ಕವನಗಳು

ವಿಧ: ಕವನ
July 11, 2025
ಜೊತೆಯಾಗಿ ಸಾಗಿದೆನಿಂದು ಸವಿಯಾಗಿ ಬಳಸುತಲಿಂದು ಮನದೊಳಗೆ ಸೇರುತಲಿಂದು ಬೆಸುಗೆಯೊಳು ಕಳೆಯುತಲಿಂದು   ನನ್ನ ಸವಿಯು ಬಲ್ಲೆಯೇನು ನೀನೆಯೆಂದು ನನ್ನ ಮನದ ಬಯಕೆಯೆಲ್ಲ ಒಲವುಯೆಂದು   ಬಾನಿನಲ್ಲಿ ಹಾರುತಲಿಂದು ಕೈಯ ಹಿಡಿದು ಸಾಗುತಲಿಂದು ಒಂದಾಗಿ ಬಾಳುತಲಿಂದು ಮನದುಂಬಿ ಹಾಡುತಲಿಂದು   ಸಂತೋಷ ಹೊಂದೋಣ ನಾವುಯೆಂದು ಸಂಸಾರ ನಡಸೋಣ ಹೀಗೆಯೆಂದು   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ   
ವಿಧ: ಕವನ
July 10, 2025
ಬಾನ ಸುಂದರ ಚಿತ್ರ ಲೋಕವು ನೀನು ಕೊಡುವ ಮುತ್ತು ಜೀವ ಪಾಠವ  ನೀಡಿ ಸಾಗಿದೆ ನಾನೆ ನೀಡುವ ಮುತ್ತು   ಹುಟ್ಟು ಚೆಲುವೊಳು ಪಾತ್ರ ಸೋರಿತೆ ಮತ್ತು ಕರಗಿತು ಏತಕೆ ಗಟ್ಟಿ ಕುಳವು ಸೋತು ಹೋಗಲು ಮತ್ತೆ ಕಾಡುವ ಮುತ್ತು   ಹಟ್ಟಿ ಕರುವದು ತಾಯ ಬಳಿಗದು ಹೇಗೆ ಓಡಿತು ನೋಡೆಯ ತಟ್ಟಿ ಮೇಲಣ ಹನಿಯ ಶಬ್ದಕೆ ಕುಣಿದು ಹಾಡುವ ಮುತ್ತು   ಗಾನ ಸುಂದರ ಒಲಿದ ರಾಗವು ಇಂದು ಎಲ್ಲಿಗೆ ಹೋಯಿತೊ ದಾನ ಮಾಡುವ ಕೈಯು ಎಲ್ಲಿದೆ ಕರೆದು ಬೇಡುವ ಮುತ್ತು   ಸೋತು ಸುಮ್ಮನೆ ಕುಳಿತೆಯಲ್ಲೊ ನನ್ನ ಒಲವಿನ ಈಶ ಘಾತ ಜೀವನ…
ವಿಧ: ಕವನ
July 09, 2025
ಚಿಂತಿಸದಿರು ಗೆಳತಿ ಹೀಗೆ ನಲ್ಲ ಜೊತೆಗೆ ಜೊತೆಯೆ ಇರಲು ಕೊಡವ ಹಿಡಿದು ನಡೆದೆಯಲ್ಲೆ ಕಾಲಿಗೆಂಥ ಆಯಿತೇನೊ ಹೊಕ್ಕ ಮುಳ್ಳ ತೆಗೆಯಲೇನೊ ನೋವ ತಿನುತ ನಡೆದೆಯಲ್ಲೆ   ಜೀವನದ ಬದುಕಿನೊಳಗೆ ಜೀವ ಭಾವ ಸೇರಿದಾಗ ನೋವ ಪಡೆದು ನಡೆದೆಯಲ್ಲೆ ಕೊಡದಿ ಜಲವು ತುಂಬಿದಾಗ ಮುಸಿಯ ನಗುವ ಸೂಸುತಲಿ ಗೆಲುವಿನೊಡನೆ ನಡೆದೆಯಲ್ಲೆ   ತಂಪು ಹೊತ್ತು ನೀರ ತರುತ ಬಿರು ಬಿಸಿಲಿಗೆ ಮನೆಯ ಸೇರೆ ಚೆಲುವ ಹೊತ್ತು ನಡೆದೆಯಲ್ಲೆ ಮನದ ತುಂಬ ನೀನೆ ನೀರೆ ಕೈಯ ಹಿಡಿದೆ ಬಳಿಗೆ ಬಾರೆ  ಬಾಳಿನೊಳಗೆ ನಡೆದೆಯಲ್ಲೆ  -ಹಾ ಮ ಸತೀಶ…
ವಿಧ: ಕವನ
July 08, 2025
ಬುದ್ಧಿವಂತರು ನಾವು ಬುದ್ಧಿವಂತರು  ಕರಾವಳಿಯ ಜನರೇ ನಾವು ಬುದ್ಧಿವಂತರು  ಈ ಹೆಸರಂತೆ ಎಲ್ಲೆಲ್ಲೂ  ಹೆಸರುವಾಸಿ ನಾವು ಬುದ್ಧಿವಂತರು!  ಜಾತಿ ಧರ್ಮ ಪರಿವಿಲ್ಲದೆ ಬದುಕುವ ಎಲ್ಲರಿಗಿಂತಲೂ ಭಿನ್ನ ನಾವು! ಹೌದೇ? "ಎಂಚಿನ ಸಾವು ಮಾರೇ"  ಎಂದು ಗೊಣಗುತ್ತಾ  ನಗುವಿನಲ್ಲೇ ಎಲ್ಲವನ್ನೂ  ಮರೆತು ಬಾಳುವ ನಾವು  ಇಂದೇಕೆ ಸಾವಿನಲ್ಲಿ ಸುಖ ಕಂಡೆವು? ಜಾತಿ, ಧರ್ಮ ಕೋಮು ದ್ವೇಷ ಇದರಲ್ಲೇ ನಾವು ಬುದ್ಧಿವಂತರು? ರಾಜಕೀಯ ಸೋಕು ಇಲ್ಲದೆ ಬದುಕಿದ ನಾವು ಇಂದೇಕೆ ಹೀಗಾದೆವು? ದೈವ ದೇವರ ಭಕ್ತಿ ಇದ್ದ ನಾವು ಯಾಕೆ…
ವಿಧ: ಕವನ
July 07, 2025
ಮನಸ್ಸಿನ ಭಾವನೆ ಮೂಡಿದ ಸಮಯ ಕಾಡಿದೆ ನಿನ್ನನು ಓ ಚೆಲುವೆ ಮೌನಕೆ ಉತ್ತರ ಮೂಡಲು ಗಳಿಗೆ ಒಲವಿನ ಕಾಣಿಕೆ ಓ ಚೆಲುವೆ   ರಾತ್ರಿಯ ಚಂದ್ರನ ಹಾಲಿನ ಬೆಳಕಲಿ ಕಾಣುತಲಿದ್ದೆ ಓ ಚೆಲುವೆ ಮುಖದಲಿ ನಗುವನು ತೋರುತಲಿರಲು ಸ್ವರ್ಗವೆ ಇಳಿದಿದೆ ಓ ಚೆಲುವೆ   ಸುಖದೊಳು ಕರಗಿ ಸವಿದಿದೆ ಸವಿಯ ತಂಪಿನ ಹೊತ್ತಲಿ ಓ ಚೆಲುವೆ ಎದೆಯಲಿ ಕಂಡಿಹ ನೆನಪಿನ ಕವಿತೆ ನಿನ್ನೊಡಲೊಳಗೆ ಓ ಚೆಲುವೆ *** ನಿಷ್ಠೆಯಿಂದ  ಕಲಿತ ಕಲಿಕೆಗಿಂತ ಇಂದಿನ  ದಿನಗಳಲ್ಲಿ  ವಿರೋಧಿಯ ಹೇಳಿಕೆಯಿಂದ  ಕಲಿತ ಕಲಿಕೆಯೇ ಶ್ರೇಷ್ಠ  ಅನಿಸುತ್ತಿದೆ…
ವಿಧ: ಕವನ
