ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

"ಮರುಳ ಮುನಿಯನ ಕಗ್ಗ”ದಲ್ಲಿ ಬದುಕಿನ ಒಳನೋಟಗಳು

ಮಾನ್ಯ ಡಿ.ವಿ. ಗುಂಡಪ್ಪನವರು ನಮಗಿತ್ತಿರುವ ಬೆಲೆಕಟ್ಟಲಾಗದ ಮುಕ್ತಕಗಳ ಎರಡು ಸಂಕಲನಗಳು: “ಮಂಕುತಿಮ್ಮನ ಕಗ್ಗ” ಮತ್ತು “ಮರುಳ ಮುನಿಯನ ಕಗ್ಗ". ಎರಡನೆಯದು ಅವರ ನಿಧನಾನಂತರ ಅವರ ಆಪ್ತರ ಮುತುವರ್ಜಿಯಿಂದಾಗಿ 1984ರಲ್ಲಿ ಪ್ರಕಟವಾಯಿತು. ಇದರಲ್ಲಿಯೂ ಅವರ ಅಗಾಧ ಅಧ್ಯಯನ ಹಾಗೂ ಜೀವನಾನುಭವ ಭಟ್ಟಿಯಿಳಿಸಿ, ಪ್ರಚಂಡ ಪ್ರತಿಭೆಯ ಬಲದಿಂದ ರಚಿಸಿದ ಮುಕ್ತಕಗಳೇ ತುಂಬಿವೆ. ಇಲ್ಲಿನ 824 ಮುಕ್ತಕಗಳಲ್ಲಿ ನಮ್ಮ ಬದುಕಿನ ಬಗ್ಗೆ ಹೊಸ ಚಿಂತನೆಗಳನ್ನೂ ಒಳನೋಟಗಳನ್ನೂ ನೀಡುವ ಕೆಲವು ಮುಕ್ತಕಗಳನ್ನು ಪರಶೀಲಿಸೋಣ.

ಬೇವು ಬೆಲ್ಲಗಳುಂಡೆ ದಿನದಿನದ ನಮ್ಮೂಟ / ಪೂರ್ವಕರ್ಮದ ಫಲಿತಶೇಷದಿಂದ ಕಹಿ //
ದೈವಪ್ರಸಾದದಿಂದ ಸಿಹಿಯೀ ದ್ವಂದ್ವದಲಿ / ಆವೇಶವೇತಕೋ - ಮರುಳ ಮುನಿಯ //

Image

ಕಿಡ್ನಿಯಲ್ಲಿ ಕಲ್ಲು ಆಗದಂತೆ ನಿರ್ವಹಣೆ ಹೇಗೆ?

ಕಿಡ್ನಿ ಸ್ಟೋನ್ ಅಥವಾ ಮೂತ್ರಪಿಂಡದಲ್ಲಿ ಕಲ್ಲಾಗುವುದು ಈಗ ಬಹಳ ಸಾಮಾನ್ಯ ಮಾತು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಿಗೂ ತಮ್ಮ ಆರೋಗ್ಯವನ್ನು ಗಮನಿಸುವುದಕ್ಕೆ ಪುರುಸೊತ್ತೇ ಇಲ್ಲ. ಯುವಕರಾಗಿರುವಾಗ ಬಿಡುವಿಲ್ಲ, ವಯಸ್ಸು ಕಳೆದು ಆರೋಗ್ಯ ಸಮಸ್ಯೆ ಪ್ರಾರಂಭವಾದಾಗ ಮೊದಲೇ ಜಾಗೃತೆ ಮಾಡಬೇಕಿತ್ತು ಅನ್ನೋ ಯೋಚನೆ ಸಾಮಾನ್ಯ. ಕಿಡ್ನಿ (ಮೂತ್ರ ಕೋಶ) ನಮ್ಮ ದೇಹದ ಬಹುಮುಖ್ಯ ಅಂಗ.

Image

ವಿವಾದದ ರಾಜ ಪಿತ್ರೋಡಾ

ಸಾಗರೋತ್ತರ ಕಾಂಗ್ರೆಸ್ ನ ಅಧ್ಯಕ್ಷ ಮತ್ತು ರಾಹುಲ್ ಗಾಂಧಿಯ ಪರಮಾಪ್ತ ಸ್ಯಾಮ್ ಪಿತ್ರೋಡಾ ವಿವಾದಗಳ ರಾಜನಾಗಿ ಮೂಡಿಬರುತ್ತಿದ್ದಾರೆ. ಕೆಲದಿನಗಳ ಹಿಂದಷ್ಟೇ ಅಮೇರಿಕದ ಪಿತ್ರಾರ್ಜಿತ ತೆರಿಗೆ ವ್ಯವಸ್ಥೆಯನ್ನೂ ಭಾರತದಲ್ಲೂ ಜಾರಿಗೊಳಿಸಬೇಕೆಂಬ ರೀತಿಯಲ್ಲಿ ಮಾತನಾಡಿ ವಿವಾದ ಸೃಷ್ಟಿಸಿದ್ದ ಪಿತ್ರೋಡಾ ಇದೀಗ ಭಾರತೀಯರನ್ನು ಜನಾಂಗೀಯ ಮಾದರಿಯಲ್ಲಿ ವಿಭಜಿಸಿ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ.

Image

ನಮ್ಮ ಕುಟುಂಬದ ಹೆಣ್ಣು ಮಕ್ಕಳಿಗೂ ಹೀಗೆ ಆಗುವ ಮುನ್ನ ಎಚ್ಚರಗೊಳ್ಳಿ !

