ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 12, 2025
ಮಹಿಳಾ ಐಪಿಎಸ್ ಗಳ ಶೀತಲ ಸಮರ...
ಮಹಿಳೆಯರು
ಸಾಮಾನ್ಯ
ಜೀವನದಲ್ಲೇ
ಮಾಡುವರು
ನಯವಾದ
ಯುದ್ಧ...
ಇನ್ನು
ಅಧಿಕಾರ
ಕೊಟ್ಟರೆ
ಬಿಡುವರೇನೋ-
ಶೀತಲ-ಬಿಸಿ
ಸಮರದ ಗುದ್ದಾ!
***
ವಿಧಾನ ಸಭೆಯಲ್ಲೊಂದು ಡ್ರಾಮಾ....
ಮದ್ಯ
ಅಕ್ರಮ
ಮಾರಾಟ
ನಿಲ್ಸಿ-
ವಿಧಾನ ಸಭೆಯಲ್ಲಿ
ಗಂಭೀರ ಚರ್ಚೆ...
'ನಾನು ಹೊಡದಂಗೆ
ಮಾಡ್ತೀನಿ;
ನೀನು
ಅತ್ತಂಗೆ ಮಾಡು'
ಎಂದರೆ ಇದೇನಾ?-
ಎಂಥಾ ವಿಮರ್ಶೆ!
***
ಛಲಗಾರ
ನುಡಿದಂತೆ
ನಡೆದ
ಛಲಗಾರ
ನಮ್ಮ
ಮುಖ್ಯಮಂತ್ರಿ
ಸಿದ್ದರಾಮಣ್ಣ...
ಎಲ್ಲಾ ಫ್ರಿ.. ಫ್ರೀ.. ಫ್ರೀ..
ಎಂದು-…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 11, 2025
ಬದುಕಿನ ಉದ್ದಗಲಕ್ಕೂ ಹೀಗೆ ಹೀಗೆಯೆ
ನಮ್ಮವರೆಂಬುವರು ಇರುತ್ತಾರೆ , ಇರುವುದಿಲ್ಲ
ಜೊತೆಗಾರರು ಸಂಭ್ರಮಿಸುತ್ತಾರೆ
ನಮ್ಮ ನೋವಿಗೆ ಬರುವುದೇ ಇಲ್ಲ !
ಮಗನಿಗೋಸ್ಕರ ಊಟ ಬಿಟ್ಟ ತಾಯಿಯೇ
ನಂಬಿಕೆ ಕಳೆದುಕೊಂಡು ಹಾರಾಡಿದ ದಿನಗಳು
ಯಾರನ್ನೋ ನಂಬಿದ ತಪ್ಪಿಗೆ ಪ್ರೀತಿ ಕಳಕೊಂಡ
ದಿನಗಳು ಇಂದಿಗೆ ನೆನಪು ಮಾತ್ರ !
ಬಾಲಕನಾಗಿದ್ದ ದಿನಗಳೇ ಎಷ್ಟೋ ಸುಖವಿದ್ದವು
ಕಾಲಿಗೆ ಹಾಕಲು ಚಪ್ಪಲಿ ಇಲ್ಲದಿದ್ದರೂ ,
ಹೊಟ್ಟೆಗೆ ಸರಿ ಹಿಟ್ಟಿಲ್ಲದಿದ್ದರೂ ,
ಹಾರಾಡಲು ಕುಣಿದು ಕುಪ್ಪಳಿಸಲು ಗುಡ್ಡ ಬೆಟ್ಟಗಳು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 10, 2025
ಈಗಿನ
ಬಹುತೇಕ
ಜವಾಬ್ದಾರಿಯುತ
ಸ್ಥಾನದಲ್ಲಿರುವವರು
ಕಲಿತು
ನಿಯತ್ತಿನಲ್ಲಿ
ಜನಸಾಮಾನ್ಯರ
ಮೇಲೆ
ಪ್ರಯೋಗಿಸಿದ್ದು
ಎರಡೇ
ಅಸ್ತ್ರ
ಒಂದು
ದಾದಾಗಿರಿ !
ಆದರೆ
ಇನ್ನೊಂದು
ಪೊಲೀಸ್ ಗಿರಿ !!