July 06, 2025
ಅವರಿವರ ನೋವಿಗೆ  ಸ್ಪಂದಿಸುವ ಗೆಳೆಯನೇ  ನಿನ್ನ ನೋವಿಗೆ ಓಡಿ ಬರುವರಾರಿಹರು ಬೇಡಿ ಕಾಡಿದರೂ ಓಡಿ ಬರಲಾರರು  ಅವರಿಗವರಾ ಕೆಲಸ ಇಹುದಂತೆ ಇಹರು   ಕಹಿ ಬೇವು ತಿನುವವಗೆ ಸಿಹಿಯ ಪರಿಚಯವೆಲ್ಲಿ ಬಾಳಿನೊಳು ಸವಿಮಾತ ಹೇಳುವನೇ ಅವನು  ಡಂಬಚಾರದ ಸುಳಿಗೆ ಸಿಲುಕದೆಲೆ ಸಾಗುತಿರು ಸಿಲುಕಿದರೆ ಕಣ್ಣೀರಾ ಮುಗಿಲ ಬಾನು   ಮನಸನ್ನು ಅರಿಯದೆಲೆ ದ್ವೇಷವನು ಕಾರಿದರೆ ಪ್ರೀತಿಯದು ದೊರಕುವುದೆ ನನಗೆ ನಿನಗೆ ತತ್ವ ಪದಗಳೆ ಬೇಡ ನೀತಿ ನಿಯಮಗಳಿಲ್ಲ ಮತಿಗೆಟ್ಟ ನಡವಳಿಕೆ ಸುತ್ತ ಬೇಗೆ   ಬೇಕೆ ಕತ್ತಲ ಗೂಡು ಸರಿಯಾದ…
ವಿಧ: ಕವನ
July 05, 2025
ಚಿಗುರದಿರುವ ಜೀವನದೊಳಗೆ ಒಲುಮೆಯಿಂದು ಮೂಡಲಿಲ್ಲ ಗೆಳತಿ ಐಶ್ವರ್ಯ ತುಂಬಿದ್ದರೂ ಬದುಕಲ್ಲಿಯ ಗೆಲುವದು ಹಾಡಾಗಲಿಲ್ಲ ಗೆಳತಿ   ಇಂದಲ್ಲ ನಾಳೆ ಸರಿಯಾಗಬಹುದೆನ್ನುವ ಪ್ರಯತ್ನವು ಸೋತು ಹೋಯಿತೇಕೆ ಬೇಸರದಾಳದೊಳಗಿನ ಧ್ವನಿಯೊಳಗೆ ಭಾವನೆಯದು ಉಸಿರಾಡಲಿಲ್ಲ ಗೆಳತಿ   ಚಿಂತನೆಗಳು ಚಿಂತೆಗಳೆನ್ನುವ ಆಳದ ನಡುವೆಯೆ ಪಯಣಿಸಿತ್ತಿರುವ ನಾವಿಕನಾಗಿದೆ ಕಲ್ಪ ವಿಕಲ್ಪಗಳ ಸಂಘರ್ಷದಲ್ಲಿ ತನುವಿನಾಳದ ಪಯಣ ಮುಂದೆ ಸಾಗಲಿಲ್ಲ ಗೆಳತಿ   ಬಯಕೆಗಳೇ ಮೂಡದೆಯಿರಲು ಹೊಂಬಿಸಿಲು ಉದಯಿಸಿದರೆ ಪ್ರಯೋಜನವಿದೆಯೆ ಹೊಂಗಿರಣಗಳ…
ವಿಧ: ಕವನ
July 04, 2025
ಅವಳೆ ಇವಳು ಇವಳೆ ಅವಳು ನನ್ನ ಮೋಹ ರಾಗಿಣಿ ಒಲುಮೆ ಬಲುಮೆ ಚಿಲುಮೆಯರಳೆ ಚೆಲುವ ಪಡೆದ ಮೋಹಿನಿ    ಅಂತರಂತರಂಗದೊಳಗೆ  ಮೀಟಿ ಪ್ರೇಮ ಹೂ ನಗೆ ಬಂತು ಮನಕೆ ವೇಣುಗಾನ  ಚಿತ್ತದೊಳಗೆ ಸವಿಬಗೆ   ರೂಪವರಳಿ ತನುವು ಹೊರಳಿ  