ನುಡಿಮುತ್ತುಗಳು

February 18, 2013
0

ಯಶಸ್ಸು ಸತತ ಪ್ರಯತ್ನದ ಫಲ. ಕೊನೆಯ ಹೊಡೆತಕ್ಕೆ ಕಲ್ಲು ತುಂಡಾಗುತ್ತದೆ;

ಅದರರ್ಥ ಮೊದಲ ಹೊಡೆತ ವ್ಯರ್ಥವೆಂದಲ್ಲ.

February 18, 2013
0

ಅನ್ನದೊಳಗೊಂದಗುಳ, ಸೀರೆಯೊಳಗೊಂದೆಳೆಯ, ಚಿನ್ನದೊಳಗೊಂದೊರೆಯ ಇಂದಿಂಗೆ ನಾಳಿಂಗೆ , ಎಂದುಕೊಂಡೆನಾದೊಡೆ ತಲೆ ದಂಡ.

February 18, 2013
0

ಇತರರ ಗುಣಗ್ರಹಣ ಮಾಡಬೇಕಾದರೆ ನಾವು ನಮ್ಮ ಅಹಂಕಾರವನ್ನು ತ್ಯಜಿಸಬೇಕು.

ಅಹಂಕಾರಿಗಳಲ್ಲಿ ಗುಣಗ್ರಾಹಿತ್ವ ಇರಲಾರದು.

February 17, 2013
0

ಅಸತ್ಯದಿಂದ ಸತ್ಯ ಎಂದಿಗೂ ಹುಟ್ಟುವುದಿಲ್ಲ.

February 17, 2013
0

ಕೈ ಶುದ್ಧಿ, ವಾಕ್ ಶುದ್ಧಿ , ಮನಶುದ್ಧಿ ಉಳ್ಳವನು

ಮತ್ತಾವುದರ ಬಗೆಗೂ ಚಿಂತಿಸಬೇಕಾದುದಿಲ್ಲ.

February 17, 2013
0

ಆತ್ಮ ಪ್ರಶಂಸಕರನ್ನು, ದುರಭಿಮಾನಿಗಳನ್ನು, ಸ್ವತಃ ಜಿಪುಣತೆ ತೋರುವವರನ್ನು ಮತ್ತು ಇತರರನ್ನು

ಜಿಪುಣತೆಗೆ ಪ್ರೇರೇಪಿಸುವವರನ್ನು ಅಲ್ಲಾಹನು ಮೆಚ್ಚುವುದಿಲ್ಲ.

 

February 17, 2013
0

ನರಿಯು ಉಪದೇಶ ಮಾಡಲು ಬಂದಾಗ ಕೋಳಿಗಳ ಮೇಲೆ ಕಣ್ಣಿರಲಿ.

February 17, 2013
0

ಬೇರೆಯವರ ಅನುಭವದಿಂದ ಮನುಷ್ಯ ಕಲಿಯಲು ಮುಂದಾಗುವುದಿಲ್ಲ,

ಸ್ವತಃ ಅವನು ಡಿಕ್ಕಿ ಹೊಡೆದಾಗ ಮಾತ್ರ ಎಚ್ಚರಗೊಳ್ಳುವನು.

February 16, 2013
0

ಹೂವಿನ ಆಡಂಬರವನ್ನು ಕಂಡು ಒಳ್ಳೆಯ ಹಣ್ಣು ದೊರೆಯುವುದೆಂಬ ಆಸೆಯಿಂದ,

ಮಾವಿನ ತೋಪನ್ನು ಕಡಿದು ಮುತ್ತುಗದ ಮರಗಳನ್ನು ಬೆಳೆಸಿ ನೀರೆರೆದರೆ ಏನಾಗುವುದು?

ಫಲಪ್ರಾಪ್ತಿಯ ಕಾಲದಲ್ಲಿ ಹಣ್ಣಿಲ್ಲವೆಂದು ವ್ಯಥೆ ಪಡಬೇಕಾಗುವುದು.

February 16, 2013
0

ಎಲ್ಲಾ ಧರ್ಮಗಳೂ ಸತ್ಯ , ಹಾಗೆಯೇ ಎಲ್ಲ ಧರ್ಮಗಳಲ್ಲೂ ಕೆಲವು ದೋಷಗಳಿವೆ.

ಹಿಂದು ಧರ್ಮವು ನನಗೆ ಎಷ್ಟು ಪ್ರಿಯವೋ ಉಳಿದ ಧರ್ಮಗಳೂ ಅಷ್ಟೇ ಪ್ರಿಯ.

ಆದ್ದರಿಂದ ಮತಾಂತರ ಸಿದ್ದಾಂತವನ್ನು ನಾನು ಒಪ್ಪುವುದಿಲ್ಲ.

