July 2013

  • July 11, 2013
    ಬರಹ: jayaprakash M.G
    ಮಥುರಾ ನಗರದ ಧೂಳಿನ ಅಡಿಯಲಿ ರಾಧೆಯ ನೆನಪನು ಹುಡುಕುವ ತವಕದಿ ಮಾಧವ ಮನದಲಿ ಮೌನದ ವೇದನೆ   ಮೋಹನ ಮುರಳಿಯ ನೀರವ ಮೌನದಿ ಎದೆಯನು ಬಿರಿಯುವ ವಿರಹದ ನೋವಲಿ ನಲುಗಿದ ಮಾಧವ ರಾಧೆಯ ನೆನೆಪಲಿ     ಯಮುನಾ ತೀರದಿ ತಿರುಗಿದ ದಿನಗಳು ಮುನಿಸಿನ ಮೌನವ…
  • July 10, 2013
    ಬರಹ: Mohan V Kollegal
    ಬಿಸಿಲೆಂದರೆ ಬಿಸಿಲು. ಆ ಕಾಡಿನ ಎಲೆಗಳೆಲ್ಲಾ ಉದುರಿ ಗೊಬ್ಬರವಾಗಿದ್ದವು. ಎಲ್ಲಾ ಬೋಳು ಬೋಳು. ಇದ್ದ ಒಂದೆರಡು ಕೆರೆ ಕೊರಕಲುಗಳು ಒಣಗಿ ಬಿರಿದ ಚರ್ಮದಂತಾಗಿದ್ದವು. ಅಲ್ಲಿಯೇ ಇದ್ದ ಒಂದು ತೋಪಿನಲ್ಲಿ ವಾಸವಾಗಿದ್ದ ಕೋತಿಗಳೆಲ್ಲಾ ಪ್ರತಿದಿನ ಆಕಾಶ…
  • July 10, 2013
    ಬರಹ: nageshamysore
              ಕರಿ ಬಯಲಾಗಿದೆ ಎಲ್ಲಾ ಚಿಂಕರ ತಾತಾ ಇರಬೇಕಿತ್ತಲ್ಲಾ ಹಸಿರು.. ಕಪ್ಪುಬಿಳಿ ಗಡ್ಡದ ತೊಗಲಡಿ ಭಾವಗಳ ಬಸಿರು?   ನಕ್ಕು ಮಿಂಚಿದ ಹಲ್ಲಿಗು ಬೆಳಕು ಏನೆಲ್ಲಾ ಥಳಕೂ ಬಳಕು ಇಷ್ಟೆ ಅಗಲ ಇಷ್ಟೆ ಉದ್ದಕೆ ತುಟಿ ಮುಚ್ಚೊ ಬಿಚ್ಚೊ ಲೆಕ್ಕಾಚಾರ…
  • July 10, 2013
    ಬರಹ: partha1059
    ಪಚ್ಚೆಲಿಂಗ ====== ಕಳೆದ ಬಾನುವಾರ ನಮ್ಮ ಚಿಕ್ಕಪ್ಪನ ಮಗ ನಮ್ಮ ಮನೆಗೆ ಬಂದಿದ್ದ ಅವರ ತಾಯಿಯ ಜೊತೆ. ನಮ್ಮ ಮನೆಯಿಂದ ಅವರಿಬ್ಬರಿಗೆ ಮತ್ತೊಂದು ಕಾರ್ಯಕ್ರಮವಿತ್ತು. ನಮ್ಮ ಮನೆಯ ಹತ್ತಿರದಲ್ಲಿಯೆ ಇರುವ ಅವರ ದೂರದ ನೆಂಟರೊಬ್ಬರ ಮನೆಯನ್ನು…
  • July 10, 2013
    ಬರಹ: ಕಾರ್ಯಕ್ರಮಗಳು
    ಮಾರುತಿ ಥಿಯೇಟರ್‍ಸರವರ 'ಕಾಗಾ ಟೇಲ್ಸ್' ಮೊದಲು ಪ್ರದರ್ಶಿತವಾದಾಗ ಅದ್ಥತ ಯಶಸ್ಸು ಕಂಡಿತು. ಈಗ ಮತ್ತೊಮ್ಮೆ ಪ್ರೇಕ್ಷಕರ ಮನವಿಯ ಮೇರೆಗೆ ರಂಗಶಂಕರದಲ್ಲಿ ಜುಲೈ 12 ಮತ್ತು 13ರಂದು ಮರು ಪ್ರದರ್ಶನಗೊಳ್ಳಲಿದೆ. 3 ರಿಂದ 6 ವರ್ಷದ ಮಕ್ಕಳಿಗೆ ಮಾತ್ರ…
