ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಸ್ವಾಭಿಮಾನದ ಚಿಗುರು

ಎಲ್ಲ ಜೀವಿಗಳಿಗೂ ಅವುಗಳದ್ದೆ ಆದ ಸ್ವಾಭಿಮಾನವಿರತ್ತದೆ. ಅದರಲ್ಲಿ ಮನುಷ್ಯನಲ್ಲಿ ಹೆಚ್ಚು.. ನಮ್ಮ ಹಿರಿಯರೆಲ್ಲ ನಮಗೆ ತಿಳಿಸಿರುವಂತೆ, ಸಕಾರಾತ್ಮಕವಾದ ಆತ್ಮಾಭಿಮಾನ, ಸ್ವಾಭಿಮಾನ ಇವೆರಡು ಇದ್ದಲ್ಲಿ ಆ ಮನುಷ್ಯನ ಗುರಿ ಸಾಧನೆ ಖಂಡಿತ.

Image

ಫಲಗಳನ್ನು ಹಣ್ಣು ಮಾಡುವ ಸುರಕ್ಷಿತ ವಿಧಾನ ಯಾವುದು?

ಹಣ್ಣು ಹಂಪಲುಗಳನ್ನು ತಿನ್ನುವವರು ಇದಕ್ಕೆ ಹಣ್ಣು ಮಾಡಲು ವಿಷದ ಹುಡಿ ಹಾಕಿದ್ದಾರೆ ಎಂದು ಮಾತಾಡುತ್ತಾರೆ. ಅಂಗಡಿಯವನಲ್ಲಿ ವಿಷ ಹಾಕದ ಹಣ್ಣು ಕೊಡಿ ಎಂದು ಕೇಳುತ್ತಾರೆ. ಅವರು ಬಟ್ಟೆಯಲ್ಲಿ ಒರೆಸಿ ಇದು ವಿಷ ರಹಿತ ಎಂದು ಕೊಡುತ್ತಾರೆ. ನಂಬಿಕೆಯಲ್ಲಿ ಒಯ್ದು ಅದನ್ನು ತಿನ್ನುತ್ತೇವೆ.

Image

ಮಣಿಪುರ ಸಂಘರ್ಷ ಅಂತ್ಯಕ್ಕೆ ಸಂಧಾನ ಮಾರ್ಗವೇ ಸೂಕ್ತ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಜನಾಂಗೀಯ ಸಂಘರ್ಷ ಭುಗಿಲೆದ್ದಿದೆ. ಕಳೆದ ಒಂದೂವರೆ ವರ್ಷದಿಂದ ನಿರಂತರವಾಗಿ ರಾಜ್ಯದ ಬಹುಸಂಖ್ಯಾತ ಮೈತ್ರೇಯಿ ಹಾಗೂ ಕುಕಿ ಮತ್ತು ನಾಗಾ ಸಮುದಾಯಗಳನ್ನೊಳಗೊಂಡ ಅಲ್ಪ ಸಂಖ್ಯಾತರ ನಡುವೆ ಭಾರೀ ಹಿಂಸಾಚಾರ ನಡೆಯುತ್ತಲೇ ಬಂದಿದೆ.

Image

ಒಂದಷ್ಟು ಪ್ರವಾಸದ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ...

ನವೆಂಬರ್ ತಿಂಗಳಿನಲ್ಲಿ ಇಲ್ಲಿಯವರೆಗೆ ಸಾಕಷ್ಟು ವೈವಿಧ್ಯಮಯ ಪ್ರವಾಸವನ್ನು ಕೈಗೊಂಡಿದ್ದೇನೆ. ಅದರ ಸಣ್ಣ ಮಾಹಿತಿ.

Image

ಸ್ಟೇಟಸ್ ಕತೆಗಳು (ಭಾಗ ೧೧೪೪)- ಚಟ

ಬೆಳಗಿನ ಮುಂಜಾವಿನ ಸೂರ್ಯ ಮೂಡುವ ಹೊತ್ತಿಗೆ ಮನೆಯ ರೇಡಿಯೋ ಹಾಡುತ್ತಿತ್ತು. ದಾಸನ ಮಾಡಿಕೋ ಎನ್ನಾ ದಾಸನ ಮಾಡಿಕೋ ಎನ್ನಾ...ಎಂದು. ಮಂದವಾಗಿ ಕೇಳುತ್ತಿರುವ ದೇವರ ವಾಣಿ ಮನೆಯಲ್ಲಿ ಹಚ್ಚಿರುವ ದೇವರ ಮುಂದಿನ ದೀಪ, ಸುವಾಸನೆ ಬೀರುತ್ತಿರುವ ಗಂಧದಕಡ್ಡಿ, ಇದೆಲ್ಲವೂ ಇದ್ದರೂ ಕೂಡ ಮನೆಯಮ್ಮನ ಮನಸ್ಸು ಪ್ರಶಾಂತವಾಗಿಲ್ಲ.