ಮಹಿಳೆಯರ ಘನತೆ, ಸ್ವಾತಂತ್ರ್ಯ, ಸಮಾನತೆ,  ಪುರುಷರು ಕೊಡುವ ಸಹಾನುಭೂತಿ, ಭಿಕ್ಷೆ, ಸಹಾಯ ಸೇವೆ, ಗೌರವವಲ್ಲ. ಅದು ಅವರ ಹಕ್ಕು ನೆನಪಿರಲಿ. ಒಂದು ಕುತೂಹಲಕಾರಿ, ಆಶ್ಚರ್ಯಕಾರಿ, ಆಘಾತಕಾರಿ ಬೆಳವಣಿಗೆ  ಕರ್ನಾಟಕದ ರಾಜಕೀಯ ಮತ್ತು ಮಾಧ್ಯಮ ಲೋಕದಲ್ಲಿ ನಡೆಯುತ್ತಿದೆ.

Image

ಸ್ಟೇಟಸ್ ಕತೆಗಳು (ಭಾಗ ೯೬೦)- ನಂಬಿಕೆ

ಮನೆಯಲ್ಲಿ ತರಾತುರಿಯ  ಕೆಲಸವನ್ನು ಬೇಗ ಬೇಗನೆ ಮುಗಿಸಿ ಆ ದಿನ ಮಾಡಬೇಕಿದ್ದ ಕೆಲಸದ ಕಡೆಗೆ ಹೊರಡಲು ತಯಾರಾದರು. ಮಗನನ್ನು ತಯಾರು ಮಾಡಿ ಗಂಡ ಹೆಂಡತಿ ಇಬ್ಬರೂ ಅವನನ್ನು ಶಾಲೆಗೆ ಸೇರಿಸುವುದಕ್ಕೆ ನಡೆದೇಬಿಟ್ರು.

Image

ಸ್ವಪ್ನ ಸುಂದರಿ ( ಕವನ ಸಂಕಲನ)

ಪುಸ್ತಕದ ಲೇಖಕ/ಕವಿಯ ಹೆಸರು
ಶ್ರೀಮತಿ ರತ್ನಾ ಭಟ್
ಪ್ರಕಾಶಕರು
ಕಥಾಬಿಂದು, ಕುಂಜತ್ತ್ ಬೈಲ್, ಮಂಗಳೂರು-575015
ಪುಸ್ತಕದ ಬೆಲೆ
ರೂ: 50/-, ಪುಟಗಳು:44, ಮುದ್ರಣ: 2024

ಕವನದಲ್ಲರಳಿದ ಕಲ್ಪನಾಲೋಕದ ಸ್ವಪ್ನ ಸುಂದರಿ:

ನಿಷ್ಪಾಪಿ ಸಸ್ಯಗಳು (ಭಾಗ ೪೮) - ಆಡು ಸೋಗೆ

ಇಂದು ನಾನು ನಿಮಗೊಂದು ಒಗಟು ಕೇಳುವೆ. ಆಡು ಮುಟ್ಟದ ಸೊಪ್ಪು ಯಾವುದು? ಖಂಡಿತವಾಗಿಯೂ ನಿಮಗೆ ಹೆಸರು ಗೊತ್ತಿರಬಹುದು... ಅಂತ ಭಾವಿಸಿದ್ದೇನೆ. ಹತ್ತಾರು ವರ್ಷಗಳ ಹಿಂದೆ ಈ ಗಿಡ ನಮ್ಮೆಲ್ಲರ ಮನೆಯ ಹಾಗೂ ತೋಟದ ಬೇಲಿಗೆ ಆಧಾರವಾಗಿತ್ತು. ಇದರಲ್ಲಿರುವ ವಿಷದ ಅಂಶದಿಂದಾಗಿ ಆಡು, ಕುರಿ, ಜಾನುವಾರುಗಳು ಮುಟ್ಟದ ಕಾರಣ ಬೇಲಿಗೆ ಇದೇ ಗಿಡವನ್ನು ನೆಡುತ್ತಿದ್ದರು.

Image

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೫೨) - ಕಯ್ಯಾರ ಕಿಞ್ಞಣ್ಣ ರೈ

ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ೧೯೧೫ರ ಜೂನ್ ೮ ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು.

Image

ಅಮೃತ ಕಾಲ

ಪುಸ್ತಕದ ಲೇಖಕ/ಕವಿಯ ಹೆಸರು
ರಾಹುಲ್ ಅಶೋಕ ಹಜಾರೆ
ಪ್ರಕಾಶಕರು
ಜಯಲಕ್ಷ್ಮೀ ಪ್ರಕಾಶನ, ಇಂಡಿ.
ಪುಸ್ತಕದ ಬೆಲೆ
ರೂ. ೧೮೦.೦೦, ಮುದ್ರಣ: ೨೦೨೪

ಭಾರತ ಕಳೆದ ಹತ್ತು ವರ್ಷಗಳಲ್ಲಿ ಬಹಳಷ್ಟು ಬದಲಾಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಕೆಲವರು ಮನಸ್ಸಿದ್ದು ಮತ್ತು ಕೆಲವರು ಮನಸ್ಸಿಲ್ಲದೇ. ಆದರೆ ಭಾರತ ಯಾವೆಲ್ಲಾ ಕ್ಷೇತ್ರಗಳಲ್ಲಿ, ಹೇಗೆ ಬದಲಾಗಿದೆ ಎನ್ನುವುದನ್ನು ಹೇಳ ಬಲ್ಲ ಅಂಕಿ ಅಂಶಗಳ ಹುಡುಕಾಟ ನಡೆಸುವುದು ಬಹಳ ಕಷ್ಟ.