ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಕರಿಮೆಣಸಿಗೆ ನಿಧಾನ ಸೊರಗು ರೋಗ ಹಾವಳಿ

ಕರಿ ಮೆಣಸಿನ ಬಳಿಯಲ್ಲಿ ಎಲೆಗಳು ಹಳದಿಯಾಗಲಾರಂಭಿಸಿವೆ. ಕರೆಗಳು ಉದುರುತ್ತಿವೆ. ಎಲೆಗಳು ಬಾಡುತ್ತಿವೆ. ಈ ವರ್ಷ ಮಳೆ ಅಧಿಕವಾದ ಕಾರಣ ರೋಗ ನಿಯಂತ್ರಣದಲ್ಲಿಲ್ಲ ಎಂದು ಈಗ ಗೊತ್ತಾಗುತ್ತಿದೆ. ಮಳೆಗಾಲದ ಅನುಕೂಲಕರ ವಾತಾವರಣದಲ್ಲಿ ಕರಿಮೆಣಸು ಬಳ್ಳಿಗೆ ಫೈಟೋಪ್ತೆರಾ ಕ್ಯಾಪ್ಸಿಸಿ ಶಿಲೀಂದ್ರ ಸೋಂಕು ತಗಲಿ ಅದರ ಬೇರು ವಲಯ ಘಾಸಿಯಾಗಿರುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೧೭)- ಹನಿ

ಆ ನೀರ ಹನಿಗೆ ತುಂಬಾ ಬೇಸರವಾಗಿತ್ತು. ಬೇಜಾರು ಅಂದ್ರೆ ಅಷ್ಟು ಇಷ್ಟ ಅಲ್ಲ. ತನಗೆ ತನ್ನದೇ ಆದ ಒಂದು ಅದ್ಭುತ ಸ್ವರೂಪವಿಲ್ಲ, ಬರಿಯ ಹನಿಯಾಗಿ ಬದುಕ್ತಾ ಇದ್ದೇನೆ. ನನ್ನಿಂದ ದೊಡ್ಡದೇನೋ ಸಾಧನೆ ಆಗ್ತಾ ಇಲ್ಲ . ನನ್ನಿಂದ ಈ ಸಮಾಜಕ್ಕೆ ಉಪಯೋಗ‌ ಆಗ್ತಾ ಇಲ್ಲ .ನನ್ನ ಬದುಕಿಗೊಂದು ಅರ್ಥವೂ ಸಿಕ್ತಾ ಇಲ್ಲ.

Image

ಭಾರತದ ವಿಜ್ಞಾನಿಗಳಿಗೆ ಚಂದ್ರನ ಅಧ್ಯಯನದಲ್ಲಿ ಆಸಕ್ತಿ ಏಕೆ?

ಇಸ್ರೋ 'ಚಂದ್ರಯಾನ ಅಭಿಯಾನ'ಕ್ಕೆ ಅತೀಯಾದ ಮಹತ್ವ ಏಕೆ ನೀಡುತ್ತಿದೆ? ಹಾಗೆಯೇ, ಚಂದ್ರಯಾನ-4ರ ವಿಶೇಷತೆಗಳೇನು? ರವಿ ಕಾಣದ್ದನ್ನು, ಕವಿ ಕಂಡಂತೆ; ಜಗತ್ತಿನ ಅತ್ಯಂತ ಆಧುನಿಕ ತಂತ್ರಜ್ಞಾನ ಹೊಂದಿದ್ದ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ 'ನಾಸಾ' ಪತ್ತೆ ಹಚ್ಚದ ಯಾವ ಅಂಶ ಬಹಳ ಕಡಿಮೆ ಬಜೆಟಿನಲ್ಲಿ ಇಸ್ರೋ ಪತ್ತೆ ಹಚ್ಚಿ ಸಾಧನೆ ಮಾಡುತ್ತಿದೆ?