Image

ತತ್ವಜ್ಞಾನಿ ಮತ್ತು ತತ್ವದರ್ಶಿ

ಇಂದು ತತ್ವಜ್ಞಾನಿ ಮತ್ತು ತತ್ವದರ್ಶಿಗಳ ಬಗ್ಗೆ ತಿಳಿದುಕೊಳ್ಳೋಣ. ಜಗತ್ತಿನ ವಸ್ತುಗಳನ್ನು ವಿಭಜಿಸಿ ವಿಭಜಿಸಿ ಅದರ ಮೂಲ ಸತ್ಯವಸ್ತು ಕಂಡು ಹಿಡಿದವನು ತತ್ವಜ್ಞಾನಿ. ಸತ್ಯದ ಸೌಂದರ್ಯದಲ್ಲಿ ಬೆರೆತವನು, ಅನುಭವಿಸಿದವನು ತತ್ವದರ್ಶಿ, ದಾರ್ಶನಿಕ, ದರ್ಶನ ಮಾಡಿದವನು ಎನ್ನುವರು. 

Image

ಬೋರಿಮ್ ನ ಸೇತುವೆ

ಪುಸ್ತಕದ ಲೇಖಕ/ಕವಿಯ ಹೆಸರು
ಸುರೇಖಾ ಪನಂಡಿಕರ್
ಪ್ರಕಾಶಕರು
ನ್ಯಾಷನಲ್ ಬುಕ್ ಟ್ರಸ್ಟ್, ನವದೆಹಲಿ
ಪುಸ್ತಕದ ಬೆಲೆ
ರೂ.15/-

ಗೋವಾದ ಮೀನುಗಾರ ದಂಪತಿಗಳ ಮಗ ಜುಜೆ ಎಂಬಾತನ ಬದುಕಿನ ಘಟನೆಗಳ ಮೂಲಕ ಗೋವಾದ ಸ್ವಾತಂತ್ರ್ಯ ಹೋರಾಟದ ಕತೆ ಹೇಳುವ ಪುಸ್ತಕ ಇದು. ಸುರೇಖಾ ಪನಂಡಿಕರ್ ಬರೆದಿರುವ ಕತೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಕೆ. ಸುಧಾ ರಾವ್.

ಅಲ್ಲಿನ ಸಮುದ್ರತೀರದಲ್ಲಿ ಆಟವಾಡುತ್ತಾ, ಅಪ್ಪ ಪೆಡ್ರೊ ಮತ್ತು ಅಮ್ಮ ಮರಿಯಾಳಿಗೆ ಬೆಳಗ್ಗೆ ಮೀನು ವಿಂಗಡಿಸುವ ಕೆಲಸದಲ್ಲಿ ಸಹಾಯ ಮಾಡುತ್ತಾ ದಿನಗಳೆಯುತ್ತಿದ್ದ ಜುಜೆ. ಶಾಲೆಗೆ ಹೋಗಬೇಕೆಂಬುದು ಅವನ ಕನಸು. ಅದು ಕನಸಾಗಿಯೇ ಉಳಿಯಲು ಕಾರಣ ಅವನ ಹೆತ್ತವರ ಬಡತನ. ಹತ್ತಿರದ ಶಾಲೆಯ ಶುಲ್ಕ ಪಾವತಿಸಲು ಅವರಿಗೆ ಸಾಧ್ಯವಿರಲಿಲ್ಲ.

ಹನಿ ಟ್ರ್ಯಾಪ್...

ಇತ್ತೀಚಿನ ಭಯೋತ್ಪಾದಕ ಸುದ್ದಿಗಳು: ಗೆಳೆಯರೊಬ್ಬರು ಕರೆ ಮಾಡಿ ಅಪರಿಚಿತ ಮಹಿಳೆಯ  ಕೆಲವೇ ಸೆಕೆಂಡುಗಳ ಒಂದು ವಿಡಿಯೋ ಕಾಲ್ ಸಹಜವಾಗಿ ಸ್ವೀಕರಿಸಿದ ತಪ್ಪಿಗೆ ಒಂದು ಹನಿ ಟ್ರ್ಯಾಪ್ ಬ್ಲಾಕ್‌ ಮೇಲ್ ಗೆ ಒಳಗಾಗಿ ಸಾಕಷ್ಟು ಆತಂಕ ಭಯದ ವಾತಾವರಣದಲ್ಲಿ ನಲುಗಿ ಕೊನೆಗೆ ಅನೇಕ ಹಿತೈಷಿಗಳ ಸಹಾಯ ಪಡೆದು ಪೋಲೀಸ್ ಸ್ಟೇಷನ್ ಗೆ ದೂರು ದಾಖಲಿಸುವವರೆಗೂ ಪಟ್ಟ ಕಷ್ಟಗಳನ್ನು ಹೇಳಿಕೊಂಡರು.

Image