ಕವನಗಳು

ವಿಧ: ಕವನ
March 03, 2025
ಹಾಲಿ v/s ಮಾಜಿ  ಭಗ್ನ ಪ್ರೇಮಿ-  ಮಾಜಿ ಪ್ರೇಯಸಿಯ ಕಾರಿಗೆ ಬೆಂಕಿಯಿಟ್ಟ ರೌಡಿ...   ಹಾಲಿ ಪ್ರೇಯಸಿಗೆ ಎಲ್ಲರೂ ಪ್ರೇಮದ ಮಳೆ ಕರೆಯುವವರೇ ಬಿಡಿ! *** ಉಚಿತ-ಖಚಿತ  ಈ ಜಗದಲಿ ತಂದೆ-ತಾಯಿಯ ಮಹೋನ್ನತ ಪ್ರೀತಿ ಮಾತ್ರವೇ ನಿಮಗೆ- ಉಚಿತ ಉಚಿತ ಉಚಿತ...   ಬೇರೆ ಎಲ್ಲಾ ಸಂಬಂಧಗಳಿಗೆ ನೀವು ದಂಡ ತೆರಬೇಕಾದ್ದು ಮಾತ್ರ- ಖಚಿತ ಖಚಿತ ಖಚಿತ! *** ವಿಶೇಷ ಸ್ಥಾನಮಾನ  ಹೆಣ್ಣು- ಎಂಥವಳಾದರೂ ಪಡೆದು ಬಿಡುವಳು ಶ್ರೇಷ್ಠ ತಾಯಿಯ ಪಟ್ಟ...   ನಮ್ಮನೆಲ್ಲಾ ಒಂಭತ್ತು ತಿಂಗಳು ಹೊತ್ತು-ಹೆತ್ತು ಕಷ್ಟಪಟ್ಟು…
ವಿಧ: ಕವನ
March 02, 2025
ಗಝಲ್ ೧ ಮತ್ತದುವೆ ಜೀವನದಿ ಸಾಗುತಿರಲೂ ಯಾನ ಹುಣ್ಣಿಮೆಯ ಲೋಕದೊಳು ಎಲೆ ಮಾನವ ಗತ್ತಿರದೆ ಬಾಳುವೆಲಿ ಸುಖವಿರುವ ಜ್ಯೋತಿಯೊಳು ಚೆಲುವಾಗಿ ಒಲವಾಗು ಎಲೆ ಮಾನವ   ಮನದೊಳಗೆ ಸವಿಯಿರಲ ಚಿಂತೆ ಏತಕೆಯಿಂದು ಹೇಳಲಾರೆಯ ನೀನು ನಗುಮೊಗದಲಿ ತನುವೊಳಗೆ ಕಹಿಯಿರದೆ ಬರಲು ಜೇನಿನಹೊಳೆ ಕುಲದೊಳಗೆ ಛಲವಿರಲು ಎಲೆ ಮಾನವ   ಮೋಹದಾಚೆಗೆ ಸರಿದ ವನವಾಸ ಉಪವಾಸ ಸನಿಹದೊಳು ಬೇಕಿದೆಯೇ ನಿನ್ನೊಲವಲಿ ಚಿತ್ತಾರದಲಿ ನೋಟವ ಹರಿಸುತಲಿ ಸಾಗುತಿರೆ ಪ್ರತಿಬಿಂಬ ಕಾಣುವುದು ಎಲೆ ಮಾನವ   ಮಸಣದೀಚೆಗೆ ಇರುವ ಪ್ರೀತಿಯನು…
ವಿಧ: ಕವನ
March 01, 2025
ಬಂಧನದಲ್ಲಿಹೆ ವಿಚಾರವಿಲ್ಲದೆ ಕಂದನ ಮುಖವನು ಕಂಡು ಸಂದಿಹ ದಿನಗಳನೆಣಿಸುತ ಸಾಗಿಹೆ ಮುಂದಿದೆ ಬಾಳಿನ ಹಾಡು   ಕಂದಿಹ ಮನದಲಿ ಸುಖವದುಯೆಲ್ಲಿದೆ ನಿಂದಿದೆ ತನುವದು ಸೋರಿ ಬಂದಿಹ ಚಿಂತನೆ ಗಳಿಗೆಲಿ ನಂದಿದೆ ತಂದಿದೆ ಸಂಕಟ ಸೇರಿ   ನೀರಿನ ತೆರದಲಿ ಭಾವನೆ ನುಗ್ಗಲು ನಾರಿನ ರೀತಿಯೆ ಗೋಳು ಬೇರದು ಹಿಡಿದರೆ ಮರವದು ನಿಲುವುದು ಬಾರದೆ ಸುಖವದು ಹೇಳು -ಹಾ ಮ ಸತೀಶ ಬೆಂಗಳೂರು
