡ ಜನರು ನಿನ್ನ ಮರೆವು ದುಂಟೆ ನೀತಿಯ.  (ಪುನೀತ್ ರಾಜಕುಮಾರ್ ಜನ್ಮದಿನದ ನೆನಪಿನಲ್ಲಿ) -ಕೆ. ವಾಣಿ, ಚನ್ನರಾಯಪಟ್ಟಣ…
ವಿಧ: ಕವನ
March 17, 2024
ಜಗದ ಒಡೆಯನೆ ರಾಮಚಂದಿರ ಸಿದ್ಧಗೊಂಡಿದೆ ರಾಮಮಂದಿರ ಪ್ರಾಣ ಪ್ರತಿಷ್ಠೆಯ ಕ್ಷಣವು ಸುಂದರ ನೋಡಿ ಧನ್ಯತೆ ಪಡೆವ ಕಾತರ   ನೆಲೆಸಿ ಭಕ್ತರ ಹೃದಯ ಮಂದಿರ ಕೇಳಿ ಬರುತಿದೆ ನಾಮದಿಂಚರ ರಾಮ ನಾಮದ ಘೋಷ ಸುಸ್ವರ ಮೇರೆ ಮೀರಿದ ಪುಳಕದಾತುರ   ಎನಿತು ಪುಣ್ಯವ ಪಡೆದ ದಶರಥ ಆಯ್ತು ಪಾವನ ನಮ್ಮ ಭಾರತ ನಾಮ ನುಡಿಯಲಿ ಮನವು ಸಂತತ ನಿನ್ನ ಸೇವೆಗೆ ಜನ್ಮ ಸೀಮಿತ   ಮಾತೆ ಸೀತೆಯ ಕದ್ದ ರಾವಣ ಅವನ ಅಂತ್ಯಕೆ ಆಯ್ತು ಕಾರಣ ಕಳುಹಿ ಲಂಕೆಗೆ ವೀರ ಹನುಮನ ಮಾಡಿ ಕಡಲಿಗೆ ಸೇತು ಬಂಧನ   ಜೊತೆಯಲಿದ್ದನು ಅನುಜ ಲಕ್ಷ್ನಣ ಲಂಕೆ…
ವಿಧ: ಕವನ
March 16, 2024
ಬೆವರಿನ ಹನಿಗಳು ಮೂಡಿತೆ ತನುವಲಿ ಇನಿಯನ ಸರಸದ ದೆಸೆಯಿಂದ ನಿನ್ನಯ ಸುಂದರ ನಗುವನು ನೋಡುಲು ಮನದಲಿ ಉಕ್ಕಿದೆ ಆನಂದ   ಗಿಡದಲಿ ಅರಳಿದ ಹೂವಿನ ಸೊಬಗಿದು ನೋಡಲು ಕಣ್ಣಿಗೆ ಬಲು ಚಂದ ಹೂವಿನ ಎದೆಯಲಿ ತುಂಬಿದ ಜೇನಿದೆ ದುಂಬಿಗೆ ಔತಣ ಮಕರಂದ   ಘಮಘಮ ಪರಿಮಳ ಹೊಮ್ಮುತಲಿರುವುದು ಎಲ್ಲರ ತನ್ನೆಡೆ ಸೆಳೆಯುತಿದೆ ಸಂತಸ ಸಂಭ್ರಮಗೊಂಡಿಹ ಮನವಿದು ಮೌನದೆ ಗಾನವ ಹಾಡುತಿದೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ 
ವಿಧ: ಕವನ
March 15, 2024
ಹಳದಿಯ ಕದವನು ಮೆಲ್ಲಗೆ ಸರಿಸುತ ಇಣುಕುವ ಸುಂದರಿ ನೀನ್ಯಾರೆ ನಲ್ಲನು ಬರುವನೆ ಸೇರಲು ನಿನ್ನನು ಲಜ್ಜೆಯ ತೊರೆಯುತ ನೀ ಬಾರೆ   ಬಿರಿದಿಹ ಕ್ಷಣದಲೆ ಸರಸದ ಬಯಕೆಯೆ ಏತಕೆ ಈತರ ವೈಯಾರ ಕೊಂಚವೆ ಸೈರಿಸು ಆತುರ ಸಲ್ಲದು ಅರಸುತ ಬರುವನು ಸರದಾರ   ನೆತ್ತರ ಕೆಂಪಿನ ಬಣ್ಣದ ಚೆಲುವೆಯೆ ಚಂದಕೆ ಸೋತೆನು ವೈಯಾರಿ ನಿನ್ನಲಿ ತುಂಬಿದ ಜೇನನು ಹೀರಲು ದುಂಬಿಯು ಬರುವುದು ಬಾಯಾರಿ   ಹಸಿರಿನ ಚಂದದ ಗಿಡದಲಿ ಅರಳಿದೆ ಸುಂದರ ಹೂವಿದು ದಾಸ್ವಾಳ ಹೂವಿನ ಎದೆಯಲಿ ಮೆಲ್ಲಗೆ ಇಣುಕಿದೆ ಕೆಂಪಿನ ಬಣ್ಣದ ಮಕರಂದ|| -ಪೆರ್ಮುಖ…
