ಕವನಗಳು
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 03, 2025
ಹಾಡು ಹಕ್ಕಿಯೆ ನೀ ಹಾಡು
ಎನ್ನ ಒಲವಿನ ನೀ ಹಾಡು
ಹಾಡುತಲೆ ನೀ ಸಾಗುತಲೆ
ಎನ್ನ ಪ್ರೇಯಸಿಗೆ ನೀ ಹಾಡು
ಮನೆಯ ಹಿಂದಿನ ಒಂಟಿ ಕಲ್ಲಲಿ
ಕುಳಿತು ನನ್ನನೆ ನೋಡುತಿದ್ದೆ
ಕಣ್ಣ ಸನ್ನೆಲಿ ಕರೆದು ನನ್ನನು
ಹತ್ತಿರಕೆ ಸೆಳೆದೆಯೇಕೆ ?
ಹೇಳೆ ನನ್ನ ಕೋಮಲೆ ?
ರಾತ್ರಿ ಚೆಲ್ಲಿದ ಚಂದ್ರ ಬೆಳಕಲಿ
ಮನೆಯ ಮುಂದಿನ ಜಾಲಲಿದ್ದೆ
ಹಾಲ ಬಣ್ಣದಿ ಹೊಳೆಯುತಿದ್ದೆ
ನಿನ್ನ ಚೆಲುವಿಗೆ ಮರುಳನಾಗಿ
ಬಂದು ನಿಂತಿಹೆ ಸನಿಹದಲ್ಲೆ
ಹೇಳೆ ನನ್ನ ಕೋಮಲೆ ?
ಮನದ ಮೂಲೆಲಿ ಪ್ರೇಮದೊರತೆಯ
ಚಿಮ್ಮಿಸಿ ನೀ ದೂರ ಸಾಗಿದೆ
ನನ್ನ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 02, 2025
ಸುತ್ತ ಮುತ್ತಲು ಕಪ್ಪು ಕತ್ತಲೆಯೇ ತುಂಬಿದೆ ಗೆಳೆಯ
ಅತ್ತ ಇತ್ತಲೂ ವಪ್ಪಿಯ ಹಿಡಿತವೇ ಕಂಡಿದೆ ಗೆಳೆಯ
ಕಾವು ತುಂಬಿದ ನೆಲದಲಿ ತಂಪಿನೊಲವು ಪಸರಿಸಿದೆ ಯಾಕೆ
ಉಸಿರ ಹಸಿರಿನ ಚೆಲುವದು ನಡೆಯದೇ ನಿಂತಿದೆ ಗೆಳೆಯ
ಮಲ್ಲಿಗೆಯ ಬನದಲ್ಲಿ ಕಂಪ ಪರಿಮಳ ಹರಡದೆ ಇದ್ದೀತೆ
ಮೆಲ್ಲಗೆ ಹತ್ತಿರ ಪ್ರೀತಿಯದು ಓಡುತಲೇ ಬಂದಿದೆ ಗೆಳೆಯ
ಬಾನು ಬುವಿಯಂತೆ ನನ್ನವಳ ಒಡನಾಟ ಹೀಗೆಯೇ ಸಾಗಲಿ
ಕೈಹಿಡಿದ ನನಸದು ಸವಿಯೊಳು ಹಿತವನೇ ತಂದಿದೆ ಗೆಳೆಯ
ಮನದೊಳಗೆ ಹೊಸ ಬಗೆಯದು ಉಕ್ಕಿ ಹೊಮ್ಮಲಿ ಈಶಾ
ಹಳೆಯ ಕೊಳಕಿನ ವಿಷಯ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
February 01, 2025
(ಲಲಿತ ಲಯ ಚೌಪದಿ)
ನಂಬಿರುವ ದೈವ ಭಕ್ತರು ಭರತ ಖಂಡದಲಿ
ತುಂಬ ಹುರುಪಿನಲಿ ಯಾತ್ರೆಯ ನಡೆಸುತ|
ಮುಂಬರುವ ದಿನಗಳಲಿ ಜೊತೆಗೆ ಸೇರುತ ಮಹಾ
ಕುಂಭ ಮೇಳದಲುತ್ಸುಕತೆ ತೋರುತ ||೧||
ತುಂಬಿರಲು ಕೋಟಿ ಜನ ಜಂಗುಳಿಯು ಸಂತಸದಿ
ತುಂಬಿ ಹರಿಯುತಿಹ ನದಿಯಲ್ಲಿ ಮಿಂದು|
ಚೆಂಬಿನಲಿ ಪಾವನದ ತೀರ್ಥವಂ ಶ್ರದ್ಧೆಯಲಿ
