ನುಡಿಮುತ್ತುಗಳು

February 14, 2013
0

ಶ್ರದ್ಧೆಯ ಅರ್ಥ ಮೂಡನಂಬಿಕೆಯಲ್ಲ.

February 13, 2013
0

ಸಂತೆಯಲ್ಲಿದ್ದು ಏಕಾಂತತೆಯತ್ತ ಮುಖ ಮಾಡುವುದು ಸಜ್ಜನರ ಲಕ್ಷಣ.

February 13, 2013
0

ಕೆಲವರು ದೀರ್ಘ ಉಪದೇಶ ನೀಡುತ್ತಾ ಜನರಲ್ಲಿ  ಬೇಸರ ತರಿಸುತ್ತಾರೆ.

ಕೇಳುಗರ ಶಕ್ತಿ ತುಂಬಾ ನಾಜೂಕಾದದ್ದು.

ಅದು ಬೇಗ ಬಳಲುತ್ತದೆ ಮತ್ತು ಮರೆಯುತ್ತದೆ.

February 13, 2013
0

ಮನುಷ್ಯನು ತಾನು ಮಾಡಿದ ಅಧರ್ಮವನ್ನು ಕುರಿತು ಮುಕ್ತವಾಗಿ ಹೇಳಿಕೊಂಡಂತೆಲ್ಲಾ,

ಹಾವು ಪೊರೆಯಿಂದ ಬಿಡುಗಡೆ ಹೊಂದುವಂತೆ -ಅಧರ್ಮದ ಪಾಪದಿಂದ ಬಿಡುಗಡೆ ಹೊಂದುತ್ತಾನೆ.

February 13, 2013
0

ಹಣದಿಂದ ಹಣದ  ಹಸಿವು ಹೆಚ್ಚಾಗುತ್ತದೆಯೇ ಹೊರತು, ತೃಪ್ತಿ ಸಿಗಲಾರದು.

February 13, 2013
0

ಉರವಲಿನಲ್ಲಿ ಬೆಂಕಿ ಇರುವುದನ್ನು ತಿಳಿದವನು ಜ್ಞಾನಿ;

ಆ ಬೆಂಕಿಯನ್ನು ಬಳಸಿಕೊಂಡು ಅಡುಗೆ ತಯಾರಿಸಿದವನು ವಿಜ್ಞಾನಿ.

February 12, 2013
0

ಪ್ರೀತಿ, ಕರುಣೆ, ಸ್ನೇಹ, ಮರುಕ- ಇವೇ ನಮ್ಮ ದೇವರು.

ಇಲ್ಲಿ ಇಲ್ಲ-ಜಾತಿಗೀತಿ, ಇಲ್ಲಿ ಇರುವುದೊಂದೆ ಪ್ರೀತಿ.

February 12, 2013
0

ಬಹುಜನ ಮಾಡಿದುದೆ ಪಾಪವಾದರೂ ಪುಣ್ಯ! ಬಹುಜನರು ಸೇರಿದುದೆ ನರಕವಾದರೂ ಸ್ವರ್ಗ!

February 12, 2013
0

ಪ್ರತಿಯೊಬ್ಬ ಮನುಷ್ಯ 'ತಾನಾಗಿರುವ' ಅವಕಾಶ ಕಲ್ಪಿಸುವುದೇ ಪ್ರಜಾಪ್ರಭುತ್ವದ  ಮೊದಲ ದೊಡ್ಡ ಗುರಿ.

February 12, 2013
0

 ಪ್ರಜಾಪ್ರಭುತ್ವಗಳು ಅತಿ ವೈಭವದಿಂದಲೂ,

ರಾಜ ಪ್ರಭುತ್ವಗಳು ಬಡತನದಿಂದಲೂ ನಾಶವಾಗುತ್ತವೆ.

February 12, 2013
0

ಈ ದೇಶದ ಭವಿಷ್ಯ ದೇಶಭಕ್ತರೆಂಬ ದರೋಡೆಕೋರರಿಗೇ ಮೀಸಲಾದದ್ದು. ಇವರಲ್ಲಿ ಯಾವ  ತೆರನ ದರೋಡೆಕೋರರ ಗುಂಪು ಮುಂದೆ ಬರುತ್ತದೆ ಎಂದು ಹೇಳುವುದು ಕಷ್ಟ.

February 11, 2013
0

ಅನ್ಯರು ತಪ್ಪು ಕಂಡುಹಿಡಿಯಲು ಸಾಧ್ಯವಾಗದ ರೀತಿಯಲ್ಲಿ  ಕಾರ್ಯ ನಿರ್ವಹಣೆ ಮಾಡಬೇಕೆಂಬ ಹಠವಾದಿ ಯಾವುದೊಂದನ್ನೂ ಮಾಡಲಾರ.

February 11, 2013
0

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ.

February 11, 2013
0

ನಡೆಯಲೇಬೇಕಾದ ವಿಧಿಯನ್ನು ಯಾರೂ ತಪ್ಪಿಸಿಕೊಳ್ಳಲಾಗುವುದಿಲ್ಲ.

ಹಕ್ಕಿಯ ಬಾಲದಲ್ಲಿ ಬೆಂಕಿಯಿದ್ದರೆ, ಎಲ್ಲಿ ಹಾರಿದರೂ ಅಪಾಯದಿಂದ ತಪ್ಪಿಸಿಕೊಳ್ಳಲಾರದು.

