ನಿಷ್ಪಾಪಿ ಸಸ್ಯಗಳು (ಭಾಗ ೯೧) - ಈಟಿನ ಗಿಡ
11 hours 47 minutes ago - ಬರಹಗಾರರ ಬಳಗ
ಮಕ್ಕಳೇ, ಹೇಗಿದ್ದೀರಿ? ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಿರಲ್ಲವೇ? ಈ ನಡುವೆ ನಾವಿಂದು ಉತ್ತಮ ಕೃಷಿಕರೆಂದು ಪ್ರಸಿದ್ಧಿ ಪಡೆದಿರುವ ರೈತರೊಬ್ಬರ ತೋಟಕ್ಕೆ ಭೇಟಿ ನೀಡೋಣ, ಬನ್ನಿ. ಇದು ಉಪ್ಪಿನಂಗಡಿಯ ಸಮೀಪವಿರುವ ಕರಾಯ ಎಂಬ ಒಂದು ಪುಟ್ಟ ಊರು. ಇದು ಈ ಊರಿನಲ್ಲಿರುವ ಗಣೇಶ್ ಐತಾಳರೆಂಬ ರೈತರ ಮನೆ. ಇವರು ಹತ್ತಿಪ್ಪತ್ತು ವರ್ಷಗಳಿಂದ ಅಡಿಕೆ ತೆಂಗು ಬೆಳೆಯುತ್ತಿದ್ದಾರೆ. ಕೊಕ್ಕೋ, ಚಿಕ್ಕು, ಬಾಳೆ ಬೇಸಾಯವೂ ಇದೆ. ವಿಶೇಷವೇನೆಂದರೆ ಇವರು ಸಾವಯವ ಕೃಷಿಕರು. ಅಂದರೆ ರಾಸಾಯನಿಕ ಗೊಬ್ಬರಗಳ ಬಳಕೆಯನ್ನೇ ಮಾಡಿಲ್ಲವಂತೆ. ಆದರೂ ಇವರ ತೋಟದಲ್ಲಿ ಫಸಲು ದಾಖಲೆಯ ಮಟ್ಟದಲ್ಲಿದ್ದು "ಉತ್ತಮ ಕೃಷಿಕ" ಎಂಬುದಾಗಿ ಕೃಷಿ ಇಲಾಖೆ ಗೌರವಿಸಿದೆ. ಅವರ ಈ ಯಶಸ್ಸಿನ ಗುಟ್ಟೇನೆಂದು ಕೇಳಿ ತಿಳಿದುಕೊಳ್ಳೋಣ ಆಗದೇ..?
ಬನ್ನಿ..ತೋಟದಲ್ಲಿರುವ ಗಣೇಶ್ ಐತಾಳರ ಬಳಿಗೇ ಹೋಗಿ ಮಾತನಾಡಿಸೋಣ.
ಶಿಕ್ಷಕಿ: ಐತಾಳರೇ ನಮಸ್ತೆ.. ನೀವು ಸಾವಯವ ಕೃಷಿಕರೆಂದು ಪ್ರಸಿದ್ಧರಾಗಿದ್ದೀರಿ. ಇದು ಹೇಗೆ ಸಾಧ್ಯವಾಯಿತೆಂದು ತಿಳಿಯಲು ನಮ್ಮ ವಿದ್ಯಾರ್ಥಿಮಿತ್ರರು ಕಾತರರಾಗಿದ್ದಾರೆ.. ದಯಮಾಡಿ ವಿವರಿಸಿ.
ಗಣೇಶ್: ಬಹಳ ಸಂತೋಷವಾಯಿತು. ಬನ್ನಿ ನಮ್ಮ ತೆಂಗಿನ ತೋಟಕ್ಕೆ ಹೋಗೋಣ.
ಭವಾನಿ: ಹೋ! ಇಲ್ಲಿ ತೆಂಗಿನ ಮರಗಳ ತಲೆಗಳು ಮಾತ್ರ ಕಾಣಿಸುತ್ತಿವೆ... ಬುಡಗಳೆಲ್ಲ ಈಟಿನ ಗಿಡಗಳಿಂದ ಮುಚ್ಚಿ ಹೋಗಿದೆ.
ಶಾಹಿಕ್: ನಾವು ನಮ್ಮ ರಜಾಕಾಲದಲ್ಲಿ ಮನೆ ಕಟ್ಟುವ ಆಟ ಆಡುತ್ತಿದ್ದೆವು.. ಆ ಮನೆಗಳ ಮಾಡು ಮಾಡಲು ಈ ಈಟಿನ ಗಿಡಗಳೇ ಆಗಬೇಕಿತ್ತು. ಮಾತ್ರವಲ್ಲ ಇದರ ಸುಂದರವಾದ ಎಲೆಗಳೇ ಮನೆಯ ಅಲಂಕಾರ!.
ಗಣೇಶ್ : ಹ್ಹಾಂ....ಅದನ್ನೇ ಆಟಕ್ಕೇಕೆ ಉಪಯೋಗಿಸಿದಿರಿ ಎಂದೂ ನನಗೊತ್ತು ಮಗು! ಅದನ್ನು ಕಡಿಯಲು ಬಹಳ ಸುಲಭ. ತುಂಬಾ ಮೆತ್ತಗಿನ ಗಿಡಗಳವು. ಎಲೆಗಳೂ ಒತ್ತೊತ್ತಾಗ… ಮುಂದೆ ಓದಿ...