ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ವಿಶಾಲ ಮನೋಭಾವದ ಅನುಭವ ಮತ್ತು ಅನುಭಾವ...

ಮನಸ್ಸಿಗೆ ಏನೋ ಕಿರಿಕಿರಿಯಾಗುತ್ತಿದೆಯೇ ? ಒಳಗೊಳಗೆ ಹೇಳಿಕೊಳ್ಳಲಾಗದ ಅಸಹನೆ ಉಂಟಾಗುತ್ತಿದೆಯೇ ? ಕೌಟುಂಬಿಕ ಸಂಬಂಧಗಳಲ್ಲಿ ಸಹಿಸಲಾಗದ ಮಾನಸಿಕ ಹಿಂಸೆಯಾಗುತ್ತಿದೆಯೇ ? ಹೊರ ಜಗತ್ತಿನ ನಮ್ಮ ಸುತ್ತಮುತ್ತಲಿನ ಅನೇಕ ಘಟನೆಗಳು ನಮ್ಮ ಇಚ್ಚೆಗೆ ವಿರುದ್ಧವಾಗಿ ಘಟಿಸುತ್ತಿದೆಯೇ ? ಮಾಧ್ಯಮ, ಗೆಳೆತನ, ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ನಂಬಿಕೆಗೆ ವಿರೋಧ ವ್ಯಕ್ತವಾಗುತ್ತಿದೆಯೇ ?

Image

ಸ್ಟೇಟಸ್ ಕತೆಗಳು (ಭಾಗ ೧೦೧೯)- ಬೆಲೆ

ದಿನವೂ ನಡೆಯುವ ದಾರಿ. ಹೋಗಿ ಬರುವ ದಾರಿಯಲ್ಲಿ ಅಷ್ಟೊಂದು ದೊಡ್ಡ ಬದಲಾವಣೆ ಅವರಿಗೆ ಕಾಣುತ್ತಾನೂ ಇರಲಿಲ್ಲ. ಪ್ರತಿದಿನ ಶಾಲೆಗೆ ಹೋಗುವ ದಾರಿ ಅಣ್ಣ ತಂಗಿ ಇಬ್ಬರ ಜೊತೆಯಾಗಿ ಊರಕೆರೆಯನ್ನ ದಾಟಿಕೊಂಡು ಶಾಲೆಗೆ ತಲುಪಬೇಕು. ಅವರಲ್ಲಿ ಹಲವು ಕನಸುಗಳಿದ್ದವು.

Image

ಜೀವನೋನ್ನತಿಗೆ... ಶಿಕ್ಷಣ ಕಾರ್ಯ

ಜೀವನೋನ್ನತಿಯು ಪೂರ್ವಕರ್ಮದ ಫಲ ಎಂದು ನಂಬುವವರಿದ್ದಾರೆ. ಪೂರ್ವಜನ್ಮ ಇತ್ತೇ? ಆ ಜನ್ಮದ ಕೆಟ್ಟ ಫಲಗಳು ಮುಂದಿನ ಜನ್ಮಕ್ಕೂ ವರ್ಗಾವಣೆಯಾಗುತ್ತವೆಯೇ ಎಂಬುದಕ್ಕೆ ಸಾಕ್ಷ್ಯಾಧಾರಿತ ಉತ್ತರ ದುರ್ಲಭ. ಯಾವುದಾದರೂ ಹಾರಿಕೆಯ, ಜಾಣ್ಮೆಯ ಅಥವಾ ಕುರುಡು ಉತ್ತರ ಸಿಗಬಹುದು. ಆದರೆ ಜೀವನೋನ್ನತಿಯು ವ್ಯಕ್ತಿಯೊಬ್ಬನ ಕಾರಣದಿಂದಲೇ ಆಗುವುದಿಲ್ಲ. ಅವನ ಬೆಳವಣಿಗೆಯಲ್ಲಿ ಅಸಂಖ್ಯ ಪಾತ್ರಧಾರಿಗಳಿರುತ್ತಾರೆ.