February 11, 2013
0

ನಿನ್ನ ಹೃದಯದಲ್ಲಿ ಪ್ರಾಮಾಣಿಕತೆ ತುಂಬಿದ್ದರೆ ನಿನ್ನ ಶತ್ರು ಮಾತ್ರವಲ್ಲ;

ಇಡೀ ಪ್ರಪಂಚ ನಿನ್ನೆದುರು ಆಯುಧವನ್ನು ಕೆಳಗಿಡುತ್ತದೆ.

February 11, 2013
0

 ಮಾತೃಭಾಷೆಯಲ್ಲಿ ಓದಲು ಬರೆಯಲು ಬಾರದವರು ಬದುಕಿ ಉಳಿದಾರೆಯೇ ನುಡಿಯಿಲ್ಲದ ನಾಡು ಕೊರಡು.

ನುಡಿಯೇ ನಾಡಿನ ನಾಡಿ.

February 09, 2013
0

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರನೊಳ್
ಹೊಟ್ಟೆ ತುಂಬಿದ ತೋಳ ಮಲಗೀತು : ನೀಂ ಪೆರರ
ದಿಟ್ಟಿಸುತ ಕರುಬುವೆಯೊ - ಮಂಕುತಿಮ್ಮ             

February 09, 2013
0

ಪದರಪದರಗಳಿಹುವು ಗಂಟುಗಂಟುಗಳಿಹುವು
ಹೃದಯದಲಿ ಬುದ್ಧಿಯಲಿ ವಾಕ್ಚರ್ಯೆಗಳಲಿ
ಇದಮಿತ್ಥಮೆಲ್ಲಿಹುದು ಮನುಜಸ್ವಭಾವದಲಿ ?
ವಿಧಿಯ ಕೈಚಿತ್ರವದು - ಮಂಕುತಿಮ್ಮ      

February 09, 2013
0

ಸತ್ಯವಂತನನರಸಲೆನುತ ಪೇಟೆಗಳೊಳಗೆ
ಹಟ್ಟಹಗಲೊಳೆ ದೀವಿಗೆಯ ಹಿಡಿದು ನಡೆದು
ಕೆಟ್ಟುದೀ ಜಗವೇಂದು ತೊಟ್ಟಿಯೊಳೆ ವಸಿಸಿದನು
ತಾತ್ತ್ವೀಕ ಡಯೋಜೆನಿಸ್ - ಮಂಕುತಿಮ್ಮ    

February 09, 2013
0

ಕನಲ್ಪ ಹುಲಿ ಕೆರಳ್ದ ಹರಿ ಮುಳ್ಕರಡಿ ಛಲನಾಗ
ಅಣುಕು ಕಪಿ ಸೀಳ್ನಾಯಿ ಮೊದಲಾದ ಮೃಗದ
ಸೆಣಸುಮುಸುಡಿಯ ಘೋರದುಷ್ಟಚೇಷ್ಟೆಗಳೆಲ್ಲ
ವಣಗಿಹುವು ನರಮನದಿ - ಮಂಕುತಿಮ್ಮ           

February 09, 2013
0

ಮನುಜಲೋಕವಿಕಾರಗಳನು ನೀನಳಿಸುವೊಡೆ
ಮನಕೊಂದು ದರ್ಪಣವ ನಿರವಿಸೆಂತಾನುಂ
ಅನುಭವಿಪರವರಂದು ತಮ್ಮಂತರಂಗಗಳ
ಅನುಪಮಾಸಹ್ಯಗಳ - ಮಂಕುತಿಮ್ಮ      

February 09, 2013
0

ಮೊಗ ನಾಲ್ಕು ನರನಿಗಂತೆಯೆ ನಾರಿಗಂ ಬಗೆಯೆ
ಜಗಕೆ ಕಾಣಿಪುದೊಂದು ಮನೆಯ ಜನಕೊಂದು
ಸೊಗಸಿನೆಳಸಿಕೆಗೊಂದು ತನ್ನಾತ್ಮಕಿನ್ನೊಂದು
ಬಗೆಯೆಷ್ಟೊ ಮೊಗವಷ್ಟು - ಮಂಕುತಿಮ್ಮ   

February 09, 2013
0

ಅಂತರಂಗವನೆಲ್ಲ ಬಿಚ್ಚಿ ತೋರಿಪನಾರು ?
ಆಂತರಗಭೀರಗಳ ತಾನೆ ಕಂಡವರನಾರ್
ಗಂತಿಗಳು ಗಂಟುಗಳು ಮಡಿಪುಮಡಿಪುಗಳಲ್ಲಿ  
ಸ್ವಂತಕೇ ದುರ್ದರ್ಶ - ಮಂಕುತಿಮ್ಮ        

February 09, 2013
0

ಪರಮೇಷ್ಠಿ ನಿಜಚಾತುರಿಯನಳೆಯೆ ನಿರವಿಸಿದ
ನೆರಡುಕೈಯಿಂದೆರಡು ಜಂತುಗಳು ಬಳಿಕ
ಇರದೆ ತಾನವನೊಂದುಗೂಡಿಸಲು ಬೆರಗಾಯ್ತು
ನರಿಯ ವಾನರವು ನರ - ಮಂಕುತಿಮ್ಮ