ಕವನಗಳು

ವಿಧ: ಕವನ
March 22, 2025
ಬವಣೆಗಿಂದು ಬೆಂಕಿಯು ಬಿದ್ದಿದೆಯೋ ನಡುವಿನಲ್ಲಿದ್ದು ಕೂಗಿರುವೆ ಮತ್ಸರದ ಗೂಡುಗಳಿಲ್ಲಿ ಒಡೆದಿವೆಯೋ ಒಡಲಿನಲ್ಲಿದ್ದು ಕೂಗಿರುವೆ   ಚೀತ್ಕಾರದ ನಡುವೆಯಿಂದು ರಕ್ಷಿಸುವಂತಹ ಕೈಗಳೆಲ್ಲೂ ಕಾಣದೇಕೊ ಬೆತ್ತಲಾಗಿರುವ  ನೆಲದೊಳಗೆ ಬೀಳುತ್ತಾ ಬದುಕಿನಲ್ಲಿದ್ದು ಕೂಗಿರುವೆ   ಉರಿಸುತ್ತಲಿರುವ ಮಹಾನ್ ತತ್ವಗಳನ್ನು ಒಗ್ಗೂಡಿಸಲು ಸಾಧ್ಯವೇನು ಉಳಿದಿರುವ ಮನುಷ್ಯತ್ವವ ಉಳಿಸಿರೆಂದು ಕನಸಿನಲ್ಲಿದ್ದು ಕೂಗಿರುವೆ   ಬದುಕಿರುವವರ ಕುತ್ತಿಗೆಯನಿಂದು ಸೀಳಿದರೆ ಖುಷಿಯೇನು ನಿಮಗೆ ಊಟಕ್ಕಿಂದು ಗತಿಯಿಲ್ಲದವರ…
ವಿಧ: ಕವನ
March 21, 2025
ಗಝಲ್ ೧ ಕಾಲನ ಹೊಸ್ತಿಲಲ್ಲಿ ಇದ್ದರೂ ಅಳುವವರು ಯಾರಿಲ್ಲ ಇಲ್ಲಿ ವಿಧಿಯೆ ಜೀವನದ ಪಾಠವನ್ನು ಕಲಿತ ಬೇರೆಯವರು ಸೇರಿಲ್ಲ ಇಲ್ಲಿ ವಿಧಿಯೆ   ಉಂಡಮನೆಗೆ ನನ್ನದೆಲ್ಲವನ್ನು ಸುರಿದರೂ ನೋಡುವವರೇ ಇಲ್ಲವಿಲ್ಲಿ ಹೃದಯ ಹಿಂಡಿದ ನೋವಿನಲ್ಲಿ ಚೀರಾಡಿದರೂ ಕೇಳಿಲ್ಲ ಇಲ್ಲಿ ವಿಧಿಯೆ   ಆಶ್ರಯದ ಜಲವನ್ನು ಕುಡಿದು ಬದುಕುತ್ತಿರುವಂತೆ ನೋಡುತ್ತಿಹರಿಂದು ಆಶ್ರಮದ ಹೊರಗಡೆ ನಿಂತು ಕಾಯುತ್ತಿದ್ದರೂ ಬೇಕಿಲ್ಲ ಇಲ್ಲಿ ವಿಧಿಯೆ   ಚಿಂತೆಗಳ ಸುಳಿಗೆ ಸಿಲುಕಿದವನಿಗೆ ಯಾರಾದರೂ ಅನ್ನನೀಡದೆ ಹೋಗುವರೆ ಉಟ್ಟಬಟ್ಟೆಯಲ್ಲೆ…
ವಿಧ: ಕವನ
March 20, 2025
ಶಾಂತಿಯ ಹೊನಲು  ಘನಘೋರ ಯುದ್ಧಗಳಲಿ ಸಾಯುವುದು ಅಮಾಯಕರಾದ ಸಾಮಾನ್ಯ ಜೀವಗಳು...   ಈ ನಾಯಕರನು ಮೊದಲು ತಳ್ಳಿಬಿಡಿ; ಆಗ ಆಗುವುದು  ಇಡೀ ವಿಶ್ವ ಶಾಂತಿಯ ಹೊನಲು! *** ಜನಪ್ರಿಯತೆಯ ಹಳಿ  ದಿಲ್ಲಿ ನಾರಿಯರಿಗೆ 2500 ರೂ ಅಸ್ತು; ಬಿಜೆಪಿ ಸರ್ಕಾರದ ತೀರ್ಮಾನ...   