ಇತ್ತೀಚಿನ ಬರಹಗಳು

ನಿಮ್ಮ ಸಂತೋಷದ ಸಂದರ್ಭಗಳಲ್ಲಿ ಇವರುಗಳೂ ನೆನಪಾಗಲಿ....
Tuesday, April 30, 2024 - 17:26

ಮೇ 1..... ನಾಳೆ..... " ಜಗತ್ತಿನ ಎಲ್ಲಾ ಶೋಷಿತರು - ದೌರ್ಜನ್ಯಕ್ಕೆ ಒಳಗಾದವರು  ನನ್ನ ಸಂಗಾತಿಗಳು "- ಚೆಗುವಾರ.

‘ಮಲೆನಾಡ ಗಾಂಧಿ' ಗೋವಿಂದೇಗೌಡರ ನೆನಪಿನಲ್ಲಿ...
Tuesday, April 30, 2024 - 12:15

ಮಾಜಿ ಸಚಿವ ದಿ.ಗೋವಿಂದೇ ಗೌಡರ ಬಗ್ಗೆ ಇತ್ತೀಚೆಗೆ ಒಂದು ಪತ್ರಿಕೆಯಲ್ಲಿ ಲೇಖನ ಓದಿದೆ. ನಿಜಕ್ಕೂ ಅವರಂತಹ ವ್ಯಕ್ತಿಗಳು ರಾಜಕೀಯದಲ್ಲಿ ಅಪರೂಪ. ಅವರನ್ನು ಹತ್ತಿರದಿಂದ ಕಾಣುವ ಮತ್ತು ಅವರ ಜೊತೆ ಒಂದೆರಡು ಮಾತುಗಳನ್ನು ಆಡುವ ಅವಕಾಶ ನನಗೆ ೧೯೯೭ರಲ್ಲಿ ಸಿಕ್ಕಿತ್ತು.

ಯಾವುದು ಬದುಕು ?
Tuesday, April 30, 2024 - 11:20

ಬದುಕು ಅಂದ್ರೆ ಯಾವುದು...? ಇದರ ಬಗ್ಗೆ ನೋಡೋಣ. ಗೋಪಾಲ ಎಂಬ ಯುವಕನಿದ್ದನು. ಈತನ ತಂದೆಗೆ ಎರಡು ಜನ ಪತ್ನಿಯರು. ಈತ ಮೊದಲ ಹೆಂಡತಿಯ ಮಗ. ಈತನ ಜೊತೆಗೆ ಇಬ್ಬರು ತಮ್ಮಂದಿರು ಮತ್ತು ಒಬ್ಬಳು ತಂಗಿ ಇದ್ದಳು. ಮಲತಾಯಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಇತ್ತು. ಈತ ಎಸ್ ಎಸ್ ಎಲ್ ಸಿ ಅನುತ್ತೀರ್ಣನಾಗಿದ್ದನು. ನಂತರ ಪಾಸ್ ಆಗಿ ಐಟಿಐ ಸೇರಿ ಕೆ ಎಸ್ ಆರ್ ಟಿ ಸಿ ಡಿಪೋದಲ್ಲಿ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿದನು.