ತುಂಬುವರು ತಲೆಯಲ್ಲಿ ನಡೆದು ಮುಂದು ||೨||
ನಂಬಿಕೆಯ ಸಮ್ಮಿಲನವಾಗಿರಲು ದೇಶದೊಳು
ಕುಂಭ ಮೇಳವು ವಿಶೇಷವೆನಿಸುತಲಿ|
ಬೆಂಬಲಿಸುತಲಿ ಮಂದಿ ನಡೆದಾಡಿ ಹಗಲಿರುಳು
ತುಂಬು ಹೃದಯದಲಿ ಸಹಕರಿಸುತ್ತಲಿ||…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 31, 2025
ಗಝಲ್ ೧
ಮನದ ಕದವ ತೆರೆಯ ಬಾರೆ
ತನುವಿನೊಳಗೆ ಹರೆಯ ಬಾರೆ
ಹೂವಿನಂತೆ ಸೊಬಗು ಸಾಕೆ
ಒಲವನಿಂದು ಎರೆಯ ಬಾರೆ
ಸಿರಿಯ ಕಂಡು ಬೇಡ ಮೋಹ
ಅರಿತು ಪ್ರೀತಿ ಕರೆಯ ಬಾರೆ
ಒಂದು ಎನುವ ಭಾವವಿರಲಿ
ದ್ವೇಷ ಪಾಶ ಮರೆಯ ಬಾರೆ
ಸಂಗದೊಳಗೆ ಮಿಂದ ಈಶಾ
ಚೆಲುವಿನೊಳಗೆ ಬೆರೆಯ ಬಾರೆ
***
ಗಝಲ್ ೨
ನಾನು ನಾನೊಬ್ಬನೇ ಗೆಲುವು ನನ್ನಿಂದಲೇ ಎನ್ನುವರು ಶಿವಾ
ಬದುಕಲ್ಲು ಬರಹದಲು ಜೀವನದಲೆಲ್ಲ ನಾನೆನುವರು ಶಿವಾ
ಭಜನೆಯ ಗೀಳಿಲ್ಲ ಮಾಲು ಸಂಸ್ಕೃತಿಗಳೇ ಎಲ್ಲಾ ಯಾಕೆ ಹೇಳು
ಬರು ಬರುತ್ತಾ ಕುಲಗೆಟ್ಟ ಸಮಾಜವ ಹುಟ್ಟು…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 30, 2025
ನನ್ನ ಹಳ್ಳಿಯ ಜನರ ಒಡಲಿದೊ
ಬರಿದೆ ಅಗ್ನಿ ಕುಂಡ
ಅಲ್ಲಿ ಬರದ ಕಾರ್ಮೋಡದಲ್ಲಿ
ನೇತಾರ ಇದ್ದು ದಂಡ
ಕೂಳು ಕೂಳಿಗು ಗತಿಯು ಇಲ್ಲದೆ
ಜನರ ವಲಸೆ ಹಾಡು
ಹವಾ ರೂಮಲೆ ಕುಳಿತ ನಾಯಕನ
ಹೊಟ್ಟೆ ಬಿರಿಯೆ ನೋಡು
ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ
ಕಾರುಬಾರು ನೋಡು
ಹಳ್ಳಿ ಜನರ ಜೋಪಡಿಯ ತುಂಬಾ
ಬರಿದೆ ಗಾಳಿ ನೋಡು
ಜಲವು ಬತ್ತಿದ ಕೆರೆಯ ಮಣ್ಣಲಿ
ಸತ್ತ ದನದ ಕೊಂಬು
ನೀರು ಇಲ್ಲದೆ ಒಣಗಿ ಕರಟಿದ
ಭತ್ತ , ರಾಗಿ ಕಬ್ಬು
ಎಲುಬುಗೂಡಿನ ಹರೆಯ ಹೆಣ್ಣಿನ
ಮನದಿ ಆಸೆ ಇಲ್ಲ
ಜಲವು ಸಿಕ್ಕರೆ ಸಾಕು ಎನ್ನುತ
ಕೊಡದಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 29, 2025
ನಡುಪಂತೀಯ
ಏಡಗೈ
ಬಲಗೈಗಳ ಮಧ್ಯೆ
ನನ್ನ ದೇಹವದು
ಇದ್ದು
ಪ್ರಾಮುಖ್ಯತೆಯನು
ಪಡೆವಂತೆ....
