ಇತ್ತೀಚೆಗೆ ಸೇರಿಸಿದ ಪುಟಗಳು

 • ಸ್ವಾಮಿ ವಿವೇಕಾನಂದರ ಆಯ್ದ ಸಿಂಹವಾಣಿಗಳು
  ಬರಹಗಾರರ ಬಳಗ

  ★ ಸಾಧ್ಯವೇ ಇಲ್ಲ ಎಂದುಕೊಂಡರೆ ಏನನ್ನೂ ಸಾಧಿಸಲಾಗದು.  ಪ್ರಯತ್ನಿಸುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷ, ಸೋತರೆ ಅನುಭವ.

  ಮುಂದೆ ಓದಿ...
 • ಝೆನ್ ಪ್ರಸಂಗ: ಕಲಿಕೆ ಶುರು
  addoor

  ಅದೊಂದು ಗುರುಕುಲ. ಅಲ್ಲೊಬ್ಬ ವಿದ್ಯಾರ್ಥಿ. ಆತನಿಗೆ ವಿದ್ಯಾರ್ಜನೆಯಲ್ಲಿ ಆಸಕ್ತಿಯಿಲ್ಲ. ಹೆತ್ತವರ ಒತ್ತಾಯಕ್ಕಾಗಿ ಗುರುಕುಲ ಸೇರಿದ್ದ. ಅಲ್ಲಿ ನಿರಾಸಕ್ತಿಯಿಂದ ಕೆಲಸ ಮಾಡುತ್ತಾ ದಿನಗಳೆಯುತ್ತಿದ್ದ. ಗುರುಕುಲದ ೧೫ ವರುಷಗಳ ಅಧ್ಯಯನದ ಅವಧಿ ಯಾವಾಗ ಮುಗಿದೀತೆಂದು ದಿನ ಲೆಕ್ಕ ಹಾಕುತ್ತಿದ್ದ.

  ಕೊನೆಗೂ ಆ ದಿನ ಬಂದಿತು. ಅವತ್ತು ಮುಂಜಾನೆ ಉತ್ಸಾಹದಿಂದ ಎದ್ದ ಆ ವಿದ್ಯಾರ್ಥಿ. ನಿತ್ಯಕಾರ್ಯಗಳನ್ನು ಪೂರೈಸಿ, ತನ್ನ ಮನೆಗೆ ಮರಳಲು ತಯಾರಾದ. ಗುರುಗಳ ಅನುಮತಿ ಪಡೆಯಲಿಕ್ಕಾಗಿ ಅವರ ನಿವಾಸಕ್ಕೆ ಹೋದ. ಗುರುಗಳು ಎಂದಿನಂತೆ ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಧ್ಯಾನ ಕೋಣೆಯ ಬಾಗಿಲಿನೆದುರು ಕಾದು ನಿಂತ…

  ಮುಂದೆ ಓದಿ...
 • ಖಲೀಲ್ ಗಿಬ್ರಾನ್ ಕಥೆ : ಹುಡುಕಾಟ
  Ashwin Rao K P

  ಖಲೀಲ್ ಗಿಬ್ರಾನ್ (೧೮೮೩-೧೯೩೧) ಓರ್ವ ಲೆಬನೀಸ್ ಅಮೇರಿಕನ್ ಲೇಖಕ, ಕವಿ ಹಾಗೂ ಕಥೆಗಾರ. ಅವರು ಬರೆದ ಕಥೆಗಳು ಬಹಳಷ್ಟು ಒಳ ಅರ್ಥಗಳನ್ನು ಹೊಂದಿರುತ್ತದೆ. ಒಮ್ಮೆ ಓದುವಾಗ ಒಂದು ಅರ್ಥ ನೀಡಿದರೆ, ಮತ್ತೊಮ್ಮೆ ಓದುವಾಗ ಬೇರೆಯೇ ಅರ್ಥ ಕೊಡುತ್ತದೆ. ಈ ಕಾರಣಗಳಿಂದಲೇ ಗಿಬ್ರಾನ್ ಅವರನ್ನು ಜನರು…

  ಮುಂದೆ ಓದಿ...
 • ನೇಸರನ ಕಿರಣಗಳಿಗಾಗಿ ಕಾಯುತ್ತಾ...
  Shreerama Diwana

  ಜರ್ಮನಿ, ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಹಂಗೇರಿ, ಜೆಕ್ ರಿಪಬ್ಲಿಕ್, ಸ್ಲೋವಾಕಿಯಾ ಮುಂತಾದ ಯೂರೋಪಿಯನ್ ದೇಶಗಳ ಕೆಲವು ಹೋಟೆಲ್‌ - ರೆಸಾರ್ಟ್ಸ್ ಗಳಲ್ಲಿ ಉಳಿದುಕೊಂಡಿದ್ದೆ. ವಿರಾಮದ ಸಮಯದಲ್ಲಿ ಅಲ್ಲಿನ ಮ್ಯಾನೇಜರ್ ಗಳ ಬಳಿ (ಗಂಡು|ಹೆಣ್ಣು) ಲೋಕಾಭಿರಾಮವಾಗಿ  ಮಾತನಾಡುತ್ತಿದ್ದೆ. ಅವರು ವಿಶ್ವದ…

  ಮುಂದೆ ಓದಿ...
 • ‘ವೃಕ್ಷ ದೇವತೆ' ತುಳಸಿ ಗೌಡ
  Ashwin Rao K P

  ಸಾಲು ಮರದ ತಿಮ್ಮಕ್ಕನವರ ಹೆಸರನ್ನು ನೀವು ಕೇಳಿಯೇ ಇರುತ್ತೀರಿ, ತನಗೆ ಮಕ್ಕಳಿಲ್ಲ ಎಂಬ ಕೊರತೆಯನ್ನು ರಸ್ತೆಯ ಇಕ್ಕೆಲಗಳಲ್ಲಿ ಗಿಡವನ್ನು ನೆಡುವುದರ ಮೂಲಕ ತೀರಿಸಿಕೊಂಡ ಮಹಾನ್ ಜೀವ ಇದು. ಇವರಂತೆಯೇ ಇನ್ನೊರ್ವ ವೃಕ್ಷ ಪ್ರೇಮಿ ಮಹಿಳೆಯೇ ತುಳಸಿ ಗೌಡ. ಹಾಲಕ್ಕಿ ಜನಾಂಗಕ್ಕೆ ಸೇರಿದ ಇವರು ಈಗಾಗಲೇ ಒಂದು…

  ಮುಂದೆ ಓದಿ...
 • ಜೀವನದಲ್ಲಿ ಏಕಾಗ್ರತೆಯ ಮಹತ್ವ
  Kavitha Mahesh

  ಯುವತಿಯೊಬ್ಬಳು ದೇವಸ್ಥಾನಕ್ಕೆ ಹೋಗಿ ಬಂದಳು. ‘ದರ್ಶನ ಚೆನ್ನಾಗಿ ಆಯಿತಾ ಮಗಳೇ’ ಎಂದು ತಂದೆ ಪ್ರಶ್ನಿಸಿದರು.

  ಮುಂದೆ ಓದಿ...
 • ಸಣ್ಣ ಕಥೆ - ಕಡಲು
  ಬರಹಗಾರರ ಬಳಗ

  ಗೋವಿಂದರಾಯರು ಮೂವತ್ತ್ಯೆದು ವರ್ಷಗಳ ಕಾಲ ಗುಮಾಸ್ತರಾಗಿ ಸೇವೆ ಸಲ್ಲಿಸಿ ನಿವೃತ್ತ ಜೀವನವನ್ನು ತಮ್ಮ ಹಳ್ಳಿಯಲ್ಲಿ ಪತ್ನಿಯೊಂದಿಗೆ ಕಳೆಯುತ್ತಿದ್ದರು. ಇದ್ದ ಒಬ್ಬನೇ ಮಗ, ಸೊಸೆಯ ಜೊತೆ ಆಫ್ರಿಕಾದಲ್ಲಿ ನೆಲೆಸಿದ್ದ. ರಾಯರ ಪತ್ನಿ ಆಕಸ್ಮಿಕವಾಗಿ ಹೃದಯಾಘಾತವಾಗಿ ಮರಣ ಹೊಂದಿದಾಗ, ತನ್ನ ಕರ್ತವ್ಯ ಎಂಬ…

  ಮುಂದೆ ಓದಿ...
 • ಗುಂಡ ಮೊಲದಮರಿಯ ಉಪಟಳ
  addoor

  ಮೈಯಲ್ಲಿ ಮಚ್ಚೆಗಳಿದ್ದ ಮೊಲದ ಮರಿಯೊಂದರ ಹೆಸರು ಗುಂಡ. ಅದು ಇತರ ಪ್ರಾಣಿಗಳಿಗೆ ಬಹಳ ಉಪಟಳ ಕೊಡುತ್ತಿತ್ತು. ಯಾವತ್ತೂ ಅದು ಸಭ್ಯತೆಯಿಂದ ವರ್ತಿಸುತ್ತಿರಲಿಲ್ಲ. ಇತರ ಪ್ರಾಣಿಗಳು ಎದುರಾದಾಗೆಲ್ಲ ಅವನ್ನು ಅಡ್ಡಹೆಸರಿನಿಂದ ಕರೆದು ಗೇಲಿ ಮಾಡುತ್ತಿತ್ತು. ಬೇರೆಯವರು ಏನಾದರೂ ಹೇಳಿದರೆ ಯಾವಾಗಲೂ ಎದುರುತ್ತರ ಕೊಡುತ್ತಿತ್ತು.

  ಮುಳ್ಳುಹಂದಿ ಎದುರಾದಾಗ “ಮುಳ್ಳಿನ ಮುದ್ದೆಯೇ” ಎಂದು ಜೋರಾಗಿ ಕರೆಯಿತು ಗುಂಡ ಮೊಲದಮರಿ. ಯಾರಾದರೂ ಹಾಗೆ ಕರೆದರೆ ಮುಳ್ಳುಹಂದಿಗೆ ಬಹಳ ಕಿರಿಕಿರಿಯಾಗುತ್ತಿತ್ತು. “ಏನೆಂದೆ? ತಾಳು, ನಿನ್ನ ಅಮ್ಮನಿಗೆ ನಾನು ದೂರು ಹೇಳ್ತೇನೆ” ಎಂದಿತು ಮುಳ್ಳುಹಂದಿ.

  “ಹೋಗು, ಹೋಗು; ಹೇಳು,…

  ಮುಂದೆ ಓದಿ...
 • ತ್ಯಾಗ, ಬಲಿದಾನವನ್ನು ನೆನಪಿಸುವ ಸೇನಾ ದಿನ
  Ashwin Rao K P

  ಭಾರತೀಯ ಸಶಸ್ತ್ರ ಸೇನೆ ಎಂದೊಡನೆಯೇ ನಮ್ಮ ಮನಸ್ಸಿನಲ್ಲಿ ಭೂಸೇನೆ, ವಾಯು ಸೇನೆ ಮತ್ತು ನೌಕಾ ಸೇನೆಗಳ ಚಿತ್ರ ಹಾದು ಹೋಗುತ್ತದೆ. ಮೂರೂ ಸೇನೆಗಳಿಗೆ ಪ್ರತ್ಯೇಕ ದಿನಗಳಿವೆ. ಜನವರಿ ೧೫ ಅನ್ನು ಸೇನಾ ದಿನ (Army Day) ವಾಗಿ ಆಚರಿಸುತ್ತೇವೆ. ಜನವರಿ ೧೫ ರಾಷ್ಟ್ರೀಯ ಸೇನಾ ದಿನಾಚರಣೆಯನ್ನಾಗಿ ಆಚರಣೆ…

  ಮುಂದೆ ಓದಿ...
 • ರೈತ ಭಾರತ...
  Shreerama Diwana

  ವಿಶ್ವ ಭೂಪಟದ ನಾಟಕವೆಂಬ ಪರದೆ ಸರಿಸಿದಾಗ ಭಾರತವೆಂಬ ರಂಗ ವೇದಿಕೆಯಲ್ಲಿ ನೇಗಿಲು ಹಿಡಿದು ತಲೆಗೆ ಹಸಿರು ರುಮಾಲು ಸುತ್ತಿದ ದಷ್ಟ ಪುಷ್ಟ ದೇಹದ ಮುಗ್ಧ ನಗುವಿನ ಸುಂದರ ರೈತನೊಬ್ಬ ಕಾಣಿಸುತ್ತಿದ್ದ..ಭಾರತದ ಜನಸಂಖ್ಯೆಯ ಶೇಕಡ ೮೦% ಕ್ಕೂ ಹೆಚ್ಚು ಜನ ಅವಲಂಬಿತವಾಗಿದ್ದ ಕೃಷಿ ದೇಶದ ಜೀವನಾಡಿಯಾಗಿತ್ತು. ಅಷ್ಟೇ ಏಕೆ ರೈತರನ್ನು ದೇವರ ಅಪರಾವತಾರವೆಂದೇ ಪರಿಗಣಿಸಲಾಗಿತ್ತು.
  ರೈತ ನಮ್ಮ ಬೆನ್ನೆಲುಬು - ಅನ್ನದಾತ -  ಉಳುವ ಯೋಗಿ ಎಂದು ಹಾಡಿ ಹೊಗಳಲಾಗುತ್ತಿತ್ತು. 
  ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲೆಲ್ಲೂ ಹಸಿರೋ ಹಸಿರು. ಗೋಧಿ, ಭತ್ತ, ರಾಗಿ, ಜೋಳ, ನವಣೆ, ಸಜ್ಜೆ, ಮಾವು, ತೆಂಗು, ಅಡಿಕೆ, ಕಾಪಿ,…

  ಮುಂದೆ ಓದಿ...