ವಿಧ: ಕವನ
March 14, 2024
  ರಾಜಕೀಯ ಹೊಂದಾಣಿಕೆ  ಈ ರಾಜಕೀಯದಲ್ಲಿ ಕಾರ್ಯಾಭಿಲಾಶೆಗೆ ಒಂದಾದವರು- ಎಂದೂ ಹಾಲೂ-ಜೇನಾಗಿ ಬೆರೆಯದ ಚಾಣಾಕ್ಷರು...   ಅವರು ಬೆರೆತದ್ದು ನೀರು-ಸೀಮೇಎಣ್ಣೆಯಂತೆ; ಬೇಡವೆನಿಸಿದಾಗ ಶೋಧಿಸಿ ಬೇರೆಯಾಗುವ ಬುದ್ಧಿವಂತರು! *** ಪ್ರಜಾಪ್ರಭುತ್ವದ ಮೌಲ್ಯ  ನಮ್ಮದು ಮೌಲ್ಯಯುತ ಪ್ರಜಾಪ್ರಭುತ್ವ- ಇಲ್ಲಿ ಬರೀ ಅಧಿಕಾರಕಾಗಿ ಸಾಫ್ಟ್ ಕಚ್ಛಾಟ...   ಮಿಲಿಟರೀ ಆಡಳಿತದ ರಾಷ್ಟ್ರಗಳನು ನೋಡಿ- ಅಲ್ಲಿ ಅಧಿಕಾರಕಾಗಿ ಕ್ರೂರ ಕೊಚ್ಛಾಟ! *** ಭೂತ-ಪ್ರೇತ.... ಆ ಎಳೆ ಮಗುವನ್ನು ಕರುಣೆಯಿಲ್ಲದೆ, ಕೊಂದದ್ದು ಆ…
ವಿಧ: ಕವನ
March 13, 2024
ತೇಗುತಲಿರುವಗೆ ಮೃಷ್ಟಾನ್ನ ಹಸಿದವಗಿಲ್ಲ ಭಿಕ್ಷಾನ್ನ ಗಳಿಕೆ ಸಿರಿವಂತರಿಗೆ  ಸೋರದ ಮಾಳಿಗೆ   ತೂತುಬಿದ್ದ ಗುಡಿಸಲು ಮಳೆಗೆ ಸೋರಲು  ದುರ್ಬಲಗೆ ಚಳಿ  ಸಿರಿವಂತಗೆ ಓಕುಳಿ   ದೀಪವಿರದೆ ಕತ್ತಲು ಕಾಣದ ಕಣ್ಣೀರು ಮಿನುಗುವ ಬೆಳಕು ಕಿರುಚಾಟ ಮೋಜು   ದೇಹದ ಕಲೆಗಳು ಜೀತದ ಕುರುಹು ಒಡವೆ ಆಭರಣ ಒಡೆಯನ ಮೆರಗು..   -ನಿರಂಜನ ಕೆ ನಾಯಕ, ಮಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
March 12, 2024
ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ   ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ?   ಕೃಷ್ಣನು ಜೀಕಲು ಬಯಸಿಹನೇನು ಚಂದಿರನಾದನೆ ಉಯ್ಯಾಲೆ ಲೋಕದ ಸೂತ್ರವ ಹಿಡಿದಿಹ ದೇವನು ಕಾಣುವುದೆಲ್ಲವು ಹರಿಲೀಲೆ||   -ಪೆರ್ಮುಖ ಸುಬ್ರಹ್ಮಣ್ಯ ಭಟ್ (ಚಿತ್ರ ಶ್ರೀ ಸತೀಶ್ ಎಲೆಸಾರರವರ ವಾಲ್ನಿಂದ)