ಆಪರೇಶನ್ ಸಿಂದೂರ: ಪಾಕ್ ದುಷ್ಟತನಕ್ಕೆ ಪ್ರತೀಕಾರ
16 hours 34 minutes ago - Ashwin Rao K P
ಪಹಲ್ಗಾಮ್ ನರಮೇಧಕ್ಕೆ ಪ್ರತೀಕಾರ ತೀರಿಸದೆ ಬಿಡುವುದಿಲ್ಲ ಎಂದು ಘೋಷಿಸಿದ್ದ ಭಾರತವು ಅದರಂತೆ ನಡಕೊಂಡಿದೆ. ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಮಣ್ಣುಗೂಡಿಸುವೆವು ಎಂದಿದ್ದ ಭಾರತ ತನ್ನ ಮಾತನ್ನು ಉಳಿಸಿಕೊಂಡಿದೆ. ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ತಾಣಗಳ ಮೇಲೆ, ಭಯೋತ್ಪಾದನ ತರಬೇತಿ ಕೇಂದ್ರಗಳ ಮೇಲೆ ಡೋನ್ ಮತ್ತು ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಪಡಿಸಿದೆ. ೮೦ಕ್ಕೂ ಅಧಿಕ ಭಯೋತ್ಪಾದಕರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಇ- ಮೊಹಮ್ಮದ್, ಲಷ್ಕರ್- ಇ-ತೊಯ್ಬಾದ ಕೇಂದ್ರಗಳನ್ನೇ ಪ್ರಮುಖ ಗುರಿಯಾಗಿಸಲಾಗಿದೆ. ಒಟ್ಟು ೯ ಕಡೆಗಳಲ್ಲಿನ ೨೧ ಭಯೋತ್ಪಾದಕ ನೆಲೆಗಳನ್ನು ನೆಲಸಮಗೊಳಿಸಲಾಗಿದೆ ಇವುಗಳಲ್ಲಿ ಕೆಲವಂತೂ ಭಯೋತ್ಪಾದಕರನ್ನು ತಯಾರಿಸುವಲ್ಲಿ ಪ್ರಮುಖ ಕೇಂದ್ರಗಳಾಗಿದ್ದವು. ಮುರಿಡೈಯಲ್ಲಿರುವ ಕುಖ್ಯಾತ ಭಯೋತ್ಪಾದಕ ಹಫೀಜ್ ಸಯೀದ್ನ ಮುಖ್ಯ ಕಚೇರಿ ಹಾಗೂ ಲಷ್ಕರ್ ನ ಮುಖ್ಯಸ್ಥ ಮಸೂದ್ ಅಜರ್ನ ತವರು ನೆಲವಾದ ಬಾವಲ್ಪುರದ ಶಿಬಿರಗಳನ್ನು ಕೂಡಾ ನಾಶಪಡಿಸಲಾಗಿದೆ. ಮುರಿಡೈಯ ತರಬೇತಿ ಕೇಂದ್ರದಲ್ಲೇ ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಜಲ್ ಕಸಬ್ ಮತ್ತು ಡೇವಿಡ್ ಹೆಡ್ಲಿ ತರಬೇತಿ ಪಡೆದಿದ್ದರೆಂಬುದು ಉಲ್ಲೇಖನೀಯ, ಜೈಶ್ ಇ ಮೊಹಮ್ಮದ್ ನ ಮುಖಂಡ ಮಸೂದ್ ಆಜರ್ನ ಕುಟುಂಬ ಸದಸ್ಯರು ಕೂಡಾ ಭಾರತದ ದಾಳಿಯಲ್ಲಿ ಸಾವಿಗೀಡಾಗಿದ್ದು, ಭಾರತದಲ್ಲಿ ಹಲವು ಕುಟುಂಬಗಳನ್ನು ನಾಶಗೈದಾತನಿಗೆ ತಕ್ಕ ಶಾಸ್ತಿಯಾಗಿದೆ. ಜಮ್ಮುವಿನೊಳಕ್ಕೆ ಉಗ್ರರನ್ನು ನುಗ್ಗಿಸುವಲ್ಲಿ ಪ್ರಮುಖ ತಾಣವಾಗಿ ಕಾರ್ಯನಿರ್ವಹಿಸುತ್ತಿರುವ ಸಿಯಾಲ್ಕೋಟ್ ಮೇಲೂ ದಾಳಿ ನಡೆಸಲಾಗಿದೆ. ವಿಶೇಷವೆಂದರೆ ಈ ದಾಳಿಯಲ್ಲಿ ಪಾಕಿಸ್ತಾನದ ವಾಯು ಗಡಿಯನ್ನು ಉಲ್ಲಂಘಿಸುವ ಪ್ರಯತ್ನಕ್ಕೆ ಹೋಗದೆ ಭಾರತ… ಮುಂದೆ ಓದಿ...