February 2024

  • February 21, 2024
    ಬರಹ: Shreerama Diwana
    ಇತಿಹಾಸದಲ್ಲಿ ಅನೇಕ ಏಳು ಬೀಳುಗಳಿಗೆ ಸಾಕ್ಷಿಯಾಗಿರುವ ದೆಹಲಿ ಕೆಲವೇ ತಿಂಗಳುಗಳ ಹಿಂದೆ ಒಂದು ವರ್ಷದ ನಿರಂತರ ಯಶಸ್ವಿ ರೈತ ಹೋರಾಟವನ್ನು ಕಂಡಿದೆ. ಜಾಗತೀಕರಣದ ನಂತರ ಅತಿ ಹೆಚ್ಚು ನಷ್ಟಕ್ಕೆ, ತೊಂದರೆಗೆ ಒಳಗಾಗಿದ್ದು ಭಾರತದ ರೈತ ಸಮೂಹ. ಮುಕ್ತ…
  • February 21, 2024
    ಬರಹ: ಬರಹಗಾರರ ಬಳಗ
    ಅದೊಂದು ತುಂಬಾ ದೊಡ್ಡ ಗೋಡೌನು. ಅದರಲ್ಲಿ ಹಲವಾರು ಜನ ಸಾಧಕರ ದೊಡ್ಡ ಪುಸ್ತಕಗಳನ್ನ ಇಡಲಾಗಿದೆ, ಜೊತೆಗೆ ಸೋತವರ ಪುಸ್ತಕಗಳನ್ನು ಅಲ್ಲಿ ಶೇಖರಿಸಿ ಇಡಲಾಗಿದೆ. ನಮಗೆ ಬೇಕಾದರೆ ಯಾವ ಪುಸ್ತಕವನ್ನು ಬೇಕಾದರೂ ಓದಿ ನೋಡಬಹುದು. ಅದರಲ್ಲಿ ನಮ್ಮ…
  • February 21, 2024
    ಬರಹ: ಬರಹಗಾರರ ಬಳಗ
    ಸೈಬರ್ ಅಪಾಯಾಕಾರಿಯೇ? ಹೌದು. ಸೈಬರ್ ನಾಗರಿಕತೆಯ ಪ್ರತೀಕ, ಶೈಕ್ಷಣಿಕ ಸಾಧನೆ ಮತ್ತು ಪ್ರಗತಿಯ ದ್ಯೋತಕ. ಸದ್ಬಳಕೆ ಮಾಡುವವರಿಗೆ ವರದಾನವಾಗಿರುವ ಸೈಬರ್ ಬಹಳಷ್ಟು ದುರ್ಬಳಕೆ ಮಾಡುತ್ತಿರುವವರಿಂದಾಗಿ ಅಪಾಯಕಾರಿಯೂ ಎನಿಸಿದೆ. “ಸೈಬರ್ ಕಳ್ಳತನ” ಎಂಬ…
  • February 21, 2024
    ಬರಹ: ಬರಹಗಾರರ ಬಳಗ
    ದಿಟ್ಟ ತನದಲಿ ಹಯವ ಬಂಧಿಸಿ ಕಟ್ಟಿ ಛಲದಲಿ ಸಮರಕೆಳಸಿದ ಪುಟ್ಟ ಬಾಲರ ಕಂಡು ಭ್ರಮಿತನು ದೇವ ಶ್ರೀರಾಮ ಸಿಟ್ಟುಗೊಳ್ಳದೆ ನುಡಿದನವರಲಿ ಕೆಟ್ಟ ಹಟವನು ತೊರೆದು ಮೊದಲಲಿ ಬಿಟ್ಟು ಕಳುಹಿರಿ ಯಜ್ಞ ಕುದುರೆಯ, ಬೇಡ ಸಂಗ್ರಾಮ   ಇಂತು ಲವ ಕುಶರಲ್ಲಿ ಮಮತೆಯು…
  • February 20, 2024
    ಬರಹ: Ashwin Rao K P
    ನೇರಳೆ ಮರ ಇದು ನಮಗೆಲ್ಲಾ ಗೊತ್ತಿರುವಂತದ್ದು. ಮರ ಪೊದೆಯಾಗಿದ್ದರೆ ಕೊಯ್ಯುವುದು ಬಹಳ ಸುಲಭ. ಇದನ್ನು ಕತ್ತರಿಸುತ್ತಾ, ಸವರುತ್ತಾ ಪೊದೆಯಾಕಾರದಲ್ಲಿ ಬೆಳೆಸಲು ಸಾಧ್ಯ. ನೇರಳೆ ಹಣ್ಣು ಒಂದು ಆರೋಗ್ಯ ಸಂಜೀವಿನಿಯಾಗಿದ್ದು, ಇದರ ಹಣ್ಣಿಗೆ ಈಗ ಭಾರೀ…
