July 2025

  • July 23, 2025
    ಬರಹ: ಬರಹಗಾರರ ಬಳಗ
    “ಶ್ರೀಮದ್ಭಗವದ್ಗೀತೆ”ಯ ನಾಲ್ಕನೇ ಅಧ್ಯಾಯದ ನಲುವತ್ತನೇ ಶ್ಲೋಕವು ಹೀಗಿದೆ... “ಅಜ್ಞಶ್ಚಾಶ್ರದ್ದಧಾನಶ್ಚ  ಸಂಶಯಾತ್ಮಾ ವಿನಶ್ಯತಿ| ನಾಯಂ ಲೋಕೋಸ್ತಿ ನ ಪರಃ,  ನ ಸುಖಂ ಸಂಶಯಾತ್ಮನಃ ||” “ಸಂಶಯವು ವಿನಾಶಕ್ಕೆ ಮೂಲ” ಎಂಬ ಆರ್ಯೋಕ್ತಿಯಿದೆ.…
  • July 23, 2025
    ಬರಹ: ಬರಹಗಾರರ ಬಳಗ
    ದೇವರ ಗುಡಿ ಮೆಟ್ಟಿಲು  ಏರುತ್ತಲೇ ಇದ್ದೇನೆ  ದರ್ಶನವಾಗುತ್ತಿಲ್ಲ  ಅಲ್ಲಿ ಉಳಿದಿರುವುದು ಬರೀ  ಕಲ್ಲು ಗದ್ದಿಗೆ.   ಆದರೂ ಹುಡುಕುತ್ತಿದ್ದೇನೆ ಛಲ  ಬಿಡದ ತ್ರಿವಿಕ್ರಮನಂತೆ  ಬೆಳಕು ಕಂಡೀತೆ ? ಕತ್ತಲಾವರಿಸಿದ  ಗರ್ಭ ಒಡಲೊಳಗಿಸಿಕೊಂಡಂತೆ …
  • July 22, 2025
    ಬರಹ: addoor
    ಕೃಷಿರಂಗದಲ್ಲಿ  ಡ್ರೋನ್ ಬಳಕೆಗೆ ವಿಪುಲ ಅವಕಾಶ ಬೆಳೆಗಳಿಗೆ ಪೋಷಕಾಂಶಗಳು ಮತ್ತು ಪೀಡೆನಾಶಕಗಳನ್ನು ಸಿಂಪಡಿಸಲು ಡ್ರೋನ್ ಸೇವೆ ಭಾರತದಲ್ಲಿ ಹಲವೆಡೆ ಶುರುವಾಗಿದೆ. ಇದರಿಂದಾಗಿ ಕೃಷಿಕರಿಗೆ ಸಮಯ ಮತ್ತು ವೆಚ್ಚದಲ್ಲಿ ಭಾರೀ ಉಳಿತಾಯ. ಜನವರಿ…
  • July 22, 2025
    ಬರಹ: Ashwin Rao K P
    ಲಿಟಲ್ ಬ್ಲೂ ಟ್ರಕ್ (Little Blue Truck)  ಮಕ್ಕಳಿಗೆ ಹಾಗೂ ಯುವ ಓದುಗರಿಗೆ ಕರುಣೆ, ಪರಸ್ಪರ ಸಹಕಾರ ಮತ್ತು ಗೆಳೆತನದ ಮಹತ್ವವನ್ನು ತಿಳಿ ಹೇಳುವ ಉತ್ತಮ ಕಥಾ ಹಂದರವನ್ನು ಹೊಂದಿರುವ ಕಾದಂಬರಿಯೇ ‘ಲಿಟಲ್ ಬ್ಲೂ ಟ್ರಕ್’. ಇಲ್ಲಿ ಕಥಾ ನಾಯಕ ಒಂದು…
  • July 22, 2025
    ಬರಹ: Ashwin Rao K P
    ನಿಂದನಾತ್ಮಕ, ಅವಹೇಳನಕಾರಿ ಮತ್ತು ಪ್ರಚೋದನಕಾರಿ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ ಆರೋಪದ ಮೇಲೆ ರಾಜ್ಯದಲ್ಲಿ ಎರಡೂವರೆ ವರ್ಷದಲ್ಲಿ (೨೦೨೩-೨೫ ಜೂನ್‌ವರೆಗೆ) ೧,೪೧೪ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಜಾಲತಾಣಗಳ…
  • July 22, 2025
    ಬರಹ: Shreerama Diwana
    ಇವರಿಗೆ,  ಡಾಕ್ಟರ್ ಪ್ರಣವ್ ಮೊಹಾಂತಿ,  ಮುಖ್ಯಸ್ಥರು ಹಾಗು ಸಹ ಸದಸ್ಯರುಗಳು, ವಿಶೇಷ ತನಿಖಾ ತಂಡ, ಧರ್ಮಸ್ಥಳದ ಅಸಹಜ ಸಾವಿನ ಶವಗಳ ಪ್ರಕರಣ, ಕರ್ನಾಟಕ ಸರ್ಕಾರ ಬೆಂಗಳೂರು. ಮಾನ್ಯ ಮೊಹಾಂತಿಯವರೇ ,... ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಒಂದು…
  • July 22, 2025
    ಬರಹ: ಬರಹಗಾರರ ಬಳಗ
    ಇಲ್ಲ ಸರ್, ಹಾಗೇನಿಲ್ಲ. ನನ್ನ ಮಕ್ಕಳು ತುಂಬಾ ಒಳ್ಳೆಯವರು, ಇಲ್ಲಿ ನಿಲ್ಲೋದಕ್ಕೆ ಹೇಳಿದ್ದಾರೆ ಅಷ್ಟೇ, ನಾನು ಇಲ್ಲಿಗೆ ಬಂದು ಮೂರು ತಿಂಗಳ ಒಳಗೆ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ದಾರೆ, ಅವರು ಖಂಡಿತ ಬರುತ್ತಾರೆ, ನಮ್ಮ ಮಕ್ಕಳ ಬಗ್ಗೆ…
  • July 22, 2025
    ಬರಹ: ಬರಹಗಾರರ ಬಳಗ
    ‘ಒಗ್ಗಟ್ಟಿನಲ್ಲಿ ಬಲವಿದೆ, "ಹತ್ತು ಕೈಗಳು ಸೇರಿದಾಗ ಒಂದು ಕೆಲಸವನ್ನು ಹೂವೆತ್ತಿದಂತೆ ಸುಲಭವಾಗಿ ಮಾಡಿ ಮುಗಿಸಬಹುದು ಆದರೆ "ಗುಂಪಿನಲ್ಲಿ ಗೋವಿಂದ ,ಹತ್ತರೊಟ್ಟಿಗೆ ಹನ್ನೊಂದು" ಆಗಬಾರದು. ನಾವು ಯಾವುದೇ ಕೆಲಸಕಾರ್ಯವನ್ನು ಕೈಗೆತ್ತಿಕೊಂಡಾಗ…
  • July 22, 2025
    ಬರಹ: ಬರಹಗಾರರ ಬಳಗ
    ನಿನ್ನೆಯ ದಿನದಂದು ಮುಚ್ಚಿಟ್ಟುಕೊಂಡ ಕಂಪನು ಇಂದೇಕೆ ಪಸರಿಸುವ ಮನಸ್ಸು ಬಂತು ಹೂವಿಗೆ ನಿನ್ನೆಯ ದಿನ ಬಿಸಿಲಿಗೆ ಬಾಡುತ್ತಿದ್ದ ಹೂವು ಇಂದೇಕೆ ತಲೆದೂಗುತ್ತಿದೆ ಕೋಗಿಲೆ ಹಾಡಿಗೆ ನಿನ್ನೆಯ ದಿನ ಬಿಸಿಲಿಗೆ ಬೇಸರಿಸುವ ಬೇಗೆ ಇಂದೇಕೆ ರಂಜಿಸುತ್ತಿದೆ…
  • July 21, 2025
    ಬರಹ: Ashwin Rao K P
    ರೋಗಿಗಳಿಗೆ ನೀಡಲಾಗುವ ಆಹಾರ ಎಂದೇ ಪ್ರಸಿದ್ದಿ ಪಡೆದುಕೊಂಡಿದ್ದ ಈ ಬಿಳಿ ಬಣ್ಣದ ಬ್ರೆಡ್, ಈಗ ಪ್ರತಿಯೊಬ್ಬರ ಜೀವನದ ಭಾಗವಾಗಿದೆ. ಆದರೆ, ಖಾಲಿ ಹೊಟ್ಟೆಯಲ್ಲಿ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ದಿನಾ ಬ್ರೆಡ್…
