ಯಾವ ಭಾಷಣ?
ಮಾರ್ಕ್ ಟ್ವೈನ್ ಭಾಷಣ ನೀಡಿ ಮನೆಗೆ ತೆರಳುತ್ತಿದ್ದರು. ಅವರ ಮಿತ್ರರೊಬ್ಬರು ಮಧ್ಯ ಬಂದು, ‘ಇಂದು ನೀವು ಕೊಟ್ಟ ಭಾಷಣ ಬಹಳ ಅದ್ಭುತವಾಗಿತ್ತು.’ ಎಂದನು.
ಅದಕ್ಕೆ ಟ್ವೈನ್ ‘ಯಾವ ಭಾಷಣ?’ ಎಂದು ಕೇಳಿದನು.
ಮಿತ್ರನಿಗೆ ತಲೆಕೆಟ್ಟು ಹೋಯಿತು. ಈಗಷ್ಟೇ ಇಷ್ಟೊಂದು ಸುದೀರ್ಘವಾಗಿ ಭಾಷಣ ಕೊಟ್ಟು ಯಾವ ಭಾಷಣ ಎಂದು ನನ್ನನ್ನೇ ಕೇಳುತ್ತಿದ್ದಾನಲ್ಲ, ಇವನಾವ ಪುಣ್ಯಾತ್ಮ ಎಂದು ಮನದಲ್ಲೇ ಶಪಿಸಿ,
‘ಅದೇಕೆ ಹಾಗೆ ಕೇಳುತ್ತೀರಿ? ಈಗಷ್ಟೇ ಕೊಟ್ಟಿರಲ್ಲ ಆ ಭಾಷಣ’ ಎಂದನು.
ಟ್ವೈನ್ ಸಾವಧಾನದಿಂದ ನುಡಿದರು ‘ನಾನು ಒಟ್ಟು ಮೂರು ಭಾಷಣಗಳನ್ನು ಕೊಟ್ಟೆ. ಒಂದು ನನ್ನ ಮನದಲ್ಲಿಯೇ ನಾನು ಇದನ್ನು ಹೇಳಬೇಕು ಎಂದುಕೊಂಡದ್ದು, ಎರಡು ನಾನು ಹೇಳಿದ್ದು, ಮೂರು ನಾನು ಇವೆಲ್ಲವನ್ನೂ ಹೇಳಬೇಕಿತ್ತು ಎಂದು ಈಗ ಯೋಚಿಸುತ್ತಿರುವುದು. ಈಗ ಹೇಳು, ನೀನು ಹೇಳುತ್ತಿರುವುದು ಯಾವ ಭಾಷಣದ ಬಗ್ಗೆ?’
***
ಸಂಗೀತದಲ್ಲಿ ತಲ್ಲೀನ
ಮಾಜಾರ್ಟ್ ಒಬ್ಬ ಅದ್ಭುತ ಸಂಗೀತಕಾರ. ಸ್ನೇಹಿತನೆದುರಿಗೆ ಸಂಗೀತ ನುಡಿಸುತ್ತಿದ್ದ. ಸ್ನೇಹಿತ ಮೊಜಾರ್ಟ್ ನ ಸಂಗೀತವನ್ನು ಕಣ್ಮುಚ್ಚಿ ತೂಗಾಡುತ್ತ ಆಸ್ವಾದಿಸುತ್ತಿದ್ದ. ಮೊಜಾರ್ಟ್ ನ ಸಂಗೀತ ಮುಗಿಯಿತು. ಆದರೆ ಸ್ನೇಹಿತ ತೂಗುವುದನ್ನು ಬಿಡಲಿಲ್ಲ. ಒಂದೆರಡು ನಿಮಿಷ ಕಾದ ಬಳಿಕ ಮೊಜಾರ್ಟ್ ತನ್ನ ಸ್ನೇಹಿತನ ಮೈ ಕುಲುಕಿ,
‘ಸಂಗೀತ ಆಗಲೇ ನಿಂತಿತು, ನೀನೇಕೆ ಇನ್ನೂ ತೂಗುತ್ತಿದ್ದೀಯಾ?’ ಎಂದು ಕೇಳಿದ.
ಅದಕ್ಕೆ ಸ್ನೇಹಿತನೆಂದ, ‘ನೀನು ಸಂಗೀತ ನುಡಿಸುವಾಗ ನನಗೆ ಅದರ ಧ್ವನಿಯಷ್ಟೇ ಕೇಳಿಸಿತು. ತದನಂತರ ಅದು ಮೆಲ್ಲಮೆಲ್ಲನೇ ಮಾಯವಾಯಿತು. ಈಗ ನಾನು ಅದರ ಶೂನ್ಯತೆಯನ್ನು ಅನುಭವಿಸುತ್ತಿದ್ದೇನೆ. ಅಂದರೆ ನಾನು ಈಗ ಸಂಗೀತದ ಕೇಂದ್ರದಲ್ಲಿ ತಲ್ಲೀನನಾಗಿದ್ದೇನೆ. ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿ…
ಮುಂದೆ ಓದಿ...