ನಿಷ್ಪಾಪಿ ಸಸ್ಯಗಳು (ಭಾಗ ೮೧) - ಇನ್ಸುಲಿನ್ ಗಿಡ
16 hours 59 minutes ago - ಬರಹಗಾರರ ಬಳಗಇಲ್ಲಿ ಹರಿಯುತ್ತಿರುವ ನೀರಿನ ಪ್ರವಾಹವನ್ನೊಮ್ಮೆ ನೋಡಿರಿ. ಉತ್ತರದಿಂದ ದಕ್ಷಿಣಕ್ಕೆ ಹರಿಯುತ್ತಿರುವ ಇದನ್ನು 'ಕಟ್ಟತ್ತಿಲ ಹೊಳೆ' ಎನ್ನುತ್ತಾರೆ. ಇದು ನಮಗಮ ಜಿಲ್ಲೆಯ ದಕ್ಷಿಣ ದಿಕ್ಕಿನಲ್ಲಿದೆ. ವಿಶೇಷವೇನೆಂದರೆ ಕರ್ನಾಟಕದ ಗಡಿ ದಾಟಿ ಸ್ವಲ್ಪವೇ ದೂರದಲ್ಲಿ ಕೇರಳ ಪ್ರವೇಶಿಸಿ ಪಯಸ್ವಿನಿ ನದಿಯ ಜೊತೆ ಐಕ್ಯಗೊಳ್ಳುತ್ತದೆ. ನದಿಗೆ ಹೋಲಿಸಿದರೆ ಇದೊಂದು ಸಣ್ಣ ನೀರಿನ ಹರಿವು. ಮಳೆಗಾಲದಲ್ಲಿ ಮಾತ್ರ ಭರ್ತಿಯಾಗಿ ಹರಿಯುತ್ತಿರುತ್ತದೆ. ಬೇಸಿಗೆ ಬಂತೆಂದರೆ ಒಣಗಲಾರಂಭಿಸುತ್ತದೆ. ಆದರೆ ಪೂರ್ತಿ ನೀರಿನ ಹರಿವು ನಿಲ್ಲುವ ಮೊದಲೇ ಇದಕ್ಕೆ ಅಲ್ಲಲ್ಲಿ ಮಣ್ಣು ಹಾಗೂ ಹಲಗೆಗಳ ಸಹಾಯದಿಂದ ತಡೆಗಳನ್ನು ನಿರ್ಮಾಣಮಾಡಿ ನೀರು ತುಂಬಿರುವಂತೆ ನೋಡಿಕೊಳ್ಳುತ್ತಾರೆ. ನಿಧಾನಕ್ಕೆ ಈ ನಿಂತ ನೀರು ಆರಿ ಹೋದರೂ ಇಕ್ಕೆಲಗಳಲ್ಲಿ ಹಸಿರು ಹೊದ್ದ ದಡಗಳು ಹಲವಾರು ಮೂಲಿಕೆ ಹಾಗೂ ಪೊದರು ಸಸ್ಯಗಳಿಗೆ ಆವಾಸವನ್ನೊದಗಿಸುತ್ತದೆ.
ಇಲ್ಲಿ ನೋಡಿ, ಇದು ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸುವ ಪುಟ್ಟ ಸೇತುವೆ. ಇಲ್ಲಿಂದ ಮುಂದೆ. ಈ ಸೇತುವೆಯ ಪೂರ್ವದ ತುದಿಯಲ್ಲಿ ನಿಮಗೊಂದು ವಿಶೇಷ ವಾದ ಸಸ್ಯವೊಂದನ್ನು ಪರಿಚಯಿಸಲಿದ್ದೇನೆ ಬನ್ನಿ..
ಓ ಅಲ್ಲಿ ನೋಡಿ, ಹಳದಿ ಕೆಂಪು ಹೂಗಳ ರಾಶಿ ಕಾಣಿಸುತ್ತಿದೆಯೇ? ದೂರದಿಂದಲೇ ಬಣ್ಣಗಳು ಕಣ್ಮನ ಸೆಳೆಯುತ್ತಿವೆ ಅಲ್ಲವೇ? ಗಿಡದ ಹತ್ತಿರಕ್ಕೆ ಬನ್ನಿ, ಮಣ್ಣು ಮೆತ್ತಗಿದೆ, ಜಾರಬಹುದು. ಗಿಡಗಳ ತುದಿಗಳಲ್ಲಿ ಮೇಲ್ಮುಖವಾಗಿ ಬೆಳೆದ ಕುಂಡಿಗೆಯಲ್ಲಿ ಸುತ್ತಲೂ ಕಡು ಹಳದಿ ದೊಡ್ಡಗಾತ್ರದ ಪುಷ್ಪಪಾತ್ರೆಯೊಳಗೆ ಕಡು ಕೆಂಪು ಹಾಗೂ ಹಳದಿ ಬಣ್ಣಗಳ ಪಟ್ಟೆಗಳಿದ್ದು ವಕ್ರವಾಗಿ ಕಿರೀಟದಂತಿರುವ ಸಾಮಾನ್ಯ ಗಾತ್ರದ ಎರಡೆಸಳು ಹಾಗೂ ಜೇನು ಸುರಿವ ಚೆಲುವಿಕೆಯ ಹಸಿ ಹಳದಿಯ ಬಾಗಿದ ಪಕಳೆ ಇನ್ನೊಂದೆಡೆ!. ಎಷ್ಟು ಸುಂದರವಾಗಿವ… ಮುಂದೆ ಓದಿ...