ಕಳಿಸಿ ಬಿಡಲೇ ಖಾಲಿ ಆಕಾಶಕ್ಕೆನನ್ನ ಕಾಡುವ ಒಂದಷ್ಟು ನೆನಪುಗಳನ್ನು..ಅಲ್ಲಿ ಬಿಳಿ ಮೊಡಗಳಾಗಿ ತೇಲಿ ಬಿಡಿಸಲಿ ಚೆಂದದ ಚಿತ್ತಾರವನ್ನು!ತೇಲಿಸಿ ಬಿಡಲೇ ನನ್ನ ನನಸಾಗದ ಕನಸುಗಳನ್ನುಜುಳು ಜುಳು ಹರಿವ ಜಲ ಧಾರೆಯಲ್ಲಿ..ಎಲ್ಲವನ್ನೂ ತನ್ನಂತರಾಳದಲ್ಲಿ…
ಆತ್ಮೀಯರೇಬೆ೦ಗಳೂರಿಗೆ ಬ೦ದಷ್ಟು ಮತಗಳು ಹೊರನಾಡಿಗೆ ಬ೦ದಿಲ್ಲ. ಆದರೂ ಬಹಳಷ್ಟು ಜನ ಹೊರನಾಡಿನ ಸು೦ದರ ಮತ್ತು ಪ್ರಶಾ೦ತ ತಾಣದಲ್ಲಿ ಸಮ್ಮಿಲನವನ್ನು ಆಚರಿಸುವ ಉತ್ಸಾಹ ಮತ್ತು ಆಸಕ್ತಿಯನ್ನು ತೋರಿಸಿದ್ದಾರೆ. ವರ್ಷಕ್ಕೆರಡು ಬಾರಿ ಸ೦ಪದಿಗರು ಸೇರಿ…
ನನ್ನ ಮಡದಿ ತುಂಬಾ ಸಂತೋಷದಿಂದ ಇದ್ದಳು. ತವರು ಮನೆಗೆ ಹೋಗುವ ಸಂಭ್ರಮ. ಅವಳು ಇಷ್ಟು ಸಂತೋಷದಿಂದ ಇರುವದನ್ನು ನಾನು ನೋಡಿದ್ದು ಎರಡು ವಾರದ ಹಿಂದೆ ಹೊಸ ಸೀರೆ ಕೊಡಿಸಿದ್ದಾಗ.ಕಾಫೀ ಕುಡಿಯುತ್ತಾ ತುಂಬಾ ಸೀರಿಯಸ್ ಆಗಿ ಪೇಪರ್ ನೋಡುತ್ತಿದ್ದಳು.…
ಅವಿಶ್ವಾಸದ ನಡುವಿನ ವಿಶ್ವಾಸಮತ ಯಡ್ಯೂರಪ್ಪ ವಿಶ್ವಾಸಮತ ಗಳಿಸುವಲ್ಲಿ ಅಂತು ಸಫಲರಾಗಿದ್ದಾರೆ, ಇದರಿಂದ ಜನತನ್ಯಾಯಾಲಯದ ಮುಂದೆ ತಲೆ ಭಾಗಿಸುವುದನ್ನು ತಪ್ಪಿಸಿ ಕೊಂಡಂತಾಗಿದೆ. ಕಾಲೆಳೆಯಲು ಕಾಯುತಿದ್ದ ಸಿದ್ದು ಮತ್ತು ಗೌಡ್ರ ಪಕ್ಷಕ್ಕೆ ಮುಂದಿನ…
ಮಾನ್ಯ ಮತದಾರರೇ,
ನಿಮ್ಮ ಮುಂದೆ ಒಂದು ಪ್ರಶ್ನೆ
ನಮ್ಮ ಮುಂದೆ ರಾಜ್ಯ ಸರಕಾರದ ಅಳಿವು ಉಳಿವಿನ ಪ್ರಶ್ನೆ ನಿಂತಿದೆ ಇಲ್ಲಿ ನಾವು ಪಕ್ಷ ಮರೆತು ಮತದಾರ ಹಾಗು ಪ್ರಜ್ಷಾವಂತ ಪ್ರಜೆಯಾಗಿ ಮುಂದಿನ ನಡೆ ನೋಡಬೇಕಾಗಿದೆ.