  • February 20, 2024
    ಬರಹ: Ashwin Rao K P
    ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಹೋರಾಟ ಮಾಡುವುದು ರೈತರ ಹಕ್ಕು ಎಂಬುದೇನೋ ನಿಜ. ಆದರೆ, ಹೋರಾಟದ ಪ್ತಮುಖ ಉದ್ದೇಶವೇ ಪ್ರಭುತ್ವದ ಗಮನ ಸೆಳೆಯುವುದು, ಸ್ಪಂದನೆ ದೊರೆತು, ಸಮಸ್ಯೆಗೆ ಪರಿಹಾರದ ಮಾರ್ಗ ಕಂಡುಕೊಳ್ಳಬೇಕು ಎಂಬುದು. ಕಳೆದ…
  • February 20, 2024
    ಬರಹ: Shreerama Diwana
    ಇದನ್ನು ವಿಶ್ವದ ಮೂರು ಬಲಿಷ್ಠ ಆರ್ಥಿಕತೆಯ ಹೊಂದಿರುವ ದೇಶಗಳ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವ ರೀತಿ ಅಂದಾಜು ಮಾಡಬಹುದು ಎಂಬ ಒಂದು ಸರಳ ವಿಶ್ಲೇಷಣೆ. ವಿಶ್ವದ ಅತಿ ದೊಡ್ಡ ಮತ್ತು ಶ್ರೀಮಂತ ಹಣಕಾಸು ವ್ಯವಸ್ಥೆ ಹೊಂದಿರುವ ಅಮೆರಿಕಾದ…
  • February 20, 2024
    ಬರಹ: ಬರಹಗಾರರ ಬಳಗ
    ಅವನಿಗೆ ತುಂಬ ನೋವಾಗ್ತಾ ಇತ್ತು, ಯಾಕೆ ನನಗೆ ಸರಿಯಾಗಿದ ಮೌಲ್ಯ ಸಿಕ್ತಾ ಇಲ್ಲ. ನಾನು ಜನರ ನಡುವೆ ಗುರುತಿಸಿಕೊಳ್ಳಲು ಯೋಗ್ಯನಾಗಿದ್ದೇನೆ. ಹಾಗಿದ್ದರೂ ಕೂಡ ನನ್ನನ್ನ ಎಲ್ಲಾ ಕಡೆಗೂ ಕಡೆಗಣಿಸುತ್ತಿದ್ದಾರೆ ಯಾಕೆ ಹೀಗೆ? ಅನ್ನುವ ಪ್ರಶ್ನೆ ಆತನನ್ನ…
  • February 20, 2024
    ಬರಹ: ಬರಹಗಾರರ ಬಳಗ
    ಇಂದು ಉಪರಾಗ ಎಂದರೇನು? ಇದರಿಂದ ಆಗುವ ಲಾಭ ಏನು...? ತಿಳಿದುಕೊಳ್ಳೋಣ. ಮನಸ್ಸಿನ ಕಾರ್ಯ ಮೂರು. 1. ಜ್ಞಾನ : ಅಂದರೆ ತಿಳಿದುಕೊಳ್ಳುವುದು. 2. ಇಚ್ಚಿಸುವುದು : ಅಂದರೆ ಬಯಕೆ. ಯಾವ ಕೆಲಸ ಮಾಡಬೇಕು?. ಯಾವ ಕೆಲಸ ಮಾಡಬಾರದು?. ಅನ್ನುವುದೂ…
  • February 20, 2024
    ಬರಹ: ಬರಹಗಾರರ ಬಳಗ
    ನನ್ನ ಹಳ್ಳಿಯ ಜನರ ಒಡಲಿದೊ ಬರಿದೆ ಅಗ್ನಿ ಕುಂಡ ಅಲ್ಲಿ ಬರದ ಕಾರ್ಮೋಡದಲ್ಲಿ ನೇತಾರ ಇದ್ದು ದಂಡ   ಕೂಳು ಕೂಳಿಗು ಗತಿಯು ಇಲ್ಲದೆ  ಜನರ ವಲಸೆ ಹಾಡು ಹವಾ ರೂಮಲೆ ಕುಳಿತ ನಾಯಕನ ಹೊಟ್ಟೆ ಬಿರಿಯೆ ನೋಡು ಡಿ. ಸಿ ಕುಳಿತ ಕಾರಲ್ಲಿ ಎ. ಸಿಯ ಕಾರುಬಾರು…
