ಎನ್ ಕೌಂಟರ್, ಜಾತಿ ಜನಗಣತಿ, ವಕ್ಫ್ ತಿದ್ದುಪಡಿ...
1 day 18 hours ago - Shreerama Diwana
ಈ ವಿಷಯಗಳ ಬಗ್ಗೆ ಒಂದು ನಿರ್ದಿಷ್ಟ, ಸ್ಪಷ್ಟ ತೀರ್ಮಾನ ಕೈಗೊಳ್ಳುವುದು ಅಷ್ಟು ಸುಲಭವಲ್ಲ. ಸಹಜವಾಗಿ ಆ ಕ್ಷಣದ ಸತ್ಯ ಅಥವಾ ಭಾವನಾತ್ಮಕತೆ ಅಥವಾ ಆಗಿನ ನಮ್ಮ ಮನಸ್ಥಿತಿ ಆಧಾರದ ಮೇಲೆ ಮೇಲ್ನೋಟಕ್ಕೆ ಒಂದು ತೀರ್ಪು ಕೊಡಬಹುದು. ಆದರೆ ಸಮಗ್ರವಾಗಿ, ಸಮಾಜದ ಒಟ್ಟು ಹಿತಾಸಕ್ತಿ, ವ್ಯವಸ್ಥೆಯ ವಾಸ್ತವತೆ, ದೇಶದ ದೂರದೃಷ್ಟಿಯ ಅನುಕೂಲತೆ ಎಲ್ಲವನ್ನೂ ನೋಡಿಕೊಂಡು ಇದು ಹೀಗೆ ಇರಬೇಕು ಎಂದು ತೀರ್ಮಾನ ಕೈಗೊಳ್ಳುವುದು ಒಂದು ಸಂಕುಚಿತ ಮನೋಭಾವಕ್ಕೆ ಸಾಕ್ಷಿಯಾಗುತ್ತದೆ. ಏಕೆಂದರೆ ಖಚಿತತೆ ನಮ್ಮ ಅಭಿಪ್ರಾಯದಲ್ಲಿ ಇದ್ದರೂ ವಿಷಯವೇ ಸ್ಪಷ್ಟವಾಗಿರುವುದಿಲ್ಲ. ಅದು ಅನೇಕ ಆಯಾಮಗಳನ್ನು ಹೊಂದಿರುತ್ತದೆ.
ಉದಾಹರಣೆಗೆ, ನಿನ್ನೆ ಹುಬ್ಬಳ್ಳಿಯಲ್ಲಿ ನಡೆದ ಪುಟ್ಟ ಮಗುವಿನ ಕೊಲೆ ಮತ್ತು ಅತ್ಯಾಚಾರದಂತ ವಿಷಯದಲ್ಲಿ ನಡೆದ ಎನ್ಕೌಂಟರ್ ಬಗ್ಗೆ ಸಾಕಷ್ಟು ಜನ ಮೆಚ್ಚುಗೆ, ಖುಷಿ ಮತ್ತು ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಪುಟ್ಟ ಐದು ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ರಕ್ಕಸ ನಿಜಕ್ಕೂ ಬದುಕುವ ಯಾವ ಅರ್ಹತೆಯನ್ನು ಹೊಂದಿರುವುದಿಲ್ಲ. ಅವನನ್ನು ಕೊಂದಿದ್ದು ಖಂಡಿತವಾಗಲೂ ಸರಿ ಎಂದು ಈ ಕ್ಷಣಕ್ಕೆ ಬಹುತೇಕ ಎಲ್ಲರಿಗೂ ಅನಿಸುತ್ತದೆ.
ಎರಡನೆಯದಾಗಿ, ಹಾಗೆ ಪೊಲೀಸರೇ ತಕ್ಷಣ ಶಿಕ್ಷೆ ಕೊಡುವುದಾದರೆ ನಾವು ನಿರ್ಮಿಸಿಕೊಂಡಿರುವ ಈ ವ್ಯವಸ್ಥೆ, ಕಾನೂನು, ನ್ಯಾಯಾಲಯ, ವಕೀಲರುಗಳಿಗೆ ಅರ್ಥವಿದೆಯೇ, ಇದೇ ಶಿಕ್ಷೆಯನ್ನು ಶೀಘ್ರವಾಗಿ ಕಾನೂನಿನ ವ್ಯಾಪ್ತಿಗೆ ಒಳಪಡಿಸಿ ಆತನನ್ನು ಗಲ್ಲಿಗೇರಿಸಿದ್ದರೆ ಅಥವಾ ಆ ರೀತಿಯ ವ್ಯವಸ್ಥೆಯನ್ನು ರೂಪಿಸಿಕೊಂಡರೆ ಉತ್ತಮವಲ್ಲವೇ. ಹೀಗೆ ಕಾನೂನಿನ ವ್ಯಾಪ್ತಿಗೆ ಒಳಪಡಿಸದೆ ನೇರ ಪೊಲೀಸರೊಬ್ಬರು ಶೂಟ್ ಮಾಡುವುದು ಅಷ್ಟೊಂದು ಉತ್ತಮ ನಡೆಯಲ್ಲ ಎಂದು ಒಂದಷ್ಟು ಚಿಂತನಶೀಲ… ಮುಂದೆ ಓದಿ...