ಕವನಗಳು

ವಿಧ: ಕವನ
February 12, 2025
ಗಝಲ್ ೧ ನೆನಪದು ಕುಸಿದಿದೆ ಕನಸದು ಬೀಳದ ಹಾಗೆ ಮನವದು ಸೊರಗಿದೆ ಪ್ರೀತಿಯು ಹಾಡದ ಹಾಗೆ   ಬಾನಲಿ ತೇಲುವ ಮೋಡವು ಕರಗಿದೆ  ಯಾಕೆ  ಮೋಹದ ಚೆಲುವಿನ ತಾರೆಯ ರೂಪದ ಹಾಗೆ   ಸುಮಧುರ ತುಂಬಿದ ಪಾತ್ರೆಯು ಸೋರಿತೆ ಹೀಗೆ  ಕಂಡಿಹ ಚಿತ್ರದಿ ಬಣ್ಣವು ಮಾಸದ ಹಾಗೆ   ಜೀವನ ಪಾವನ ಲಯದಲಿ ಕಾಣದೆ ಬೆಳಕು ಭಾವನೆ ಸೃಷ್ಟಿಯ ಸೊಬಗದು ತೀರದ ಹಾಗೆ   ನೋಟದ ಅರ್ಥವು ತಿಳಿಯದೆ ಸೋತನೆ ಈಶ ಅಂತರ ಪರದೆಯ ಒಳಗಿನ ಬಿಂಬದ ಹಾಗೆ *** ಗಝಲ್ ೨ ಮಧು ಚಂದ್ರದ ಹುಣ್ಣಿಮೆಯ ದಿನ ನಿನ್ನ ಬರುವಿಕೆಗಾಗಿ ಕಾಯುತ್ತಿದ್ದೇನೆ ಚೆಲುವೆ…
ವಿಧ: ಕವನ
February 11, 2025
ಕಿತ್ತ್ಹೋಯ್ತು ಅರ್ಹತೆ!  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೆ ಕನ್ನಡ- ಬರೆಯೊಕೆ ಬರಲ್ಲ ಶಿಕ್ಷಣ ಮಂತ್ರಿಗೆ; ಓದೋಕ್ ಬರಲ್ಲ...   ಅಯ್ಯೋ ಹುಚ್ಚಾ- ಅವರಿಬ್ರಿಗೂ ಇವೆರೆಡೂ ಬಂದಿದ್ರೇ- ಅವರಿಬ್ರೂ ಮಂತ್ರಿಗಳೇ  ಆಗ್ತಿರ್ಲಿಲ್ಲ! *** ದೀಪ ಮತ್ತು ಕಗ್ಗತ್ತಲು!  ಗೊಂದಲ ಆತಂಕಗಳಿಂದ ಬೇಸತ್ತ ರಾಜ್ಯ ನಾಗರೀಕ ಸೇವಾಕಾಂಕ್ಷಿಗಳು- ಕೆ ಪಿ ಎಸ್ ಸಿ ಮತ್ತೆ ಫೇಲ್....   ಅಯ್ಯೋ ಉರಿಯುವ ದೀಪದಡಿಯಲಿ ಕತ್ತಲಿರುವಂತೆ- ಬೆಳಕ ಕೊಡಬೇಕಾದ ಸಂಸ್ಥೆ ಕಗ್ಗತ್ತಲಿನೋಳ್! *** ಬೆಳ್ಳಿ-ಬಂಗಾರ  ಮಾತು…
ವಿಧ: ಕವನ
February 10, 2025