  • February 20, 2024
    ಬರಹ: ಬರಹಗಾರರ ಬಳಗ
    ಸರ್ವಜ್ಞನ ತ್ರಿಪದಿಗಳು ಲೋಕಮಾನ್ಯ. ಓರ್ವ ಆಧ್ಯಾತ್ಮಿಕ ವಿರಕ್ತ, ಪ್ರತಿಭಾವಂತ ಮಹಾಕವಿ, ಪಂಡಿತೋತ್ತಮರಿಗೆ ಅತಿಪ್ರಿಯ, ಪ್ರಾಪಂಚಿಕ ಸುಖ ಲವಲೇಶವೂ ಬೇಡದವ, ಜಾನಪದ ವಿದ್ವಾಂಸ. ತ್ರಿಪದಿಯಲ್ಲಿ ತನ್ನ ಮನದಾಳದ ಭಾವನೆಗಳನ್ನು ಹಾಡುತ್ತಾ ಊರಿಂದೂರಿಗೆ…
  • February 19, 2024
    ಬರಹ: Ashwin Rao K P
    ‘ಸಾವಿಲ್ಲದ ಮನೆಯಿಂದ ಸಾಸಿವೆ ತಾ’ ಎನ್ನುವ ಭಗವಾನ್ ಗೌತಮ ಬುದ್ಧರ ನುಡಿ ಬಹಳ ಪ್ರಸಿದ್ಧಿ. ಸಾಸಿವೆ ಬಹಳ ಪುಟ್ಟದಾದ ಕಾಳು. ಆದರೆ ಅಡುಗೆಗೆ ಬಹಳ ಉಪಯುಕ್ತ. ಒಗ್ಗರಣೆ ಹಾಕಲಂತೂ ಸಾಸಿವೆ ಬೇಕೇ ಬೇಕು. ತೆಂಗಿನ ಎಣ್ಣೆಯಲ್ಲಿ ಸಾಸಿವೆ ಸಿಡಿಸಿ,…
  • February 19, 2024
    ಬರಹ: Ashwin Rao K P
    ವಿವಿದ ಲೇಖಕರಿಂದ ಬರೆಯಲ್ಪಟ್ಟ ಚೈನಾ ಮತ್ತು ಜಪಾನ್ ದೇಶದ ಪ್ರಸಿದ್ಧ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಖ್ಯಾತ ಅನುವಾದಕರಾದ ನೀಲತ್ತಹಳ್ಳಿ ಕಸ್ತೂರಿ ಇವರು. ಈ ಪುಸ್ತಕವನ್ನು ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು…
  • February 19, 2024
    ಬರಹ: Shreerama Diwana
    ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಸರ್ಕಾರಿ ಸಂಸ್ಥೆಯ ಒಂದೆರಡು ವರ್ಷಗಳ ಹಿಂದಿನ ಅಧೀಕೃತ ವಿಶ್ಲೇಷಣೆ ಪ್ರಕಾರ… ಸಂಚಾರಿ ದಟ್ಟಣೆಯಿಂದ ವರ್ಷಕ್ಕೆ 3700 ಕೋಟಿ ನಷ್ಟ, ಒಟ್ಟು 60 ಕೋಟಿ ಗಂಟೆಗಳ ಮಾನವ ಶ್ರಮ ವ್ಯರ್ಥ, ಇದಕ್ಕೆ ಅವರು…
  • February 19, 2024
    ಬರಹ: ಬರಹಗಾರರ ಬಳಗ
    ಹಾಗೆ ಮೌನವಾಗಿ ಕುಳಿತ ಆ ಮೂರು ಹುಡುಗರ ಕಣ್ಣಲ್ಲಿ ಕಣ್ಣೀರು ಇಳಿಯುತ್ತಾ ಇತ್ತು. ಮಾತು ಹೊರಗಡೆ ಬರುತ್ತಾನೇ ಇರಲಿಲ್ಲ. ಅವರಿಗೆ ನೋವಾಗಿದ್ದು ನೋಡುವಾಗಲೇ ಅನಿಸುತ್ತಿತ್ತು. ಆದರೆ ನೋವೇನು ಅನ್ನೋದು ಗೊತ್ತಾಗ್ಲೇ ಇಲ್ಲ. ಹಲವರು ಬಂದು ಅವರ ಬಳಿ…