Image

ಮೊಳಕೆ ಬರಿಸಿದ ಹೆಸರುಕಾಳನ್ನು ದಿನವೂ ತಿನ್ನಿ !

ಮೊಳಕೆ ಬರಿಸಿದ ಧಾನ್ಯಗಳು ಬಹಳ ಆರೋಗ್ಯದಾಯಕವೂ, ಸ್ವಾದಿಷ್ಟವೂ ಆಗಿರುತ್ತದೆ. ಮೊಳಕೆ ಬರಿಸಿದ ಕಾಳುಗಳ ಉಪಯೋಗಗಳು ಅಷ್ಟಿಷ್ಟಲ್ಲ. ಅದರಲ್ಲೂ ಬಹಳ ಪೋಷಕಾಂಶಗಳನ್ನು ಹೊಂದಿರುವ ಹೆಸರು ಕಾಳನ್ನು ಮೊಳಕೆ ಬರಿಸಿ ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಧಿಕವಾಗುತ್ತದೆ. ಮೊಳಕೆ ಬರಿಸಿದ ಹೆಸರು ಕಾಳಿನ ಉಪಯೋಗ ಒಂದೆರಡಲ್ಲ. 

Image

ಪಡಿತರ ವಿತರಣ ವ್ಯವಸ್ಥೆಯ ಸಮಸ್ಯೆ ಶೀಘ್ರ ಬಗೆಹರಿಯಲಿ

ರಾಜ್ಯದ ಪಡಿತರದಾರರು ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪಡಿತರ ವಿತರಣೆಗಾಗಿ ಕೆಲವು ತಿಂಗಳ ಹಿಂದೆಯಷ್ಟೇ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿತ್ತು. ಈ ಮೂಲಕ ತಾಂತ್ರಿಕ ಸಮಸ್ಯೆಗಳು ನಿವಾರಣೆಯಾಗಿ ಪಡಿತರದಾರರಿಗೆ ಕ್ಲಪ್ತ ಸಮಯಕ್ಕೆ ಸಮರ್ಪಕವಾಗಿ ಪಡಿತರ ವಿತರಣೆಯಾಗಲಿವೆ ಎಂಬ ನಿರೀಕ್ಷೆ ಈಗ ಮತ್ತೆ ಹುಸಿಯಾಗಿದೆ.

Image

ಸ್ಟೇಟಸ್ ಕತೆಗಳು (ಭಾಗ ೧೧೧೬)- ಆತ್ಮ ಸಾಕ್ಷಿ

ಮನೆಯೊಳಗೆ ಪ್ರವೇಶವಾಗಲು ಸಾಧ್ಯವಾಗ್ತಾ ಇಲ್ಲ. ಬಾಗಿಲಲ್ಲೇ ತಡೆ ಹಿಡಿದು ನಿಲ್ಲಿಸಿ ಬಿಟ್ಟಿದ್ದಾರೆ. ಎದುರಿಗೆ ನಿಂತವರು ಯಾರೋ ವ್ಯಕ್ತಿಗಳಲ್ಲ. ಆತ್ಮಸಾಕ್ಷಿಯೇ ಮುಂದೆ ನಿಂತು ಪ್ರಶ್ನೆಗಳ ಪಟ್ಟಿಯನ್ನು ತಯಾರು ಮಾಡ್ತಾ ಇದೆ. ಎಲ್ಲರಿಗೂ ಹೇಳುವ ನೀನು ಹೇಗಿದ್ದೀಯಾ? ಗಡಿಯಾರದ ಮುಳ್ಳು ಒಂದು ಕ್ಷಣವೂ ಬಿಡದೆ ನಿರಂತರವಾಗಿ ತಿರುಗುತ್ತಿದ್ದರೂ ಸಹ ನೀನು ಹಾಗೆ ಒಂದು ಕಡೆ ನಿಂತಿದ್ದೀಯಾ ತಾನೇ?

Image