ಎಲ್ಲ ಪುಟಗಳು

ಲೇಖಕರು: subin
ವಿಧ: Basic page
April 22, 2008
ಮಳೆ ಹನಿ ಮನ ಮುಟಿನಿಂತಿದೆ ಒಂದು ಹೂವು ಶಿಲ್ಪವಾಗಿ ಕಂಡಿದೆ ಎದುರು ಬರುತಿರುವ ಹೂವಿನ ತೆರಿಗೆ ದಾರಿ ನೀಡಿರೆ ಮುತ್ತು ಹನಿಗಳೇ ದಾರಿ ನೀಡಿರೆ ಕನಸಲ್ಲಿಯು ನಿನ್ನ ನೋಡ ಬಂದೆ ನೀನಾದೆ ನನ್ನ ಉಸಿರ ಚಿಂತೆ ನಿನ್ನ ಸ್ಪರ್ಶದ ಸಿಹಿ ಗುರುತು ನಾ ಹಾರಿದೆ ನನ್ನೇ ಮರೆತು ಜಿಗ್ಗಿ ಜಾರಾಡಿದೆ ನನ್ನೇ ಮರೆತು ಮಳೆ ಹನಿ ಮನ ಮುಟಿನಿಂತಿದೆ ಒಂದು ಹೂವು ಶಿಲ್ಪವಾಗಿ ಕಂಡಿದೆ ಎದುರು ಬರುತಿರುವ ಹೂವಿನ ತೆರಿಗೆ ದಾರಿ ನೀಡಿರೆ ಮುತ್ತು ಹನಿಗಳೇ ದಾರಿ ನೀಡಿರೆ ಜೊತೆ ಆಡಲು ನಿನ್ನ ನಾ ಬಯಸಿದೆ ಮುತಾಡು ಬಾರೆ…
ಲೇಖಕರು: anivaasi
ವಿಧ: ಬ್ಲಾಗ್ ಬರಹ
April 22, 2008
ನನ್ನ ಲೋಕದ ಏನೇನು ಇಲ್ಲಿ ಬರೆದುಕೊಳ್ಳುತ್ತೇನೋ ಅದರಲ್ಲಿ ಎಷ್ಟೋ ತಲುಪುತ್ತದೆ, ಮತ್ತೆಷ್ಟೋ ತಲುಪುವುದೇ ಇಲ್ಲ. ಹಂಚಿಕೊಳ್ಳುವುದು ತಲುಪಲಿಕ್ಕೇ. ಆದರೂ ಬರೆಯುವುದು ತಲುಪಲಷ್ಟೇ ಅಲ್ಲ. ಅದು ಒಂದು ಮಾತು. ಯಾವುದು ತಲುಪುತ್ತದೆ ಯಾವುದು ತಲುಪುವುದಿಲ್ಲ ಅನ್ನುವುದು ಬರೇ ಕುತೂಹಲವಷ್ಟೇ ಅಲ್ಲ. ತುಂಬಾ ಮುಖ್ಯ ಕೂಡ. ಕನ್ನಡ ನೆಲದಿಂದ ದೂರದಲ್ಲಿ ವಾಸವಾಗಿರುವ ನನ್ನಂತವರು ಯಾವುದೇ ಲೋಕವನ್ನು ನೋಡಿದರೂ, ಅದನ್ನಿಲ್ಲಿ ಹೇಳಿದರೂ ಅದರ ಹಿಂದೆ ಒಂದು ಕನ್ನಡ ಮನಸ್ಸು ಕೆಲಸ ಮಾಡುತ್ತಿರುತ್ತದೆ. ಕೆಲವೊಮ್ಮೆ…
ಲೇಖಕರು: roopablrao
ವಿಧ: ಬ್ಲಾಗ್ ಬರಹ
April 22, 2008