ವಿಧ: ಕವನ
February 28, 2025
ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು  ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು    ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು    ಪ್ರೀತಿಯು ಹಿಮಾಲಯದ ಮಂಜಿನಲ್ಲಿ ಬಿದ್ದವರಂತೆ ಆಗಿದೆ ಪ್ರೇಮದಾಳಕೆ  ನಿಜವಾಗಿಯೂ ಕಣ್ಣಿಲ್ಲದಂತಾಗಿದೆ ಇಂದು    ವಾತ್ಸಲ್ಯವೆನ್ನುವ ಪದಗಳಿಗಿಂದು ಅರ್ಥವಾದರೂ ಎಲ್ಲಿದೆ  ಗೋರಿಯೊಳಗೆ ಸೇರಿದಂತ ಮಂದಿಯಂತಾಗಿದೆ ಇಂದು    ಬಾಳಿನ ಪಯಣವು ದುರಂತದಲ್ಲಿ ಮುಗಿಯುವುದೇ ಈಶಾ ಬಾಳೆನ್ನುವುದು…
ವಿಧ: ಕವನ
February 27, 2025
ಗಝಲ್ ೧ ಪ್ರೇಮವು ಇರಲೇ ಬೇಕೆಂಬ ನಿಯಮವಿದೆ ಚೆಲುವೆ ಒಲವದುವು ಸುತ್ತಲಿರಲೆಂಬ ಬಯಕೆಯಿದೆ ಚೆಲುವೆ   ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆ ಚೆಲುವೆ ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆ ಚೆಲುವೆ   ದಾರಿಗುಂಟವೇ ನಡೆಯುವವರನ್ನು ನೋಡಿದೆ ಚೆಲುವೆ ಜೀವನದ ಓಣಿಗಳಲ್ಲಿ ಕೊಳಚೆ ನೀರು ಕಂಡಿದೆ ಚೆಲುವೆ   ದಿನ ದೂಡುವರ ಹತ್ತಿರದ ಸಂಬಂಧ ಬೇಕಿದೆ ಚೆಲುವೆ ಚಿಂತೆಯಿರದ ಹೂವಿನ ಮನಸಲಿ ಶಾಂತಿಯಿದೆ ಚೆಲುವೆ   ಈಶನ ದಯಾಳುತನದ ಮೆಟ್ಟಿಲನ್ನು ಏರದಾದೆ ಚೆಲುವೆ ಮತ್ಸರದ ಗೂಡಿನಲ್ಲಿಯೆ…
ವಿಧ: ಕವನ
February 26, 2025
