ಇತ್ತೀಚಿನ ಬರಹಗಳು

ಆಕಾಶದಲ್ಲಿ ರೋಲ್ ಮಾಡುವ ನೀಲಕಂಠ
Tuesday, July 1, 2025 - 10:54

ಒಂದು ದಿನ ಬಸ್‌ ನಲ್ಲಿ ಪ್ರಯಾಣ ಹೊರಟಿದ್ದೆ. ಮಧ್ಯಾಹ್ನದ ಊಟಕ್ಕಾಗಿ ಬಸ್‌ ಹೈವೇ ಹತ್ತಿರದ ಹೋಟೆಲ್‌ ಒಂದರ ಬಳಿ ನಿಂತಿತು. ನನಗೂ ಬಹಳ ಹಸಿವೆಯಾದ್ದರಿಂದ ಇಳಿದು ಬೇಗನೇ ಊಟ ಮುಗಿಸಿದೆ. ಇನ್ನೂ ಹಲವಾರು ಮಂದಿ ಪ್ರಯಾಣಿಕರು ಊಟ ಮಾಡುತ್ತಿದ್ದರು. ನಾನು ಮತ್ತೆ ಬಂದು ಬಸ್ಸಿನಲ್ಲಿ ನನ್ನ ಸೀಟಿನಲ್ಲಿ ಕುಳಿತುಕೊಂಡೆ. ಬಸ್‌ ನಿಂತ ಜಾಗದ ಆ ಕಡೆಗೆ ರಸ್ತೆಯ ಒಂದು ಬದಿ ಪೂರ್ತಿ ಗದ್ದೆಗಳು.

ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೨)
Monday, June 30, 2025 - 18:42

೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ ಲೋಕೊಮೋಟಿವ್ ಎಂಜಿನ್ ತಯಾರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಸಂಸ್ಥೆ ಪಾತ್ರವಾಯಿತು. ಅದಾಗಿ ೨ ವರ್ಷದಲ್ಲಿ ಭಾರತಕ್ಕೆ ಸ್ವಾತಂತ್ರ್ಯ, ಸಿಕ್ಕಿತು.

ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಅಡುಗೆ ನಂಜಮ್ಮ
Monday, June 30, 2025 - 18:34

ಉತ್ತರ ಪ್ರದೇಶ ಲಕ್ನೋದ ಗಗನಯಾತ್ರಿ ಶುಭಾಂಶು ಶುಕ್ಲಾ ಮತ್ತು ಕರ್ನಾಟಕ ಚಾಮರಾಜನಗರದ ಅಡುಗೆ ನಂಜಮ್ಮ. ಗಗನಯಾನಿ ಭಾರತದ ಶುಭಾಂಶು ಶುಕ್ಲ ಅವರ ಅದ್ಭುತ ಸಾಧನೆಯ ಸಮಯದಲ್ಲಿಯೇ ಅವರ ಜೊತೆ ನೆನಪಾಗುತ್ತಿರುವ ಮತ್ತೊಂದು ಹೆಸರು ಚಾಮರಾಜನಗರದ ಅಡುಗೆ ಕೆಲಸ ಮಾಡುವ ಪರಿಶಿಷ್ಟ ಜಾತಿಯ ನಂಜಮ್ಮ.

ಪುಸ್ತಕನಿಧಿ-"ಮೊನ್ನ ವನ್ನ" ಕಿರುನಾಟಕದ ಅನುವಾದ
Monday, June 30, 2025 - 08:58

ಮೊನ್ನ ವನ್ನ--ಎಂಬುದು ಬೆಲ್ಜಿ ಯಂ ದೇಶದ ಮಾರಿಸ್‌ ಮ್ಯಾಟರ್‌ಲಿಂಕ್‌ ಎಂಬ ಕವಿ ಬರೆದಿರುವ ಮೂರು ಅಂಕಗಳ ನಾಟಕ. ಇದರ ಕನ್ನಡ ಅನುವಾದ ಪುಸ್ತಕವು ಮೊನ್ನ ವನ್ನ ಹೆಸರಿನಲ್ಲಿ archive.org ತಾಣದಲ್ಲಿ ಉಚಿತವಾಗಿ ಲಭ್ಯ ಇದೆ.

ಇದರ ಮುನ್ನುಡಿ ಮತ್ತು ಮುಖಪುಟದ ಹಿಂದೆ ಹಾಗೂ ಬೆನ್ನು ಪುಟಗಳ ಮೇಲಿನ ಲೇಖನಗಳಲ್ಲಿಯೇ ಬಹಳ ಮಹತ್ವದ ಸಂಗತಿಗಳು ನಮಗೆ ದಕ್ಕುತ್ತವೆ. 

ಇದನ್ನು ಬರೆದ ಫ್ರೆಂಚ್ ಕವಿಯ ಕುರಿತಾದ ಮಾಹಿತಿಯನ್ನು ನಾವು ಓದಲೇಬೇಕು.

ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಅಸಲಿಯತ್ತು
Sunday, June 29, 2025 - 21:55

ಧಾರಾವಾಹಿ ಎಂಬ ಮನರಂಜನಾ ಬಲೆಯೊಳಗೆ ನಮ್ಮ ಹೆಣ್ಣು ಮಕ್ಕಳು, ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ಭಾರತೀಯ ಮಹಿಳೆಯರ ಮೇಲೆ ಅತಿ ಹೆಚ್ಚು ಪ್ರಭಾವ ಬೀರುತ್ತಿರುವುದು ಧಾರಾವಾಹಿಗಳೆಂಬ  ಮಾಯಾಲೋಕ. ಹೆಚ್ಚು ಕಡಿಮೆ ಅವರ ಮನಸ್ಥಿತಿಯನ್ನು ನಿಯಂತ್ರಿಸುತ್ತಿದೆ. ಗಂಡಸರೂ ಧಾರಾವಾಹಿಗಳನ್ನು ನೋಡುತ್ತಾರಾದರು ಸಿನಿಮಾ ಹುಚ್ಚು ಸ್ವಲ್ಪ ಹೆಚ್ಚು. ಅದರಲ್ಲೂ ಯುವಕರ ಆದ್ಯತೆ ಚಲನಚಿತ್ರವೇ.

ನಾವೇ ಹುಲಿ ಜಾಗದಲ್ಲಿದ್ದೇವೆ
Saturday, June 28, 2025 - 16:42

ಹುಲಿ, ನಮ್ಮ ವನ್ಯಜೀವಿಗಳ ಕಿರೀಟ ರತ್ನ. ಇದು ಕೇವಲ ಒಂದು ಕಾಡು ಪ್ರಾಣಿ ಅಲ್ಲ, ಇದು ಪರಿಸರದ ಸಮತೋಲನ ಕಾಪಾಡುವ ಪ್ರಮುಖ ಕೊಂಡಿ. ಭಾರತದಲ್ಲಿ ಹುಲಿಯನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲಾಗಿದೆ. ಆದರೆ ಅಂತಹ ಪ್ರಾಮುಖ್ಯತೆ ಇರುವ ಹುಲಿಗಳನ್ನು ಚಾಮರಾಜನಗರ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವಲಯದಲ್ಲಿ ವಿಷ ಹಾಕಿ ಸಾಯಿಸಲಾಗಿದೆ.

ಮೂರನೇ ಮ‌ಹಾಯುಧ್ಧದ ಸಾಧ್ಯತೆ ಎಷ್ಟು ಮತ್ತು ಹೇಗೆ?
Saturday, June 28, 2025 - 14:40

ಎರಡು ಮಹಾ ಯುದ್ಧಗಳ ಪ್ರಾಥಮಿಕ ಕಾರಣಗಳು, ಯುದ್ಧಪೂರ್ವದ ಬೆಳವಣಿಗೆಗಳು, ಯುದ್ಧ ಪ್ರಾರಂಭವಾಗಲು ಕಾರಣವಾದ ದಿಢೀರ್ ಘಟನೆಗಳು, ಯುದ್ಧ ಮುಂದುವರಿದ ರೀತಿ ಮತ್ತು ಯುದ್ಧ ಮುಕ್ತಾಯವಾಗಲು ತೆಗೆದುಕೊಂಡ ಸಮಯ ‌ಹಾಗು ಅದಕ್ಕೆ ಕಾರಣವಾದ ಅಂಶಗಳು, ನಂತರದ ಆಂತರಿಕ ಸಂಘರ್ಷಗಳು ಮುಂತಾದ ಈ ಎಲ್ಲವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಈಗ ನಡೆಯುತ್ತಿರುವ ಘಟನೆಗಳು ಸ್ವಲ್ಪಮಟ್ಟಿಗ

ಆರು ಬಾಗಿಲ ಉಚ್ಚಂಗಿ ದುರ್ಗದ ಕೋಟೆ
Saturday, June 28, 2025 - 13:15
, ,

ಮೊದಲ ನೋಟಕ್ಕೆ ಬಾಗಿಲೇ ಕಾಣದಂತಹ ಉಚ್ಚಂಗಿ ದುರ್ಗದ ಕೋಟೆಗೆ ಆರು ಬಾಗಿಲುಗಳಿರುವ 9ನೇ ಶತಮಾನದ ಆಸುಪಾಸಿನಲ್ಲಿ ನಿರ್ಮಾಣವಾಗಿರುವ ಉಚ್ಚಂಗಿ ದುರ್ಗದ ಕೋಟೆಯ ಒಟ್ಟು ಸುತ್ತಳತೆ ಸುಮಾರು 25 ಕಿ.ಮೀಟರ್‌ಗಳು ! ಆಳವಾದ ಕಂದಕಗಳು, ಎತ್ತರದ ಗೋಡೆ, ಬುರುಜು - ಬತ್ತೇರಿಗಳನ್ನು ಒಳಗೊಂಡ ಈ ಅಭೇದ್ಯ ಕೋಟೆ ಕದಂಬ ರಾಜರಿಂದ ಹಿಡಿದು ಬ್ರಿಟಿಷರವರೆಗೆ ಆಕರ್ಷಿಸಿದ್ದರಲ್ಲಿ ಆಶ್ಚರ್ಯವೇನು ಇಲ್ಲ.