ಹೆಸರಿಲ್ಲದವನಿಗೆ ನಾನು ನೆನ್ನೆ ನಿನ್ನ ನೋಡಿದೆ ೧೦ ವರ್ಷಗಳ ಈ ಸುಧೀರ್ಘ ಅವಧಿಯ ನಂತರ. ಸಮಯ ನನ್ನಲ್ಲೂ, ನನ್ನ್ ಜೀವನದಲ್ಲೂ ಏನೇನೋ ಬದಲಾವಣೆ ಮಾಡಿದೆ. ಹಾಗೆಯೆ ನಿನ್ನ ಮುಖದಲ್ಲೂ . ಹಿಂದಿನ ಆ ದಿನಗಳನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಈಗಲೂ ಕಿರುನಗೆ ಬರುತ್ತದೆ. ನನ್ನ ಜೀವನದಲ್ಲಿ ಆಗಷ್ಟೆ ವಸಂತ ಕಾಲ . ಸ್ಕೂಲಿಗೆ ಹೋಗುವುದು , ಹರಟೆ ಹೊಡೆಯುವುದು, ಜಗಳ ಮಾಡುವುದು ಇವಿಷ್ಟೆ ಪ್ರಪಂಚ ನಮಗೆಲ್ಲಾ. ಆ ದಿನ ಬಸ್ ಕೆಟ್ಟು ನಿಂತು ಹೋಗಿತ್ತು ಅದೇ ಗೋವರ್ಧನ ಸ್ಟಾಪ್ ನಲ್ಲಿ . ನಮಗೆಲ್ಲ ಮನೆಗೆ…
ಲೇಖಕರು: nandakishore_bhat
ವಿಧ: ಚರ್ಚೆಯ ವಿಷಯ
April 22, 2008
ಬಿಝಿ. ಯಾರಾದರೂ ಈ ಆಂಗ್ಲ ಪದಕ್ಕೊಂದು ಅಷ್ಟೇ ಚುಟುಕಾದ ಮತ್ತು ಅದೇ ಅರ್ಥ ಕೊಡುವ ಅಪ್ಪಟ ಕನ್ನಡ ಪದ ಹುಡುಕಿ ಕೊಡುತ್ತೀರಾ? ವ್ಯಸ್ತ, ನಿರತ - ಇವೆಲ್ಲ ಸಂಸ್ಕೃತ ಮೂಲದ್ದು. ಅವು ಬೇಡ. ಕನ್ನಡದ್ದೇ ಪದ ಬೇಕಾಗಿದೆ. ತದ್ಭವವಾದರೂ ಆದೀತು.
ಲೇಖಕರು: madhava_hs
ವಿಧ: ಬ್ಲಾಗ್ ಬರಹ
April 22, 2008
ಈಗ ನಡೆಯುತ್ತಿರುವ ಐ.ಪಿ.ಎಲ್ ಕ್ರಿಕೆಟ್ ಪಂದ್ಯಾವಳಿಗಳಿಗೆ ವಿದೇಶೀ ಬಾಲೆಯರನ್ನು ಕರೆಸಿ ಅರೆನಗ್ನ ನೃತ್ಯ ಮಾಡಿಸುವ ಕೆಟ್ಟ ಚಾಳಿ ಶುರುವಾಗಿದೆ. ವಿದೇಶೀ ನೆಲಗಳಲ್ಲಿ ಅಲ್ಲಿನ ಸಂಸ್ಕೃತಿಗೆ ತಕ್ಕಂತೆ ಪುಟ್ಬಾಲ್ ಪಂದ್ಯಗಳಲ್ಲಿ ಈ ರೀತಿ ನೃತ್ಯ ಮಾಡಿಸುವ ರೂಢಿ ಇದೆ. ಇಲ್ಲಿನ ಸಂಸ್ಕೃತಿಗೆ ಒಗ್ಗದ ಇಂತಹ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ನೀಡಬಾರದಾಗಿತ್ತು. ಎಲ್ಲಿ ಹೋದರು ಶಿವ ಸೈನಿಕರು, ರಾಮ ಸೈನಿಕರು, ಮುತಾಲಿಕರು, ಬಿ.ಜೆ.ಪಿ ಗಳು? ಏಕೆ ಇವುಗಳನ್ನು ಪ್ರತಿಭಟಿಸುತ್ತಿಲ್ಲ? ಚುನಾವಣೆಯ ಕಾವೇ…
ಲೇಖಕರು: gururajkodkani
ವಿಧ: ಬ್ಲಾಗ್ ಬರಹ
April 22, 2008