1. ಇಂದಿನ ಘಟನೆಗೆ ಮುಖ್ಯ…
"ಈ ವರ್ಷ ಎಷ್ಟು ಪಿಂಟಾಲ್ ಸೇವಂತೀ ಬೇಳ್ದೀಯಪ್ಪಾ..? ಎಲ್ಡು ಎಕ್ರೆಗೆ ಹಾಕಿದೀನಿ ಎಷ್ಟು ಬರ್ತಾವ್ ನೋಡ್ಬೇಕು" ಎಂದು ಸೇವಂತಿಯೆಂಬ ಸುಂದರ ಹೂವಿನ ಮಾತುಗಳು ಕೇಳಿಬಂದರೆ ಅದು ಬಯಲುಸೀಮೆಯ ರೈತರ ಬೆಳೆ ಹಾಗೂ ಬದುಕಿನ ಕತೆ. "ನಿಮ್ಮ ಮನೇಲಿ ಕಾರದ…
ಬಂಡಿಪುರಕ್ಕೆ ಬಂದು ತಲುಪಿದಾಗ ಸುಮಾರು ನಾಲ್ಕು ಗಂಟೆಯಾಗಿತ್ತು. ಸಫಾರಿಗೆ ಹೋಗೋಣವೆಂದು ನಿಶ್ಚಯಿಸೆದೆವು. ಇದ್ದಕ್ಕಿದ್ದಂತೆ ಸನಿಹದಲೆಲ್ಲೊ ಜಿಂಕೆಗಳ ಕೂಗು ಕೇಳಿ ಬಂತು. ಅಲ್ಲಿದ್ದ ನನ್ನ ಸ್ನೇಹಿತರು ಹೇಳಿದರು ಇದು ಎಚ್ಚರಿಕೆಯ ಕೂಗು ಎಂದು.…
"ಜಾತ್ಯಾತೀತ" ಜನತಾದಳದ ನಾಯಕ ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ನಾಳೆ ನಡೆಯುವ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸಕತ್ತಾಗಿ 'ಟಾಂಗ್' ಕೊಟ್ಟು ಕೆಡವಬಲ್ಲ ಲಕ್ಷಣಗಳು ಮೇಲ್ನೋಟಕ್ಕೆ ಗೋಚರಿಸುತ್ತಲಿದೆ. ಆದರೆ ಕಳೆದ ಹತ್ತು ದಿನಗಳ ರಾಜಕೀಯದ…
ಕನ್ನಡದ ಮಟ್ಟಿಗೆ ಕಥೆ ಕದಿಯುವದು ಹೊಸದೇನಲ್ಲ. ಕೆಲವು ಲೇಖಕರು ಇಂಗ್ಲೀಷ್ ಸಾಹಿತ್ಯದಿಂದ ನೇರವಾಗಿ ಕಾಪಿ ಹೊಡೆದು ಅದು ತಮ್ಮದೇ ಎಂಬಂತೆ ಘೋಷಿಸಿಕೊಂಡು ಬಿಡುತ್ತಾರೆ. ಇನ್ನು ಕೆಲವರು ಕಥೆಯ ಮುಖ್ಯ ತಿರುಳನ್ನು ಹಾಗೆ ಇಟ್ಟುಕೊಂಡು ಅಲ್ಪ ಸ್ವಲ್ಪ…
(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ!