ಕಾಡುಹಂದಿಯ ಕಣ್ಣು ನನ್ನ ಮೇಲೆ..! (ಭಾಗ 1)
Tuesday, April 30, 2024 - 10:33

ನನ್ನ ಹೈಸ್ಕೂಲು ದಿನಗಳಲ್ಲಿ ಜೇನು ಹುಡುಕುವುದು ನನ್ನ ಸಾಮಾನ್ಯ ಹವ್ಯಾಸ ಆಗಿತ್ತು. ನಮ್ಮ ಸಂಬಂಧಿಕರಿಗೆಲ್ಲಾ ನಮ್ಮದು ಜೇನುತುಪ್ಪ ಸಪ್ಲೈ ಮಾಡುವ ಮನೆ ಆಗಿತ್ತು. ಯಾರ ಮನೆಯಲ್ಲೂ ಜೇನುತುಪ್ಪ ಇರಲಿಲ್ಲ ಅಂದ್ರೂ ನಮ್ಮ ಮನೆಯಲ್ಲಿ ಮಾತ್ರ ಕನಿಷ್ಟಪಕ್ಷ ಒಂದೋ ಎರಡೋ ಕ್ವಾಟರ್ ಬಾಟಲ್ ನಲ್ಲಿ ಖಂಡಿತಾ ಇದ್ದೇ ಇರುತಿತ್ತು. ಡಿಸೆಂಬರ್ ನಿಂದ ಆರಂಭವಾಗುತಿದ್ದ ಈ ಜೇನು ಬೇಟೆ ಕೊನೆಯಾಗುತ್ತಿದ್ದದು ಮತ್ತೆ ಜೂನ್ ಜುಲೈಗೆ.

ಬೇಸಿಗೆಯಲ್ಲಿ ಕಬ್ಬಿನ ಹಾಲು ಹಿತಕರ
Monday, April 29, 2024 - 17:59

ಹಿಂದಿನ ವರ್ಷಗಳಲ್ಲಿ ಕಾಣದ ಬಿಸಿಲಿನ ಬೇಗೆ ಈ ವರ್ಷ ಕಾಡುತ್ತಿದೆ. ಇದಕ್ಕೆ ಕಾರಣ ಬಹುಪಾಲು ನಾವೇ. ನಗರೀಕರಣ ಎನ್ನುವ ಸುಂದರ ಹೆಸರು ನೀಡಿ ನಾವು ಅರಣ್ಯವನ್ನು ನಾಶ ಮಾಡುತ್ತಾ ಬಂದಿದ್ದೇವೆ. ರಸ್ತೆಯ ಇಕ್ಕೆಲಗಳನ್ನು ಅಗಲಗೊಳಿಸುವ ನೆಪದಲ್ಲಿ ಈಗ ಒಂದೂ ಮರ ಕಾಣಿಸದಂತೆ ಮಾಡಿಹಾಕಿದ್ದೇವೆ. ಜೋರು ಬಿಸಿಲು ಎಂದು ಮರದ ನೆರಳಲ್ಲಿ ನಿಲ್ಲುವ ಎಂದು ಯೋಚನೆ ಮಾಡಲಿಕ್ಕೂ ಆಗದ ರೀತಿಯಲ್ಲಿ ಮರಗಳ ನಾಶ ಮಾಡಿದ್ದೇವೆ.

ಸರ್ಕಾರ ಮತ್ತು ಸಮಾಜದ ಜವಾಬ್ದಾರಿ...
Monday, April 29, 2024 - 17:50

ಇಂಟೆಲಿಜೆನ್ಸ್  (  department of intelligence ) ಎಂಬ ಆಂತರಿಕ ಬೇಹುಗಾರಿಕೆ ಮತ್ತು ಭದ್ರತಾ ಇಲಾಖೆಯೊಂದು ಕರ್ನಾಟಕದಲ್ಲಿ ಅಸ್ತಿತ್ವದಲ್ಲಿದೆ. ಇಡೀ ರಾಜ್ಯದ ಆಗುಹೋಗುಗಳ ಬಗ್ಗೆ ಸೂಕ್ಷ್ಮವಾಗಿ ಗಮನಿಸಿ ಒಂದು ಮುನ್ನೋಟದ ವರದಿಯನ್ನು ಸರ್ಕಾರದ ಜೊತೆ ಪ್ರತಿನಿತ್ಯ ಹಂಚಿಕೊಳ್ಳುತ್ತದೆ. ನಮಗೆ ಅನೇಕ ವಿಷಯಗಳು ಘಟನೆಗಳಾದ ನಂತರ ತಿಳಿಯುತ್ತದೆ.