ನಾನು-
ಎಡಪಂತೀಯನೂ ಅಲ್ಲ;
ಬಲಪಂತೀಯನೂ ಅಲ್ಲ
ಎರಡೂ ಕೈ ಬೀಸಿ-
ದೇಹ ಸಮತೋಲನದಲಿಟ್ಟು
ನಡೆವ ನಡುಪಂತೀಯ!
***
ಓ..ಕನ್ನಡ ತಾಯ್..
ನಾನ್ ಈ ಕನ್ನಡ
ತಾಯಿಯ
ಪರಮ ಸೇವಕನ್;
ಆಕೆ ಕೊಟ್ಟ
ಭಿಕ್ಷೆಯ ತಿನ್ನುವ
ಭಿಕ್ಷುಕನ್....
ತಿರಿಯದೆ ತಿನ್ನುವ ಶಕ್ತಿ
ಕೊಟ್ಟದ್ದಕ್ಕಾಗಿ;
ತೊದಲದೇ ಕನ್ನಡವ
ನುಡಿಸಿದ್ದಕ್ಕೆ-
ತಾಯೇ ನಿನ್ನೀ ಪಾದಕಮಲಗಳಲಿ
ಇಡುವೆನ್ ಎನ್ನೀ ಶಿರವನ್!
***
ಗಣಗಳ ರಾಷ್ಟ್ರ ಭಾರತ
ಹಲವು ಭಾಷೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 28, 2025
ಎದುರುತ್ತರವ ಕೊಡುವವರ ಹತ್ತಿರವೆಂದೂ ಮೌನವಾಗಿರು ಗೆಳೆಯ
ಅರ್ಥವೇ ಆಗದವರಿಂದ ನೀನಿಂದು ತುಂಬಾ ದೂರವಾಗಿರು ಗೆಳೆಯ
ಅತಿಯಾದ ತಿಳುವಳಿಕೆಯೂ ಕೆಲವೊಮ್ಮೆ ಹೀಗೆಯೇ ನೋವಲ್ಲವೇನು
ಕವಿಭಾವದೊಳಿಂದು ಹೊಂದಾಣಿಕೆಯ ಕೊರತೆ ಹುತ್ತವಾಗಿರು ಗೆಳೆಯ
ಸರ್ವಜ್ಞನ ಹತ್ತಿರಕ್ಕೂ ಬಾರದವರಿಂದು ಬಹುತೇಕ ತಿಳಿದವರೆನ್ನುತ್ತಿದ್ದಾರೆ
ಹಲ್ಲು ಉದುರಿದರೆ ಪಂಡಿತರಯ್ಯ ನಡುವೆಯೇ ಮೆತ್ತಗಾಗಿರು ಗೆಳೆಯ
ಬರಹಗಾರರ ಜೊತೆಯೇ ಇರುತ್ತಾ ನಿನ್ನಲಿಹ ಶೈಲಿಯಲ್ಲೇ ಧ್ಯಾನಸ್ಥನಾಗು
ಬಿರುಸಾದ ವಾದಗಳ ಮಾಡುವ ಬದಲು ಓದಿನಲ್ಲಿ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 27, 2025
ಒಂದೂ ಕಾಲು ಕೋಟಿ ಕೊರಳುಗಳು ಒಂದೇ ಎಂದುಸುರಲಿ|
ವಿವಿಧತೆಯಲ್ಲಿ ಏಕತೆ ಹಾಡಿ ಭಾರತವೆದ್ದು ನಿಲ್ಲಲಿ|
ಹಿಂಸೆ ಬದಿಗಿಟ್ಟು ದೇಶವನು ಕಟ್ಟು ತೋಷ ಭಾವದಲ್ಲಿ|
ಒಡಕು ಬಿರುಕುಗಳ ಕಡೆಗಣಿಸುತ ನಡೆ ಎದೆಯ ಬೆಸುಗೆಯಲ್ಲಿ|
ಸಕಲ ಜನಾಂಗಕೆ ಹಿತವೆನೆ ಬಯಸುತ ಕೂಡಿ ಹೆಜ್ಜೆಯಿಡುವ|
ವಿಕಲ ಮನಸುಗಳ ಉಲ್ಲಾಸಕೆಳೆತನದಲಿ ಮುನ್ನಡೆಯುವ|
ಕೊಳಕು ಹುಳುಕುಗಳ ರಾಜಕೀಯದ ಹುಲುಸುಗಳನು ಕಳೆಯುವ|
ಲೋಕ ನಿಬ್ಬೆರಗು ನೋಟವಿಡುವಂತೆ ಸರ್ವ ಸಮತೆ ತರುವ|
ವಿದ್ಯೆ ಬುದ್ಧಿಮತ್ತೆ ಸಮಾಜ ತಿದ್ದುವಂತೆ ಅಣಿಗೊಳಿಸುವ|
ಬಹುಜನಕೆ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 26, 2025
ಭಾವೈಕ್ಯತೆ ಭಾವ ಬಿಂದು
ಸಂಧಿಸಲಿ ಮನಗಳನು
ಒಡೆದು ನೂರು ಚೂರಾದ
ಭಿನ್ನಭಿನ್ನ ಕುಲಗಳನು ॥
ಮನುಕುಲದ ಜನ್ಮ ಒಂದೇ
ಮನಕಲಕುವ ದ್ವೇಷವೇಕೆ?
