‘ಮಯೂರ' ಹಾಸ್ಯ (ಭಾಗ ೧)

ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಮಂದಿ ಓದುತ್ತಾ ಓದುತ್ತಾ ಲೇಖಕರಾದರು. ಹಲವಾರು ಮಂದಿಗೆ ಈ ಪುಸ್ತಕಗಳಲ್ಲಿ ಬರುತ್ತಿದ್ದ ಲೇಖನಗಳು ಏನಾದರೂ ಬರೆಯುವ ಎಂದು ಪ್ರೇರೇಪಿಸಿತು.

Image

ಆಗಾಗ ಬಿದ್ದ ಮಳೆ

ಪುಸ್ತಕದ ಲೇಖಕ/ಕವಿಯ ಹೆಸರು
ವಿಶ್ವೇಶ್ವರ ಭಟ್
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೦೮

‘ಆಗಾಗ ಬಿದ್ದ ಮಳೆ’ ವಿಜಯ ಕರ್ನಾಟಕದಲ್ಲಿ ವಿಶ್ವೇಶ್ವರ ಭಟ್ ಅವರು ಬರೆದ ಬಿಡಿ ಬರಹಗಳ ಸಂಗ್ರಹ. ತಮ್ಮ ಅಂಕಣಗಳ ಮೂಲಕ ಖ್ಯಾತರಾಗಿರುವ ವಿಶ್ವೇಶ್ವರ ಭಟ್ ಅವರ ಲೇಖನಗಳು ಮಾಹಿತಿಪೂರ್ಣ ಹಾಗೂ ಅರ್ಥ ಗರ್ಭಿತವಾಗಿರುತ್ತವೆ.  ಲೇಖಕರು ತಮ್ಮ ಮುನ್ನುಡಿಯಾದ ‘ಮಳೆ ಹನಿಗಳ ಟಪ್ ಟಪ್' ಇದರಲ್ಲಿ ಬರೆಯುತ್ತಾರೆ ‘“ಪತ್ರಿಕೆಗಳ ಬರೆದ ಲೇಖನಗಳನ್ನೆಲ್ಲ ಸಂಗ್ರಹಿಸುವುದೆಂದರೆ ಪಾತರಗಿತ್ತಿ ಹಿಡಿದಂತೆ. ಕಣ್ಣಿಗೆ ಕಾಣುತ್ತದೆ.

ಕೋದಂಡ ಕಲಿತ ಪಾಠ

ಕೋದಂಡ ಹತ್ತು ವರುಷ ವಯಸ್ಸಿನ ಹುಡುಗ. ಇತರರಿಗೆ ಉಲ್ಟಾ ಮಾತನಾಡುವುದೆಂದರೆ ಅವನಿಗೆ ಅದೇನೋ ಖುಷಿ. ಹಾಗೆ ಮಾತನಾಡುವುದೇ ಬುದ್ಧಿವಂತಿಕೆ ಎಂಬುದು ಅವನ ಭಾವನೆ.

ಇತರ ಹುಡುಗರು ಅವನ ವರ್ತನೆ ನೋಡಿ ಕೆಲವೊಮ್ಮೆ ನಗುತ್ತಿದ್ದರು. ಅದೇನಿದ್ದರೂ ಅವರು ಕೋದಂಡನ ಜೊತೆ ಸೇರಲು ಇಷ್ಟ ಪಡುತ್ತಿರಲಿಲ್ಲ.

Image