(೨೪೭) ವಿಶ್ವದ ಅಳಿಸಲಾಗದ ವಿಧಿನಿಯಮವೆಂದರೆಃ ಅದಕ್ಕೊಂದು ಭವಿಷ್ಯತ್…
ಪುರಂದರದಾಸರು ಮತ್ತು ಜಗನ್ನಾಥದಾಸರ ಬಹುತೇಕ ಕೃತಿಗಳನ್ನು ಹರಿದಾಸಸಂಪದ ( http://haridasa.sampada.net )ಕ್ಕಾಗಿ ಕುಟ್ಟಿ ಮುಗಿಸಿದ್ದನ್ನು ಈ ಹಿಂದೆ ಹೇಳಿಕೊಂಡಿದ್ದೇನೆ . ಈಗ ಮಹಿಪತಿದಾಸರ ಬಹುತೇಕ ಕೃತಿಗಳೂ ಅಲ್ಲಿ ಈಗ…
ಏನಾಗುತಿದೆ ನಮ್ಮ ರಾಜ್ಯಕ್ಕೆ
ಏನಾಗಿದೆ ನಮ್ಮ ಜನಪ್ರತಿನಿಧಿಗಳಿಗೆ
ಕನ್ನಡಾಂಬೆಯ ಮಾನವನ್ನು
ಹಣಕ್ಕೂ ಅಧಿಕಾರಕ್ಕೂ
ಹೊರ ರಾಜ್ಯಗಳಲ್ಲಿಟ್ಟು ಮಾರುತಿಹರಲ್ಲ
ಇದು ಸರಿಯೇ ?.
ಘಳಿಗೆಗೊಂದು ಮಾತು
ದಿನಕ್ಕೊಂದು ಬಣ್ಣ
ಅಭಿವೃದ್ಧಿಯ…
ಕಂಡೆ ನಾ ನಿನ್ನ ಮುಸ್ಸಂಜೆಯಲಿ..
ಜಿನುಗುಡುತ್ತಿದ್ದ ಸೋನೆ ಮಳೆಯಲಿ..
ಏನೆಂದು ವರ್ಣಿಸಲಿ ನಾ ನಿನ್ನ ಅಂದವನು??
ಹೇಳಲು ಸಾಲದೇ ಹುಡುಕುತ್ತಿರುವೆನು ಪದಗಳನ್ನು...
ನಿನ್ನ ಮೇಲೆ ಕುಳಿತಿರುವ ಮುತ್ತಿನಂಥ ನೀರ ಹನಿಗಳನು...
ಕಂಡು ನಾನಾದೆ…
ಮಿಂಚಂಚೆಯಲ್ಲಿ ಬಂದದ್ದು..ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...
"ನ್ಯೂ ಯಾರ್ಕ್ ನಲ್ಲಿದ್ದ ಭಾರತೀಯನೊಬ್ಬ ಬ್ಯಾಂಕೊಂದಕ್ಕೆ ಹೊಕ್ಕಿ ಲೋನ್ ಆಫೀಸರ್ ಹತ್ತಿರ ಹೋಗಿ..
ನಾನು ಎರಡು ವಾರದ ಮಟ್ಟಿಗೆ ಕೆಲಸದ ಮೇಲೆ ಭಾರತಕ್ಕೆ…
ಸಂಪದ ಗಾನ
ನಲ್ಬೆಳಗಿನೊಳು ಅಖಿಲ ಸಂಪದವನ್ನು ನೆನೆದು | ಸಂಪದಕ್ಕೊಡೆಯ ಆ ಹರೀಶನ ನೆನೆವುದು |
ಮುಕ್ತ ಸ್ವತಂತ್ರ ತಂತ್ರಾಂಶ ರಹಸ್ಯವ || 2 ಸಲ || ಹಂಸಾನನ್ದಿಯೊಳ್ ಹಾಡುವರಿಲ್ಲಿ |ಸಂಸ್ಕೃತದಲ್ಲಿ ಸುಭಾಷಿತವ ಬರೆದರೂ |…
ಬೆಳಗ್ಗೆನೇ ಚಾ ಕುಡೀಯಕ್ಕೆ ಅಂತಾ ಗೌಡಪ್ಪನ ಮನೆತಾವ ಹೋದೆ. ಅಲ್ಲಿ ಗೌಡಪ್ಪ ಚೆಡ್ಡಿ ಹಾಕ್ಕೊಂಡು ಐಕ್ಳು ಜೊತೆ ಬಾಲ್ ಟಪ್ ಗೋಲಿ ಆಟ ಆಡ್ತಾ ಇದ್ದ. ಸುಬ್ಬ ನೋಡ್ದೋನು ಏ ಥೂ. ನಿಮ್ಮ ವಯಸ್ಸಿಗೆ ಆಡೋ ಆಟನೇ ಬೇರೆ ಅಂದ. ಸರಿ ಏನ್ರಲಾ ಬಂದಿದ್ದು, ಚಾ…