ಕವನಗಳು

ವಿಧ: ಕವನ
February 22, 2025
ಹಿಯಾಳಿಸಿದವರ ನಡುವೆ ಮತ್ತೆ ನೀನು ಸೇರಬೇಡ ಹಾಳಾಗುವೆ  ಚರಿತ್ರೆಹೀನರ ಜೊತೆಗೆ ಬೆರೆತು ಹೀಗೆಯೇ ಕೂಟಬೇಡ ಹಾಳಾಗುವೆ   ಪ್ರೀತಿ ಸಿಗದವರಿಂದ ದೂರವಾಗಿಯೇ ಇದ್ದರೆ ಒಳಿತಲ್ಲವೆ ನಿನಗೆ ಪ್ರೇಮಿಗಳ ತರಹ ಮೈಮರೆಯುತ್ತಲೇ ಕಾಡಬೇಡ ಹಾಳಾಗುವೆ   ಸ್ವಾರ್ಥಿಗಳ ಸುಳ್ಳುಗಳೆಡೆ ನಡೆವ ನಿನಗೇನು ಕೆಲಸವೋ ನಾನರಿಯೆ  ಉಪ್ಪರಿಗೆಯಲಿ ಕುಳಿತು ಹಾಡುವವರ ಸಂಗಬೇಡ ಹಾಳಾಗುವೆ    ನನ್ನಂತರಂಗದೊಳು ನೆಲೆಸಿ ಮಾತನ್ನು ಕೇಳುತ್ತಾರೆಯೆಂದು ತಿಳಿದೆಯಾ ಕನಸು ಮನಸ್ಸಿನಲ್ಲೂ ಹತ್ತಿರಬಾರದವರೊಡನೆ ಸಾಗಬೇಡ ಹಾಳಾಗುವೆ  …
ವಿಧ: ಕವನ
February 21, 2025
ರಮ್ಯಾ ಮತ್ತು ಮದುವೆ!  ಪಾಯಸದ ಸಿಹಿ ಊಟ ಯಾವಾಗ್ಲಾದ್ರೂ ಹಾಕಿಸಬಹುದು- ಓ ಮೋಹಕ ತಾರೆ ರಮ್ಯಾ...   ಈ ಮದುವೆಯ ಗತ್ತು ಗೈರತ್ತಿನ ಸಿಹಿ ಊಟ ಮಾತ್ರ- ಜೀವನದಲ್ಲಿ ಒಂದೋ ಎರಡೋ ಸಾರಿ ಅಷ್ಟೇ ಕಣಮ್ಮಾ! *** ಸಿ ಎಂ ಮತ್ತು ಕುರ್ಚಿ  ಗಾಲಿ ಕುರ್ಚಿಯಲ್ಲಿ ಸಿ ಎಂ- ಎಂತಹ ಪರಿಸ್ಥಿತಿಗೂ ಕುರ್ಚಿ ಬಿಟ್ಟುಕೊಡದ ಗಟ್ಟಿಗಾರಿಕೆ...   ಇದು- ಎಲ್ಲಾ ಲಘುವಾಗಿ ತೆಗೆದುಕೊಳ್ಳುವ ಸಿ ಎಂ ಗೆ- ದೇಹ ಕೊಟ್ಟ ಎಚ್ಚರಿಕೆ! *** ಜನರ ಮಧ್ಯೇ ಖುಷಿ ಪಡುವ ಸರದಾರ!  ರಾಜಕೀಯ ನಿವೃತ್ತಿ ಇಲ್ಲ; ಜನರ ಮಧ್ಯೆ ಇರುವುದೇ ಖುಷಿ…
ವಿಧ: ಕವನ
February 20, 2025
ನಮ್ಮ ಬದುಕಿನ ನಡೆಗೆ ನಾವು ನಡೆಯುತ ಸಾಗಿ ನಮ್ಮೊಳಗಿನ ನುಡಿಗೆ ಶರಣಾಗುವ ನಮ್ಮ ಬಾಂಧವ್ಯವು ತೇರನೆಳೆಯುತಲಿರಲಿ ನಮ್ಮನಾಳುವ ಕುಲದಿ ಒಂದಾಗುವ   ಭಾವವಿದು ಪುಣ್ಯವಿದು ಮನುಜ ಸ್ನೇಹದ ನುಡಿಗೆ ಭಾವದೊಳು