ಕಾಂಗ್ರೆಸ್ ರೈಲು- ಹಳಿ ತಪ್ಪಿತ್ತು... ಈಗ ಬಿಜೆಪಿಯೂ ಅದೇ ಹಳಿ ಮೇಲೆ ಚಲಿಸುತ್ತಿದೆ.. ಇದು ಸರೀನಾ? *** ಜೀವನ ಪ್ರಸಾಧನಗಳು  ನಿಜ ಜೀವನದ ಸುಗಂಧ ಸೌಂದರ್ಯ ಪ್ರಸಾಧನಗಳು- ಪ್ರೀತಿ, ಪ್ರೇಮ, ವಿಶ್ವಾಸ ನಂಬಿಕೆ, ಭಯ, ಭಕುತಿ...  …
ವಿಧ: ಕವನ
March 19, 2025
ಬಾನ ಬಣ್ಣವು ನೆಲವ ಮುತ್ತಲು ಹೊನ್ನ ಕಾಂತಿಯು ತುಂಬಿತು ಜ್ಞಾನ ದೇಗುಲ ಗಂಟೆ ಹೊಡೆಯಲು ಧ್ಯಾನ ಮನದಲಿ ಮೂಡಿತು   ಮುನಿಸು ಕಾಣದ ಜನರ ಮನವದು ತನುವ ಖುಷಿಯಲಿ ನಲಿಯಿತು ಹೊನಲ ಬೆಳಕಿಗೆ ರೈತ ಹೊರಟನು ಕನಸ ಹೆಣೆಯುತ ಬಯಲೊಳು   ಹೊಸತು ಬಣ್ಣದ ಸೂರ್ಯ ರಶ್ಮಿಯು ಕೆಸರು ಮೆತ್ತದೆ ಮಿಂಚಿತು ಹಸಿರು ಕಾನನ ಗಾಳಿ ಬೀಸಲು ಕಸಿಯ ಕಟ್ಟುತ ನಿಂತಿತು   ಕವಿಯ ಚೆಲುವಿನ ಮೋಹ ತಾಣವು ಸವಿಯ ಕೊಟ್ಟಿದೆ ಸುತ್ತಲು ಬುವಿಯ ರೂಪದಿ ಹೊಸತು ಕಾಣಲು ಬೇವು ಬೆಲ್ಲವು ಸೇರಿತು -ಹಾ ಮ ಸತೀಶ ಬೆಂಗಳೂರು
ವಿಧ: ಕವನ
March 18, 2025
ಗಝಲ್ ೧ ಕಲಿಯುತ್ತಿರು ಕಲಿಯುತ್ತಲೇ ಜನರಿಗಿಂದು ಚುಚ್ಚದಿರು ಮನುಜ ತಿಳಿಯದೇ ದಿನವೆಲ್ಲ ತಿಳಿದಿರುವೆನೆಂದು ಹೇಳುತ್ತಾ ಮೆರೆಯದಿರು ಮನುಜ   ಕೂಲಿನಾಲಿ ಮಾಡಿಯಾದರೂ ಹೊಟ್ಟೆ ಹೊರೆಯುವುದು ಗೊತ್ತಿಲ್ಲವೆ ಜೀವನದಲ್ಲಿ ಯಾವುದನ್ನೂ ಅಭ್ಯಾಸಿಸದೆ ನೀನೆಂದೂ ತೆಗಳದಿರು ಮನುಜ   ಉಪ್ಪಿನ ಕಾಯಿಯಲ್ಲಿ ಹುಳುವಾದಂತೆ ಬಾಳುವುದು ವ್ಯರ್ಥವಲ್ಲವೆ ಸುತ್ತ ಮುತ್ತಲ ಊರಿನವರಿಗೆಲ್ಲರಿಗು ಗೊತ್ತಿರುವನಂತೆ ತಿರುಗದಿರು ಮನುಜ   ಹೊಸಗನ್ನಡದ ಸಂಸ್ಕಾರದ ರೀತಿಯ ನಿಯಮಗಳು ತಿಳಿದಿಲ್ಲವೆ ಹಳತ್ತಿನ ಮಲ್ಲಿಗೆಯ ಸುವಾಸನೆಯ…
