ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ, ಅನಾಥರ - ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ - ಬೆಳೆಸಿದ ಕನ್ನಡ ಭಾಷಾ ಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು ಸಾಗರದಾಚೆಗೂ ಕೊಂಡೊಯ್ದ ಮೇಧಾವಿ ಸಂತರ ಸಂತ, ಸರಳತೆಯನ್ನು ಮೈಗೂಡಿಸಿಕೊಂಡ ಸ್ನೇಹ ಜೀವಿ, ಸರ್ವರನ್ನೂ ಸಮಾನತೆಯಿಂದ ಕಂಡ ಸಮತಾವಾದಿ, ನುಡಿದಂತೆ ನಡೆದು, ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದ ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ್ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ನಿಸ್ವಾರ್ಥ ಸೇವೆ ಅನನ್ಯವಾದುದು.
ಪರಮ ಪೂಜ್ಯ ಡಾ.ಚನ್ನಬಸವ ಪಟ್ಟದೇವರನ್ನು 21ನೇಯ ಶತಮಾನದ ಮಾಹಾಶಿವಶರಣರು, ಸಾಮಾಜಿಕ ಸಮಾನತೆ, ದೀನ ದಲಿತರ, ಶೋಷಿತರ, ಬಡವರ - ನೊಂದವರ ದನಿಯಾಗಿ ಹಗಲಿರುಳು ದುಡಿದು, ಬಸವಾದಿ ಶರಣರ ಹಾದಿಯಲ್ಲಿ ಸಾಗುವ ಕಾಯಕವನ್ನು ನಿತ್ಯ ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ. ಅಂತೆಯೇ ಗಡಿಭಾಗದಲ್ಲಿ ಕನ್ನಡ ಭಾಷೆ ಅವನತಿಯ ಹಂತದಲ್ಲಿ ಇದ್ದಾಗ ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಇವರ ಶ್ರಮ ದೊಡ್ಡದು. ಕನ್ನಡತನವನ್ನು ಸಂರಕ್ಷಣೆ ಮಾಡಿ,ಕನ್ನಡ ಭಾಷೆಗೆ ಹೊಸ ಆಯಾಮ ನೀಡಿದವರು. ಕನ್ನಡ ಭಾಷಾ ಸಾಹಿತ್ಯ ಲೋಕಕ್ಕೆ ಮರೆಯಲಾಗದ ಹೃದಯಸ್ಪರ್ಶಿ ಸೇವೆಯನ್ನು ಸಲ್ಲಿಸಿದ್ದಾರೆ.ಕನ್ನಡವನ್ನು ವಿಶ್ವ ಭಾಷೆಗಳಿಗೆ ಸಮಾನವಾಗಿ ಬೆಳೆಸುವ ನಿಟ್ಟಿನಲ್ಲಿ ಇವರ ಅನುಪಮ ಸೇವೆ ಎಂದೆಂದಿಗೂ ಮರೆಯಲಾಗದು.
ಕಲ್ಯಾಣ ಕರ್ನಾಟಕ : ಈ ಭಾಗದ ವಿಮೋಚನೆಗಾಗಿ ಸಹ ಹೋರಾಟ ಮಾಡಿದಾರೆ. ಕರ್ನಾಟಕ ಏಕೀಕರಣಕಾಗಿ ಹಗಲಿರುಳು ದುಡಿದಿದ್ದಾರೆ. ಕರ್ನಾಟಕ ರಾಜ್ಯ ಸಮಗ್ರಹ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು…
ಮುಂದೆ ಓದಿ...