ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸುಧಾರಣಾವಾದಿಗಳು ತುರ್ತಾಗಿ ಬೇಕಾಗಿದ್ದಾರೆ !

ಹಿರಿಯ ಪತ್ರಕರ್ತ ಮಿತ್ರರೊಬ್ಬರು ದೂರವಾಣಿ ಕರೆ ಮಾಡಿ ಸದಾ ಹಿಂದೂ ಧರ್ಮದ ಅಸಮಾನತೆಯ ಬಗ್ಗೆ ಮಾತನಾಡುವ ನೀವು, ಮುಸ್ಲಿಂ ಧರ್ಮದ ಸುಧಾರಣೆಯ ಬಗ್ಗೆಯೂ ಮಾತನಾಡಬೇಕಿದೆ. ಹಿಂದೆ ಸಾಕಷ್ಟು ಒಳ್ಳೆಯ ಸುಧಾರಣಾವಾದಿಗಳು, ಪ್ರಗತಿಪರರು ಆ ಧರ್ಮದಲ್ಲಿ ಸೃಷ್ಠಿಯಾಗುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಇಲ್ಲ.

Image

ಸ್ಟೇಟಸ್ ಕತೆಗಳು (ಭಾಗ ೧೧೪೬)- ನಗುತ್ತಿದ್ದಾಳೆ

ಅವಳು ನಗುತ್ತಾಳೆ, ನಗುವಿನಲ್ಲಿ ಸಂಭ್ರಮವಿಲ್ಲ, ಕಳೆದುಕೊಳ್ಳುವ ಭಯವಿದ್ದವಳು ಉಳಿಸಿಕೊಂಡಿದ್ದಾಳೆ. ಈಗ ಪ್ರತೀ ದಿನವೂ ನೋವಿದ್ದರೂ ನಗುತ್ತಿದ್ದಾಳೆ.

Image

ಅರಿಹಂತ

ಅರಿಯೆಂದರೆ ತಿಳಿಯು ಅಥವಾ ಶತ್ರು ಎಂದು ಸಾಮಾನ್ಯ ಅರ್ಥವಿದೆ. ಕವಿಗಳು ಕಾವ್ಯಗಳಲ್ಲಿ ‘ಅರಿ’ ಎಂಬ ಪದವನ್ನು ವಿವಿಧ ಅರ್ಥದಲ್ಲಿ ಬಳಸಿದ್ದಾರೆ. ಸಮಾಸವೊಂದಕ್ಕೂ ಅರಿಯೆಂದು ಹೆಸರಿದೆ. ಈ ಲೇಖನದಲ್ಲಿ ‘ಅರಿ’ ಯನ್ನು ಶತ್ರುವೆಂಬ ಅರ್ಥಕ್ಕೆ ಮೀಸಲಿರಿಸಿದೆ. ‘ಅರಿಹಂತ” ಎಂದರೆ ಶತ್ರು ಹಂತಕ ಎಂಬ ಪ್ರತ್ಯೇಕ ವಿವರಣೆ ಅನಗತ್ಯ.

Image

ಮಧ್ಯಾಹ್ನ ಊಟದ ಬಳಿಕ ಪುಟ್ಟ ನಿದ್ರೆ !

ಬಹಳ ಮಂದಿಗೆ ಮಧ್ಯಾಹ್ನದ ಸುಗ್ರಾಸ ಭೋಜನದ ಬಳಿಕ ಒಂದು ಕೋಳಿ ನಿದ್ರೆ (ಪುಟ್ಟ) ಮಾಡುವ ಅಭ್ಯಾಸ ಇರುತ್ತದೆ. ಬೆಳಿಗ್ಗೆ ಬೇಗನೇ ಎದ್ದು ಕೃಷಿ ಕೆಲಸಕ್ಕೆ ಹೋಗುವ ಮಂದಿ ಮಧ್ಯಾಹ್ನದ ಪುಟ್ಟ ನಿದ್ರೆಗೆ ಶರಣಾಗುವುದು ಸಹಜ. ಏಕೆಂದರೆ ಅವರಿಗೆ ಆ ಸಮಯದಲ್ಲಿ ಅಧಿಕ ಕೆಲಸ ಇರುವುದಿಲ್ಲ. ನೆತ್ತಿಯನ್ನು ಸುಡುವ ಬಿಸಿಲು ಇರುವ ಕಾರಣ ತೋಟಕ್ಕೆ ಹೋಗಿ ಕೆಲಸ ಮಾಡುವುದು ಕಷ್ಟ.

Image

ಪುಟ್ಟ ಹೆಜ್ಜೆ ದೊಡ್ಡ ಕಣ್ಣು

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಿಯಾ ಕೆರ್ವಾಶೆ
ಪ್ರಕಾಶಕರು
ಸಪ್ನ ಬುಕ್ ಹೌಸ್, ಗಾಂಧಿನಗರ, ಬೆಂಗಳೂರು - ೫೬೦೦೦೯
ಪುಸ್ತಕದ ಬೆಲೆ
ರೂ. ೧೨೦.೦೦, ಮುದ್ರಣ: ೨೦೨೨

ಬರಹಗಾರ್ತಿ, ಪತ್ರಕರ್ತೆ ಪ್ರಿಯಾ ಕೆರ್ವಾಶೆ ತಮ್ಮ ಬಾಲ್ಯದ ನೆನಪುಗಳನ್ನು ‘ಪುಟ್ಟ ಹೆಜ್ಜೆ ದೊಡ್ಡ ಕಣ್ಣು’ ಪುಸ್ತದ ಮೂಲಕ ಹರಡಿದ್ದಾರೆ. ಈ ಕೃತಿಯಲ್ಲಿ ಬಹು ಮುಖ್ಯವಾಗಿ ತುಳುನಾಡಿನಲ್ಲಿ ನಡೆಯುವ ಭೂತದ ಆರಾಧನೆ,ಭೂತ, ಗುಳಿಗ ಮೊದಲಾದುವುಗಳ ಬಗ್ಗೆ ಅವರ ಬಾಲ್ಯದ ನೆನಪುಗಳನ್ನು ಬರೆದು ‘ಇದು ಭೂತ ಕಾಲ’ ಎಂದು ನಿವೇದಿಸಿದ್ದಾರೆ. ಈ ಕೃತಿಗೆ ಸುಂದರವಾದ ಮುನ್ನುಡಿಯನ್ನು ಬರೆದಿದ್ದಾರೆ ಖ್ಯಾತ ಅಂಕಣಕಾರ ಜೋಗಿ.

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ : ಯೋಚಿಸಿ ನೋಡಿ... ‌‌‌

ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು ನೆರವೇರಿಸಿದರೆ ನಿಮಗೆ ಒಂದಷ್ಟು ಮಾನಸಿಕ ನೆಮ್ಮದಿ ಆತ್ಮವಿಶ್ವಾಸ ಮತ್ತು  ಸಂಕಷ್ಟ ಸಮಯದಲ್ಲಿ ಸ್ವಲ್ಪ ಧೈರ್ಯ ದೊರೆಯಬಹುದು ಅಥವಾ ದೊರೆಯುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೪೫)- ಪ್ರೀತಿ

ಮನೆ ಅಂಗಳದಲ್ಲಿ ಪರಿಚಿತವಲ್ಲದ ನಾಯಿಯೊಂದು ಮನೆಯವರಿಗೆ ಜೊತೆಯಾಗಿತ್ತು. ಗುರುತು ಪರಿಚಯವಿಲ್ಲದವನು ಆತ್ಮೀಯನಾಗಿದ್ದ. ಅವರೊಂದಿಗೆ ಒಡನಾಡಿಯಾಗಿದ್ದ ದಿನಕಳೆದಂತೆ ಮನೆಯ ಸದಸ್ಯನೂ ಆಗಿಬಿಟ್ಟ. ಮನೆಯವರ ಮತ್ತು ನಾಯಿಯ ಬಾಂಧವ್ಯ ಗಟ್ಟಿಯಾಗಿತ್ತು. ಆದರೆ ಆ ಕೆಲವು ದಿನಗಳಿಂದ ಆತ ಎಲ್ಲೂ ಕಾಣಿಸುತ್ತಿಲ್ಲ. ಎಷ್ಟೇ ಹುಡುಕಿದರೂ ಆತನ ಪತ್ತೆ ಇಲ್ಲ.

Image

ಲಡ್ಡಿಗೆ ಉಂಡೆ

Image

ಕಡಲೇಬೇಳೆಯನ್ನು ಅರ್ಧ ಗಂಟೆ ನೆನೆಯಲು ಬಿಡಿ. ಅದನ್ನು ನುಣ್ಣಗೆ ರುಬ್ಬಿ ಉಪ್ಪು ಸೇರಿಸಿ ಕರಡಿಕೊಳ್ಳಿ. ಎಣ್ಣೆಯನ್ನು ಕಾಯಿಸಿಕೊಳ್ಳಿ. ಬೂಂದಿ ಮಾಡುವ ಪಾತ್ರೆಗೆ ಹಿಟ್ಟನ್ನು ಹಾಕಿ ಎಣ್ಣೆಗೆ ಬಿಡಿ. ಗರಿಗರಿ ಬರುವಂತೆ ಕರಿದುಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಬೆಲ್ಲವನ್ನು ಸ್ವಲ್ಪ ನೀರು ಬೆರೆಸಿ ಪಾಕಕ್ಕೆ ಇಡಿ. ಇದಕ್ಕೆ ಏಲಕ್ಕಿ ಪುಡಿ ಹಾಕಿಬಿಡಿ.

ಬೇಕಿರುವ ಸಾಮಗ್ರಿ

ಕಡಲೇಬೇಳೆ ೧ ಲೋಟ, ಗಟ್ಟಿ ಬೆಲ್ಲ ೧ ಲೋಟ, ಉಪ್ಪು ರುಚಿಗೆ, ಕರಿಯಲು ಎಣ್ಣೆ, ಏಲಕ್ಕಿ ಸುವಾಸನೆಗೆ