***
ಗಝಲ್
ನಾನೆ ಎನುವ ಭಾವವೇಕೆ ಪ್ರೀತಿ ನನ್ನ ಒಲವು
ಬಾನ ನಡುವೆ ತೇಲಿಯಿರುವ ಚಂದ್ರ ನಿನ್ನ ಒಲವು
ಮನದ ಮೂಲೆಯಲ್ಲಿ ತಾಳ ತಪ್ಪಿತೇಕೆಯಿಂದು
ತನುವು ಮುರುಟಿ ಬಾಡದಿರಲು ಬದುಕೆ ಬಣ್ಣ ಒಲವು
ಬೆಟ್ಟ ಗುಡ್ಡದೊಳಗೆ ಸದ್ದು ಎನಿತು ಕೇಳಿ ಆಯಿತು
ಚಿತ್ತ ಕದಡಿ ಹೋಗದಿರಲು ಹೃದಯ ಹೊನ್ನ ಒಲವು
ಸೌಮ್ಯ ಇರದ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 09, 2025
ಕಪಿ , ಮರದಿಂದ ಮರಕ್ಕೆ ಹಾರುವುದು
ಮನುಜ, ಒಂದು ರೀತಿಯಲ್ಲಿ
ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು
ಹೌದೇ ? ಮನುಜನೂ ಕಪಿಯಂತೆ !
ಕಪಿ, ಚೇಷ್ಟೆ ಮಾಡುವುದು
ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು
ಬಹು ಚೇಷ್ಟೆಗಳ ಮಾಡುವನು
ಹೌದೇ ? ಮನುಜನೂ ಕಪಿಯಂತೆ !
ಕಪಿ , ತನ್ನ ಮೈಯನ್ನು ತಾನೇ ಪರಚಿಕೊಳ್ಳುವುದು
ಮನುಜ , ತನ್ನದಲ್ಲದ ವಿಷಯಗಳಿಗೆ
ವಿಚಾರಗಳಿಗೆ ,ಮೈ ಮನಸುಗಳ ಪರಚಿಕೊಳ್ಳುವನು
ಹೌದೇ ? ಮನುಜನೂ ಕಪಿಯಂತೆ !
ಕಪಿ, ಬೇಗ ದುರ್ಬುದ್ಧಿಗಳ ಕಲಿಯುವುದು
ಮನುಜ , ಬಹಳ ಬುದ್ಧಿವಂತ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 08, 2025
ಸಂತೆಗೆ ಹೋಗುವಾಗ
ಗೊಂಬೆಗಳ ಕೊಳ್ಳುವಾಗ
ನನ್ನ ಜೊತೆ ಇರಬೇಕು ಅಪ್ಪಾ
ಸಿನಿಮಾವ ನೋಡುವಾಗ
ಹಾಡನ್ನು ಹಾಡುವಾಗ
ನನ್ನ ಜೊತೆ ಇರಬೇಕು ಅಪ್ಪಾ
ಮಳೆಯಲಿ ನೆನೆಯುವಾಗ
ನೀರಿನಲ್ಲಿ ಆಡುವಾಗ
ನನ್ನಜೊತೆ ಇರಬೇಕು ಅಪ್ಪಾ
ಕತೆಯ ಹೇಳಿ ನಗಿಸುವಾಗ
ಕೈಯ ಹಿಡಿದು ನಡೆಸುವಾಗ
ನನ್ನ ಜೊತೆ ಇರಬೇಕು ಅಪ್ಪಾ
ತಿಂಡಿಯನ್ನು ತಿನ್ನುವಾಗ
ಬಸ್ಸಿನಲ್ಲಿ ಕೂರುವಾಗ
ನನ್ನ ಜೊತೆ ಇರಬೇಕು ಅಪ್ಪಾ
ದುಃಖದಲ್ಲಿ ಅಳುವಾಗ
ಸಂತೋಷದಿ ಕುಣಿಯುವಾಗ
ನನ್ನ ಜೊತೆ ಇರಬೇಕು ಅಪ್ಪಾ
ಪಾಠವನ್ನು ಓದುವಾಗ
ಆಟವನ್ನು ಆಡುವಾಗ
ನನ್ನ ಜೊತೆ…
ಲೇಖಕರು: Pramod Jatkar
ವಿಧ: ಕವನ
March 07, 2025
ಕೃಷ್ಣನಂತೆ ಸಂಕಿರ್ಣ ವಾಹಿನಿಯಾಗಿ
ಬುದ್ಧನಂತೆ ಸ್ಥಾಯಿರಸಿಕನಾಗಿ
ಬರಗಾಲ ಫಕೀರನಾಗಿ ತೆವಳಿದ್ದೇನೆ
ತಿಳಿಯಾಗಲು ಕಾಲವೂ ಹಪಹಪಿಸಿದ್ದೇನೆ
ಚೈತನ್ಯ ಸತ್ತಾಗಲೆಲ್ಲ ಸ್ಫೂರ್ತಿಯ ಸೆಲೆಗಾಗಿ ಹುಡುಕಿ,
ಹೊಸ ಉತ್ಸಾಹದಲ್ಲಿ ಧುಮುಕಿದ್ದೇನೆ.