ನಮ್ಮ ಮಕ್ಕಳನ್ನು ತಿದ್ದುವುದು ಹೇಗೆ?
Monday, April 29, 2024 - 11:24

ಸುದ್ದಿ ಬೆಚ್ಚಿಬೀಳಿಸುವಂತಿತ್ತು. ಸ್ಕೂಟರ್ ಪಿಕ್ ಅಪ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಇಬ್ಬರು ಹದಿಹರೆಯದ ಬಾಲಕರು ರಕ್ತದ ಮಡುವಿನಲ್ಲಿ ಹೊರಳಾಡಿ ಕ್ಷಣ ಮಾತ್ರದಲ್ಲಿ ಪ್ರಾಣಬಿಟ್ಟಿದ್ದರು. ಇಬ್ಬರೂ ದ್ವಿತೀಯ ಪಿಯು ವಿದ್ಯಾರ್ಥಿಗಳು. ಸ್ನೇಹಿತರಾಗಿದ್ದ ಅವರಿಬ್ಬರು ಅನಗತ್ಯ ವೇಗಕ್ಕೆ ಬಲಿಯಾಗಿದ್ದರು. ಓದುತ್ತಿದ್ದಂತೆ ರವಿಯ ಕಣ್ಣುಗಳು ತೇವಗೊಂಡವು.

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ....
Sunday, April 28, 2024 - 20:38

" ನೀವು ನಿಮ್ಮ ಒಡವೆಗಳನ್ನು ಅಡವಿಟ್ಟಿರುವಿರಾ. (ಗಿರವಿ) ಹಾಗಾದರೆ ಚಿಂತೆ ಬಿಡಿ. ನಾವು ಅದನ್ನು ಬಿಡಿಸಿ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ದರದಲ್ಲಿ ಕೊಂಡು ಉಳಿದ ಹಣವನ್ನು ನಿಮಗೆ ಕೂಡಲೇ ಕೊಡುತ್ತೇವೆ " ಹೀಗೆ ದಿನದ 24 ಗಂಟೆಯೂ ಟಿವಿಗಳಲ್ಲಿ ಪ್ರಖ್ಯಾತ ನಟನಟಿಯರು ವಿವಿಧ ಕಂಪನಿಗಳ ಹೆಸರಿನಲ್ಲಿ ಜಾಹೀರಾತು ನೀಡುತ್ತಾರೆ.

ಜೇನು ತೆಗೆಯಲು ಅಪ್ಪ ಹೇಳಿಕೊಟ್ಟ ಟ್ರಿಕ್ (ಭಾಗ 2)
Sunday, April 28, 2024 - 10:14

ಒಂದು ಬೇಸಿಗೆಯಲ್ಲಿ ನನ್ನ ವ್ಯಾಪ್ತಿಯ ಜೇನು ಹುಡುಕಾಟ ಮುಗಿಸಿ ಎಲ್ಲೂ ತುಪ್ಪ ರೆಡಿ ಇರುವ ಜೇನು ಇಲ್ಲವೆಂದಾಗ  ಈ ಬಂಡೆ ಸಮೀಪ  ಜೇನು ಹುಡುಕಲು ಹೋಗಿದ್ದೆ. ಹಲವು ವರ್ಷಗಳ ಹಿಂದೆ ಕಾಲ ಕಳೆದ ಸವಿನೆನಪುಗಳ ಸ್ಮರಿಸುತ್ತಾ  ಆ ಸಾಲಿನಲ್ಲಿ ಹಾಗೆ ಹೋಗುತ್ತಿದ್ದಾಗ ಆ ಕತ್ತಾಳೆ ಗುಮ್ಮಿಯಲ್ಲಿ ನೆಲಕ್ಕೆ ಬಿಲ್ಲಿನಂತೆ ಬಾಗಿರುವ ಒಣಗಿದ ಕತ್ತಾಳಿಗರಿಯಲ್ಲಿ ಒಂದು ಅಡಿ ಉದ್ಧದ ಎರಡು ಅಡಿ ಅಗಲದ ಜೇನು ನೋಡಿದೆ.

‘ಮಯೂರ' ಹಾಸ್ಯ - ಭಾಗ ೬೮
Saturday, April 27, 2024 - 18:20

ನಿಧಾನವಾಗಿ ಮಾಡಿ