ಒಣಗಿರುವ ಮಣ್ಣಲ್ಲಿ ಬೆವರಿಳಿಸಿ ನಿಂತವರು ಹನಿನೀರು ಸಿಗಲೆಂದು ನೆಲವನ್ನು ಅಗೆದವರು ಕೃಷಿಭೂಮಿಲೆ ಬದುಕು ಜೀವನವ ನಡೆಸಿದರು ಸಂಸಾರ ನೇಗಿಲನು ಬಾಗುತಲೆ ಎಳೆದವರು ಅಪ್ಪನಾ ಜೊತೆಯಲ್ಲೆ ಅಮ್ಮಾ   ನೋವಿನಲೆ ಸಾಗುತ ಪ್ರೀತಿಯನು ತೋರಿದರು ಬೆಲೆಯಿದ್ದ ತೋಟಗಳ ತಮ್ಮಂದಿರಿಗೆ ನೀಡಿದರು ಬೆಟ್ಟೆ ಜಾಗವ ಪಡೆದು ಮಕ್ಕಳನು ಸಲಹಿದರು ತಿನಲನ್ನ ಇರದಿರಲು ಹಪ್ಪಳವ ತಿನಿಸಿದರು ಅಪ್ಪನಾ ಜೊತೆಯಲ್ಲೆ ಅಮ್ಮಾ   ಹಳತಾದ ಚಪ್ಪಲಿಯ ಧರಿಸುತ್ತ ತಿರುಗಿದರು ಹರಿದಿರುವ ಪಂಚೆಯಲೆ ಊರೆಲ್ಲ ಸುತ್ತಿದರು ಕಷ್ಟದಲಿ ಮಕ್ಕಳಿಗೆ…
ವಿಧ: ಕವನ
February 25, 2025
ಮೊರೆವ ಕಡಲಿನಂತೆ ನೀನು ಆಗಬೇಡ ಜಾಣೆಯೆ ತೀರಕೆರಗಿ ಬರುವ ನೀರ ಸೇರಬೇಡ ಜಾಣೆಯೆ   ಮೌನ ಮಾತು ನೆಗೆದು ಹೋಗೆ ಪ್ರೀತಿ ಈಗ ಎಲ್ಲಿದೆ ಜೀವ ಭಾವ ಬೆರೆತ ಸಮಯ ಬಾಡಬೇಡ ಜಾಣೆಯೆ   ಮುತ್ತು ರತ್ನ ಹವಳ ಬೇಡ ಒಲುಮೆಯೊಂದೆ ಸೇರಲಿ ಬತ್ತದಿರುವ ಕನಸ ಒಳಗೆ  ಸಾಗಬೇಡ ಜಾಣೆಯೆ   ಕರೆಯದಿರಲು ನೋವು ಸಹಜ ಯಾತ್ರೆ ಪಯಣವೆಂದಿಗು ನಡೆಯುತಿರಲು ವೇಷ ದ್ವೇಷ ಕೂಡಬೇಡ ಜಾಣೆಯೆ   ವಿಷದ ಮುಳ್ಳ ಸನಿಹ ಇಂದು ಕುಳಿತೆ ಏಕೆ ಈಶನೆ ಕಸದ ರೀತಿ ನೋಡುತಿರಲು ಹೋಗಬೇಡ ಜಾಣೆಯೆ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್…
ವಿಧ: ಕವನ
February 24, 2025
ತೌರಿನ ಬೆಲೆ...!  ಸಿದ್ದರಾಮಯ್ಯ ವೈಮಾನಿಕ ಹಾರಾಟ- ಮೈಸೂರಿಗೆ  ಇಪ್ಪತ್ತು ಬಾರಿ ಪಯಣ; ಬೊಕ್ಕಸಕ್ಕೆಇಪ್ಪತ್ತೈದು  ಕೋಟಿ ವೆಚ್ಚಾ....   