ತೀರಸ್ಕೃತನಾಗಿದ್ದೇನೆ, ದಣಿದಿದ್ದೇನೆ, ಸೋತಿದ್ದೇನೆ,
ಸೃಜನಶೀಲತೆ ಇಲ್ಲದೆ, ಬರವಣಿಗೆಯೇ ಜೊಳ್ಳು ಅನ್ನಿಸಿದ್ದೂ ಇದೇ!
ಮಾಡಿರಬಹುದು ತಪ್ಪುಗಳನ್ನು, ಕಂಡದ್ದನ್ನು ತಿದ್ದಿದ್ದೇನೆ
ನೋಯಿಸಿರಬಹುದು, ನಿತ್ಯವೂ ಮರುಗಿದ್ದೇನೆ
ಭಾವ, ಬುದ್ಧಿಯ ಅಲಗಕ್ಕೆ ಸಿಕ್ಕು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 07, 2025
ಕ್ರೌರ್ಯದ ಏರು ಹೊಸ್ತಿಲಿನಲ್ಲಿ
ಎಡವದ ನಾನು
ಇನ್ನು ಈ ಮುಸ್ಸಂಜೆಯ ಕಾಲದಲ್ಲಿ
ಎಡವುತ್ತೇನೆಯೇ ?
ಹಿಂದಿನ ನೆನಪುಗಳ ಗತ ವೈಭವದ
ಮೂಸೆಯಲ್ಲಿ ಅರಳಿದ ಹೂವು ನಾನು
ನನ್ನವಳ ಮಕ್ಕಳ ಬಾಳಿಗೂ ನೆಂಟರಿಗೂ
ಪರಿಚಯವಾಗದ ನನ್ನ ಬದುಕು
ನನಗೊಬ್ಬಗೆ ಗೊತ್ತು
ಅದು ಹಾಗೆಯೇ ಇರಲಿ ಸಾವ ತನಕ !
ಪ್ರೀತಿ ಇತ್ತೆಂದರೆ ಇತ್ತು ಇಲ್ಲವೆಂದರೆ ಇಲ್ಲ
ಆ ಬದುಕೆ ಹಾಗಿತ್ತು ನನ್ನವರ ಬಿಟ್ಟು
ಬದುಕಿಗೆ ಎದುರಾದವರ
ಕೊಚ್ಚಿ ಕೆಡವುತ್ತಿದ್ದೆ ನಿರ್ಧಾಕ್ಷಿಣ್ಯವಾಗಿ
ಕೋಟೆ ಕಟ್ಟಲೇ ಇಲ್ಲ
ಆ ಆಸೆ ಈಗಲೂ ನನಗಿಲ್ಲ
ಇಂದಿಗೂ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 06, 2025
ನಿನ್ನೊಲವಿನ ವಿರಹವೆಲ್ಲವೂ ಲಾವಾರಸವಾಗಿ ಕಪ್ಪಾಗುತ್ತಿದೆ ಹುಡುಗ
ಬೆಳಗೀಗ ಆಗುವುದಿಲ್ಲವೇನೋ ಭ್ರಮೆಯು ಕೆಂಪಾಗುತ್ತಿದೆ ಹುಡುಗ
ಕಣ್ಣುಗಳು ಹುಡುಕುತ್ತಿದೆ ನಿನ್ನಧರಗಳ ನಿಲ್ಲಲಾರದು ಬಳಿಯೇ ಯಾಕೆ
ಈಗೀಗ ಹೆಚ್ಚಾಗಿಯೇ ಕನಸು ಮನದೊಳಗೆ ನೆನಪಾಗುತ್ತಿದೆ ಹುಡುಗ
ಚಡಪಡಿಕೆಯ ನೋವಿನ ಬೇರುಗಳ ಆಳವು ನಿನಗಿಂದು ಗೊತ್ತಿದೆಯೇ
