ಎಚ್ಚರ, ಮಕ್ಕಳು ನಿಮ್ಮನ್ನು ಅನುಸರಿಸುತ್ತಿದ್ದಾರೆ !
1 day 2 hours ago - Ashwin Rao K Pಹೌದು, ಮಕ್ಕಳು ಸಣ್ಣವರಿರುವಾಗ ಹೆಚ್ಚಾಗಿ ತಮ್ಮ ಪೋಷಕರನ್ನು ಅನುಸರಿಸುತ್ತಾರೆ. ಅವರು ನಡೆದುಕೊಳ್ಳುವ ರೀತಿ, ಮಾತನಾಡುವ ಕ್ರಮ ಮೊದಲಾದ ವಿಷಯಗಳನ್ನು ಬೇಗನೇ ಗ್ರಹಿಸಿಕೊಳ್ಳುತ್ತಾರೆ. ಪ್ರತೀ ದಿನ ಗಲಾಟೆ ಮಾಡಿಕೊಳ್ಳುವ ದಂಪತಿಗಳ ಮಕ್ಕಳು ಹೆಚ್ಚಾಗಿ ಒಂದೋ ಅಂತರ್ಮುಖಿಯಾಗಿರುತ್ತಾರೆ ಅಥವಾ ಅಪರಾಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾರೆ. ಮಕ್ಕಳ ಎದುರು ಪೋಷಕರ, ಸಹೋದರ ಸಹೋದರಿಯರ, ಹತ್ತಿರದ ಸಂಬಂಧಿಕರ, ನಿಯಮಿತವಾಗಿ ಮನೆಗೆ ಭೇಟಿ ಕೊಡುವ ಕುಟುಂಬದ ಗೆಳೆಯರು ಆದಷ್ಟು ಮಟ್ಟಿಗೆ ಉತ್ತಮ ನಡವಳಿಕೆಯನ್ನು ಅಭ್ಯಾಸ ಮಾಡಬೇಕು. ಇವರನ್ನೆಲ್ಲಾ ನೋಡಿ ಪುಟ್ಟ ಮಕ್ಕಳು ಬೇಗನೇ ಕಲಿಯುತ್ತಾರೆ.
ಮಕ್ಕಳು ತೀರಾ ಸಣ್ಣವರಿದ್ದಾಗ ಅಂದರೆ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾಗ ಬೇಗನೇ ತಮ್ಮ ತಂದೆ ತಾಯಿಯರನ್ನು ಅನುಸರಿಸುತ್ತಾರೆ. ಸಣ್ಣ ಪ್ರಾಯದಲ್ಲಿ ಇದನ್ನು ನೋಡಿ ಖುಷಿ ಪಡುವ ನಾವು ಅವರು ಬೆಳೆದಂತೆ ಹಾಗೆಲ್ಲಾ ಮಾಡಬಾರದು ಎಂದು ಗದರಿಸುತ್ತೇವೆ. ಹುಟ್ಟುವ ಮಕ್ಕಳು ಕೆಲವೊಂದು ಜೀನ್ ಗಳನ್ನು ತಮ್ಮ ಹೆತ್ತವರಿಂದಲೇ ನೈಸರ್ಗಿಕವಾಗಿ ಪಡೆದಿರುತ್ತಾರೆ. ಉದಾಹರಣೆಗೆ ಮೈಬಣ್ಣ, ಮುಖದ ಚಹರೆ, ನಡೆಯುವ ರೀತಿ, ಮಾತು, ಧ್ವನಿ ಹೀಗೆ ಹತ್ತು ಹಲವಾರು ವಿಷಯಗಳು ತಮ್ಮ ಹೆತ್ತವರಿಂದಲೇ ಬಳುವಳಿಯಾಗಿ ಬಂದಿರುತ್ತವೆ. ಕೆಲವು ಬಾರಿ ಕಾಯಿಲೆಗಳೂ ಸಹ. ‘ನನ್ನ ಅಪ್ಪನಿಗೆ ಸಕ್ಕರೆ ಕಾಯಿಲೆ (ಮಧುಮೇಹ) ಇತ್ತು ನನಗೂ ಈಗ ಬಂದಿದೆ’ ಎನ್ನುವುದು ಈಗ ಸಾಮಾನ್ಯ ಸಂಗತಿಯಾಗಿದೆ. ಅನುವಂಶೀಯ ಅಥವಾ ರಕ್ತಗತವಾಗಿ ಬರುವ ಕೆಲವೊಂದು ಸಂಗತಿಗಳನ್ನು ನಾವು ತಡೆಯಲಾಗದು. ರಕ್ತ ಸಂಬಂಧಿ ಕಾಯಿಲೆಗಳು ಬಹಳಷ್ಟು ಮಕ್ಕಳಿಗೆ ತಮ್ಮ ಹೆತ್ತವರಿಂದಲೇ ಬಂದಿರುತ್ತದೆ. ಇದನ್ನು ತಡೆಯಲು ಆಗುವುದಿಲ್ಲ. ವಿಜ್ಞಾನ ಈಗ ಬಹಳಷ್ಟು ಮುಂದುವರೆದಿರುವುದರಿಂದ… ಮುಂದೆ ಓದಿ...