ಹೆಗಲಿಗೆಗಲು ಕೊಟ್ಟು ಇಂದೇ
ಬಾಳಿದರೆ ಸ್ವರ್ಗವೇಕೆ?॥
ಭರತ ಮಾತೆ ಮಕ್ಕಳಲ್ಲಿ
ಉಚ್ಛ ನೀಚ ಭೇಧ ಬೇಕೇ?
ಒಂದೇ ಒಡಲ ಗುಡಿಗಳಲ್ಲಿ
ಕುಲಮತಗಳು ಕಾಡಬೇಕೇ? ॥
ಹೆತ್ತವಳಿಗೆ ಜಾತಿ ಇಲ್ಲ
ಹೊತ್ತವಳಿಗೆ ಧರ್ಮವಿಲ್ಲ
ಅವಳ ಮಕ್ಕಳಾದ ನಮಗೆ
ಹತ್ತು ಹಲವು ಗೋಡೆ ಏಕೆ? ॥
ಊರು ಕೇರಿ ಬೇರೆ ಬೇರೆ
ಗಾಳಿ ನೀರು ಒಂದೇ ತಾನೇ
ಮೈಯ್ಯ ಬಣ್ಣ ಕಪ್ಪು ಬಿಳುಪು
ಹರಿವ ರಕ್ತ…
ಲೇಖಕರು: ಬರಹಗಾರರ ಬಳಗ
ವಿಧ: ಕವನ
January 25, 2025
ರಾಜಕಾರಿಣಿಗಳ ದರೋಡೆ
ಅವರಿದ್ದಾಗಲೂ
ದರೋಡೆ:
ನೀವಿದ್ದಾಗಲೂ
ದರೋಡೆ
ಯಾವಕಾಲಕೂ
ಇದಕಿಲ್ಲ ತಡೆ...
ಎಲ್ಲರ ಕಾಲದಲ್ಲೂ
ನಡೆಯುತ್ತಿದ್ದ
ದರೋಡೆ-
ನೋಡುತ್ತಲೇ
ತಿನ್ನುತ್ತಾ ಕೆಸರೊಡೆ
ಜನ ಬಿದ್ದರು ಮಕಾಡೆ!
***
ರಿಲೀಫ್-ತಕಲೀಫ್
ಏನಿದು
ಮಹಾ ಮ್ಯಾಜಿಕ್?-
ಕಿಕ್ ಬ್ಯಾಕ್
ಆರೋಪ
ಸಿ ಎಂಗೆ
ಬಿಗ್ ರಿಲೀಫ್...
ಶ್ರೀಮಂತರಿಗೆ;
ರಾಜಕಾರಣಿಗಳಿಗೆ
ಸೆಲೆಬ್ರಿಟಿಗಳಿಗೆ-
ಸುಲಭ ರಿಲೀಫ್
ಬಡ ಬೋರೆಗೌಡನಿಗೆ
ಮಾತ್ರ ಭಾರೀ ತಕಲೀಫ್!
***
ಬೆಳಗಲಿ ಮೊಳಗಲೀ...
ನಮ್ಮ ನಮ್ಮ
ಧರ್ಮ; ಆಚಾರ
ಸಂಪ್ರದಾಯಗಳು-…