ಕವನಗಳು

ಲೇಖಕರು: kavitha@ramesh
ವಿಧ: ಕವನ
January 23, 2025
ಏನನ್ನೂ ಬಯಸದೆ ಬೆಳೆದು ಬದುಕುವುದು    ಬದುಕಿ ಇತರರನ್ನು ಬದುಕಿಸಿ ಬೆಳೆಸುವುದು  ಭಾವನಾತ್ಮಕ ಸಂಬಂಧ ಪ್ರಕೃತಿ ಬೆಸೆಯುತ್ತಿದೆ ತನ್ಮಯ ನಾನಾದೆನು ಮನವು ಮಿಡಿಯುತ್ತಿದೆ ಮುಂಜಾನೆಯ ನೇಸರನ ಹೊಂಗಿರಣವಿರಲಿ  ಸಂಜೆಯ ಹೊಂಬಣ್ಣದ ರಂಗು ಚೆಲ್ಲುತಿರಲಿ  ನಳನಳಿಸುವ ಚೆಲುವಿಕೆ ಸರಿಸಾಟಿಯಾರು    ಹಸಿರು ಸೊಬಗಿನ ಸೆಳೆತಕೆ ಸೋಲದವರಾರು    ತಾಯಿ ನಿಸರ್ಗವೇ ನೀನೆಷ್ಟು ವಿಸ್ಮಯವೇ  ನನ್ನ ಹೃದಯವನ್ನು ಪ್ರಚೋದಿಸುತ್ತಿರುವೆ ಅರಳುವ ಆತ್ಮವು ನೀ, ಪ್ರಶಾಂತವಾಗಿರುವೆ ಪ್ರೇರಕ ಶಕ್ತಿ ನೀ ಅನಂತ…
ವಿಧ: ಕವನ
January 23, 2025
ಪ್ರಗತಿ ಪರ ಚಿಂತನೆ  ಎರಡಕ್ಕಿಂತ ಕಡಿಮೆ ಮಕ್ಕಳಿದ್ದವರಿಗೆ- ಸ್ಥಳೀಯ ಸಂಸ್ಥೆ ಚುನಾವಣಾ ನಿರ್ಬಂಧಕ್ಕೆ ಆಂಧ್ರ ಸಿ ಎಂ ಚಿಂತನೆಯ ಸುಳಿ...   ಹೆಚ್ಚು ಮಕ್ಕಳಿದ್ದವರು ಹೆಚ್ಚು ಹೆಚ್ಚು ಸಂಪಾದಿಸಿ- ಸಂಸ್ಥೆಯನು ತರಬಹುದು ಬಲು ಬೇಗ ದಿವಾಳಿ! *** ರಾಜಕಾರಿಣಿಗಳ ದರೋಡೆ  ಅವರಿದ್ದಾಗಲೂ ದರೋಡೆ: ನೀವಿದ್ದಾಗಲೂ ದರೋಡೆ ಯಾವಕಾಲಕೂ ಇದಕಿಲ್ಲ ತಡೆ...   ಎಲ್ಲರ ಕಾಲದಲ್ಲೂ ನಡೆಯುತ್ತಿದ್ದ ದರೋಡೆ- ನೋಡುತ್ತಲೇ ತಿನ್ನುತ್ತಾ ಕೆಸರೊಡೆ ಜನ ಬಿದ್ದರು ಮಕಾಡೆ! *** ರಿಲೀಫ್-ತಕಲೀಫ್  ಏನಿದು ಮಹಾ ಮ್ಯಾಜಿಕ್…
ವಿಧ: ಕವನ
January 22, 2025
ಕೂಲಿಗಳ್ಳತನವನ್ನು ಶಾಸನಮಾಡೀ ರೊಟ್ಟಿಗಳ್ಳತನವನ್ನು ಅಪರಾಧವೆನ್ನುವುದು ಹಿಂಸಾವಾದ...   ಅಕ್ಷರವನ್ನು ಅಟ್ಟದಲ್ಲಿ ಬಚ್ಚಿಟ್ಟು ಏರುವ ಏಣಿಯನ್ನು ಕಸಿವುದು ಹಿಂಸಾವಾದ...   