ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಭಾರತದ ಮೇಲೆ ಮತ್ತೊಮ್ಮೆ ಕುಲಾಂತರಿ ಬೆಳೆಗಳ ಗುಮ್ಮ

ಕುಲಾಂತರಿ ಬೆಳೆಗಳ ವಿರುದ್ದ ಭಾರತದಲ್ಲಿ ಬೃಹತ್ ಪ್ರತಿಭಟನೆ ಹಾಗೂ ಕಾನೂನು ಸಂಘರ್ಷಗಳು ನಡೆದ ಇತಿಹಾಸವೇ ಇದೆ. ಕುಲಾಂತರಿ ಬದನೆಕಾಯಿಯನ್ನು ದೇಶಕ್ಕೆ ಪರಿಚಯಿಸುವುದಕ್ಕೆ ಭಾರಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ೨೦೧೦ಲ್ಲಿ ಕೇಂದ್ರ ಸರ್ಕಾರವೇ ಅದಕ್ಕೆ ತಡೆಯೊಡ್ಡಿತ್ತು. ತದನಂತರದಲ್ಲಿ ಕಾನೂನು ಸಮರದ ಕಾರಣದಿಂದಾಗಿ ಕುಲಾಂತರಿ ಸಾಸಿವೆಯ ಪರಿಚಯಕ್ಕೂ ಬ್ರೇಕ್ ಬಿದ್ದಿತ್ತು.

Image

ಕಸಾಪ - ಬಳ್ಳಾರಿ ಸಾಹಿತ್ಯ ಸಮ್ಮೇಳನ ಹಾಗೂ ಸರ್ವಾಧ್ಯಕ್ಷ ಸ್ಥಾನ

ಬಳ್ಳಾರಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಬೂಕರ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಭಾನು ಮುಷ್ತಾಕ್  ಅವರು ಆಯ್ಕೆಯಾಗಿದ್ದಾರೆ ಅಥವಾ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಇದೀಗ ಅವರು ಆ ಆಹ್ವಾನ ಒಪ್ಪಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.

Image

ಸ್ಟೇಟಸ್ ಕತೆಗಳು (ಭಾಗ ೧೩೭೩) - ಹಕ್ಕಿಯಾಗು

ನೀನು ಹಕ್ಕಿಯಾಗಿ ಬಿಡು. ಅದ್ಯಾಕೆ? ಅದು ಆಹಾರಕ್ಕೆ ಒಂದೇ‌ ಸ್ಥಳವನ್ನ ನಂಬಿಕೊಳ್ಳಬೇಕೆಂದಿಲ್ಲ. ಒಂದೇ ಮರದ ಮೇಲೆ ಕೂತು ಮರ ಹಣ್ಣು ಕೊಡಬಹುದೆಂದು ಕಾಯುತ್ತಾ ಕೂರುವುದಿಲ್ಲ. ಸ್ವಲ್ಪ ಸಮಯ ಮರದ ಬಳಿ ಕುಳಿತು ನೋಡುತ್ತದೆ ತನ್ನ ಹೊಟ್ಟೆ ತುಂಬುವಷ್ಟು ಆಹಾರ ಅಲ್ಲಿ ಸಿಗುವುದಿಲ್ಲ ನನ್ನ ಮುಂದಿನ ಬದುಕಿಗೆ ಶೇಖರಣೆ ಸಾಕಾಗುತ್ತಿಲ್ಲ ಅನ್ನಿಸಿದಾಗ ಆ ಮರವನ್ನ ತೊರೆದು ಹಾರಿಬಿಡುತ್ತದೆ.

Image

ನಾನು ಮರಕುಟುಕನಲ್ಲ, ನೆಲಕುಟುಕ !

ತಲೆಕೂದಲಿಗೆ ಅದೇನೋ ಜೆಲ್‌ ಎಂಬ ಅಂಟುದ್ರವ ಹಾಕಿ ತಲೆಕೂದಲನ್ನು ಮುಳ್ಳಿನಂತೆ ನಿಲ್ಲಿಸುವ ಜಾಹೀರಾತುಗಳನ್ನು ನೀವೂ ನೋಡಿರುತ್ತೀರಿ. ಮನುಷ್ಯರಾದ ನಾವು ಹೀಗೆ ಮಾಡಲು ಏನೆಲ್ಲಾ ಸರ್ಕಸ್‌ ಮಾಡುತ್ತೇವೆ. ಆದರೆ ಪಕ್ಷಿ ಲೋಕದಲ್ಲೊಂದು ಹಕ್ಕಿಗೆ ಸಹಜವಾಗಿ ಹೀಗೆ ಸುಂದರವಾದ ಹ್ಯಾರ್‌ ಸ್ಟೈಲ್‌ ಮಾಡಲು ಸಾಧ್ಯವಾಗುತ್ತದೆ.