  • February 19, 2024
    ಬರಹ: ಬರಹಗಾರರ ಬಳಗ
    ರೂಪಾ ನಿದ್ರೆಯಿಲ್ಲದೆ ಅನೇಕ ದಿನಗಳು ಕಳೆದವು. ಶಾಲೆಗೂ ರಜೆ ಹಾಕಿ ಮನೆಯಲ್ಲೇ ಇರುವ ಆಕೆ ಬದುಕಿನ ಎಲ್ಲಾ ನಿರೀಕ್ಷೆಗಳನ್ನು ಕಳೆದುಕೊಂಡಿದ್ದಾಳೆ. ತಮ್ಮನನ್ನು ಕಳೆದುಕೊಂಡು ಹತ್ತು ದಿನಗಳೇ ಕಳೆದು ಹೋದವು. ಅಪ್ಪ ಅಮ್ಮ ಮಾತಾಡುವ ಶಕ್ತಿಯನ್ನೇ…
  • February 19, 2024
    ಬರಹ: ಬರಹಗಾರರ ಬಳಗ
    ಭಾನು ಪಡುವಣ ಕಡಲಿಗಿಳಿದಿರೆ ಬಾನಿಗೇರಿದ ಚಂದ್ರಮ ತಾನು ರಾತ್ರಿಯ ರಾಜನೆನ್ನುತ ಜಾಣನೆನ್ನುವ ಸಂಭ್ರಮ   ಗಿಡದ ಮೊಗ್ಗನು ನೋಡಿ ಚಂದಿರ ತಡೆಯಲಾರದೆ ಹೋದನೆ ಹಿಡಿವ ಬಯಕೆಯು ಮೂಡಿ ಮನದಲಿ ಕಡೆಗೆ ಚುಂಬಿಸೆ ಬಂದನೆ?   ತನ್ನ ಪ್ರೇಯಸಿ ಹೂವು ನೈದಿಲೆ- -…
  • February 19, 2024
    ಬರಹ: ಬರಹಗಾರರ ಬಳಗ
    ಆವ ವಿಧದಲಿ ಕನ್ನಡದ ಮಾತೆ ನಿನ್ನಡಿಯ ಸೇವೆ ಗೆನ್ನೀ ತನುವ ಮುಡಿಪಾಗಿ ಕೊಡಲಿ   ಕಟ್ಟುವೆವು ನಾವು ಹೊಸ ನಾಡೊಂದನು ರಸದ ಬೀಡೊಂದನು   ಜಾತಿಮತದ ಗುಹೆಗಳಿಂದ ಹೊರಬನ್ನಿರಿ ಬಯಲಿಗೆ ಅಲ್ಲೊಂದು ಇಲ್ಲೊಂದು ಬರೆದು ಚೆಲ್ಲಿದ ಚೂರು ಕಾಗದಗಳೋ ಎನಲು…
  • February 19, 2024
    ಬರಹ: ಬರಹಗಾರರ ಬಳಗ
    ಅಂತರೀಕ್ಷದ ಲಾವಣ್ಯಕ್ಕೆ ದಿಗ್ಮೂಢಗೊಂಡಿದ್ದ ಫಾತಿಮಾ : ಫಾತಿಮಾ (ರ) ಅವರ ಪಾವನ ನಾಮದಿಂದ ವಂಚಿತರಾದರು ಯಾರು ಇಲ್ಲ. ಆದರೆ, ಇವರು 10 - 11ನೇ ಶತಮಾನದ ಸುತ್ತ ಸ್ಪೇನ್ ದೇಶದಲ್ಲಿ ವಾಸಿಸುತ್ತಿದ್ದ ಪ್ರಖ್ಯಾತ ಖಗೋಳಶಾಸ್ತ್ರಜ್ಞ ಮಸ್ಲಾಮಾ ಅಲ್-…
  • February 18, 2024
    ಬರಹ: addoor
    ಭೂಮಿಯ ಹಾಗೂ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಅಗೋಚರ ಶಕ್ತಿಯೊಂದು ಅವೆಲ್ಲವನ್ನೂ ನಿಯಂತ್ರಿಸುತ್ತಿದೆ ಎಂದನಿಸುತ್ತದೆ. ಅದನ್ನು "ದೇವರು" ಎಂದು ಕರೆಯುವುದು ಎಲ್ಲ ಧರ್ಮಗಳಲ್ಲಿಯೂ ವಾಡಿಕೆ. ಅಂತಹ ಆಗುಹೋಗುಗಳ ಬಗ್ಗೆ ನಮಗೆ ಎದುರಾಗುವ ಕೆಲವು…