ನಮಿಸುತಲಿ ಕೈಹಿಡಿಯುವ ಭಾವಾಂತರಂಗದೊಳು ಮನವು ಕುಣಿಯುತ ಸಾಗೆ  ಭಾವನೆಯ ರೂಪದೊಳು ಜೊತೆ ಸೇರುವ    ಸೇವೆಗಳ ಮಾಧೂರ್ಯ ಉಣುತ ಸಾಗುತಲಿರಲು ಸೇವೆಯಲಿ ಹೊಸೆಯೋಣ ಹೊಸರಾಗವ ಸೇವಾಶ್ರಮದೊಳಗೊಳಗೆ ಕುಳಿತಿರಲು ನಾವಿಂದು ಸೇವೆ ಪುಣ್ಯಗಳೊಳಗೆ ಚೆಲುವಾಗುವ    ಕನಸುಗಳ ಬೆಸುಗೆಯೊಳು ನನಸುಗಳೆ ಕೂಡಿರಲು…
ವಿಧ: ಕವನ
February 19, 2025
ಬೆಂದಿರುತ ನೋವಿನಲಿ ನಡೆದವರ ನೋಡು  ನೊಂದಿರುತ ಕಣ್ಣೀರ ಸುರಿಸಿದವರ ನೋಡು   ಸಮಾನ ತತ್ವಗಳು ಇಲ್ಲದ ಘೋಷಣೆಗಳು ಯಾಕೆ  ನಡೆಯುವಾಗ ಚಪ್ಪಲಿಯೇ ಹಾಕದವರ ನೋಡು   ಏನು ಸರಿಯಿದೆಯೆಂದು ಈ ಬುವಿಗೆ ಬಂದೆಯೊ ವರ್ಣಗಳ ಜೊತೆ ಜೊತೆಗೆ ಒದ್ದಾಡುವರ ನೋಡು   ಕಪಿ ವಂಶದವರೇ ಎಲ್ಲೆಲ್ಲೂ ಕಾಣುತಿಹರು ಏಕೆ ಮತಿಗೆಟ್ಟ ಲೋಕದೊಳು ಹಾರಾಡುವರ ನೋಡು   ಸ್ವತಂತ್ರ  ಭಾವನೆಗಳು ಸುತ್ತಲೂ ತುಂಬಿದೆ ಈಶಾ ಬಡತನ ಬುವಿಗಿಂದು ಶಾಪ ಎನ್ನುವರ ನೋಡು -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
February 18, 2025
ಗಝಲ್ ೧ ವೇಷಕ್ಕೆ ಹಾಕಿದ್ದ ಬಣ್ಣ ರೆಜ್ಜ ಸಮಯಲ್ಲೆ ಮಾಸುತ್ತು ಕೂಸೆ ಕಿರೀಟಂಗಳ ತಲೆಲಿ ಹೊತ್ತಿದ್ದರೂ ನಡೆವಾಗ ಬೀಳುತ್ತು ಕೂಸೆ   ಎಲ್ಲವೂ ಎನ್ನಂದಲೇ ಹೇಳುವವರ ಮನೆಯೊಳಗಿನ ಮನವೆರಡೂ ಕುಸಿದಿರ್ತು ತಲಗೇರಿದ ಅಮಲು ಜೀವಿತದ ಅವಧಿಯೇ ಹೀಂಗೇ ಇಳಿತ್ತು ಕೂಸೆ   ಗೊಂತ್ತಿಪ್ಪವರ ಕಾಲಿಂಗೆ ಮೂಗಿಲಿಯ ಹಾಂಗೇ ವರೆಸುವುದರ ನಿಲ್ಲಿಸಿದರೆ ಒಳ್ಳೆದು ದಿನ ಕಳೆದಾಂಗೆ ಹೃದಯಲ್ಲಿ ಕೂದೊಂಡಿದ್ದ ಆತ್ಮವೂ ಕೂಗುತ್ತು ಕೂಸೆ   ಸ್ವಂತ ಬುದ್ಧಿಯ ಮುಕ್ಕಿತಿಂಬಾ ಕೆಲಸಕ್ಕೆ ಹೋಗದ್ದೇ ಇನ್ನಾದರೂ ಬದುಕುವುದರ ಕಲಿ…