ಬೇಡವೆಂದರೂ ಮುತ್ತಿಟ್ಟ ಗಳಿಗೆಯ ವಿಷವು ಕಹಿಯಾಗುತ್ತಿದೆ ಹುಡುಗ
ನಿನ್ನೊಳಗಿನ ಸೌಂದರ್ಯ ಮಯೂರದಂತೆ ನಾನು ಹೇಳಿದ್ದು ನೆನಪಿದೆ
ಒಡಲ ವಯ್ಯಾರದ ವರ್ಣನೆಯು ನಡುವೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 05, 2025
ನನ್ನ ಕಣ್ಣಲಿ ನಿನ್ನ ನೋಡಿದೆ
ಮುದ್ದು ಉಡುಪಿಯ ಕೃಷ್ಣನೆ
ಯಾವ ಜನುಮದ ಪಾಪ ಇದೆಯೊ
ತೊಳೆವ ಬಗೆಯನು ಹೇಳೆಯೊ
ಬರಿಯ ಕಾಲಲಿ ನಡೆದು ಬಂದೆನೊ
ನೊಂದ ಮನದಲಿ ನಿಂದೆನೊ
ಸೋತು ಹೋಗಿಹೆ ಒಲವ ಬಡಿಸೊ
ಬಾಳ ಪಥವನು ಜೋಡಿಸೊ
ಸವೆದ ಜೀವನ ಖುಷಿಯ ನೀಡದೆ
ಮತಿಯು ಚಂಚಲ ಆಗಿದೆ
ಸೇವೆ ಮಾಡುತ ಹರುಷ ಹೊಂದುವೆ
ಕೊನೆಗೆ ಮಡಿಲನು ಸೇರುವೆ
-ಹಾ. ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಲೇಖಕರು: ಬರಹಗಾರರ ಬಳಗ
ವಿಧ: ಕವನ
March 04, 2025
ಕತ್ತು ಕೊಯ್ಯುವ ಮಂದಿಯೆ ಪ್ರೀತಿ ತೋರುವರೇ ಇಂದು
ರೋಷ ದ್ವೇಷದ ನಡುವೆಯೆ ಬರಿದೆ ಕಾರುವರೇ ಇಂದು
ಅಪ್ಪುಗೆಯ ಸವಿ ಮಾತು ಮನಕೆ ಹುಳಿ ಹಿಂಡಿದೆ ಯಾಕೆ
ಹುಸಿ ಮಾತಿನೊಳು ಸಜ್ಜನರು ತಾವು ಸೇರುವರೇ ಇಂದು
ಮತ್ತು ಮುತ್ತಲು ಸುತ್ತ ಸಂಸ್ಕಾರದ ನೇಗಿಲು ಸಡಿಲಾಯಿತೆ
ಕತ್ತು ಉಳುಕಿದರೂ ಬಿಡದು ಮಾಯೆ ಹಾರುವರೇ ಇಂದು
ಬಯಸಿದ್ದೆಲ್ಲ ಸಿಗುವುದಿದ್ದರೆ ಇಷ್ಟೆಲ್ಲ ಕಷ್ಟವಿದೆಯೆ ಬದುಕಲಿ
ಹೊಸತನದ ಕನಸಿನಲಿ ಹಳೆತನವ ಹೀಗೆ ಮಾರುವರೇ ಇಂದು
ಜೀವನದ ಬಯಲಾಟ ಇನ್ನೆಷ್ಟು ದಿನವದು ನಡೆವುದೋ ಈಶಾ
ಚೆಂದದ…