  • July 10, 2013
    ಬರಹ: ಕಾರ್ಯಕ್ರಮಗಳು
    ರಂಗಶಂಕರದಲ್ಲಿ ನಡೆಯುತ್ತಿರುವ ಮಕ್ಕಳ ನಾಟಕೊತ್ಸವದಲ್ಲಿ ಇಂದು ಸಂಜೆ 'ಮುಲ್ಲಾನಸ್ರುದ್ದೀನ ಮತ್ತು ಅವನ ಕತೆಗಳ' ಆಧಾರಿತ ಮಕ್ಕಳ ನಾಟಕವಿದೆ. ನಿರ್ದೇಶನ: ಪುಶನ್‍ ಕೃಪಲಾನಿ. ಸಮಯ: ಸಂಜೆ 7.30.
  • July 09, 2013
    ಬರಹ: makara
    ಲಲಿತಾ ಸಹಸ್ರನಾಮ ೨೧೯ - ೨೨೮ Mahā-bhogā महा-भोगा (219) ೨೧೯. ಮಹಾ-ಭೋಗಾ                 ದೇವಿಯು ಎಣೆಯಿಲ್ಲದ ಸಂತೋಷದ ಮೂರ್ತ ರೂಪವಾಗಿದ್ದಾಳೆ. ಈ ಪ್ರಪಂಚದಲ್ಲಿ ಅಸ್ತಿತ್ವದಲ್ಲಿರುವುದೆಲ್ಲಾ ಆಕೆಗೆ ಸಂಪತ್ತಾಗಿದೆ ಏಕೆಂದರೆ ದೇವಿಯು…
  • July 08, 2013
    ಬರಹ: makara
    ಲಲಿತಾ ಸಹಸ್ರನಾಮ ೨೧೪ - ೨೧೮ Mahāpātaka-naśinī महापातक-नशिनी (214) ೨೧೪. ಮಹಾಪಾತಕ-ನಾಶಿನೀ               ದೇವಿಯು ಮಹಾ ಪಾಪಗಳನ್ನು ನಾಶಪಡಿಸುತ್ತಾಳೆ. ಪಾಪಗಳನ್ನು ಪರಿಹರಿಸುಕೊಳ್ಳುವುದಕ್ಕಾಗಿ ಕೆಲವೊಂದು ನಿಭಂದನೆಗಳಿವೆ. ಪಾಪಗಳು…
  • July 08, 2013
    ಬರಹ: Shwetha Suryakanth
    ಮನೆಮನೆಯಲಿ ದೀಪ ಮೂಡಿಸಿ.. ಹೊತ್ತು-ಹೊತ್ತಿಗೆ ಅನ್ನವುಣಿಸಿ.. ತಂದೆ-ಮಗುವ ತಬ್ಬಿದಾಕೆ.. ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ?   ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ ಈ ಸಾಲುಗಳು ಅದೆಷ್ಟು ಸತ್ತ್ವಪೂರ್ಣ ಮತ್ತು…
  • July 08, 2013
    ಬರಹ: Tejaswi_ac
      ನಸು ನಗು     ಕಿಸಕ್ಕನೆ ಸುಖಾಸುಮ್ಮನೆ ನಗುವ ನನ್ನ ನೋಡಿ   ನನ್ನವಳು ಕೇಳುವ ಪ್ರಶ್ನೆಗೆ ಉತ್ತರ ಕೊಡಲಾಗದೆ   ನನ್ನ ಮನದೊಳ ಹರಿವ ಅಸಂಖ್ಯಾತ ಲೋಕಗಳ   ವಿವರವ ನೀಡಲು, ಅವು ಅತಿ ಖಾಸಗಿಯಾಗಿ       ಮತ್ತೊಮ್ಮೆ ಅವಳ ಮುಖ ನೋಡಿ ನಸು ನಕ್ಕೆ…