ಕವಿತಾ ಹೇಳಿದ್ದು ಸರಿಯಾಗಿತ್ತೇನೋ! ನಾನೂ ಅವಳ೦ತೆ ಲವ್ ಮ್ಯಾರೇಜ್ ಆಗಿದ್ದರೇ ಒಳ್ಳೆಯದಿತ್ತೇನೋ,ಆದರೆ ನನಗೆ ಅರೇ೦ಜ್ಡ್ ಮ್ಯಾರೇಜ್ ಬಗ್ಗೆ ಅದ್ಭುತ ಕಲ್ಪನೆಇತ್ತಲ್ಲ.ಕಾಲೇಜಿನಲ್ಲಿ ’ಲವ್ ಮ್ಯಾರೇಜ್ vs ಅರೇ೦ಜ್ಡ್ ಮ್ಯಾರೇಜ್ ’ ಎನ್ನುವ ಚರ್ಚೆಯಲ್ಲಿ ’ಅರೇ೦ಜ್ಡ್ ಮ್ಯಾರೇಜ್ ’ಪರವಾಗಿ ಎಷ್ಟು ಚೆನ್ನಾಗಿ ವಾದಿಸಿ ಕವಿತಳನ್ನು ಸೋಲಿಸಿದ್ದೇನಲ್ಲ.ಚರ್ಚೆ ಮುಗಿದಾಗ ಕವಿತಾ ’ನೋಡೊಣ ಕಣೆ ಗೀತಾ, ಅರೇ೦ಜ್ಡ ಮ್ಯಾರೇಜ್ ಮಾಡಿಕೊ೦ಡು ಎಷ್ಟು ಸುಖವಾಗಿರ್ತೀಯೋ ಅ೦ತಾ’ ಎ೦ದು ಚಾಲೇ೦ಜ್ ಧಾಟಿಯಲ್ಲಿ ಮಾತನಾಡಿದಾಗ…
ಲೇಖಕರು: vikashegde
ವಿಧ: ಬ್ಲಾಗ್ ಬರಹ
April 22, 2008
ಬಹುಶ: ಈ ಕೆಟ್ಟ ಟ್ರೆಂಡನ್ನು ಶುರು ಮಾಡಿದವರು ಯೋಗರಾಜ ಭಟ್ಟರೇ ಇರಬೇಕು. ಕನ್ನಡ ಚಿತ್ರದ ಹೆಸರಿನ ಜೊತೆ ಹಿಂದಿ ಪದವನ್ನೊಳಗೊಂಡ ಒಂದು ಉಪಶೀರ್ಷಿಕೆ ಕೊಡುವುದು. ಮುಂಗಾರು ಮಳೆ ಜೊತೆಗೆ "ಹನಿ ಹನಿ ಪ್ರೇಮ್ ಕಹಾನಿ" ಎಂದು ಇಟ್ಟಿದ್ದರು. ಚಿತ್ರ ಹಿಟ್ಟಾಯಿತು. ನಮ್ಮ ಕನ್ನಡ ಚಿತ್ರ ರಂಗದವರು ಹೇಗಿದ್ದರೂ ಗೆದ್ದೆತ್ತಿನ ಬಾಲ ಹಿಡಿಯುವವರು. ಎಲ್ಲರೂ ಶುರು ಹಚ್ಚಿಕೊಂಡರು ಇಂತಹ ಉಪಶೀರ್ಷಿಕೆ ಗಳಿಡುವುದನ್ನು. ನಂತರ ಬಂದ ಗಾಳಿಪಟ ಚಿತ್ರದಲ್ಲೂ "ಮನದ ಮುಗಿಲಲ್ಲಿ ಮೊಹಬ್ಬತ್ " ಎಂದಿಟ್ಟರು ಭಟ್ಟರು. ’…
ಲೇಖಕರು: madhava
ವಿಧ: Basic page
April 22, 2008
ವಿ.ಸೂ.:ಗಂಭೀರವಾಗಿ ಪರಿಗಣಿಸತಕ್ಕದ್ದಲ್ಲ. ಡಾರ್ವಿನ್ನನ ನಿಯಮದಂತೆ ನಮ್ಮ ಬಾಲ ನಶಿಸಿಹೋಗಿ ಎಸ್ಟೋ ವರ್ಷಗಳಾದವಲ್ಲ. ನನಗೆ ನನ್ನ ಪೂರ್ವಜರ ಮೇಲೆ ಈದಿನ ಸಿಟ್ಟು ಬರುತ್ತಿದೆ. ದೇವರು ಕೊಟ್ಟಿದ್ದನ್ನು ಅವರು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಹಾಗಾಗೇ ನಾವೀಗ ಬಾಲವಿಲ್ಲದೆ ಜನಿಸುವಂತಾಗಿದೆ. ಎಂತಹ ದುರ್ಗತಿಯಲ್ಲವೇ? ನಮಗೂ ಬಾಲವಿದ್ದಿದ್ದರೆ! ಎಷ್ಟು ಸೊಗಸಾಗಿರುತ್ತಿತ್ತು? ನಾಡಿದ್ದು ಬರುವ ಒಲಂಪಿಕ್ಸ್ ನಲ್ಲಿ ಅದೆಂತದೋ ಇಬ್ಬರು ಕತ್ತಿ ಹಿಡಿದುಕೊಂಡು ಆಟವಾಡುತ್ತಾರಲ್ಲ, ಅದಕ್ಕೆ ಕೃತಕ…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
April 21, 2008
ಸಿನಿಮಾ: ಮುದುಡಿದ ತಾವರೆ ಅರಳಿತು ಹಾಡಿರುವವರು : ಎಸ್ .ಪಿ.ಬಿ ಇನಿ/ಸಂಗೀತ : ? ಬರೆದಿರುವವರು: ಚಿ.ಉದಯಶಂಕರ್ (?) ಇರಬಹುದು ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ. ಆ. ಹಾ.. ಆಅ....|| ಪಲ್ಲವಿ|| ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು |೨| ಸವಿಯಾದ ಸ್ನೇಹ ಮೋಹ  ಬಲು ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು ಚೆಲುವಾದ ಬಾಳ ಕಡಲಿನಲಿ ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ…
ಲೇಖಕರು: snehasuggi
ವಿಧ: Basic page
April 21, 2008
ಮರೆಯೆ ನಾ ತೊರೆಯೆ ಈ ಧರೆಯ, ಪರ್ಯಾಯವಿಲ್ಲದ ಕಾರಂಜಿಯ ಸುಧೆಯ. ಅಂಬರದ ಬಿಳಿಯ ಮೋಡದ ಹೃದಯ, ಸುರಿಸುವೆ ನಲ್ಮೆಯ ಜೇನಿನ ಮಳೆಯ, ತುಂಬುವೆ ಪನ್ನೀರಿನ ಧಾರೆಯ, ಕಾದಿರುವೆ ಹಾದಿಯ, ನೀ ಬಾರೆಯ ? ಮರೆಯೆ ನಾ ತೊರೆಯೆ ಈ ಹೃದಯ, ಸಾಟಿಯಿಲ್ಲದ ಕಾರುಣ್ಯದ ಸುಧೆಯ. ತೂಗುವೆ ಜೀವನದ ತೂಗುಯ್ಯಾಲೆಯ, ಜೀವವೆ ಕಾದಿದೆ ಬಂದಿಲ್ಲಿ ನೆಲೆಸೆಯ, ಹಾಕುವೆ ಅಂಬರಕೆ ಚಿತ್ತಾರದ ರಂಗೋಲಿಯ, ಸುಮವೆ ಕಣ್ತುಂಬಿ ನೀ ನೋಡೆಯ. ಮರೆಯೆ ನಾ ತೊರೆಯೆ ಈ ಧರೆಯ, ಸ್ನೇಹ-ಪ್ರೀತಿ ಜೀವನದ ಸುಧೆಯ. ಹಿಮಹಿಮದಿಂದ ಕೂಡಿದೆ ಹಿಮಾಲಯ,…