February 16, 2013
0

ಮತವೆಂದರೆ ದೇವರನ್ನು ಕುರಿತ ನಂಬಿಕೆ ಮತ್ತು ಆ ನಂಬಿಕೆಗೆ ಅನುಸಾರವಾದ ನಡವಳಿಕೆ.

ಈ ಮತವೆಂಬ ಮನೋಭಾವ ಇಲ್ಲದಿರುವ ಜನವೇ ಲೋಕದಲ್ಲಿಲ್ಲ.

February 16, 2013
0

ಎಲ್ಲ ಬಲ್ಲವಳೆಂಬ ಇಲ್ಲವದು ಭ್ರಮೆ ಎನಗೆ;

ಬಲ್ಲವರ ಪಾದ ಹಿಡಿಯುವೆ, ಬಲ್ಲಿದರು ಕಲಿಸಿರಿ ಮತ್ತು ನುಡಿಸಿರಿ.

February 16, 2013
0

ಸಾಧಕಬಾಧಕಗಳನ್ನು ನಿಶ್ಚಯಿಸಿ ಉದ್ಯೋಗವನ್ನು ನಡೆಸಬೇಕು.

ಗುಣವಿದ್ದರೆ ಸಂಗ್ರಹಿಸಬೇಕು, ದೋಷವಿದ್ದರೆ ಬಿಡಬೇಕು.

February 15, 2013
0

ಮನಸ್ಸನ್ನು ಹೆಚ್ಚಾಗಿ ದೋಷದ ಕಡೆಗೆ ತಿರುಗಿಸುವುದು ಒಳ್ಲೆಯದಲ್ಲ,

ದೋಷವಿಲ್ಲದಿದ್ದರೂ ಅದೇ ಮನಸ್ಸುಳ್ಳವರಿಗೆ ದೋಷವು ತೋರುತ್ತದೆ.

February 15, 2013
0

ನಾವು ನಮ್ಮ ಬೂಟಾಟಿಕೆಗಳನ್ನು ಎಷ್ಟೇ ಮುಚ್ಚಿಟ್ಟುಕೊಂಡರೂ ಪ್ರಕೃತಿ ಅದನ್ನು ಬಿಚ್ಚಿಡುತ್ತದೆ.

February 15, 2013
0

ಸಾಹಿತ್ಯ ಸೋತರೂ ಸಂಗೀತ ಸೋಲುವುದಿಲ್ಲ. ಸಾಹಿತ್ಯದ ಮೂಲಕ ಸಾಧಿಸಲಾಗದೇ ಇರುವುದನ್ನು ಸಂಗೀತದಿಂದ ಸಾಧಿಸಬಹುದು.

ಕೆಲ ವಿಷಯಗಳಲ್ಲಿ ಸಾಹಿತ್ಯ ಸೋಲುತ್ತದೆ. ಆದರೆ ಸಂಗೀತ ಎಂದೂ ಸೋಲುವುದಿಲ್ಲ.

February 15, 2013
0

ಪತ್ರಕರ್ತರು ವರ್ತಮಾನದ ಗುಲಾಮರಾಗಿ ಚರಿತ್ರೆಯನ್ನು ಮರೆಯುವುದು ಹಾಗೂ

ರೋಚಕತೆಯ ಗುಲಾಮರಾಗಿ ವಾಸ್ತವವನ್ನು ಮರೆಯುವುದು ಅಪಾಯಕಾರಿ.

February 15, 2013
0

ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.

February 15, 2013
0

ಪರಿಸ್ಥಿತಿಗಳನ್ನು ಹಾಗೆಯೇ ಬಿಟ್ಟುಬಿಟ್ಟರೆ ಅದು ಎಂದಿಗೂ ಸರಿ ಹೊಂದುವುದಿಲ್ಲ.

February 14, 2013
0

ಸಂಗೀತ ಆತ್ಮದ ಔಷಧಿಯಿದ್ದಂತೆ,

ಆತ್ಮದ ಅಶಾಂತಿಯನ್ನು ಕಳೆದು ಶಾಂತಿಯನ್ನು ದಯಪಾಲಿಸುತ್ತದೆ.

February 14, 2013
0

 ಧರ್ಮ ವ್ಯಾಪಾರವಲ್ಲ, ಅದೊಂದು ಮನೋಧರ್ಮ.

ಅದರಲ್ಲಿ ಬಲವಾದ ನಂಬಿಕೆ ಇದ್ದಾಗ ಪ್ರಯೋಜನ ಆಗಬಹುದು.

February 14, 2013
0

ತನ್ನ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡವನೇ ಸ್ವರ್ಗದ ಅಧಿಪತಿ.

February 14, 2013
0

ಮನುಷ್ಯ ಒತ್ತಡದಲ್ಲಿದ್ದಾಗ ಮಾಡುವ ಆಯ್ಕೆಯಿಂದ ಆತನ ವ್ಯಕ್ತಿತ್ವವನ್ನು ಅಳೆಯುವುದು ಸಾಧ್ಯ.