ಹಾತ್ರಸ್ ಗಳ ಕೀಚಕರನ್ನು ಮನುವಾದದ ಗಡಿಯೋಧರೆಂದು ಸನ್ಮಾನಿಸುವುದು ಹಿಂಸಾವಾದ...   ಬಗ್ಗಲೊಲ್ಲದ ಕೇರಿಗೆ ಬೆಂಕಿಯಿಕ್ಕುವ ಊರಿನ ಅಹಿಂಸಾ ಬೋಧನೆ ಹಿಂಸಾವಾದ...   ಮಂದಿರಕೆ ನಂಬಿಕೆ ಸಾಕೆನ್ನುವ ನ್ಯಾಯಾಸ್ಥಾನ  ಹಿಜಾಬಿಗೆ, ನಮಾಜಿಗೆ  ಪೈಗಂಬರನ ಪುರಾವೆ ಕೇಳುವುದು  ಹಿಂಸಾವಾದ...   ತೋಳಗಳು ತುಪಾಕಿಯೇರಿಸಿ ಹೊಂಚು…
ವಿಧ: ಕವನ
January 21, 2025
ಶ್ರಮವಿಲ್ಲದ ಹಣ  ರಾಜಕಾರಣಿಗಳೇ ನೀವು- ಜೀವನಪೂರ್ತಿ ಆಡುತಲಿ ಕುಸ್ತಿ ಮಾಡುವಿರಿ ಅಪಾರ ಆಸ್ತಿ...   ಶ್ರಮವಿಲ್ಲದ ನಿಮ್ಮ ಸಂತತಿ- ತಿಂದದನು ಮೈಮರೆತು ಮಾಡುವರು ಮೋಜು ಮಸ್ತಿ! *** ಸಂಕ್ರಾಂತಿ ಶುಭಾಶಯಗಳು  ಜಗದ ಎಲ್ಲ ವಿಕೃತಿಗಳ ಮೀರಿ ನಡೆಯುವುದೇ ಸಂಕ್ರಾಂತಿ...   ಮಾನವೀಯ ಸೆಲೆ ಎಲ್ಲರಲಿ ಹರಿದು ನೆಲಸಲಿ ಶಾಂತಿ  ಸುಮತಿ! *** ಭಾರತೀಯ ಸಂಸ್ಕೃತಿ!  ಶತ ಶತಮಾನದಿಂ ನಡೆಯುತಿಹುದು ಅದೆಷ್ಟೋ ಕುಹಕಿಗಳ  ಕುತ್ಸಿತ ಅಮಾನವೀಯ ಬೀಭತ್ಸ ವಿಕೃತಿ...   ಆದರೂ ಕುಂದದೆ ವಿರಾಜಮಾನದಿಂ ಬೆಳಗುತಲೇ ಇಹುದು…
ವಿಧ: ಕವನ
January 20, 2025
ಪಥವನು ಬದಲಿಸಿ ಸೂರ್ಯ ರಶ್ಮಿಯ ತಂದ ಸಂಕ್ರಾಂತಿ ಮನೆಮನಗಳಲಿ ನಲಿಯುತಿರೆ ಬಹಳ ಚಂದ ಸಂಕ್ರಾಂತಿ   ರಂಗವಲ್ಲಿಯ ಚಿತ್ತಾರ ಬಾಗಿಲ ಮುಂದೆ ಅಲಂಕಾರವು ಅಂಗಳದಲ್ಲಿ ರಾಶಿಹಾಕಿದ ಪೈರಿನ ಅಂದ ಸಂಕ್ರಾಂತಿ   ಎಳ್ಳು ಬೆಲ್ಲದ ಜೊತೆಗೆ ಹುಗ್ಗಿಯ ಪಾಯಸ ನೀಡುತಲೆ ಸಾಗಿ ಸಿಹಿಕಹಿಯ ಹಂಚುತ ಬಂತು ನೋಡು ಕಂದ ಸಂಕ್ರಾಂತಿ   ಸುಖದ ಶಾಂತಿ ಆರೋಗ್ಯ ಭಾಗ್ಯ ಲಭಿಸಿ ಜನವು ಬಾಳಲು ಉಲ್ಲಾಸ ಉತ್ಸಾಹ ಸ್ನೇಹವರಿತು ಇಲ್ಲೆ ನಿಂದ ಸಂಕ್ರಾಂತಿ   ಮೊದಲ ಹಬ್ಬ ಜನರ ನಲಿವು ನೋಡಿ ಈಶ ಹರಸಿದ ಉತ್ತರಾಯಣ ಪುಣ್ಯಕಾಲಕೆ ನಲಿದು…
ವಿಧ: ಕವನ
January 19, 2025
ಸಹಿಸಿಕೊಳ್ಳಿರೆಂದೂ ಕಷ್ಟ ನಿಷ್ಠೂರಗಳ ಕೊನೆಗೆ ಸಿಗದೇನು ಪ್ರತಿಫಲಕೆ ಸುಖ ! * ದೀಪಗಳಿಂದು ಆರಬಹುದು ಸಖಿ ಪ್ರೀತಿ ಬತ್ತದು ! * ಹೆಣ್ಣಿನ ನಗು ಹುಣ್ಣಿಮೆಯ ಚಂದ್ರ ಬಳಿಯಿದ್ದರೆ ! * ಬಿತ್ತುತಿರು ನೀ ಬಿಜವ ಭೂಮಿಯಲ್ಲಿ ಫಲ ಕೊಡಲಿ! * ನುಡಿಹಾರ ಸಂಕ್ರಾತಿ ದಿನದಂದು ಹೊಸಬೆಳಕು ಹುಟ್ಟುವುದು ಸೋತವರ ಬದುಕಿನಲಿ ಹೊಸಹುರುಪು ಬಂದಂತೆ | ಹೊಳಪೊಳಗೆ ಮಖವರಳಿ ಹೊಸಯೋಜನೆಯು ಸೇರೆ ಹೊಂಗಿರಣ ಊರೊಳಗೆ -- ರಾಮ ರಾಮ || -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
January 18, 2025
ಗಝಲ್ ೧ ನನ್ನ ಮನಸು ನಿನ್ನ ಬಳಿಗೆ ಓಡಿಯಾಡಿ ಬಂದಿತು ಹೀಗೆ ಇರುಳ ಕನಸಿನಲ್ಲಿ ಕಾಡಿಯಾಡಿ ಬಂದಿತು   ಕರುಣೆಯಿರದ ಮನದ ಜೊತೆಗೆ ಬದುಕಿನಾಟ ಹೇಗೆಯೊ ಖುಷಿಯು ಇರುವ ಪ್ರೀತಿ ಪ್ರೇಮ ಆಡಿಯಾಡಿ ಬಂದಿತು   ಸವಿಯ ಜಾಣ ಸುತ್ತಲೆಲ್ಲ ನನಸು ಇರದೆ ಕೇಳದೊ ಕೆಸರ ಸನಿಹ ಕಮಲವಿಂದು ಪಗಡೆಯಾಡಿ ಬಂದಿತು   ಒಸರು ಇರದ ಬಯಕೆಯೊಳಗೆ ಪ್ರೇಮವಿಂದು ಇಹುದೇ  ಹಸಿರ ಚೆಲುವ ಎಲೆಯ ಪಕ್ಕ ನೀರೆಯಾಡಿ ಬಂದಿತು   ಇರದು ಮೌನ ಒಡೆಯ ಬಹುದು ಈಶನೊಲವು ಬಾಡದು ಕುಂತು ನಡೆವ ಮಾತುಕತೆಲಿ ಸೇಲೆಯಾಡಿ ಬಂದಿತು *** ಗಝಲ್ ೨ ಬರದ…
ವಿಧ: ಕವನ
January 17, 2025
ಜೀವಿತವನು ಕರಗಲು ಬಿಡದೆ ಗಟ್ಟಿಗೊಳಿಸು ! * ಕಲ್ಲು ಒಡೆಯೆ ಅಕ್ಷರವು ಬೇಕೆಂಬ ನಿಯಮವಿಲ್ಲ ! * ಒಂಟಿ ಸೀನದು ಬಂದರೆ ಒಳಿತದು ಜ್ವರವು ಮಾಯ ! * ಮುದುಡಿ ಮಲಗಿರೆ ಕವನವೆ ? ಎನುತ ಕುಳಿತರೆ ಆದಿತೆ ! ಅಲ್ಲಿಗಲ್ಲಿಗೆ ಹಾರುತಾರುತ ನೋಡಿ ಬರೆದರೆ ಚೆಂದವೆ ? * ಮೆತ್ತುವಿರೇಕೆ ಹೇಸಿಗೆ ಬರಹಗಳ ? ಸಂಸ್ಕಾರವೆಲ್ಲಿ ! * ಕತ್ತೂರಿಯಂಥ ಪರಿಮಳದ ನುಡಿ ನಮ್ಮ ಕನ್ನಡ !  * ಒಲುಮೆಯಿರೆ ನನ್ನ ನಿಮ್ಮೊಳೆಂದೂ ಸ್ನೇಹ ಅಮರ ! * ಮನದಾಳದ ಮಾತುಗಳ ಕೇಳುತ ನೀ ಬದಲಾಗು ! -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ:…
ವಿಧ: ಕವನ
January 16, 2025
ಹುಟ್ಟದಿರು ಮತ್ತೆ ಜಾತಿ ಜಾತಿಗಳೆಡೆಯೆ ವರ್ಗ ಸಂಘರ್ಷಗಳಡಿಯೆ ಕೆಳ ಜಾತಿ ಮೇಲ್ಜಾತಿ ಜಾತಿ ಜಾತಿಯ ನಡುವೆ  ಬೇಕೇನು ಹೊಡೆದಾಟ ಬಡಿದಾಟವೇಕೆ ?    ಆತುರದ ನಿರ್ಧಾರ ನಮ್ಮವರಿಗಿಹುದೆ  ? ನಮ್ಮ ಬಳಸುತ ಮೆರೆವ ನಾಯಕರಿಗೇನೆ !  ಎಲ್ಲ ಜಾತಿಯ ಕಟ್ಟಿ ಓಟ ಗಿಟ್ಟಿಸುತಲವರು  ಮತ್ತೆ ಜಾತಿಯ ಮೆಟ್ಟಿ ಮಹಡಿಯಲಿ ಕುಳಿತಿಹರು   ಬೀದಿ ಕಾಳಗದೊಳಗೆ ಹೈರಾಣ ನಾವೆ ಮಚ್ಚು ಬೀಸುತ ರಕ್ತ ಬೀಳಿಸುವವರು ನಾವೆ ದೊಡ್ಡವರ ದಡ್ಡತನ ಬೀದಿಯೊಳು ಬರದಿಂದು ಉಳ್ಳವರ ಮನೆಯೊಳಗೆ ಶಿವಲಿಂಗವಿಹುದಿಂದು   ಪಾಪದವರ ಮನೆಯೊಳಗೆ…
ವಿಧ: ಕವನ
January 15, 2025
ಪ್ರಕೃತಿ ಮಾತೆ ನಿನಗೆ ಶರಣು  ಗರ್ಭದಲಿ ಅದೆಷ್ಟು ರಹಸ್ಯಗಳ ಇಟ್ಟುಕೊಂಡಿಹಳೋ ನಮ್ಮ ಹೆತ್ತ ಈ ಧಾರಿಣೀ...   ನೋಡಲು ಕಣ್ಮನ ತಣಿಸಿ ಎಮ್ಮ  ಸಲಹುತಿಹಳು ಈ ಪ್ರಕೃತಿಯೆಂಬ ಮನಮೋಹಿನಿ! *** ತಾಯಿ  ಈ ಸುಂದರ ಜಗವ ನನಗೆ ಪರಿಚಯಿಸಿದ ಓ ನನ್ನ ಮಾತಾ...   ನಿನ್ನ ಪ್ರೀತಿ ಕಾಳಜಿ ಅಂತರಂಗದ ಅಭಿಮಾನ- ಈ ಜಗದಲೇ ಪರಮ ಹಿತಾ! *** ಬಗಲ್ ಮೇ ಹೈ  ಮುಖ್ಯಮಂತ್ರಿ ಎಚ್ಚರಿಕೆ- ರಿಯಲ್  ಎಸ್ಟೇಟ್ ದಂಧೆಗೆ  ಸಹಕರಿಸಿದರೆ ಹುಷಾರ್...   ದುಷ್ಮನ್ ಕಹಾಂ ಹೈ... ಅಂದರೆ ಬಗಲ್ ಮೇ ಹೈ- ಎಂದು ಹೇಳಿ ಯಾರೋ ನಕ್ಕರ್…