ಶಿರವೇ ಇಲ್ಲದಿಹ ನುಡಿಗಳಿಂದ ಸತ್ವಹೀನ ಸಾಹಿತ್ಯಗಳು ಬರುತ್ತವೆ ಬರಹದ ಮಹತ್ವವನ್ನು ಅರಿಯದೆ ಬರಿದೆ ವಾದಗಳು ಬರುತ್ತವೆ   ಯಾರೋ ಹೊಗಳಿದ ಮಾತ್ರಕ್ಕೆ ಜೊಳ್ಳು ಕಾಳುಗಳು ಗಟ್ಟಿಯಾದಿತೆ ಕಾರಣವಿಲ್ಲದೆಯೆ ತೆಗಳುವವರ ನಡುವೆಯೇ ದ್ವೇಷಗಳು ಬರುತ್ತವೆ   ಮುಡಿಯೊಳಗೆ ಒಣಗಿದ ಗುಲಾಬಿಗಳು ಇರುವಂತೆ ಕವನಗಳು ಇರಬೇಕೆ ಮಡಿಯವರ ಬಾಯಿಯೊಳಗಿನ ಚಪಲವ ಕಂಡಾಗ ರೋಷಗಳು ಬರುತ್ತವೆ   ಚಿಗುರೆಲೆಯಲ್ಲೂ ಹೀಗೆ ಹೊಸತನದ ಕಾವ್ಯಗಳ ಕಾಣಬಹುದು ಬರೆಯುತಿರು ಹಗೆಯಿರುವವರ ನಡುವೆಯೇ ತುಂಬಾ ದ್ವಿಮುಖವೆನಿಪ ವೇಷಗಳು…
ವಿಧ: ಕವನ
February 09, 2025
ಸೂರ್ಯನು  ಸೆರೆಯಲ್ಲಿರುವ ಲೋಕದಲಿ ಚಂದಿರನು ಪ್ರತಿಫಲಿಸುವುದು  ಬೆಳಕನ್ನಲ್ಲ, ಕಾರ್ಗತ್ತಲ ವೈಭವವನ್ನು...   ಕರಪತ್ರಗಳು ಖೈದಾಗಿರುವ ಕಾಲದಲ್ಲಿ  ಸುಮ್ಮಾನದ ಕವಿಗಳು  ಬರೆವುದು   ಕವನವನ್ನಲ್ಲ, ತಮ್ಮ ತಮ್ಮ ಖಾಯಿಲೆಯ ವಿವರಗಳನ್ನು ..    ಘೋಷಣೆಗಳು ನಿಷೇಧವಾಗಿರುವ ದೇಶದಲ್ಲಿ  ಸುಭಗರು ಪಲುಕುವುದು  ಸಂಗೀತವನ್ನಲ್ಲ, ಸಂಗಾತವಿಲ್ಲದ ಸಂಗತಿಗಳನ್ನು ..    ನ್ಯಾಯವಿಲ್ಲದ ಕಾನೂನನ್ನು  ಮಾನ್ಯಮಾಡುವ  ಮೆರವಣಿಗೆಗಳು   ಪ್ರತಿರೋಧವಲ್ಲ, ಸುಂದರವಾದ ಆತ್ಮವಂಚನೆ ..  -ಶಿವಸುಂದರ್ ಚಿತ್ರ ಕೃಪೆ:…
ವಿಧ: ಕವನ
February 08, 2025
ಮಹಾ ಮಹಿಮರು ಬರೆದುದೆಲ್ಲಾ ಯಾವತ್ತಿಗೂ ರೂಪಕಗಳೇ ? ಪಾಪ , ಕಷ್ಟ ಪಟ್ಟು ಓದಿ ಅರೆದು ಕುಡಿದು ಜೀರ್ಣಿಸಿ ಕೊಂಡು ಬರೆದವನ ಬರಹ ನೋಡಿ ಹೇಳುವರು ಇದರಲ್ಲೇನಿದೆ ಎಲ್ಲಾ ವಿ ರೂಪಕಗಳೇ ...... ?! ಛಲವಾದಿಯೆ ! *** ಬಲ್ಲಿರಾ ಗಾಂಧಿ  ನಿನ್ನ ನೆನಪುಗಳು  ಮೂಲೆ ಕಂಬವನು ಹಿಡಿದು ಕುಳಿತಿವೆ ಇದಕ್ಕೆಲ್ಲ  ಇಂದು ಹೊಣೆ ಯಾರು? *** ಹನಿಗಳು ಮಾತಿನೊಳಗೆ ಹಿಡಿತವಿದ್ದಂತೆಯೇ ಕೃತಿ ಬರಲಿ ! *** ಒಲವಿನಾಟ ಹಿತಮಿತದಲ್ಲಿರೆ ಸುಖ ಸಂಸಾರ ! *** ಕಸ್ತೂರಿಯಲಿ ಪರಿಮಳವಿದ್ದಂತೆ ಬದುಕಿರಲಿ! *** ಸವಿ ನೆನಪು…
