ಪಾರ್ಶ್ವವಾಯು ಬಾರದಂತೆ ತಡೆಯಲು ಕೆಲವು ಸಲಹೆಗಳು
1 day 12 hours ago - Ashwin Rao K P
ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಆಹಾರ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ರಾಸಾಯನಿಕ ರಹಿತ ಆಹಾರ ಸೇವನೆ ಕಡಿಮೆಯಾಗಿ ಫಾಸ್ಟ್ ಫುಡ್ ಶೈಲಿಯ ಆಹಾರಕ್ಕೆ ಜನರು ಒಗ್ಗಿಗೊಂಡಿದ್ದಾರೆ. ಮನೆಯಲ್ಲೇ ಶುಚಿ-ರುಚಿಯಾಗಿ ತಯಾರಿಸುತ್ತಿದ್ದ ತಿಂಡಿ ಪದಾಥಗಳು ಈಗಿನ ಜನಾಂಗಕ್ಕೆ ರುಚಿಸದೇ ಹೋಟೇಲ್ ಊಟ, ತಿಂಡಿಗಳಿಗೆ ಮೊರೆ ಹೋಗಿ ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸಣ್ಣ ವಯಸ್ಸಿಗೇ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಮೂತ್ರಕೋಶದ ಸಮಸ್ಯೆಯಿಂದ ಬಳಲುವರ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆ ಬಹಳಷ್ಟು ಕಾರಣ ನಮ್ಮ ಆಹಾರ ಮತ್ತು ಜೀವನಶೈಲಿ.
ಇಂದಿನ ಬದಲಾಗಿರುವ ಜೀವನ ಶೈಲಿಯಿಂದ ಅನೇಕ ಜನರಿಗೆ ಪಾರ್ಶ್ವವಾಯು ಸಮಸ್ಯೆ ಕಾಡುತ್ತಿದೆ. ಇದರ ಪರಿಣಾಮವಾಗಿ ದೇಹವು ನಮ್ಮ ಆಗುಹೋಗುಗಳಿಗೆ ಸ್ಪಂದಿಸದೇ ಸಮಸ್ಯೆ ತಂದೊಡ್ಡುತ್ತಿದೆ. ಯಾವುದೇ ಕೆಲಸ ಮಾಡಲು ಕೂಡ ಅಸಮರ್ಥವಾಗುತ್ತದೆ. ಹಾಸಿಗೆಯಲ್ಲೇ ಕುಳಿತು ಅಥವಾ ಮಲಗಿಕೊಂಡು ಬೇರೆಯವರ ಸಹಾಯದೊಂದಿಗೆ ನಮ್ಮ ದೈನಂದಿನ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದರಿಂದ ಕೂಡಲೇ ಹೊರಬಂದು ಮೊದಲಿನಂತಾಗುವುದು ಸಾಧ್ಯವಿಲ್ಲ. ಬಹಳಷ್ಟು ಸಮಯ ಔಷಧಿ, ವ್ಯಾಯಾಮದ ಅಗತ್ಯ ಇರುತ್ತದೆ. ಪಾರ್ಶ್ವವಾಯು ಅನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ರಕ್ತದೊತ್ತಡ ನಿಯಂತ್ರಣ: ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಬರುವ ಅಪಾಯ ಹೆಚ್ಚಿಸುತ್ತದೆ. ರಕ್ತದೊತ್ತಡ ೧೨೦/೮೦ ಮೀರದಂತೆ ನೋಡಿಕೊಳ್ಳಬೇಕು. ನಿಮ್ಮ ರಕ್ತದೊತ್ತಡ ಹೆಚ್ಚಿದ್ದರೆ, ಆಹಾರ ಕ್ರಮ ಹಾಗೂ ವ್ಯಾಯಾಮದ ಮೂಲಕ ಅದನ್ನು ನಿಯಂತ್ರಣ ಮಾಡಿಕೊಳ್ಳಬೇಕಾಗುತ್ತದೆ. ಆದರೂ ಕೂಡ ನಿಯಂತ್ರಣಕ್ಕೆ ಬರದಿದ್ದರೆ ಔಷಧಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ೨೦೧೯ರ… ಮುಂದೆ ಓದಿ...