‘ವಂದೇ ಮಾತರಂ’ ರಾಷ್ಟ್ರಗೀತೆ ಏಕೆ ಆಗಲಿಲ್ಲ?
2 days 1 hour ago - Ashwin Rao K P
ದೇಶವು ‘ವಂದೇ ಮಾತರಂ’ ಗೀತೆಗೆ ೧೫೦ ವರ್ಷ ತುಂಬಿದ ಸಂಭ್ರಮಾಚರಣೆಯಲ್ಲಿ ತೊಡಗಿರುವ ವಿಷಯ ನೀವು ಈಗಾಗಲೇ ತಿಳಿದುಕೊಂಡಿರುವಿರಿ. ಇಂತಹ ಒಂದು ಅದ್ಭುತ ಗೀತೆ ಭಾರತದ ರಾಷ್ಟ್ರ ಗೀತೆ ಏಕೆ ಆಗಲಿಲ್ಲ? ನಿಮಗೆ ಗೊತ್ತೇ? ಈ ಬಗ್ಗೆ ತಿಳಿದುಕೊಳ್ಳುವ ಮೊದಲು ವಂದೇ ಮಾತರಂ ಗೀತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ…
ಕಾಂಗ್ರೆಸ್ ಅಧಿವೇಶನದಲ್ಲಿ ರವೀಂದ್ರನಾಥ ಠಾಗೋರ್ ಅವರು ಮೊದಲ ಬಾರಿಗೆ ಈ ಗೀತೆಯನ್ನು ಹಾಡಿದ ಬಳಿಕ ಅದು ರಾಷ್ಟ್ರದಾದ್ಯಂತ ಹೋರಾಟದ ಕಿಚ್ಚನ್ನು ಹಚ್ಚಿತು. ಇದರಿಂದ ಬ್ರಿಟೀಷ್ ಆಡಳಿತ ಸಹಜವಾಗಿಯೇ ರೊಚ್ಚಿಗೆದ್ದಿತು. ಈ ಗೀತೆಯ ಮೇಲೆ ನಿಷೇಧ ಹೇರಿತು. ಸಾರ್ವಜನಿಕವಾಗಿ ವಂದೇ ಮಾತರಂ ಘೋಷಣೆ ಕೂಗಿದವರನ್ನು ಬಂಧಿಸಲಾಗುತ್ತಿತ್ತು. ಆದರೆ ೧೯೧೫ರಿಂದ ಪ್ರತೀ ವರ್ಷ ಕಾಂಗ್ರೆಸ್ ಅಧಿವೇಶನದಲ್ಲಿ ‘ವಂದೇ ಮಾತರಂ’ ಗೀತೆಯನ್ನು ಹಾಡಲು ಪ್ರಾರಂಭಿಸಲಾಯಿತು. ಈ ಗೀತೆಯನ್ನು ಸುಶ್ರಾವ್ಯವಾಗಿ ಹಾಡಲೆಂದು ಆಗಿನ ಖ್ಯಾತ ಗಾಯಕ ವಿಷ್ಣು ದಿಗಂಬರ ಪಲುಸ್ಕರ್ ಅವರನ್ನು ಆಯೋಜಿಸಲಾಗಿತ್ತು. ಗಾಂಧೀಜಿಯವರು ಪ್ರತೀ ಕಾಂಗ್ರೆಸ್ ಸಮಾವೇಶದಲ್ಲಿ ವಂದೇ ಮಾತರಂ ಗೀತೆಯ ಅರ್ಥವನ್ನು ಒತ್ತಿ ಒತ್ತಿ ಹೇಳುತ್ತಿದ್ದರು.
೧೯೦೫ರಲ್ಲಿ ವೀರ ಸಾವರ್ಕರ್ ಅವರ ಅನುಯಾಯಿ ಮೇಡಂ ಕಾಮಾ ಜರ್ಮನಿಯಲ್ಲಿ ಭಾರತದ ಧ್ವಜ ಹಿಡಿದು ಬ್ರಿಟೀಷರ ವಿರುದ್ಧ ಪ್ರತಿಭಟನೆ ಮಾಡಿದ್ದರು. ಆ ಧ್ವಜದ ಮೇಲೆ ‘ವಂದೇ ಮಾತರಂ’ ಎಂದು ಬರೆಯಲಾಗಿತ್ತು (ಚಿತ್ರ ಗಮನಿಸಿ). ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್ ನ ಘೋಷ ವಾಕ್ಯವೇ ‘ವಂದೇ ಮಾತರಂ’ ಆಗಿತ್ತು. ೧೯೪೨-೨೪ರ ಅವಧಿಯಲ್ಲಿ ಆಝಾದ್ ಹಿಂದ್ ರೇಡಿಯೋದಲ್ಲಿ ನೇತಾಜಿಯವರ ಸಂದೇಶಗಳು ಪ್ರಕಟವಾಗುತ್ತಿದ್ದವು. ಈ ಸಂದೇಶಗಳು ಆರಂಭವಾಗುತ್ತಿದ್ದದ್ದು ‘ವಂದೇ ಮಾತರಂ’ ಎಂಬ ಘೋಷಣೆಯೊಂದಿಗೆ. ಸ್ವಾ… ಮುಂದೆ ಓದಿ...