  • July 21, 2025
    ಬರಹ: Nagendra Kumar K S
    ಸತ್ತ ಕನಸುಗಳಿಗೆ ವರುಷ ಸರಿದುಹೋಯ್ತು;  ಅರಳುತಿವೆ ದಿನಗಳು  ಹೊಸ ರೂಪದಲ್ಲಿ.  "ಮೈಗಳ್ಳ ನೀನು!" ಎಂದು ನಗುತ್ತಿವೆ ಕನಸುಗಳು,  ನನ್ನ ನೆಮ್ಮದಿಗಿಂದು ಬೆಂಕಿ ಹಚ್ಚಿವೆ||   ರಕ್ಕಸರ ನಗೆಯಲ್ಲಿ ನನ್ನ ಪಥವಾಯಿತು;  ಎದೆಯು ಬಾರವಾಯಿತು…
  • July 21, 2025
    ಬರಹ: Ashwin Rao K P
    ೧೯೩೦ ರಿಂದ ೧೯೭೫ರವರೆಗಿನ ಸಮಯದಲ್ಲಿ ದಕ್ಷಣ ಕನ್ನಡ ಜಿಲ್ಲೆಯಲ್ಲಿ ಉಂಟಾದ ಬದಲಾವಣೆಗಳೇ ‘ಉತ್ತರಾಧಿಕಾರ’ ಕಾದಂಬರಿಯ ಕಥಾನಕ. ಡಾ. ಜನಾರ್ದನ ಭಟ್ ಅವರ ಈ ಕಾದಂಬರಿಗೆ ೨೦೧೨ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಸ್ವಾತಂತ್ರ್ಯ ಪೂರ್ವ…
  • July 21, 2025
    ಬರಹ: Shreerama Diwana
    ಟಿ ವಿ ಧಾರಾವಾಹಿಗಳಲ್ಲಿ ಅತ್ತೆ ಸೊಸೆಗೆ ತೊಂದರೆ ಕೊಡುವುದನ್ನು ನೋಡಿ ಕಣ್ಣೀರಾಗುವಿರಿ, ಆದರೆ ನಿಮ್ಮ ಮನೆಯ ಅದೇ ವಾತಾವರಣವನ್ನು ಮರೆಯುವಿರಿ. ಸಿನಿಮಾದಲ್ಲಿ ನಾಯಕ ಭ್ರಷ್ಟ ರಾಜಕಾರಣಿಗಳನ್ನು ಚಚ್ಚುವುದು ನೋಡಿ ಸಿಳ್ಳೆ ಹೊಡೆಯುವಿರಿ, ಆದರೆ ನಿಜ…
  • July 21, 2025
    ಬರಹ: ಬರಹಗಾರರ ಬಳಗ
    ವೈದ್ಯರ ಕೈಗಳು ನಡುಗುತ್ತಿವೆ. ಇಷ್ಟರವರೆಗೂ ಆ ತರಹದ ಘಟನೆಯನ್ನ ಅವರು ನೋಡಿಲ್ಲ, ಪುಟ್ಟ ಹೆಣ್ಣು ಮಗು ಬದುಕನ್ನು ಕಾಣುವುದಕ್ಕೆ ಇನ್ನೊಂದಷ್ಟು ಸಮಯವಿದೆ. ಕೆಲವು ವರ್ಷದ ಹಿಂದೆ ಅದೇ ಮಗುವನ್ನ ತಾಯಿಯ ಹೊಟ್ಟೆಯಿಂದ ಹೊರತೆಗೆದು ಮುದ್ದಾಡಿದ್ರು.…
  • July 21, 2025
    ಬರಹ: ಬರಹಗಾರರ ಬಳಗ
    ಹಿಂದಿನ ಲೇಖನದಲ್ಲಿ ಬದುಕು ಸುಂದರದ ಬಗ್ಗೆ ತಿಳಿದುಕೊಂಡಿದ್ದೇವೆ. ಬದುಕನ್ನು ಕರ್ಮದಿಂದ ಕಟ್ಟಬೇಕು. ಹಾಗಾದರೆ ಕರ್ಮದ ಸ್ವರೂಪ ಏನು ಅನ್ನೋದನ್ನ ತಿಳಿದುಕೊಳ್ಳೋಣ.  1. ಕರ್ಮ ಸುಖ - ದುಃಖಕ್ಕೆ ಕಾರಣವಾಗುತ್ತದೆ: ಕರ್ಮವೂ ಸುಖವನ್ನು ಕೊಡುತ್ತದೆ.…