Image

ಪ್ರತಿ ಐದು ಸೆಕೆಂಡುಗಳಲ್ಲಿ ಐ-ಫೋನು ನಿಮ್ಮ ಚಿತ್ರಗಳನ್ನು ಏಕೆ ಕ್ಲಿಕ್ಕಿಸುತ್ತದೆ?

ಇತ್ತೀಚಿಗೆ ಐ ಫೋನ್ ಬಳಕೆದಾರರು, ತಮ್ಮ ಸಾಧನದ (ಐ-ಫೋನ್) ಮುಂಭಾಗದ ಕ್ಯಾಮೆರಾವು ಪ್ರತಿ ಐದು ಸೆಕೆಂಡುಗಳಲ್ಲಿ ಅವರ ಫೋಟೊವನ್ನು ಕ್ಲಿಕ್ಕಿಸುತ್ತಿರಬಹುದೆಂದು ಭಯಪಡುತ್ತಿದ್ದಾರೆ. ನಿಜಕ್ಕೂ, ಐ-ಫೋನ್ ನಿಮ್ಮ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದೆಯೇ?

Image

ಯಶಸ್ಸಿಗೆ ‘ಟೀಂ ವರ್ಕ್' ಎಂಬ ಅದ್ಭುತ ಮಂತ್ರ !

‘ಒಗ್ಗಟ್ಟಿನಲ್ಲಿ ಬಲವಿದೆ' ಎನ್ನುವುದು ಬಹಳ ಹಿಂದಿನ ಗಾದೆ ಮಾತು. ಬದುಕಿನ ಪ್ರತೀ ಹಂತದಲ್ಲಿ ಒಗ್ಗಟ್ಟಿನ ಮಂತ್ರವನ್ನು ನಾವು ಜಪಿಸುತ್ತಾ ಇರಬೇಕು. ಏಕೆಂದರೆ ಯಾವುದೇ ಕೆಲಸ ಮಾಡಲು ಹೊರಟಾಗ ನಮಗೆ ಕಷ್ಟಗಳು ಬಂದಾಗ ಅದನ್ನು ನಿವಾರಿಸಲು ನಮಗೆ ಇನ್ನಷ್ಟು ಮಂದಿಯ ಸಹಯೋಗ ಬೇಕಾಗುತ್ತದೆ. ನಮ್ಮ ಮನೆಯಲ್ಲಾಗಲೀ, ಕಚೇರಿಯಲ್ಲಾಗಲಿ ಇರುವ ಸದಸ್ಯರ ಅಥವಾ ಸಹೋದ್ಯೋಗಿಗಳ ಸಹಕಾರ ಅತೀ ಅಗತ್ಯ.

Image

ಹುಣಸೇ ಚಿಗುರು

ಪುಸ್ತಕದ ಲೇಖಕ/ಕವಿಯ ಹೆಸರು
ದೀಪದ ಮಲ್ಲಿ
ಪ್ರಕಾಶಕರು
ಕಾವ್ಯಮನೆ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೨೪

ದೀಪದ ಮಲ್ಲಿ ಬರೆದಿರುವ ‘ಹುಣಸೇ ಚಿಗುರು ಮತ್ತು ಇತರ ಕಥೆಗಳು' ಎಂಬ ಕಥಾ ಸಂಕಲನ ಇತ್ತೀಚೆಗೆ ಬಿಡುಗಡೆಯಾಗಿದೆ. ಉದಯೋನ್ಮುಖ ಕಥೆಗಾರ್ತಿಯಾಗಿ ಗುರುತಿಸಲ್ಪಡುತ್ತಿರುವ ದೀಪದ ಮಲ್ಲಿಯವರ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಸಾಹಿತಿ ದಯಾ ಗಂಗನಘಟ್ಟ. ಇವರು ಈ ಕೃತಿಯಲ್ಲಿರುವ ಮೂಲ ಸೆಲೆ ಮಾನವೀಯ ಕಳಕಳಿ ಎಂದಿದ್ದಾರೆ.

