ಹೊಸ ನಗೆಹನಿಗಳು- 61 ನೇ ಕಂತು
ಪ್ರೀತಿಗೂ ಮದುವೆಗೂ ಏನು ವ್ಯತ್ಯಾಸ ?
ಪ್ರೀತಿ ಒಂದು ಸುಂದರ ಸಿಹಿಗನಸು, ಮದುವೆ ಆ ಕನಸಿನಿಂದ ಬಡಿದೆಬ್ಬಿಸುವ ಅಲಾರಾಂ ಗಡಿಯಾರ!
---------
- ಹೆಂಡತಿಯ ಹುಟ್ಟು ಹಬ್ಬವನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದು ಹೇಗೆ ?
- ಒಮ್ಮೆ ಮರೆತು ಬಿಡುವುದರ ಮೂಲಕ !
---------
- ಭಾರತದಲ್ಲಿ ಮದುವೆಗೆ ಮುಂಚೆ ಹೆಂಡತಿಯ ಪರಿಚಯವೇ ಇರುವುದಿಲ್ಲವಂತೆ, ಹೌದೆ , ಅಪ್ಪ?
- ಮಗನೇ, ಜಗತ್ತಿನಲ್ಲಿ ಎಲ್ಲಾ ಕಡೆ ಅದು ಹಾಗೆಯೇ !
---------
- ನಾನೂ ನನ್ನ ಹೆಂಡತಿ ಐದು ವರುಷ ಸುಖವಾಗಿ ಇದ್ದೆವು
- ಆಮೇಲೆ ಏನಾಯಿತು ?
- ನಾವು ಮದುವೆ ಆಗಿ ಬಿಟ್ಟೆವು .
---------
- Read more about ಹೊಸ ನಗೆಹನಿಗಳು- 61 ನೇ ಕಂತು
- Log in or register to post comments