ಮರೆಯಲಾಗದ ಪ್ರೀತೀಶ್ ನಂದಿ
8 hours 45 minutes ago - ಬರಹಗಾರರ ಬಳಗಭಾರತೀಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ನಾನು ನೆನಪಿಟ್ಟುಕೊಳ್ಳಬಯಸುವ ನನ್ನ ಕಾಲದ ಎರಡು ಸ್ವರ್ಣಿಮ ಅವಧಿಗಳೆಂದರೆ ಒಂದು, 80ರ ದಶಕದಲ್ಲಿ ಪ್ರೀತೀಶ್ ನಂದಿ ಅವರ ಸಂಪಾದಕತ್ವದ “ಇಲಸ್ಟ್ರೇಟೆಡ್ ವೀಕ್ಲಿ” ಮತ್ತು ಇನ್ನೊಂದು ವಿನೋದ್ ಮೆಹ್ತಾ ಅವರ “ಔಟ್ಲುಕ್” ಅವಧಿ. ಪ್ರೀತೀಶ್ ಇನ್ನಿಲ್ಲ ಎಂಬ ಸುದ್ದಿ ಕೇಳಿದೆ.
ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಅವರ ಕವಿತೆಗಳನ್ನು ಪ್ರಕಟಿಸುವ ಮೂಲಕ) 80ರ ದಶಕದಲ್ಲಿ ಪರಿಚಯಿಸಿದ್ದಕ್ಕಾಗಿ.
ಜಾಹೀರಾತು ರಂಗದಿಂದ ಪತ್ರಿಕಾ ಸಂಪಾದಕರಾಗಿ ಬಂದ ಪ್ರೀತೀಶ್ ಕಾಲದ ಇಲಸ್ಟ್ರೇಟೆಡ್ ವೀಕ್ಲಿ, ಪತ್ರಿಕೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ 80ರ ದಶಕದಲ್ಲೇ ತನ್ನ ಕಾಲಕ್ಕಿಂತ 50 ವರ್ಷ ಮುಂದಿತ್ತು ಎಂದರೆ ತಪ್ಪಾಗದು. ನಾನು ಸುದ್ದಿಮನೆಗೆ ಕಾಲಿಟ್ಟದ್ದೇ 80ರ ದಶಕದ ಕೊನೆಯಲ್ಲಿ. ಆದರೆ ವಿದ್ಯಾರ್ಥಿಯಾಗಿಯೇ ಇಲಸ್ಟ್ರೇಟೆಡ್ ವೀಕ್ಲಿಯನ್ನು ಕಾಲೇಜು ಲೈಬ್ರರಿಯಲ್ಲಿ ನೋಡಿ ಬೆರಗಾಗುತ್ತಿದ್ದೆ. ಉದ್ಯೋಗಕ್ಕೆ ಸೇರಿದ ತಕ್ಷಣ ಮಾಡಿದ ಕೆಲಸ, ಇಲಸ್ಟ್ರೇಟೆಡ್ ವೀಕ್ಲಿ ಚಂದಾದಾರನಾದುದು. ಅದರ ಕೊನೆಯ ಸಂಚಿಕೆಯ ತನಕವೂ ಚಂದಾದಾರನಾಗಿದ್ದೆ. ಆದರೆ, ದುರದೃಷ್ಟವಶಾತ್ ಸಂಗ್ರಹದಲ್ಲಿದ್ದ ಆ ಎಲ್ಲ ಸಂಚಿಕೆಗಳೂ 35 ವರ್ಷ ಹಿಂದೆ ಗೆದ್ದಲಿಗೆ ಆಹಾರವಾದವು... ಅದರ ಪುಟಗಳಲ್ಲಿ ಕಪ್ಪು-ಬಿಳುಪಿನಲ್ಲೇ ಸಾಧಿಸುತ್ತಿದ್ದ ಪುಟ ವಿನ್ಯಾಸದ ಸೊಬಗು, ಆ ಕಾಲಕ್ಕಿಂತ ಬಹಳ ಮುಂದಿದ್ದ ಡಿಸೈನ್ ಪ್ರಯೋಗಗಳು, ಮುಖಪುಟದಲ್ಲಿ ಒಂದಿಷ್ಟು ಕಾಲ ಬರುತ್ತಿದ್ದ ವ್ಯಕ್ತಿಗಳ ವಾಟರ್ ಕಲರ್ ಪೋರ್ಟ್ರೈಟ್ಗಳು... ಈಗಿನ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಗ್ರಾಫಿಕ್ ಡಿಸೈನರ್ಗಳೂ ನಾಚುವಂತಿದ್ದವು.
ಕ… ಮುಂದೆ ಓದಿ...