ವಿಧ: ಕವನ
February 17, 2025
ಗಂಡು -- ಓ ಸಖಿಯೆ ನಿನ್ನ ಒಲವಿಗಾಗಿ ಹಂಬಲಿಸುತ್ತಿರುವೆ ಬಳಿ ಬಂದು ಕೈಹಿಡಿದು ಪ್ರೀತಿ ಕೊಡಲಾರೆಯಾ ||ಪ||   ತೇಲಿ ಬಿಡೇ ತೇಲಿ ಬಿಡೇ ತೇಲಿ ಬಿಡೇ ಒಲವಿನಲ್ಲಿ ನನ್ನನೆಂದು ತೇಲಿಬಿಡೇ ಬಾಳ ದೋಣಿ ಜೀವದಲೆಲಿ ಸಾಗುತಿದೆ ನೀನು ಬಂದು ನನಗೆಯಿಂದು ಮುತ್ತು ಕೊಡೇ || ತೇಲಿಬಿಡೇ||   ನಿನ್ನ ಬಂಧಿಯಿಂದು ಮೋಹಪಾಶದೊಳಗೆ  ಉಸಿರುನಿಂತ ವೇದನೆಯಲ್ಲಿ ನರಳುತಿಹೆ ಕೈಯ ಬೆಸೆದು ಮೈಯ ತಬ್ಬು ನನ್ನೊಲವೆ ಬದುಕಿಯಿರುವೆ ಒಂದು ಕ್ಷಣ ನಿನ್ನಯೆದುರೆ ||ತೇಲಿಬಿಡೇ||   ರಾತ್ರಿಯಾಗೆ ಹಾಲ್ ಬೆಳಕೂ ಚುಚ್ಚುತಿಹುದೆ…
ವಿಧ: ಕವನ
February 16, 2025
ನೀನಿಲ್ಲದೆ ಛಲವು ಬರುವುದೆ ಗೆಳತಿ ನಾನಿಲ್ಲದೆ ಮನವು ಗೆಲುವುದೆ ಗೆಳತಿ   ಸ್ಥಳವಿಲ್ಲದೆ ಯಾನವು ಸಾಗುವುದೆ ಗೆಳತಿ ಬುಡವಿಲ್ಲದೆ ಮರವು ಉಳಿವುದೆ ಗೆಳತಿ   ಗುಣವಿಲ್ಲದೆ ತನುವು ಇರುವುದೆ ಗೆಳತಿ ಮಧುವಿಲ್ಲದೆ ಜೀವವು ಸೇರುವುದೆ ಗೆಳತಿ   ಜೀವವಿಲ್ಲದೆ ಪಂಥವು ಮೆರೆವುದೆ ಗೆಳತಿ ಸವಿಯಿಲ್ಲದೆ ಒಲವು ಮೂಡುವುದೆ ಗೆಳತಿ   ಈಶನಿಲ್ಲದೆ ಭಯವು ಕಾಣುವುದೆ ಗೆಳತಿ ಕನಸಿಲ್ಲದೆ ಚೈತ್ರವು ತಬ್ಬುವುದೆ ಗೆಳತಿ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
February 15, 2025
ಮೆಟ್ರೋ ಪ್ರಯಾಣ ದರ ಏರಿಕೆ... ಸ್ಮೂತಾಗಿ  ಸ್ಪೀಡಾಗಿ ಆಕಾಶದಲ್ಲಿ ಹಾರಾಡುವುದೆಂದರೆ- ಅಷ್ಟು ಸುಲಭವೇನೋ ಹುಚ್ಚಾ...   ಮೆಟ್ರೋ ಪ್ರಯಾಣ ದರಕೆ- ನೀ ತೆರಬೇಕು ಕೊಂಚ ಹೆಚ್ಚು ವೆಚ್ಚ! *** ರಮ್ಯಾ ಮತ್ತು ಮದುವೆ!  