ತೀರ ಸೇರಿ ನಲಿಯಿತು  ಬಾಳ ಪಯಣದೊಳಗೆ ಭಾವ ವಿಶ್ವರೂಪ ತಳೆಯಿತು   ಎಂಥಯೆಂಥ ಪ್ರೀತಿಯೆಂಥ  ತಾರೆಯಂತೆ ಮಿನುಗಿದೆ ಬೆಸುಗೆಯೊಳಗೆ ಹೊಸತು ಜೀವ ಪೂರ್ಣ ರೂಪ ಪಡೆದಿದೆ -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ
ವಿಧ: ಕವನ
July 03, 2025
ಮಾತು ಅಲ್ಲಿಯೆ ಇರಲಿಲ್ಲ, ಬೇಡಿಯೇ ಇದ್ದ ಸೋಲು ಇದೆ, ಕೂಡಲಿಲ್ಲ  ನೋಡಿಯೇ ಇದ್ದ   ಬಾಳು ಕರಗದೇ, ಮತ್ಯಾಕೆ ನಡೆದು ಹೋದ ದಾಳ ಕದಲಲಿಲ್ಲ, ಆದರೂ ಆಡಿಯೇ ಇದ್ದ   ಜಾಲು ಕಾಣಲಿಲ್ಲ ,ಮಲಗಿದೆ ಕಂಬನಿ ಜಾರದೆ ತೇಲಿ ಹಾಡಲಿಲ್ಲ, ಹೆಣಗಳೆಡೆ ಓಡಿಯೇ ಇದ್ದ   ನೂಲು ಹರಿಯಲಿಲ್ಲ, ಬಟ್ಟೆಗೆ ಸಿಟ್ಟದು ಬಾರದೆ ಶಾಲು ಕೊಡಲಿಲ್ಲ ,ಹಾಗೆಂದು ಕಾಡಿಯೇ ಇದ್ದ   ಎಷ್ಟು ಹೊರಲಿಲ್ಲ ,ಸತ್ತವರು ಬರುವರೆ ಈಶಾ ಕಷ್ಟ ಸಾಯಲಿಲ್ಲ ,ಬದುಕಲ್ಲಿ ಬಾಡಿಯೇ ಇದ್ದ   -ಹಾ ಮ ಸತೀಶ ಬೆಂಗಳೂರು ಚಿತ್ರ ಕೃಪೆ: ಇಂಟರ್ನೆಟ್ ತಾಣ 
ವಿಧ: ಕವನ
July 02, 2025
ನಾನು ಕವಿಯಲ್ಲ!!... ನೊಂದವರ ಕಣ್ಣಿನ ಆಶಾಕಿರಣವಾಗಲಿಲ್ಲ  ಸಂತ್ರಸ್ತ ಮನಸುಗಳ ಸಂತೈಸಲಿಲ್ಲ  ಆಕ್ರೋಶದ ಧ್ವನಿಗಳಿಗೆ  ಗಂಟಲು ಗೂಡಿಸಲಿಲ್ಲ  ನಾನೇನೂ ಮಾಡಿಲ್ಲ  ನಾನು ಕವಿಯಲ್ಲ!..   ಸರ್ಕಾರ ಸರ್ವಾಧಿಕಾರವಾದಾಗ  ತೆಪ್ಪಗೆ ಬಾಯಿಮುಚ್ಚಿಕೊಂಡಿದ್ದವನಿಗೆ  ಜನ ಜೀವನ ಶೈಲಿಯಲ್ಲಿ  ಕ್ರಾಂತಿ ತರಲಾಗಗಿಲ್ಲ..   ಧ್ವನಿಯೆತ್ತಿ ಪ್ರಶ್ನಿಸುವ  ಗುಂಡಿಗೆಯೇ ಇಲ್ಲದವನಿಗೆ  ನಿಷ್ಠುರವಾಗಿ ಮಾತನಾಡಿ  ವ್ಯವಸ್ಥೆಯನು ಎಚ್ಚರಿಸಲಾಗಲಿಲ್ಲ..   ಕ್ರೌರ್ಯದಾ ಕೋಟೆಯನು  ಬೇಧಿಸಲಾಗದವನಿಗೆ  ಎದೆಕೊಟ್ಟು ನಿಲ್ಲಲು…