ವಿಧ: ಕವನ
March 17, 2025
ಯಾರೂ ಕು-ಕವಿಗಳು ನಾಡಿನಲಿಲ್ಲ  ಬರೆದವನಿಗೆ ತಲೆ ಸರಿ ಇಲ್ಲ ! * ಕಣ್ಣ ಸನ್ನೆಗೆ ಬಂದಳು ಬಾಹು ಬಂಧನಕೆ ಸಿಕ್ಕಳು ತಾಳಿ ಹಿಡಿದು ನಿಂತಳು ನೋಡುವುದೇನು ಈಗ ಅವಳ ಸುತ್ತಲೂ ಮಕ್ಕಳು ! * ಜೀವನದ ದಾರಿಯಲಿ ಹಲವಾರು ತೊಂದರೆಯು ಪಾತಾಳ ಸೇರಿದರೂ ಬಿಡದಾದ ಚಂದಿರೆಯು ಹರಿದಿರುವ ಮನಸ್ಸಿನ ಹಿಂದೆಯೇ ಬರುವಳು ಬೇಡವೆಂದರೂ ನನ್ನನ್ನೇ ನೋಡುತಲೆ ತಬ್ಬುವಳು * ನನ್ನ ಮನೆಯಂಗಳದ ರಾಣಿ ಬಲ್ಲವರಿಗೆ ಗೊತ್ತು ಅವಳ ವಾಣಿ ರಾತ್ರಿಯಾದರೆ ಬೊಬ್ಬೆ ಹಗಲಲ್ಲಿ ಬರಿ ನಿದ್ದೆ ಉಳಿದವರಿಗೆ ದಿನ ದಿನವು ಜಾಗರಣಿ * ಮದುವೆಯ…
ವಿಧ: ಕವನ
March 16, 2025
ಅಲ್ಲಾ ಮಾರಾಯ್ತಿ..  ಇಷ್ಟೆಲ್ಲಾ  ರಗಳೆ  ಯಾಕೆ ಮಾಡುತ್ತೀ?   ಕೊಟ್ಟಿಲ್ಲವೇ ನಾವು  ನಿನಗೊಂದು ದಿನ  ನಿನ್ನ ಹೆಸರಲ್ಲಿ ಒಂದು ಇಡೀ ದಿನ  ಇಡೀ ಜಗತ್ತಿನ  ಒಂದು ಇಡೀ ದಿನ ..  ಇನ್ನು ಸುಮ್ಮನೆ ಕೂರು    ೧೯೦೭ರಲ್ಲಿ ಅಮೆರಿಕೆಯಲ್ಲಿ  ೧೯೧೭ರಲ್ಲಿ ರಷ್ಯಾದಲ್ಲಿ  ಕಾರ್ಮಿಕರ ಆಕ್ರೋಶದ  ಜೊತೆ ಸೇರಿ  ನಡೆಸಿರಬಹುದು ನೀನು ಕ್ರಾಂತಿಗಳನ್ನು ..    ಆದರೇನಂತೆ ..  ನಾವು ಪುರುಷರು  ವಿಶ್ವಗುರುವಿನ ದೇಶದವರು ಸರಿಸಾಟಿ ಇಲ್ಲದವರು     ಜೂಜಿನಲ್ಲಿ ಸೋತರೂ ನಿನ್ನನ್ನು ಸಂಪತ್ತಿನ ದೇವತೆ ಮಾಡಲಿಲ್ಲವೇನು…
ವಿಧ: ಕವನ
March 15, 2025
ಹೀಗೆಯೆಂದು ಹೇಳಲಾರೆ ಹೇಗೆಯೆಂದು ತಿಳಿಯಲಾರೆ ನನ್ನ ಸನಿಹ ನೀನು ಬಂದೆ ಎನ್ನ ಹೃದಯ ದೇವತೆ   ಒಲವೆ ನೀನು ಧೈರ್ಯವಂತೆ ನನ್ನ ಸಂಗ ಸೇರಿದಂತೆ ಮಾತು ಮಾತು ಕಲಿತಳಂತೆ ಸಾಧನೆಗೆ ಏಣಿಯಂತೆ   ನಾನು ಕುಳಿತ ಸಮಯವಾಗ ಕೈಯ ಹಿಡಿದು ಏಳಿಸುತ ಧೈರ್ಯ ತುಂಬಿ ಮನದಲೀಗ ಪ್ರೀತಿಯಿಂದ ತಬ್ಬುತ   ನಿನ್ನ ನಡೆಗೆ ಗೆಲುವು ಇರಲು ಗುರಿಯ ಮುಟ್ಟು ಎಂದಿಗು ಕೀರ್ತಿಗಳಿಸಿ ಸಾಗುತಿರಲು ಬಾಳು ಸೌಖ್ಯವೆಂದಿಗು *** ದುರಂತ ಇಲ್ಲೊಬ್ಬ  ಬೇರೆಯವರು ಪಡೆಯುತ್ತಿದ್ದ ಕೇಂದ್ರ, ರಾಜ್ಯ  ಸರಕಾರಗಳ ಪರಿಷತ್ತು, ಅಕಾಡೆಮಿ …
ವಿಧ: ಕವನ
March 14, 2025
ಬಾನ ಸುಂದರ ದೃಶ್ಯಕಾವ್ಯವು ನನ್ನ ಮನಸನು ಮುಟ್ಟಲು ಸೋತು ಹೋಗಲು ತಾರೆ ಸೆಳೆದಳು ಎನ್ನ ಒಪ್ಪುತ ತಬ್ಬಲು   ಮಧುರ ಚಂದಿರ ತಂಪ ಬೀರಲು ಹಾಲು ಚೆಲ್ಲಿತು ಮನೆಯೊಳು ಸುಖದ ಹೊನಲೊಳು ಸೋತು ಹೋಗಲು ಮೌನ ಮುರಿಯಿತು ಬಾಳೊಳು   ಜೀವ ರೂಪದ ಭಾವ ಸ್ಪಂದನೆ ಎದೆಯ ಗೂಡೊಳು ಮೂಡಿತು ಮತ್ತೆ ಹಾಡಿತು ಕುಕಿಲ ಕೋಗಿಲೆ ತಳಿರು ತೋರಣ ಕಟ್ಟಿತು   ಪ್ರಕೃತಿಯೊಳಗಿನ ಒಲುಮೆ ಕಾಣಲು ಅರುಣ ರಾಗವು ಹರಡಿತು ಚೈತ್ರ ಸುಮವನ ಸುತ್ತ ಸೇರಲು ನಮ್ಮ ಪ್ರೀತಿಯು ಅರಳಿತು -ಹಾ ಮ ಸತೀಶ ಬೆಂಗಳೂರು  
ವಿಧ: ಕವನ
March 13, 2025
ಗಝಲ್ ೧ ಜೂಜು ಬಿಡುತ ಬಾಳಲಿ ಕುಳಿತು ಹಾಡುವೆ ಸಖಿ ಕದ್ದು ನಡೆಯದಿರು ತನುವ ಅರಿತು ಕಾಡುವೆ ಸಖಿ   ಪಂಥದೊಳು ಸಾಗಿದರೆ ಸುಖವು ಸಿಗುವುದೆ ಹೇಳು ಮೌನದೊಳು ಹುಸಿ ಮುನಿಸು ಮರೆತು ಬೇಡುವೆ ಸಖಿ   ಸಂಸಾರ ಆಟದೊಳು ಕಹಿಯಾಳ ನಿನ್ನೊಳು ಮಾತ್ರವೆ  ಅವಸರದ ಬಾಳಿನೊಳು ಸವಿಯ ಕಲೆತು ನೋಡುವೆ ಸಖಿ   ತಪ್ಪುಗಳೆ ಸಿಗುತಿರಲು ಒಪ್ಪುಗಳು ಬರದಿರದೇ ಇಂದು ಫಲವಿರುವ ಪ್ರೀತಿಯೊಳು ಕೈತುತ್ತು ಮಾತು ನೀಡುವೆ ಸಖಿ   ಹೃದಯದೊಳಗೆ ಬೆರೆಯುತಲೆ ಬಾಳಲು ಚೆಂದವೋ ಈಶಾ ಮೋಸ ವಂಚನೆಯ ತೊರೆಯುತ ಬೆರೆತು ಕೂಡುವೆ ಸಖಿ ***…