ವಿಧ: ಕವನ
February 07, 2025
ಅಮ್ಮ...!  ಆಕೆ- ನನ್ನ ಪ್ರೀತಿಯ ಅಮ್ಮ... ತೋರಿಸಿ ಹೆದರಿಸಲಿಲ್ಲ ಎಂದೂ ಭಯದ ಗುಮ್ಮ....   ತುತ್ತು ತುತ್ತಿಗೊಂದು ಎನ್ನ  ಕೆನ್ನೆಗಳಿಗೆ ಲೊಚಲೊಚನೆ ಮುತ್ತನಿತ್ತದ್ದ ನೋಡಿ- ನಾಚಿಕೊಂಡನೇ ಆ ಸೃಷ್ಟಿಕರ್ತ ಬ್ರಹ್ಮ!? *** ಜೀವನದ ಸರಾಸರಿ  ತೆಗಳಿದರು- ಕೊರಗಲಿಲ್ಲ; ಹೊಗಳಿದರು ಹಿಗ್ಗಲಿಲ್ಲ; ಬರೀ ನಿಟ್ಟುಸಿರಬಿಟ್ಟೆ...   ನಾನು  ಗಣಿತದ ಮೇಷ್ಟ್ರು- ಎರಡನೂ ಸೇರಿಸಿ ಸರಾಸರಿ ಮಾಡಿ ಅರೆದು ಕುಡಿದುಬಿಟ್ಟೆ! *** ಕಣ್ಣೀರು ಮತ್ತು ಜ್ವಾಲಾಗ್ನಿ  ಸುರಿವ ಮಳೆಯೊಳಗೆನ್ನ ನಿಲ್ಲಿಸಿಬಿಡು ದೇವಾ- ಎನ್ನ…
ವಿಧ: ಕವನ
February 06, 2025
ಗಝಲ್ ೧ ಹೂಡು ಬಾಣವ,ಹುಷಾರು ಮನ್ಮಥ ಬಂದಾನು ಸಖಿ ಕಾಡು ಪ್ರೀತಿಯ ಸವಿಗೆ, ಬಳಿಯೇ ನಿಂದಾನು ಸಖಿ   ಸೇಡು,ಭ್ರಮೆಯ ಕೊನೆಗೆ ಸಾವೇ ಎರಗಿತು ಯಾಕೆ  ನಡು ಉಳುಕಿಸಿ,ಹಾಡುವ ಹಾಡಿಗೆ ಬೆಂದಾನು ಸಖಿ    ಕೇಡು ಬರದಿರಲಿ, ಒಲುಮೆ ಉಕ್ಕಿದ ಸಮಯ ಬಂತು  ಬಾಡದೆ,ಕೈಹಿಡಿದು ನಲುಮೆಯ ಹೀಗೆ ತಂದಾನು ಸಖಿ   ತೀಡು ಗಂಧದಂತೆ ಮೈಮನವ,ನಿರ್ಮಲ ಆಗಲಿ ಇಂದೆ ಬೇಡು ಒಳ್ಳೆಯ ವಿಚಾರವ, ದ್ವೇಷವ  ಕೊಂದಾನು ಸಖಿ    ನಾಡು, ನೋಡು ಎಂದಿಗೂ ಸಲಹಿದೆ ನಮ್ಮನ್ನು ಈಶಾ ಹೂಡು, ನಲ್ಮೆಯ ಸವಿಯೆ ಪ್ರೀತಿಯ ತಿಂದಾನು ಸಖಿ  ***…
ವಿಧ: ಕವನ
February 05, 2025
