ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ನೇತಾಜಿ ಸುಭಾಷ್ ಚಂದ್ರ ಬೋಸ್
1 day 2 hours ago - Shreerama Diwanaಇಂದು ಜನವರಿ 23. ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಿಲ್ಲ. ಯುವ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ತ್ಯಾಗ - ಮಹತ್ವ ತಿಳಿಸುವ ಪ್ರಯತ್ನ ಮಾಡುವುದಿಲ್ಲ. ಅವರಲ್ಲಿ ಕೆಲವರು ಯಾವ ಸಿನಿಮಾ ನಟಿ ಗರ್ಭಿಣಿಯಾಗಿದ್ದಾರೆ ಎಂಬ ಹುಡುಕಾಟದಲ್ಲಿ ಇರುತ್ತಾರೆ. ಆದರೆ ನಾವುಗಳು ಸುಭಾಷ್ ಅವರನ್ನು ಮರೆಯುವುದು ಬೇಡ.
ಈ ವಿಷಯದಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ನಮ್ಮ ತಂದೆಯವರ ಬಗ್ಗೆ ನನಗೊಂದು ಹೆಮ್ಮೆ. ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ - ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ನನ್ನ ಹೆಸರು ವಿವೇಕಾನಂದ ನನ್ನ ಒಡಹುಟ್ಟಿದ ಅಣ್ಣನ ಹೆಸರು ಸುಭಾಷ್. ಸ್ವಾತಂತ್ರ್ಯ ಹೋರಾಟದ ಸ್ಪೂರ್ತಿಯ ನೆನಪಿನಲ್ಲಿ ಬಹುಶಃ ಅವರು ಈ ಹೆಸರುಗಳನ್ನು ತಮ್ಮ ಇಬ್ಬರೂ ಮಕ್ಕಳಿಗೆ ಇಟ್ಟಿರಬಹುದು ಎಂಬ ಊಹೆ ನನ್ನದು.
ಮತ್ತೆ ಮತ್ತೆ ನೆನಪಾಗುವ ಕ್ರಾಂತಿಕಾರಿ ನಾಯಕ ಸುಭಾಷ್ ಚಂದ್ರ ಬೋಸ್. ಭಾರತ ಸ್ವಾತಂತ್ರ್ಯ ಹೋರಾಟದ ಕೆಲವೇ ಪ್ರಮುಖ ನಾಯಕತ್ವಗಳಲ್ಲಿ ಬೋಸ್ ಸಹ ಒಬ್ಬರು. ಆಗಿನ ಅತ್ಯುನ್ನತ ಓದಿನ ಐಸಿಎಸ್ ಪರೀಕ್ಷೆ ದಿಕ್ಕರಿಸಿದ ಸ್ವಾತಂತ್ರ್ಯ ಪ್ರೇಮಿ, ಮಹಾತ್ಮ ಗಾಂಧಿಯವರ ಅಹಿಂಸೆಯ ಪ್ರತಿಪಾದನೆಯ ವಿರುದ್ಧ ಸೈನಿಕ ಶಕ್ತಿ ಪ್ರತಿಪಾದಿಸಿ ಒಂದಷ್ಟು ಜನಪ್ರಿಯತೆ ಗಳಿಸಿದ ವೀರ ಯೋಧ, ಜಗತ್ತು ಕಂಡ ನರಹಂತಕ ಹಿಟ್ಲರ್ ಸಹಕಾರ ಪಡೆಯಲು ಪ್ರಯತ್ನಿಸಿ ತಪ್ಪು ದಾರಿ ಹಿಡಿದ ಆತುರಗಾರ, ಭಾರತದ ಸ್ವಾತಂತ್ರ್ಯದ ಮೊದಲ ರಾಷ್ಟ್ರ ಧ್ವಜವನ್ನು ತನ್ನ ಆಜಾದ್ ಹಿಂದ್ ಫೌಜ್ ( I N A ) ಎಂಬ ಸೈನ್ಯದ ಮೂಲಕ ರಂಗೂನ್ ನಲ್ಲಿ ಹಾರಿಸಿ ಸಂಭ್ರಮ ಪಟ್ಟ ಧೀರೋದಾತ್ತ, ಸ್ವಾಮಿ ವಿ… ಮುಂದೆ ಓದಿ...