ನಾನೂ ನೀನೂ ಹೀಗೆ ಇಷ್ಟು ವೆಚ್ಚದಲಿ- ಆಕಾಶದಲ್ಲಿ ಹಾರಾಡಲಾದೀತೇ ತಮ್ಮಾ...? ಮುಖ್ಯಮಂತ್ರಿ ತೌರಿನ ಪ್ರೀತಿಗೆ ಬೆಲೆ ಕಟ್ಟಲಾದೀತೇನೋ ಹುಚ್ಚಾ...! *** ರಾಜಕೀಯ ದೊಂಬರಾಟ  ರಾಜ್ಯವೇ ಅಕ್ಕಿ ಖರೀದಿಸುತ್ತಿಲ್ಲ-ಕೇಂದ್ರ; ಕೇಂದ್ರವೇ ಅಕ್ಕಿ ಕೊಡುತ್ತಿಲ್ಲ-ರಾಜ್ಯ ಕೇಂದ್ರ-ರಾಜ್ಯಗಳದು ರಾಜಕೀಯ ದೊಂಬರಾಟ...   ಗಂಡ-ಹೆಂಡಿರ ಜಗಳದಲಿ  ಕೂಸಿನ ಬಡಿದಾಟ; ಕೇಂದ್ರ-…
ವಿಧ: ಕವನ
February 23, 2025
ಸಾಲದ ಶೂಲಕ್ಕೆ ಸಿಲುಕುತ್ತಲೇ ಒದ್ದಾಡದಿರು ನೀನು ಸಾಲ ವಸೂಲಾತಿಯವರ ಜೊತೆ ಗುದ್ದಾಡದಿರು ನೀನು    ಮಲಗುವ ಚಾಪೆ ಇದ್ದಷ್ಟೇ ಕಾಲು ಚಾಚಲಿಲ್ಲ ಯಾಕೆ  ವಿಷ ಕುಡಿದು ಜೀವ ಉಳಿಸಲು ಹೊರಳಾಡದಿರು ನೀನು   ದುಡಿಮೆ ಒಳಗಿನ ಸುಖವ ಎಂದಿಗೂ ಅರಿತಿರುವಿಯೇನು ಗಟ್ಟಿ ದೇಹವ ಪಡೆದು ಜೀವನಕ್ಕೆ ಹೋರಾಡದಿರು ನೀನು    ಅತಿಯಾದ ಆಸೆಯು ಮುಂದೆ ನರಕವಾಗುವುದು ತಿಳಿಯೋ ಯಾವತ್ತೂ ಚಕ್ರ ಬಡ್ಡಿಯ ವ್ಯವಹಾರಕ್ಕೆ ಕುಣಿದಾಡದಿರು ನೀನು   ಸಂಸಾರದ ಒಲುಮೆಯ ಭವಿಷ್ಯಕ್ಕೆ ಮನಸಿಟ್ಟು ದುಡಿ ಈಶಾ ಏನೋ ಮಾಡಲು ಹೋಗಿ ಸೋಲೊಳು…
ಲೇಖಕರು: kavitha@ramesh
ವಿಧ: ಕವನ
February 22, 2025
ಐತಿಹ್ಯದ ಪುರಾಣದ ಧರ್ಮದ ಪುಣ್ಯಕಥೆಯು  ಕರ್ಣಾಕರ್ಣಿಕೆಯ ನಂಬಿಕೆಯ ದಂತಕಥೆಯು  ಮಹಾ ಕುಂಭಮೇಳದ ಪುಣ್ಯವನ್ನು ಪಡೆಯಲು    ಮಂಥನ ಕಾಲದ ಅಮರತ್ವದ ಅಮೃತ ಹನಿಗಳು  ಮಹಾ ಕುಂಭಮೇಳ ಇದು ಮಹಾ ಪರ್ವಕಾಲ  ಭವ್ಯ ಭಾರತದ ಪುಣ್ಯಭೂಮಿ ಪುಣ್ಯಕ್ಷೇತ್ರದಲ್ಲಿ  ಗಂಗಾ ಯಮುನಾ ಸರಸ್ವತಿ ಪುಣ್ಯ ನದಿಗಳಲ್ಲಿ  ಮುಳುಗಿ ಏಳುತ್ತಾ ಪುಣ್ಯಸ್ನಾನ ಸಂಗಮದಲ್ಲಿ  ಜನ್ಮಶುದ್ಧಿ ಆತ್ಮಶುದ್ಧಿಗಾಗಿ ಈ ಭೂಲೋಕದಲ್ಲಿ ಕರುಣಿಸಿದ ದೇವರು ಅವಕಾಶ ಮಾನವನಿಗಿಲ್ಲಿ  ಸಾಧು ಸಂತರು ತಪೋಶ್ರೇಷ್ಠರ ದರ್ಶನ ಭಾಗ್ಯದಲ್ಲಿ ತೊಳೆಯುತ ಎಲ್ಲ…