  • July 08, 2013
    ಬರಹ: kavinagaraj
        ಸರ್ಕಾರೀ ಸೇವಾ ನಿಯಮಗಳನ್ನು ಉಲ್ಲಂಘಿಸಿದ, ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಳ್ಳುವ, ಹಣ ದುರುಪಯೋಗ ಮಾಡಿಕೊಳ್ಳುವ, ಮುಂತಾದ ಪ್ರಕರಣಗಳಲ್ಲಿ ಇಲಾಖಾ ವಿಚಾರಣೆಗಳ ಅಗತ್ಯ ಬೀಳುತ್ತದೆ. ಇಂತಹ ಪ್ರಕರಣಗಳಲ್ಲಿ ನೌಕರರಿಗೆ ಅವರ…
  • July 08, 2013
    ಬರಹ: hema hebbagodi
    ಅವಳು ಎಲ್ಲ ಮಕ್ಕಳಂತೆ ಎಲ್ಲದರ ಬಗ್ಗೆ ಅಪಾರ ಕುತೂಹಲ ಮತ್ತು ಅಚ್ಚರಿ ತುಂಬಿಕೊಂಡ ಹುಡುಗಿ. ಅವಳು ಕುತೂಹಲ ತಡೆಯಲಾಗದೆ ಮಾಡುತ್ತಿದ್ದ ಕೆಲಸಗಳೇ ದೊಡ್ಡವರ ಲೋಕದಲ್ಲಿ ತುಂಟತನ ಎಂದು ಕರೆಸಿಕೊಳ್ಳುತ್ತಿದ್ದ ತರಲೆಗಳು. ಶಾಲೆಗೆ ಸೇರಿದ ಹೊಸದರಲ್ಲಿ ಆ…
  • July 07, 2013
    ಬರಹ: ಕಾರ್ಯಕ್ರಮಗಳು
    ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ವಿದೂಷಿ ಶ್ರೀಮತಿ ರಂಜನಿ ಹೆಬ್ಬಾರರು ಜೂನ್‍ 9ರಂದು ದೈವಾಧೀನರಾದರು. ಅವರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಲು ಅನನ್ಯದವರು ವಿಶೇಷ ಕಾರ್ಯಕ್ರಮವನ್ನು ಜುಲೈ 13 ಶನಿವಾರದಂದು ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮವು…
  • July 07, 2013
    ಬರಹ: makara
    ಲಲಿತಾ ಸಹಸ್ರನಾಮ ೨೦೮ - ೨೧೩ Māheśvarī माहेश्वरी (208) ೨೦೮. ಮಾಹೇಶ್ವರೀ              ಮಾಹೇಶ್ವರವು ಶಿವನ ಒಂದು ರೂಪವಾಗಿದೆಯಾದ್ದರಿಂದ ಅವನ ಪತ್ನಿಯು ಮಾಹೇಶ್ವರೀ. ಮಹಾನಾರಾಯಣ ಉಪನಿಷತ್ತು (೧೨.೧೭), "ಅವನು (ಮಾಹೇಶ್ವರನು) ಪರಮೋನ್ನತ…
  • July 07, 2013
    ಬರಹ: ಸುಧೀ೦ದ್ರ