ವಿಧಿ ವಿಲಾಸ  ಅಮೇರಿಕಾದಲ್ಲಿ ಹೆಲಿಕಾಪ್ಟರ್ ಗೆ ವಿಮಾನ ಢಿಕ್ಕಿ ಅರವತ್ತೇಳು ಮಂದಿ ಸಾವು- ಏನೀ ದುರಂತ....?   ವಿಶಾಲ ವಿಸ್ತಾರ ಗಗನದಲ್ಲೇ ಈ ಅವಗಢ! ಇನ್ನು ರಸ್ತೆಯ ಮೇಲೆ  ಆಗುವ ಅಪಘಾತ-  ಹೇಳಲಿ ಏನಂತ? *** ಯಾರಾದರೂ ಬರ್ರಪ್ಪಾ... ಲೋಕಾ ಬೇಟೆಯಲ್ಲಿ ಅಧಿಕಾರಿಗಳ- ಹದಿನೆಂಟು  ಕೋಟಿ ರೂ ಅಕ್ರಮ  ಸಂಪತ್ತು ಪತ್ತೆ....   ಅಯ್ಯೋ- ರಾಜಕಾರಣಿಗಳ ಸಂಪತ್ತನ್ನು ಬೇಟೆಯಾಡುವ ಕಲಿಗಳು ಯಾರೂ  ಹುಟ್ಟಲಿಲ್ಲವೇ ಮತ್ತೇ? *** ಕ್ಷಮಿಸವರನು ಗಾಂಧೀ ತಾತಾ  ಓ ಗಾಂಧಿ ಮಹಾತ್ಮಾ- ಸತ್ಯವದು ಔಷಧಿಯೊಲು ಬಲು…
ವಿಧ: ಕವನ
February 04, 2025
ಮುನಿಸು ಕಳೆದು ಮಾತು ನೆಗೆಯಲಿ ಗೆಳತಿ ಕನಸು ಒಡೆದು ನನಸು ಹೊಳೆಯಲಿ ಗೆಳತಿ   ಚೆಲುವು ಅರಳಿ ರಶ್ಮಿ ಸುರಿಯದೆ ಹಾಡಿತೆ ಒಲವು ಚಿಗುರಿ ಪ್ರೀತಿ ಕರೆಯಲಿ ಗೆಳತಿ   ಸವಿಯ ಸುಖದಿ ಚಿತ್ತ ಕುಣಿಯುತ ಸಾಗಿದೆ ನಲಿವ ಹೊಂದುತ ಬಾಳು ಸೆಳೆಯಲಿ ಗೆಳತಿ   ಖುಷಿಯ ಸುಖದಿ  ಪ್ರೇಮ ಅರಳುತ ಬೆಳೆದಿದೆ ದೆಸೆಯು ಬರುತ ಮೋಹ ಬೆಸೆಯಲಿ ಗೆಳತಿ   ಮನದಿ ರಣಿತ ಬೆಳಗುತ ನಡೆದನೆ ಈಶಾ ವರದಿಯ ಪಾಠವು ಕಣ್ಣ ಬೆರೆಯಲಿ ಗೆಳತಿ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
February 03, 2025
ಹಾಡು ಹಕ್ಕಿಯೆ ನೀ ಹಾಡು ಎನ್ನ ಒಲವಿನ ನೀ ಹಾಡು ಹಾಡುತಲೆ ನೀ ಸಾಗುತಲೆ ಎನ್ನ ಪ್ರೇಯಸಿಗೆ ನೀ ಹಾಡು   ಮನೆಯ ಹಿಂದಿನ ಒಂಟಿ ಕಲ್ಲಲಿ ಕುಳಿತು ನನ್ನನೆ ನೋಡುತಿದ್ದೆ ಕಣ್ಣ ಸನ್ನೆಲಿ  ಕರೆದು ನನ್ನನು ಹತ್ತಿರಕೆ ಸೆಳೆದೆಯೇಕೆ ?  ಹೇಳೆ ನನ್ನ ಕೋಮಲೆ ?   ರಾತ್ರಿ ಚೆಲ್ಲಿದ ಚಂದ್ರ ಬೆಳಕಲಿ ಮನೆಯ ಮುಂದಿನ ಜಾಲಲಿದ್ದೆ ಹಾಲ ಬಣ್ಣದಿ ಹೊಳೆಯುತಿದ್ದೆ ನಿನ್ನ ಚೆಲುವಿಗೆ ಮರುಳನಾಗಿ ಬಂದು ನಿಂತಿಹೆ ಸನಿಹದಲ್ಲೆ ಹೇಳೆ ನನ್ನ ಕೋಮಲೆ ?   ಮನದ ಮೂಲೆಲಿ ಪ್ರೇಮದೊರತೆಯ ಚಿಮ್ಮಿಸಿ ನೀ ದೂರ ಸಾಗಿದೆ ನನ್ನ…