  • July 21, 2025
    ಬರಹ: ಬರಹಗಾರರ ಬಳಗ
    ಗುಳಿ ಕೆನ್ನೆ ಹುಡುಗಿ ನನ್ನಾಕೆ ಬೆಡಗಿ ನಕ್ತಾಳೆ ನೋಡಿ ಕಣ್ಸನ್ನೆ ಮಾಡಿ ಒಲವಲ್ಲೆ ಸೆಳೆದು ನೋವೆಲ್ಲ ಕಳೆದು ಹಂಚತ್ತಾಳೆ ಪ್ರೀತಿಯ ಹನಿಹನಿಯಾ ಅವಳೊಂದು ಸುಂದರ ನೆನಪು ಅವಳಿಂದ ಮುಂದಿನ ಬದುಕು ಅವಳಿಗೆ ನನ್ನಯ ಪ್ರೀತಿಯು ಮುಡಿಪು ಎಲ್ಲಿ ಮೂಡಿತೊ…
  • July 20, 2025
    ಬರಹ: Shreerama Diwana
    ಬದುಕು ಜಟಕಾ ಬಂಡಿ,  ವಿಧಿ ಅದರ ಸಾಹೇಬ,  ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ,  ಹೋಗೆಂದ ಕಡೆಗೋಡು,  ಪದ ಕುಸಿಯೇ ನೆಲವಿಹುದು  ಮಂಕು ತಿಮ್ಮ.- ಡಿವಿಜಿ ದೂರದ ಯೆಮೆನ್ ದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಹೋದ ಕೇರಳದ…
  • July 20, 2025
    ಬರಹ: ಬರಹಗಾರರ ಬಳಗ
    ನಮ್ಮ ಮನೆಗೆ ಕಬ್ಬಿಣದ ಗೇಟುಗಳನ್ನು ಹಾಕಿದ್ದೇನೆ. ಅದಕ್ಕೆ ಗಟ್ಟಿಯಾಗಿ ಬೇಗವನ್ನು ಜಡಿದಿದ್ದೇನೆ, ಆದರೆ ನಾನು ಹಾಕಿರುವ ಗೇಟನ್ನು ಗಮನಿಸದೆ ಬೀಗವನ್ನು ನೋಡದೆ ರಸ್ತೆಯಲ್ಲಿ ಹರಿಯುತ್ತಿದ್ದ ನೀರೆಲ್ಲವೂ ತುಂಬಿ ಮನೆ ಅಂಗಳಕ್ಕೆ ಕಾಲಿಟ್ಟಿದೆ. ಆ…
  • July 20, 2025
    ಬರಹ: ಬರಹಗಾರರ ಬಳಗ
    ಮಕ್ಕಳ ಜಗಲಿಯ ಎಲ್ಲಾ ಓದುಗರಿಗೂ ನನ್ನ ನಮಸ್ಕಾರಗಳು. ಮೊನ್ನೆ ಅಷ್ಟೇ ಗುರು ವಂದನ ಕಾರ್ಯಕ್ರಮವನ್ನು ಮುಗಿಸಿದ್ದೇವೆ. "ಗುರುವಿನ ಗುಲಾಮನಾಗುವವರೆಗೂ ದೊರೆಯದಣ್ಣ ಮುಕುತಿ" ಎಂಬ ಈ ಸಾಲುಗಳಂತೆ, ಗುರುಗಳ ಗುಲಾಮರಾಗಿ ನಾವು ಎಲ್ಲಿಯವರೆಗೂ ಇರುತ್ತೇವೋ…
  • July 19, 2025
    ಬರಹ: Ashwin Rao K P
    ಕಾರಣ ಗಂಡ ಹೆಂಡತಿಯ ನಡುವೆ.. ಮಾತಿಲ್ಲಾ ಕಥೆಯಿಲ್ಲ.. ಆದರೆ ಅಲ್ಲಿ ನಡೆದದ್ದೇ ಬೇರೆ. ರಾತ್ರಿ ಸಮಯ ೯ ಘಂಟೆ ಆಗಿ ಹೋಗಿತ್ತು.. ಗಂಡ ಇನ್ನೂ ಮನೆಗೆ ಬಂದಿಲ್ಲ.. ಕಾದು ಕಾದು ಸುಸ್ತಾದ ಶ್ರೀಮತಿ.. ಕಲರ್ಸ್ ಕನ್ನಡ ಚಾನಲ್ ನ ರಾಧ ರಮಣ ಸೀರಿಯಲ್…