    ಇವಳನ್ನು ಕಟ್ಟಿಕೊಂಡಾದ ಮೇಲೆ ಮೊದಲ ಬಾರಿಗೆ ಗಾಂಧಿ ಬಜಾರ್ (ಜೀಬಿ) ಕಡೆ ನಮ್ಮ ಸವಾರಿ ಸಾಗಿತ್ತು. ಶಂಕರ ಮಠದ ಹತ್ತಿರ ಯಾರನ್ನೊ ನೋಡಬೇಕಿದ್ದರಿಂದ ಮೊದಲು ಅಲ್ಲಿಗೆ ಹೋಗಿ ಆ ಕೆಲಸ ಮುಗಿಸಿ ಜೀಬಿ ಕಡೆ ಬರುತ್ತಿದ್ದೆ. ಸಿಗ್ನಲ್ ನಲ್ಲಿ ಕೆಂಪು…
  • July 07, 2013
    ಬರಹ: Vasant Kulkarni
    ಸಾಮಾನ್ಯವಾಗಿ ವಿದೇಶಿಯರು ಮತ್ತು ವಿಭಿನ್ನವಾಗಿರುವವರ ಮೇಲೆ ಜನರಿಗೆ ಒಂದು ಬಗೆಯ ಸಂಶಯ ಮತ್ತು ಅವರು ತಮ್ಮಂತಿಲ್ಲದಿರುವದರ ಬಗ್ಗೆ ಸ್ವಲ್ಪ ಮಟ್ಟಿನ ಅಸಹನೆ ಸಹಜ. ಆದರೆ ಈ ಸಹಜ ಸ್ವಭಾವ ಕೆಲವರಲ್ಲಿ ಗೀಳಾಗಿ ಮಾರ್ಪಟ್ಟು, ಎಲ್ಲಿ ಈ ವಿದೇಶೀಯರಿಂದ…
  • July 07, 2013
    ಬರಹ: nageshamysore
    ಕವಿ ಭಾವ: ಹೆಣ್ಣಿನ ಮನಸನ್ನು ಸರಿಯಾಗಿ ಅರಿತವರಾರು? ಅದೊಂದು ವಿಶಾಲವಾದ ಅಷ್ಟೆ ಆಳವಾದ ಶರಧಿಯ ಹಾಗೆ ನಿಕ್ಷಿಪ್ತ ನಿಕ್ಷೇಪ. ಆ ಕಾರಣದಿಂದಲೆ ಏನೊ ಹೆಣ್ಣಿನ ನಡುವಳಿಕೆ ಮನೋಭಾವನೆಗಳಲ್ಲಿ ಎಲ್ಲಾ ತರಹದ ಬಗೆ ಬಗೆಯ ಬಣ್ಣಗಳು ಕಾಣುತ್ತಿರುತ್ತವೆ.…
  • July 06, 2013
    ಬರಹ: hema hebbagodi
    ಕೇಂದ್ರ ಸರ್ಕಾರವು ಕಡೆಗೂ ‘ಆಹಾರ ಭದ್ರತೆ ಯೋಜನೆಯನ್ನು’ ಜಾರಿಗೆ ತರುವ ನಿರ್ಧಾರ ಮಾಡಿದೆ. ಅದರಂತೆ ಸಂಸತ್ತಿನ ಅಧಿವೇಶನದಲ್ಲಿ ಚರ್ಚಿಸಿ ಒಪ್ಪಿಗೆ ಪಡೆಯುವ ಬದಲು ರಾಷ್ಟ್ರಪತಿಯವರಿಂದ ಒಪ್ಪಿಗೆ ಪಡೆದು ಸುಗ್ರೀವಾಜ್ಞೆಯ ಮೂಲಕ ಇದನ್ನು ಜಾರಿಗೆ…
  • July 06, 2013
    ಬರಹ: ಕಾರ್ಯಕ್ರಮಗಳು
    ಜಿ.ವೆಂಕಟಸುಬ್ಬಯ್ಯನವರ 'ಇಗೋ ಕನ್ನಡ' ನಿಘಂಟು ಮತ್ತು ಟಿ.ಆರ್.ಅನಂತರಾಮು ಮತ್ತು ಸಿ.ಆರ್.ಕೃಷ್ಣರಾವ್‍ ಸಂಪಾದಿಸಿರುವ ವಿಜ್ಞಾನ-ತಂತ್ರಜ್ಞಾನ ನಿಘಂಟು ಜುಲೈ 13ರ ಸಂಜೆ ನಯನ ಸಭಾಂಗಣದಲ್ಲಿ ಬಿಡುಗಡೆಯಾಗಲಿದೆ. ಡಾ.ಚಂದ್ರಶೇಖರ ಕಂಬಾರರು ಪುಸ್ತಕ…
  • July 06, 2013
    ಬರಹ: Mohan V Kollegal
    ಬಲವಂತಕ್ಕೆ ಮಣಿದು ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ…