ಹಾವಿನ ಕತ್ತಿನ ‘ಹಾವಕ್ಕಿ’ ಕಥೆ !
22 hours 58 minutes ago - ಬರಹಗಾರರ ಬಳಗಪಕ್ಷಿ ವೀಕ್ಷಣೆಯ ಹವ್ಯಾಸ ಪ್ರಾರಂಭ ಮಾಡಿದ ಮೇಲೆ ನನ್ನ ಹಾಗೆಯೇ ಪಕ್ಷಿವೀಕ್ಷಣೆ ಮತ್ತು ಪಕ್ಷಿಗಳ ಫೋಟೋ ತೆಗೆಯುವ ಹಲವಾರು ವ್ಯಕ್ತಿಗಳ ಪರಿಚಯ ಆಗಲು ಪ್ರಾರಂಭ ಆಯಿತು. ಹೀಗೆ ಪರಿಚಯ ಆದವರಲ್ಲಿ ಕಾರ್ಕಳದ ಗೆಳೆಯ ಶಿವಶಂಕರ್ ಕೂಡ ಒಬ್ಬರು. ಕಾರ್ಕಳದಲ್ಲೊಂದು ಸುಂದರ ಕೆರೆ ಇದೆ. ಅದರ ಹೆಸರು ಆನೆಕೆರೆ. ಕಾರ್ಕಳದ ಮೂಲಕ ಹೋಗುವಾಗಲೆಲ್ಲ ಆ ಕೆರೆಯನ್ನು ನೋಡುತ್ತ ಹೋಗುವುದು ನನ್ನ ಇಷ್ಟದ ಕೆಲಸ. ಸಮಯ ಸಿಕ್ಕರೆ ಆ ಕೆರೆಯ ಬದಿಯಲ್ಲಿ ನಿಂತು ಒಂದಷ್ಟು ಹೊತ್ತು ಹಕ್ಕಿಗಳನ್ನು ನೋಡುತ್ತ ಕುಳಿತರೆ ಸಮಯ ಹೋದದ್ದೇ ತಿಳಿಯುತ್ತಿರಲಿಲ್ಲ. ಹೀಗೇ ಒಮ್ಮೆ ಕುಳಿತು ಹಕ್ಕಿಗಳನ್ನು ನೋಡುತ್ತಿರುವಾಗ, ನೀರಿನ ಒಳಗೆ ಹಾವಿನಂಥ ಜೀವಿಯೊಂದು ಓಡಾಡಿದ ಹಾಗೆ ಅನಿಸಿತು. ಸ್ವಲ್ಪ ಮಾತ್ರ ತನ್ನ ಹೆಡೆಯನ್ನು ಮೇಲಕ್ಕೆ ಎತ್ತಿ ಮತ್ತೆ ನೀರಿನ ಒಳಗೆ ಹೋಗಿಬಿಡುತ್ತಿತ್ತು. ಕ್ಯಾಮರಾ ಹಿಡಿದುಕೊಂಡು ಅದರ ದಾರಿಯನ್ನೇ ಹಿಂಬಾಲಿಸಿದೆ. ಒಂದೆರಡು ಪೋಟೋ ಸಿಕ್ಕಿತು.
ಸ್ವಲ್ಪ ಹೊತ್ತಿನಲ್ಲಿ ಆ ಜೀವಿ ಅಲ್ಲೇ ಇದ್ದ ಬೋಳು ಮರದ ಕೆಳಗಿನ ಗೆಲ್ಲಿನಲ್ಲಿ ಕುಳಿತಿತು. ಆಗಲೇ ನನಗೆ ತಿಳಿದದ್ದು ಅದೊಂದು ಹಕ್ಕಿ ಎಂದು. ಫಕ್ಕನೇ ನೋಡಲು ನೀರು ಕಾಗೆಯ ಹಾಗೆ ಇದ್ದರೂ ಕುತ್ತಿಗೆ ಮಾತ್ರ ತುಂಬಾ ಉದ್ದ. ಉದ್ದನೆಯ ಈಟಿಯಂಥ ಕೊಕ್ಕು, ಮರದಮೇಲೆ ಕುಳಿತ ಹಕ್ಕಿ ತನ್ನ ರೆಕ್ಕೆಗಳನ್ನು ಬಿಚ್ಚಿ ಬಿಸಿಲಿಗೆ ಒಣಗಿಸುತ್ತಾ ನಿಂತಿತು. ಕಾಲುಗಳನ್ನು ನೋಡಿದರೆ ಜಾಲಪಾದ. ನೀರಿನೊಳಗೆ ಮುಳುಗಿ ಮೀನುಗಳನ್ನು ಹಿಂಬಾಲಿಸಿ ಹಿಡಿಯುವ ತಾಕತ್ತು. ಅದರ ಉದ್ದನೆಯ ಕತ್ತು ಮತ್ತು ಕೊಕ್ಕು ಬಾಣದಂತೆ ನುಗ್ಗಿ ಮೀನು ಹಿಡಿಯಲು ಸಹಕಾರಿ.
ಹಾವಿನಂತೆ ತನ್ನ ಕತ್ತನ್ನು ಮಾತ್ರ ನೀರಿನ ಮೇಲೆ ತಂದು ಈಜುವುದರಿಂದ ಇದರ ಕನ್ನಡ ಹೆಸರು ಹಾವಕ್ಕಿ. ಇಂಗ್ಲೀಷ್ ನಲ್ಲಿ snake bird. ಚೂಪ… ಮುಂದೆ ಓದಿ...