Image

ರೋಮಾಂಚನ ನೀಡುವ ಉಂಚಳ್ಳಿ ಜಲಪಾತ

ಮಂಜಿನ ಹನಿಯೇ ತೇಲಿ ಆಗಸಕ್ಕೆ ಚಿಮ್ಮಿದಂತೆ ಗೋಚರಿಸುವ ಉಂಚಳ್ಳಿ ಜಲಪಾತವಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಹೆಗ್ರಣೆ ಎಂಬಲ್ಲಿ. ಮಳೆಗಾಲ ಮತ್ತು ಬೇಸಿಗೆ ಎನ್ನದೆ ಇಲ್ಲಿ ನೀರು ಧುಮುಕುತ್ತಲೇ ಇರುತ್ತದೆ. ದಟ್ಟ ಅರಣ್ಯದ ನಡುವೆ ಕಲ್ಲು ಶಿಲೆಯನ್ನು ಹಾಲಿನ ಹೊಳೆಯೇ ಸೀಳಿಕೊಂಡಂತೆ. ವರ್ಷಪೂರ್ತಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ.

Image

ಗಿಲ್ಗಮೆಶ್ ಮಹಾಗಾಥೆ

ಪುಸ್ತಕದ ಲೇಖಕ/ಕವಿಯ ಹೆಸರು
ಕನ್ನಡಕ್ಕೆ: ಡಾ ಜೆ ಬಾಲಕೃಷ್ಣ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೧೩೫.೦೦, ಮುದ್ರಣ: ೨೦೨೫

ಜಗತ್ತಿನ ಅತ್ಯಂತ ಪ್ರಾಚೀನ ಕತೆಯಾದ 'ಗಿಲ್ಗಮೆಶ್ ಮಹಾಗಾಥೆ' ಹೊಸ ಗದ್ಯರೂಪದ ಅನುವಾದ ಪ್ರಕಾರದಲ್ಲಿ ಪ್ರಕಟವಾಗಿದೆ . ಮೆಸೊಪೊಟೇಮಿಯಾದ ಈ ಮಹಾಗಾಥೆ ಎಲ್ಲ ಕಾಲ, ದೇಶ, ಭಾಷೆಗಳನ್ನು ಮೀರಿದ ವಿಚಾರಗಳಾದ ಗೆಳೆತನ, ಹುಟ್ಟು ಸಾವಿನ ನಡುವಿನ ಬದುಕಿನ ಅರ್ಥ ಅರಸುವ ಹಂಬಲ, ಸಾವಿನ ಅಂಜಿಕೆ ಹಾಗೂ ಸಾವನ್ನು ಗೆಲ್ಲಬೇಕೆನ್ನುವ ನಿರಂತರ ಪ್ರಯತ್ನಗಳ ಸುಂದರ ಕಾವ್ಯಾತ್ಮಕ ನಿರೂಪಣೆಯಾಗಿದೆ.

ಒಂದು ಕೃತಜ್ಞಾ ಪೂರ್ವಕ ಧನ್ಯವಾದಗಳು ಮತ್ತು ಆತ್ಮಾವಲೋಕನದ ಮನವಿ

ಜುಲೈ 1. ವೈದ್ಯರ ದಿನ - ಪತ್ರಕರ್ತರ ದಿನ -  ಲೆಕ್ಕಪರಿಶೋಧಕರ ದಿನ - ಅಂಚೆ ಕಾರ್ಮಿಕರ ದಿನ. ಎಲ್ಲವೂ ಜುಲೈ 1 ಎಂದು ಕ್ಯಾಲೆಂಡರ್ ತೋರಿಸುತ್ತಿದೆ. ಇನ್ನಷ್ಟು ವಿಶೇಷ ವೃತ್ತಿಗಳ ದಿನವೂ ಇರಬಹುದು.

Image