ಕರ್ನಾಟಕದ ವಿಧಾನಸಭಾ ಅಧಿವೇಶನ ಪ್ರಾರಂಭ...

ರಾಜ್ಯದ  224 ಚುನಾಯಿತ ಶಾಸಕರಾದ ಜನಪ್ರತಿನಿಧಿಗಳು ವಿಧಾನಸಭೆಯಲ್ಲಿ ಒಟ್ಟಿಗೆ ಸೇರಿ ವಿಚಾರ ವಿನಿಮಯ ಮಾಡುವ ಸಮಾವೇಶ. ಇದನ್ನು ಕೆಳಮನೆ ಎಂದು ಕರೆಯಲಾಗುತ್ತದೆ. ಹಾಗೆಯೇ 75 ಜನ ವಿಧಾನಪರಿಷತ್ತಿನ ಸದಸ್ಯರ ಮತ್ತೊಂದು ಸಭೆ ಇದೇ ರೀತಿ ಕಾರ್ಯ ನಿರ್ವಹಿಸುತ್ತದೆ.

Image

ಸ್ಟೇಟಸ್ ಕತೆಗಳು (ಭಾಗ ೧೦೧೮)- ಪ್ರಶ್ನೆ

ಅವಳು ಬದುಕನ್ನ ಪ್ರಶ್ನಿಸುತ್ತಿದ್ದಾಳೆ. ಹಲವು ಸಮಯದಿಂದ ಪ್ರಶ್ನಿಸುತ್ತಿದ್ದರೂ ಕೂಡ ಬದುಕು ಅದಕ್ಕೆ ಸಮಂಜಸವಾದ ಉತ್ತರವನ್ನು ನೀಡುತ್ತಿಲ್ಲ. ಅವಳ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾನೆ ಇದೆ. ಹುಟ್ಟಿನಿಂದ ಇವತ್ತಿನವರೆಗೂ ಕೂಡ ಬದುಕಲ್ಲೇನು ಬದಲಾವಣೆ ಕಾಣುತ್ತಾನೆ ಇಲ್ಲ. ಸಮಸ್ಯೆಗಳ ಪಟ್ಟಿ ದೊಡ್ಡದಾಗುತ್ತಿದೆ ವಿನಃ ಅದು ಮಾಯವಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.

Image

ಕ್ರಿಯಾ ಯೋಗ - ಯಮ - ಸತ್ಯ

ಇಂದು 'ಯಮ' ದ ಎರಡನೇ ಅಂಗ 'ಸತ್ಯ' ದ ಬಗ್ಗೆ ತಿಳಿದುಕೊಳ್ಳೋಣ. ಹೃದಯ ಮಧುರ ಆಯ್ತು ಅಂದ ಮೇಲೆ, ಮಧುರ ಹೃದಯ ಬಳಸಿ, ಏನನ್ನು ಪ್ರೀತಿಸಬೇಕು ಎನ್ನುವುದು ಎರಡನೆಯ ನಿಯಮ. ನಾವು ಯಾವುದನ್ನ ಪ್ರೀತಿಸಬೇಕೆಂದರೆ 'ಸತ್ಯ'. ಸತ್ಯವನ್ನು ತಿಳಿದುಕೊಳ್ಳೋದು, ಸತ್ಯವನ್ನ ಪ್ರೀತಿಸುವುದು ಮತ್ತು ಸತ್ಯವನ್ನು ಅನುಭವಿಸುವುದು. ಸತ್ಯ ಯಾರೇ ಹೇಳಿದರು ಅದು ಪ್ರಿಯವಾಗಿರಬೇಕು. ಸತ್ಯವನ್ನು ಪ್ರಿಯವಾಗಿ ಹೇಳಬೇಕು.

Image