ಪಾಯಸದ ಸಿಹಿ ಊಟ ಯಾವಾಗ್ಲಾದ್ರೂ ಹಾಕಿಸಬಹುದು- ಓ ಮೋಹಕ ತಾರೆ ರಮ್ಯಾ...   ಈ ಮದುವೆಯ ಗತ್ತು ಗೈರತ್ತಿನ ಸಿಹಿ ಊಟ ಮಾತ್ರ- ಜೀವನದಲ್ಲಿ ಒಂದೋ ಎರಡೋ ಸಾರಿ ಅಷ್ಟೇ ಕಣಮ್ಮಾ! *** ಸಿ ಎಂ ಮತ್ತು ಕುರ್ಚಿ  ಗಾಲಿ ಕುರ್ಚಿಯಲ್ಲಿ ಸಿ ಎಂ- ಎಂತಹ ಪರಿಸ್ಥಿತಿಗೂ ಕುರ್ಚಿ ಬಿಟ್ಟುಕೊಡದ…
ವಿಧ: ಕವನ
February 14, 2025
ನಾನು ಇರುವಲ್ಲಿಗೇ ನೀನು ಹಾರಿ ಬಿಡು ನನಗೆ ಸಮಸ್ಯೆಯೆ ಆಗದಂತೆ ಕೇಳಿ ಬಿಡು   ನೀನು ಪಲ್ಲವಿಯ ಉಸಿರಿನೆಡೆ ಹೊರಟೆಯೇನು ನಿನಗೆ ಗೊತ್ತಿರುವಂತೇ ನನ್ನನಿಂದು ದಾಟಿ ಬಿಡು   ನಾನು ಗತಿಯು ಇಲ್ಲದವನೆಂದೇ ಕರೆದೆಯೇನು ನನಗೆ ಬದಲಾಗಲಾರದವನೆಂದು ಕಾಡಿ ಬಿಡು   ನೀನು ಹೆಸರಾದರೆ ಒಲವ ತರುವೆಯೇನು ನಿನಗೆ ಬಯಸಿದ್ದೆಲ್ಲ ಸಿಕ್ಕಿದರೆ ತೇಲಿ ಬಿಡು   ನಾನು ಮೌನವಾದರೆ ಕನಸಲ್ಲಿ ಸರಿಯದಿರು ನನಗೆ ಈಶನಿಂದು ಎದುರಾದರೆ ಬಾಗಿ ಬಿಡು   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
February 13, 2025
ಗಝಲ್ ೧ ಕೂಗಲಿಲ್ಲ ಮತ್ತೆ ಚೆಲುವೆ ಯುದ್ಧ ನಡೆದು ಹೋಯಿತಲ್ಲ ಸಾಯಲಿಲ್ಲ ನೋಡು ಎನುತ ಕಲ್ಲು ಹೊಡೆದು ಹೋಯಿತಲ್ಲ   ಕಾಯಲಿಲ್ಲ ಸಮಯ ಕೂಡ ದೂರ ದೂರ ಸಾಗಿತೇಕೆ ಸೋಲು ಇರದ ಬಯಲಿನಲ್ಲಿ ಭಟರ ಎಸೆದು ಹೋಯಿತಲ್ಲ   ಬೆಟ್ಟಗುಡ್ಡ ಶಿಖರದಲ್ಲಿ ಒಂಟಿ ಪಕ್ಷಿ ಅಲ್ಲಿ ನೋಡು ತಾಳ ತಪ್ಪಿ ಬೀಳುವಾಗ ಅಲ್ಲೇ ಮಡಿದು ಹೋಯಿತಲ್ಲ   ಬೇಸರದಾ ಸುಳಿಯ ಒಳಗೆ ಸಿಲುಕಿ ನರಳಲೇಕೆ ಬಾಳು ಮೌನದಾಗೆ ಇರುವ ವಿಷವು  ಹೃದಯ ಅರೆದು ಹೋಯಿತಲ್ಲ   ರಾತ್ರಿಯಲ್ಲೆ ಕತ್ತಲಲ್ಲಿ ಪ್ರೀತಿ ಒಪ್ಪಿ ಇರಲು ಈಶ ದ್ವೇಷ ವೇಷ ಕಳಚುತಿರೇ ಮೋಹ…